ಸೋಮವಾರ, ಏಪ್ರಿಲ್ 28, 2025
Homehoroscopeನಿತ್ಯಭವಿಷ್ಯ : 28-05-2020

ನಿತ್ಯಭವಿಷ್ಯ : 28-05-2020

- Advertisement -

ಮೇಷರಾಶಿ
ಪ್ರಯಾಣದಲ್ಲಿ ಅಡೆತಡೆ-ನಷ್ಟ, ದಾಯಾದಿಗಳ ಕಲಹ, ಗೊಂದಲದ ಪರಿಸ್ಥಿತಿಯು ಕಾರ್ಯಕ್ಷೇತ್ರದಲ್ಲಿ ಉಂಟಾಗಲಿದೆ. ನಿಮ್ಮ ಅಭಿಪ್ರಾಯಗಳಿಗೆ ಗೊಂದಲವು ತೋರಿಬಂದೀತು. ಆದರೂ ನಿಮ್ಮ ಸಾಮರ್ಥ್ಯದ ಬಗ್ಗೆ ವಿಶ್ವಾಸವಿರಿಸಬೇಕು. ಆರ್ಥಿಕವಾಗಿ ಲಾಭವಿದೆ. ನೆರೆಹೊರೆಯವರಿಂದ ಕಿರಿಕಿರಿ, ಉದ್ಯಮ-ವ್ಯಾಪಾರ ಅಲ್ಪ ಲಾಭ, ವ್ಯವಹಾರದಲ್ಲಿ ಮೋಸ ಹೋಗುವ ಸಂದರ್ಭ, ಸ್ಥಳ ಬದಲಾವಣೆಯಿಂದ ತೊಂದರೆ, ಕೆಲಸಗಾರರು-ಸಾಲಗಾರರಿಂದ ನೋವು, ಆರೋಗ್ಯದಲ್ಲಿ ವ್ಯತ್ಯಾಸ.

ವೃಷಭರಾಶಿ
ಪಾಲುದಾರಿಕೆಯಿಂದ ಧನಾಗಮನ, ಕುಟುಂಬದಲ್ಲಿ ಗೊಂದಲ, ನೀವಾಡುವ ಮಾತಿಗೆ ವಿರೋಧ, ಅಧಿಕವಾದ ಉಷ್ಣ, ಮಾಸದೋಷ, ನಿಮ್ಮ ಪಾಲಿಗಿದು ಸುಗಮ ದಿನವಾಗಿದೆ. ಕಾರ್ಯದಲ್ಲಿ ಯಶಸ್ಸು ತೋರಿಬಂದರೂ ಸಮಾಧಾನ ಸಿಗಲಾರದು. ಉದ್ಯೋಗದ ಬದಲಾವಣೆಗೆ ಮನಸ್ಸು ಮಾಡಬಹುದು. ಗುರುಬಲದಿಂದ ಮನೋಭಾವನೆಗಳು ನೆರವೇರಲಿವೆ. ಮಕ್ಕಳಿಂದ ಧನಾಗಮನ, ಭವಿಷ್ಯದ ಚಿಂತೆ, ಪ್ರೇಮ ವಿಚಾರದಲ್ಲಿ ಮೋಸ, ಅಕ್ರಮ ಚಟುವಟಿಕೆಗಳಿಂದ ಸಮಸ್ಯೆ, ಯಂತ್ರೋಪಕರಣಗಳಿಂದ ಅಧಿಕ ಖರ್ಚು.

ಮಿಥುನರಾಶಿ
ಸ್ವಂತ ಉದ್ಯಮ ವ್ಯಾಪಾರದಲ್ಲಿ ನಷ್ಟ, ಆತುರ ನಿರ್ಧಾರದಿಂದ ತೊಂದರೆ, ಸ್ಥಿರಾಸ್ತಿ ವಿಚಾರದಲ್ಲಿ ಗೊಂದಲ, ವಾಹನ ಚಾಲನೆಯಲ್ಲಿ ಎಚ್ಚರ, ಪರಿಸ್ಥಿತಿಗೆ ತಕ್ಕಂತೆ ಹೊಂದಾಣಿಕೆ ಮಾಡಿ ಕೊಂಡಲ್ಲಿ ಉತ್ತಮವಿದೆ. ಆರ್ಥಿಕ ಸಮಸ್ಯೆಗಳು ಹಂತ ಹಂತವಾಗಿ ಕಡಿಮೆಯಾಗಲಿವೆ. ಸಹೋದ್ಯೋಗಿಗಳೊಂದಿಗೆ ಹೊಂದಾಣಿಕೆ ಇರಲಿ. ಅಧಿಕ ಒತ್ತಡ ಅಧಿಕ ಕೆಲಸ. ಗೌರವಕ್ಕೆ ಧಕ್ಕೆ, ಗುಪ್ತ ವಿಷಯಗಳಿಂದ ತೊಂದರೆ, ನರ ದೌರ್ಬಲ್ಯ, ಚರ್ಮ ತುರಿಕೆ, ಆರೋಗ್ಯದ ಬಗ್ಗೆ ಕಾಳಜಿವಹಿಸಿ, ಕೆಲಸಗಾರರ ಕೊರತೆ.

ಕಟಕರಾಶಿ
ಆರ್ಥಿಕ ಪರಿಸ್ಥಿತಿ ನಿಭಾಯಿಸಲು ಹೆಚ್ಚಿನ ಒದ್ದಾಟವಿದೆ. ವ್ಯಾಪಾರ, ವ್ಯವಹಾರಗಳು ತಕ್ಕಮಟ್ಟಿಗೆ ನಡೆದಾವು. ಉದ್ಯೋಗವನ್ನು ಬದಲಾವಣೆ ಮಾಡಲಿದ್ದರೆ ಫ‌ಲ ನೀಡಲಿದೆ. ಸಾಂಸಾರಿಕವಾಗಿ ಪತ್ನಿಯಿಂದ ಸೂಕ್ತ ಸಲಹೆ ಸಿಗಲಿದೆ. ಮಕ್ಕಳಿಗಾಗಿ ಖರ್ಚು, ಅಧಿಕವಾದ ಚಿಂತೆ, ದೂರ ಪ್ರದೇಶದಲ್ಲಿ ಉದ್ಯೋಗ ಹುಡುಕಾಟ, ನಿದ್ರೆಯಲ್ಲಿ ದುಃಸ್ವಪ್ನ, ಭಾವನೆಗಳಿಗೆ ಧಕ್ಕೆ, ಸ್ಪರ್ಧಾತ್ಮಕ ವಿಚಾರದಲ್ಲಿ ಹಿನ್ನಡೆ, ಸಂತಾನದ ಚಿಂತೆ, ಉದ್ಯೋಗದಲ್ಲಿ ಒತ್ತಡ.

ಸಿಂಹರಾಶಿ
ಸ್ಥಿರಾಸ್ತಿಯಿಂದ ಲಾಭ, ಪತ್ರ ವ್ಯವಹಾರಗಳಲ್ಲಿ ಜಯ, ಉತ್ತಮ ಹೆಸರು ಗಳಿಸುವ ಪ್ರಯತ್ನ, ಸ್ನೇಹಿತರಿಂದ ಅನುಕೂಲ, ನಿಮ್ಮ ಸುತ್ತಲಿನ ಜನರು ನಿಮ್ಮ ಮನಸ್ಸಿನಲ್ಲಿ ಗೊಂದಲವನ್ನು ಎಬ್ಬಿಸಲಿದ್ದಾರೆ. ದೃಢ ನಿರ್ಧಾರದಿಂದ ಕಾರ್ಯಸಾಧನೆ ಮಾಡಿರಿ. ಆರ್ಥಿಕವಾಗಿ ಖರ್ಚುವೆಚ್ಚಗಳಿದ್ದರೂ ನಾನಾ ಮೂಲಗಳಿಂದ ಧನಾಗಮನವಿರುತ್ತದೆ. ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಆತ್ಮೀಯರ ನಡವಳಿಕೆಯಿಂದ ಬೇಸರ, ತಂದೆಯಿಂದ ನೋವು.

ಕನ್ಯಾರಾಶಿ
ಸ್ವಂತ ಉದ್ಯಮ ವ್ಯಾಪಾರದಲ್ಲಿ ತೊಂದರೆ, ಶತ್ರುಗಳ ಕಾಟ, ಅನಾವಶ್ಯಕ ಕೋಪ ತಾಪಗಳಿಂದ ಮನಸ್ಸು ಉದ್ವೇಗಗೊಳ್ಳಲಿದೆ. ಬೇಜವಾಬ್ದಾರಿಯಿಂದ ನಡೆದು ಕಾರ್ಯ ಭಂಗವಾದೀತು. ಆರ್ಥಿಕವಾಗಿ ಖರ್ಚುಗಳು ಆತಂಕ ತಂದಾವು. ವ್ಯಾಪಾರ, ವ್ಯವಹಾರದಲ್ಲಿ ಕಷ್ಟ ನಷ್ಟ ಹೆಚ್ಚಾದೀತು. ಉದ್ಯೋಗ ಸ್ಥಳದಲ್ಲಿ ಸಮಸ್ಯೆ, ಕೆಲಸ ಕಾರ್ಯಗಳಲ್ಲಿ ವಿಘ್ನ, ಪ್ರಯಾಣ ರದ್ದಾಗುವ ಸಾಧ್ಯತೆ, ಕೋರ್ಟ್ ಗೆ ಅಲೆದಾಟ, ಸ್ವಯಂಕೃತ ಅಪರಾಧಗಳಿಂದ ನಷ್ಟ, ಮಿತ್ರರಿಂದ ಸಹಕಾರ, ಆರೋಗ್ಯದಲ್ಲಿ ಏರುಪೇರು.

ತುಲಾರಾಶಿ
ಪ್ರೇಮ ವಿಚಾರದಲ್ಲಿ ಮೋಸ, ಸಂಗಾತಿಯ ಹಠದಿಂದ ಬೇಸರ, ಅನಿರೀಕ್ಷಿತವಾಗಿ ಕಾರ್ಯಾನುಕೂಲಕ್ಕೆ ಹಲವಾರು ಅವಕಾಶಗಳು ದೊರಕಲಿವೆ. ದಾಯಾದಿಗಳ ಕಿರಿಕಿರಿಯಿಂದ ಕೆಲಸ ಕಾರ್ಯಗಳಲ್ಲಿ ಅನನುಕೂಲವಾದೀತು. ವೃತ್ತಿರಂಗದಲ್ಲಿ ಉತ್ಸಾಹ ದಾಯಕ ವಾತಾವರಣವಿದ್ದರೂ ಮಾನಸಿಕ ಗೊಂದಲವಿದೆ. ಪಿತ್ರಾರ್ಜಿತ ಆಸ್ತಿ ಗೊಂದಲ, ದೈವ-ಧರ್ಮ ನಿಂದನೆ, ಪ್ರಯಾಣದಲ್ಲಿ ಎಚ್ಚರಿಕೆ, ಯಂತ್ರೋಪಕರಣ ಖರೀದಿ, ವಾಹನ ರಿಪೇರಿಗಾಗಿ ಖರ್ಚು, ತಂದೆಯಿಂದ ಧನಾಗಮನ.

ವೃಶ್ಚಿಕರಾಶಿ
ಆಕಸ್ಮಿಕ ನಷ್ಟ, ಅನಿರೀಕ್ಷಿತ ಸಾಲ ಮಾಡುವ ಪರಿಸ್ಥಿತಿ, ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗವು ತುಸು ಸಮಾಧಾನ ತರಲಿದೆ. ಆಗಾಗ ಮನೋರಂಜನೆಗಾಗಿ ಖರ್ಚು ಇರುತ್ತದೆ. ಆರ್ಥಿಕವಾಗಿ ಸಮಾಧಾನ ಸಿಗಲಿದೆ. ದೇವತಾ ಕಾರ್ಯಗಳಿಗಾಗಿ ಕ್ಷೇತ್ರ ಸಂದರ್ಶನ ಯೋಗವಿದೆ. ಅದೃಷ್ಟ ಕೈ ಕೊಡುವುದು, ಜೀವನದಲ್ಲಿ ಬೇಸರ, ತಲೆ, ಸೊಂಟ, ಹೊಟ್ಟೆ ನೋವು, ಸ್ಥಿರಾಸ್ತಿ-ವಾಹನದಿಂದ ನಷ್ಟ, ಆತುರ ತೀರ್ಮಾನದಿಂದ ತೊಂದರೆ, ಪ್ರಯಾಣದಲ್ಲಿ ವಿಘ್ನ, ದೂರ ಸಂಬಂಧಿಗಳಿಂದ ಲಾಭ.

ಧನಸ್ಸುರಾಶಿ
ಮಕ್ಕಳ ನಡವಳಿಕೆಯಿಂದ ಬೇಸರ, ಭವಿಷ್ಯದ ಚಿಂತೆ, ವಿದ್ಯಾರ್ಥಿಗಳಿಗೆ ನಿರೀಕ್ಷಿತ ಕಾರ್ಯಸಾಧನೆ ಯಿಂದ ಮುನ್ನಡೆ ತೋರಿಬಂದೀತು. ಬಹುದಿನಗಳ ಬಳಿಕ ಉದ್ಯೋಗಿಗಳಿಗೆ ಬದಲಾವಣೆ ಸಾಧ್ಯತೆ ಇದೆ. ಮರ್ಕಟ ಮನಸ್ಸನ್ನು ಕಡಿವಾಣದಲ್ಲಿ ಇಟ್ಟುಕೊಳ್ಳುವುದು ಅಗತ್ಯ. ದಾಂಪತ್ಯದಲ್ಲಿ ಕಿರಿಕಿರಿ, ಉದ್ಯೋಗದಲ್ಲಿ ಪ್ರಗತಿ, ಪಾಲುದಾರಿಕೆಯಲ್ಲಿ ಅನುಕೂಲ, ಜವಾಬ್ದಾರಿಯಿಂದ ಕಾರ್ಯ ನಿರ್ವಹಣೆ, ಉದ್ಯೋಗ ನಿಮಿತ್ತ ಪ್ರಯಾಣ, ಪತ್ರ ವ್ಯವಹಾರಗಳಲ್ಲಿ ಯಶಸ್ಸು, ಅನಗತ್ಯ ಖರ್ಚು, ಅಧಿಕ ಸುಸ್ತು.

ಮಕರರಾಶಿ
ಭೂ ವ್ಯವಹಾರದಲ್ಲಿ ಲಾಭ, ಸಾಲ ಬಾಧೆ, ಕೌಟುಂಬಿಕವಾಗಿ ಪರಸ್ಪರ ಕೊಟ್ಟುಕೊಳ್ಳುವಿಕೆ ಯಿಂದ ಧನವ್ಯಯವಾಗಲಿದೆ. ವೃತ್ತಿರಂಗದಲ್ಲಿ ಉತ್ತಮ ರೀತಿಯ ಮುನ್ನಡೆ ಇದೆ. ಆರೋಗ್ಯ ಭಾಗ್ಯಕ್ಕಾಗಿ ಆಹಾರ ಪದ್ಧತಿಯಲ್ಲಿ ಬದಲಾವಣೆ ಗೈದರೆ ಒಳ್ಳೆಯದು. ಶತ್ರು ಕಾಟ, ಆರೋಗ್ಯದಲ್ಲಿ ಸಮಸ್ಯೆ, ತಂದೆಯಿಂದ ಧನಾಗಮನ, ದೂರ ಪ್ರಯಾಣ, ವಿದೇಶ ಪ್ರಯಾಣಕ್ಕೆ ಚಿಂತೆ, ಆಧ್ಯಾತ್ಮಿಕ ವಿಚಾರಕ್ಕೆ ಆಸಕ್ತಿ.

ಕುಂಭರಾಶಿ
ಉಸಿರಾಟ ಸಮಸ್ಯೆ, ಸಾಂಸಾರಿಕವಾಗಿ ಸಮಾಧಾನವಿಲ್ಲದ ದಿನಗಳಿವು. ಮನಸ್ಸನ್ನು ಅನಾವಶ್ಯಕವಾಗಿ ಋಣಾತ್ಮಕ ಚಿಂತೆಗೆ ಒಡ್ಡಲಿದ್ದೀರಿ. ವೃತ್ತಿರಂಗದಲ್ಲಿ ಇದ್ದದ್ದನ್ನು ಇದ್ದ ಹಾಗೇ ನಡೆಸಿಕೊಂಡು ಹೋದರೆ ಉತ್ತಮ ಅವಸರ ಒಳ್ಳೆಯದಲ್ಲ. ರಕ್ತ ದೋಷ, ಮಕ್ಕಳಲ್ಲಿ ಹಠ, ಭವಿಷ್ಯದ ಚಿಂತೆ, ಪ್ರೇಮ ವಿಚಾರದಲ್ಲಿ ಗೊಂದಲ, ಭಾವನಾತ್ಮಕ ನಿರ್ಧಾರಗಳಿಂದ ಸಮಸ್ಯೆ, ದುಶ್ಚಟಗಳಿಂದ ಸಮಸ್ಯೆಗೆ ಸಿಲುಕುವಿರಿ, ಪೆಟ್ಟಾಗುವ ಸಾಧ್ಯತೆ ಎಚ್ಚರಿಕೆ.

ಮೀನರಾಶಿ
ಸ್ತಿರಾಸ್ತಿ ವಾಹನದಿಂದ ತೊಂದರೆ, ಗುಪ್ತ ವ್ಯವಹಾರಗಳಿಂದ ಆಪತ್ತು, ನಿಮ್ಮ ಮನೋಕಾಮನೆಗಳನ್ನು ಈಡೇರಿಸಿ ಕೊಳ್ಳಲು ನೀವೇ ಮುನ್ನಡೆಯುವುದ ಅಗತ್ಯವಿದೆ. ವೃತ್ತಿರಂಗದಲ್ಲಿ ನಿಮ್ಮ ಕ್ರಿಯಾಶೀಲತೆ ಉತ್ಸಾಹದಾಯಕ ವಾದರೂ ಅಧಿಕಾರಿ ವರ್ಗದವರಿಂದ ಕಿರಿಕಿರಿಯು ತಪ್ಪಲಾರದು. ಮಾನಸಿಕ ಗೊಂದಲ, ಆತಂಕ, ಪಾಲುದಾರಿಕೆಯಲ್ಲಿ ಮೋಸ, ಸಂಗಾತಿ ನಡವಳಿಕೆಯಿಂದ ನಷ್ಟ, ದುಃಸ್ವಪ್ನಗಳಿಂದ ನಿದ್ರಾಭಂಗ, ದಾಯಾದಿಗಳಿಂದ ನಷ್ಟ, ತಂದೆ ಆರೋಗ್ಯದಲ್ಲಿ ವ್ಯತ್ಯಾಸ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular