ನಿತ್ಯಭವಿಷ್ಯ : ( 27-03-2021 ರ ಶನಿವಾರ) ಮೀನರಾಶಿಯವರಿಗೆ ಅದೃಷ್ಟ ಲಕ್ಷ್ಮೀ ಒಲಿಯಲಿದೆ

ಮೇಷರಾಶಿ
ಕೆಲಸದಲ್ಲಿ ಅಭಿವೃದ್ಧಿ ಇದೆ. ಹಣಕಾಸಿನ ವ್ಯವಹಾರವನ್ನು ತಾಳ್ಮೆಯಿಂದ ನಿಭಾಯಿಸಿ. ಮನೆಯಲ್ಲಿ ಸಂಭ್ರಮದ ವಾತಾವರಣ ಇರುವುದು. ಮಂಗಲ ಕಾರ್ಯ ಜರುಗುವವು.
ಅದೃಷ್ಟ ಸಂಖ್ಯೆ : 6

ವೃಷಭರಾಶಿ
ವಸ್ತು- ವಾಹನ- ಆಸ್ತಿ ಖರೀದಿ ಯೋಗವಿದೆ. ಅನವಶ್ಯಕ ಅಲೆದಾಟದ ಸಾಧ್ಯತೆ ಇದೆ. ಮನೆಯ ಹಿರಿಯರ ಆರೋಗ್ಯದ ಚಿಂತೆ ಇರುವುದು. ಬುದ್ಧಿವಂತಿಕೆಯಿಂದ ದೊಡ್ಡ ಕೆಲಸವನ್ನೂ ಸಹಜವಾಗಿ ಮಾಡುವಿರಿ.
ಅದೃಷ್ಟ ಸಂಖ್ಯೆ : 1

ಮಿಥುನರಾಶಿ
ಹಾನಿ ತಪ್ಪಿಸಲು ಪ್ರಯತ್ನಿಸುವಿರಿ. ಕಠಿಣ ಆತಂಕದಿಂದ ಪಾರಾಗುವಿರಿ. ಅಧಿಕಾರಿಗಳ ಉಪದ್ರವಕ್ಕೆ ಮಣಿಯದೇ ಡಿಟ್ಟತನದಿಂದ ಕೆಲಸ ನಿರ್ವಹಿಸಿ. ವ್ಯಾಪಾರ ವೃದ್ಧಿಯಾಗುವುದು. ಆರ್ಥಿಕ ಸಂಕಷ್ಟ ದೂರಾಗುವುದು.
ಅದೃಷ್ಟ ಸಂಖ್ಯೆ : 9

ಕರ್ಕಾಟಕ ರಾಶಿ
ಪ್ರೀತಿ ವಿಶ್ವಾಸದ ಬಲದಿಂದ ಅಧಿಕಾರಿಗಳ ಗಮನ ಸೆಳೆಯುವಿರಿ. ಅತಿಯಾದ ಮೃದು ಧೋರಣೆ ದುರುಪಯೋಗವಾಗದಂತೆ ನೋಡಿಕೊಳ್ಳಿರಿ. ಮಂಗಲಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ ಇರುವುದು.
ಅದೃಷ್ಟ ಸಂಖ್ಯೆ : 5

ಸಿಂಹರಾಶಿ
ಆಸ್ತಿ ಖರೀದಿ ಅಥವಾ ಹೊಸ ವ್ಯವಹಾರ ಆರಂಭಕ್ಕೂ ಮೊದಲು ಆತ್ಮೀಯರೊಂದಿಗೆ ಸಮಾಲೋಚನೆ ಮಾಡಿ ಮುಂದುವರಿಯಿರಿ. ಅಡೆತಡೆಗಳ ಮಧ್ಯದಲ್ಲಿಯೂ ನಿರೀಕ್ಷಿತ ಕಾರ್ಯಗಳು ಪೂರ್ಣವಾಗುವವು.
ಅದೃಷ್ಟ ಸಂಖ್ಯೆ : 7

ಕನ್ಯಾರಾಶಿ
ವಿಶ್ರಾಂತಿ ಇಲ್ಲದ ದುಡಿಮೆ ಬೇಸರ ತರುವುದು. ಜವಾಬ್ದಾರಿಗಳ ಹಂಚಿಕೆ ಮಾಡುವ ಪ್ರಮೇಯ ಉಂಟಾಗುವುದು. ಮಿತಿ ಮೀರಿದ ಆಲೋಚನೆಗಳು ದಿಕ್ಕು ತಪ್ಪಿಸುವ ಸಾಧ್ಯತೆ ಇದೆ. ಆರ್ಥಿಕ ಲಾಭ ಇಲ್ಲದಿದ್ದರೂ ಹಾನಿ ಇರುವುದಿಲ್ಲ.
ಅದೃಷ್ಟ ಸಂಖ್ಯೆ : 3

ತುಲಾರಾಶಿ
ಮನಸ್ಸಿನಂತೆಯೇ ಎಲ್ಲ ಕೆಲಸಗಳೂ ಪೂರ್ಣವಾಗುವವು. ಉದ್ಯೋಗಸ್ಥಾನದಲ್ಲಿ ಕಾರ್ಯಭಾರ ಹೆಚ್ಚುವುದು. ಆಸ್ತಿ ಸಂಬಂಧಿತ ವಿಷಯದಲ್ಲಿ ವಂಚನೆಯಾಗುವ ಸಾಧ್ಯತೆ ಇದೆ. ಕುಟುಂಬದಲ್ಲಿ ಸಂತೋಷದ ಕಾರ್ಯಗಳು ನೆರವೇರುವವು.
ಅದೃಷ್ಟ ಸಂಖ್ಯೆ : 2

ವೃಶ್ಚಿಕರಾಶಿ
ನಿಧಾನವಾಗಿ ಕಾರ್ಯಸಿದ್ಧಿಯಾಗುವುದು. ಮಕ್ಕಳಲ್ಲಿ ಹೊಸ ಹುರುಪು ಕಂಡು ಬರುವುದು. ವ್ಯಾಪಾರಿಗಳಿಗೆ ಮಧ್ಯಮಫಲ. ಸೀಮಿತ ಆದಾಯ, ಸೀಮಿತ ಕಾರ್ಯಗಳಿಂದ ಬೇಸರ ಇರುವದು. ಮಂದಗತಿಯ ಕೆಲಸಗಳು ನಿರಾಸೆ ಮೂಡಿಸುವ ಸಾಧ್ಯತೆ ಇದೆ. ಶಾಂತಚಿತ್ತರಾಗಿ ವ್ಯವಹರಿಸಿರಿ.
ಅದೃಷ್ಟ ಸಂಖ್ಯೆ : 7

ಧನುರಾಶಿ
ಯಶಸ್ಸು. ಶ್ರಮಕ್ಕೆ ತಕ್ಕ ಲಾಭ, ಕೀರ್ತಿ, ಕೃಷಿಯಲ್ಲಿ ಉತ್ತಮ ಸಾಧನೆ, ಮನೆಯಲ್ಲಿ ಮಂಗಲಕಾರ್ಯ, ಬುಧ, ಮಂಗಳ ಯೋಗ ಶುಭದಾಯಕ ಆದರೂ ಕಿರಿಕಿರಿ ಸಂಭವ. ಪರಿಹಾರಕ್ಕಾಗಿ ಅನ್ನದಾನ ಮಾಡಿರಿ.
ಅದೃಷ್ಟ ಸಂಖ್ಯೆ : 8

ಮಕರರಾಶಿ
ಅಲ್ಪ ತೃಪ್ತಿ, ವ್ಯಾಪಾರದಲ್ಲಿ ನಿರಾಸಕ್ತಿ, ಅಪೇಕ್ಷಿತ ಕೆಲಸಗಳು ನೆರವೇರುವವು, ಧನಲಾಭ, ವಿದ್ಯಾರ್ಥಗಳು, ಶಿಕ್ಷಕರು ಹಾಗೂ ಹಿರಿಯರಿಗೆ ಕೀರ್ತಿದಾಯಕ. ಆಲಸ್ಯದಿಂದ ತೊಂದರೆ ಇರುವುದು ಗುರುಸ್ತೋತ್ರ ಪಾರಾಯಣ ಮಾಡಿರಿ.
ಅದೃಷ್ಟ ಸಂಖ್ಯೆ : 4

ಕುಂಭರಾಶಿ
ಹಣಕಾಸಿನ ವ್ಯವಹಾರದಲ್ಲಿ ಧೈರ್ಯದಿಂದ ಕಾರ್ಯ ಸಾಧನೆ. ಅಪೇಕ್ಷಿಸದ ಲಾಭ ಸಂಭವ. ಗಡಿಬಿಡಿಯ ವಾತಾವರಣ, ಬಿಡುವಿಲ್ಲದ ಕಾರ್ಯ, ಮಿತ್ರರೊಂದಿಗೆ ಜಟಾಪಟಿ ಸಂಭವ, ದೀಪದಾನ ಮಾಡಿರಿ.
ಅದೃಷ್ಟ ಸಂಖ್ಯೆ : 1

ಮೀನರಾಶಿ
ನಿಮ್ಮ ಮನೆಬಾಗಿಲಲ್ಲಿ ಅದೃಷ್ಟ ಲಕ್ಷ್ಮೀ ಒಲಿದು ಬರುತ್ತಾಳೆ. ಆರೋಗ್ಯ ಸುಧಾರಣೆಯಾಗುವುದು. ಸ್ಥಿತಿಗಳು ಅನುಕೂಲಕರವಾಗಿ ಮುಂದವರೆಯುವುದು. ಗ್ರಹಸುಖ ಯೋಗವು ಇದೆ. ಮನೋಚಿಂತಿತ ಕನಸು ನನಸಾಗಲಿದೆ.
ಅದೃಷ್ಟ ಸಂಖ್ಯೆ : 6

ಶುಭಂಭವತು
ಡಾ.ಬಸವರಾಜ್ ಗುರೂಜಿ
ವೈದಿಕ ಜ್ಯೋತಿಷಿ
9972848937

Comments are closed.