ಸೋಮವಾರ, ಏಪ್ರಿಲ್ 28, 2025
Homehoroscopeನಿತ್ಯಭವಿಷ್ಯ : ಶ್ರೀರವಿಶಂಕರ ಗುರೂಜಿ (12-11-2020)

ನಿತ್ಯಭವಿಷ್ಯ : ಶ್ರೀರವಿಶಂಕರ ಗುರೂಜಿ (12-11-2020)

- Advertisement -

ಶ್ರೀ ಶಾರ್ವರಿ ನಾಮ ಸಂವತ್ಸರೆ, ದಕ್ಷಿಣಾಯಣೆ, ಶರತ್ ಋತು, ಆಶ್ವಯುಜ ಮಾಸೆ, ಕೃಷ್ಣ ಪಕ್ಷದ ದ್ವಾದಶಿ ತಿಥಿ, ಹಸ್ತಾ ನಕ್ಷತ್ರ, ವಿಷ್ಕುಂಭ ಯೋಗ , ಕೌಲವ ಕರಣ, ನವೆಂಬರ್ 12, ಗುರುವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ. ಇಂದು ಅಮೃತ ಕಾಲ ರಾತ್ರಿ ಬರುವುದರಿಂದ ಅದರ ಬಗ್ಗೆ ಉಲ್ಲೇಖ ಮಾಡಿಲ್ಲ.

ಪ್ರತಿಯೊಬ್ಬ ಸ್ತ್ರೀ ಮತ್ತು ಪುರುಷರು ನಿತ್ಯ ಸ್ನಾನ ಮಾಡಬೇಕು. ಅದರಲ್ಲೂ ಪುರುಷರು ಪ್ರತಿನಿತ್ಯ ತಲೆ ಸ್ನಾನ ಮಾಡಲೇಬೇಕು. ಯಾರು ತಲೆ ಸ್ನಾನ ಮಾಡದೆ ಕಾಗೆ ಸ್ನಾನ ಮಾಡಿಕೊಂಡು ಹೋಗುತ್ತಾರೊ ಅವರಿಗೆ ಶನೇಶ್ವರ ಕಟ್ಟಿಟ್ಟ ಬುತ್ತಿ. ಅವರಿಗೆ ಬರೀ ಪರಿಶ್ರಮವೇ ಲಕ್ಷ್ಮಿ ನಿಲ್ಲುವುದಿಲ್ಲ. ಉತ್ತೇಜಿಸುವಂಥ ಜ್ಞಾನಶೇಖರ ನಮ್ಮ ತಲೆ ಅದನ್ನ ಬ್ರಹ್ಮಶಂಕರ ಎಂದು ಕರೆಯುತ್ತಾರೆ.

ಉದ್ಯೋಗಂ ಪುರುಷ ಲಕ್ಷಣಂ ಎಂಬಂತೆ ಯಾರು ಉದ್ಯೋಗವನ್ನು ಮಾಡುತ್ತಿದ್ದಾರೊ ಅಂತ ಪುರುಷರು ಅದರಲ್ಲೂ ಬಹುಮುಖ್ಯವಾಗಿ ಗೃಹಸ್ಥ ತಲೆ ಸ್ನಾನ ಮಾಡದೆ ಯಾವುದೇ ಕೆಲಸವನ್ನು ಮಾಡಿದರೂ ಕೂಡ ಅದು ಏಳಿಗೆಯಾಗುವುದಿಲ್ಲ. ಕನಿಷ್ಠ ಪಕ್ಷ ಪುರುಷರು ಹದಿನೈದು ನಿಮಿಷವಾದರೂ ಸ್ನಾನ ಮಾಡಬೇಕು.

ಮೇಷರಾಶಿ : ಸ್ವಲ್ಪ ತಳಮಳವಾದರು ಬದುಕು ಕಟ್ಟಿಕೊಳ್ಳುತ್ತೀರ. ಇಂದಿನಿಂದಲೇ ಹಬ್ಬದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತೀರ.

ವೃಷಭ ರಾಶಿ : ಚೆನ್ನಾಗಿದೆ ಮನೆಯಲ್ಲಿ ಸಂಭ್ರಮದ ಛಾಯೆ. ಯಾವುದೊ ಸ್ತ್ರೀ ಮೂಲಕ, ಸ್ತ್ರೀ ವಿಚಾರದಲ್ಲಿ ನಿಮಗೊಂದು ಅನುಕೂಲವಾಗುವಂತಹ ದಿನ.

ಮಿಥುನ ರಾಶಿ : ಸ್ತ್ರೀ ವಿಚಾರದಲ್ಲಿ ಒಂದು ಸಣ್ಣ ಪ್ರಮಾದ, ಅದನ್ನು ಮ್ಯಾನೇಜ್ ಮಾಡಿಕೊಂಡು ಹೋಗುತ್ತೀರಾ.

ಕರ್ಕಾಟಕ ರಾಶಿ : ಸೋದರಿ ವರ್ಗದಲ್ಲೊಂದು ದೋಷವಿದೆ, ಒದ್ದಾಟವಿದೆ, ನೀವು ನೆರಳಾಗಿ ನಿಲ್ಲುವ ಯೋಗವಿದೆ, ಇಲ್ಲವೇ ನಮಗೆ ಅವರೇ ನೆರಳಾಗಿ ನಿಲ್ಲುವ ಯೋಗವಿದೆ.

ಸಿಂಹ ರಾಶಿ : ಕುಟುಂಬದ ಸಡಗರ ಸಂಭ್ರಮಕೊಸ್ಕರ ಸ್ವಲ್ಪ ಖರ್ಚು, ಸಾಲ ಮಾಡಿ ಹಬ್ಬ ಮಾಡಬೇಡಿ.

ಕನ್ಯಾ ರಾಶಿ : ಧನ ತ್ರಯೋದಶಿ ಇಂದೇ ಲಕ್ಷ್ಮಿ ನಿಮ್ಮ ಮನೆಗೆ ಬಂದು ಬಿಟ್ಟಿದೆ. ಅಲಂಕಾರ ಸಿದ್ಧತೆ ಓಡಾಟ . ಲಕ್ಷ್ಮೀ ಎಲ್ಲರಿಗೂ ಒಲಿಯುವುದಿಲ್ಲ ಕನ್ಯಾ ರಾಶಿಯವರಿಗೆ ಜನ್ಮತಃ ಕೊಟ್ಟಿರುವಂತಹ ಒಂದು ಅದೃಷ್ಟ ಎಂದರೆ ಸದಾ ಲಕ್ಷ್ಮಿ ಬರುತ್ತಿರುತ್ತದೆ, ಸ್ವಲ್ಪ ಚಂಚಲೆ.

ತುಲಾ ರಾಶಿ : ಉದ್ಯೋಗದ ನಿಮಿತ್ತ ವ್ಯವಹಾರದ ನಿಮಿತ್ತ ಸ್ವಂತ ವ್ಯವಹಾರಗಳಿದ್ದರೆ ಸ್ವಲ್ಪ ತೊಳಲಾಟ ಖರ್ಚು ವೆಚ್ಚಗಳು ಇರುತ್ತದೆ.

ವೃಶ್ಚಿಕ ರಾಶಿ : ಭಾಗ್ಯಾಧಿಪತಿ ಲಾಭ ಸ್ಥಾನದಲ್ಲಿ ಇರುವುದರಿಂದ ಮನೆಯಲ್ಲಿ ಸಡಗರ ಸಂಭ್ರಮದ ಛಾಯೆ. ಸಿಹಿ ಊಟದ ಸಿದ್ಧತೆ ಮಾಡಿಕೊಳ್ಳಿ. ಅತಿ ಶೀಘ್ರದಲ್ಲಿ ಸಿಹಿಸುದ್ದಿಯೊಂದನ್ನು ಪಡೆಯುವ ಸುಯೋಗವಿದೆ. ಗುರು ಚಂದ್ರ ಕೇಂದ್ರದಲ್ಲಿರುವುದರಿಂದ ಗುರು ಕಾರ್ಯವೊಂದು ನಡೆಯುತ್ತದೆ.

ಧನಸ್ಸು ರಾಶಿ : ವೃತ್ತಿಪರವಾಗಿ ಎಳೆದಾಟ, ಯಾರೋ ಸ್ತ್ರೀ ಮೂಲಕ ಅವಮಾನ, ಸುಮ್ಮನಾಗಿಬಿಡಿ ಜಗಳಕ್ಕೆ ಹೋಗಬೇಡಿ.

ಮಕರ ರಾಶಿ : ಚೆನ್ನಾಗಿದೆ, ಭಾಗ್ಯಾಧಿಪತಿ, ದಶಮಾಧಿಪತಿ, ಸುಖಾಧಿಪತಿ ಸಪ್ತಮಾಧಿಪತಿ , ಭಾಗ್ಯದಲ್ಲಿರುವುದರಿಂದ ಭಾಗ್ಯೋದಯವಾಗುತ್ತದೆ. ಕಲಾವಿದರಾಗಿದ್ದರೆ, ಅಡ್ವರ್ಟೈಸ್ಮೆಂಟ್, ಮಾಡ್ಲಿಂಗ್ ಈ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಅನುಕೂಲಕರವಾದ ದಿನ.

ಕುಂಭ ರಾಶಿ : ಶುಭ ಸುದ್ದಿಯೊಂದನ್ನು ಪಡೆಯುವಂತಹ ಅನುಕೂಲಕರವಾದಂತಹ ದಿನ ಅದರೆ ಸ್ವಲ್ಪ ಪರಿಶ್ರಮ ಪಡಬೇಕು.

ಮೀನ ರಾಶಿ : ಸರ್ಪ್ರೈಸ್ ಗುಡ್ ನ್ಯೂಸ್ ಒಂದನ್ನು ಕೇಳುವಂತಹ ಸುಯೋಗವಿದೆ ಈ ದೀಪಾವಳಿಯ ಹಬ್ಬದಂದು. ವ್ಯವಹಾರ ನಿಮಿತ್ತ, ವ್ಯಾಪಾರ ನಿಮಿತ್ತ, ಸ್ವಂತ ಬಲದಿಂದ ಮುಂದೆ ಬರುತ್ತಿದ್ದರೆ , ವಾಯ್ಸ್ ಓವರ್, ಕೊರಿಯೋಗ್ರಾಫರ್ , ಡ್ಯಾನ್ಸ್ ಮಾಸ್ಟರ್, ಹಾಲಿನ ವ್ಯಾಪಾರ, ಹಣ್ಣಿನ ವ್ಯಾಪಾರ ,ತರಕಾರಿ, ಜ್ಯೂಸ್, ಹೂವು , ಸಿಹಿ ಪದಾರ್ಥಗಳ ಮಾರಾಟ ಮಾಡುವ ವ್ಯಾಪಾರಸ್ಥರಿಗೆ ಅದ್ಭುತವಾದ ದಿನ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular