ಮಂಗಳವಾರ, ಏಪ್ರಿಲ್ 29, 2025
Homehoroscopeನಿತ್ಯಭವಿಷ್ಯ : 17-07-2020

ನಿತ್ಯಭವಿಷ್ಯ : 17-07-2020

- Advertisement -

ಮೇಷರಾಶಿ
ಕೃಷಿಕರಿಗೆ ಅನುಕೂಲ, ದಂಪತಿಗಳಿಗೆ ಸಂತಾನದ ಲಾಭವಿದೆ. ವ್ಯವಹಾರದಲ್ಲಿ ತಂದೆಮಕ್ಕಳೊಳಗೆ ಭಿನ್ನಾಭಿಪ್ರಾಯ ಮೂಡಬಹುದು. ದೂರಸಂಚಾರದಲ್ಲಿ ಅಪಘಾತದ ಭೀತಿ ಇದೆ. ದೇವತಾ ಕಾರ್ಯಗಳಲ್ಲಿ ಸಂತಸ ಹಾಗೂ ನೆಮ್ಮದಿ ಇದೆ. ಅಧಿಕ ಧನಾಗಮನ, ನೀವಾಡುವ ಮಾತಿನಿಂದ ಕಲಹ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಆಸಕ್ತಿ.

ವೃಷಭರಾಶಿ
ಅನಿರೀಕ್ಷಿತ ಸಾಲ ಮಾಡುವಿರಿ, ಭಾವನೆಗಳಿಗೆ ಮನ್ನಣೆ, ಕೆಲಸ ಕಾರ್ಯಗಳಲ್ಲಿ ಉತ್ತಮ, ವ್ಯಾಪಾರ-ಉದ್ಯಮ ನಿಮಿತ್ತ ಪ್ರಯಾಣ. ತಾಂತ್ರಿಕ ವೃತ್ತಿಯವರಿಗೆ ಮುನ್ನಡೆ ಇದೆ. ರೈತಾಪಿ ವರ್ಗಕ್ಕೆ ಋಣಭಾಧೆ ಪರಿಹಾರವಾಗಲಿದೆ. ದಿನಸಿ ವರ್ತಕರಿಗೆ ಲಾಭಾದಿಕ್ಯವಿದೆ. ಆರೋಗ್ಯ ಭಾಗ್ಯವು ಸುಧಾರಿಸುತ್ತಾ ಹೋಗಲಿದೆ. ಧನ ವಿನಿಯೋಗದಿಂದ ಆದಾಯ ಉತ್ತಮ.

ಮಿಥುನರಾಶಿ
ಕುಟುಂಬದಲ್ಲಿ ಅಧಿಕ ಖರ್ಚು, ಚಿನ್ನಾಭರಣ ಖರೀದಿ, ಆಸ್ತಿ ವಿಚಾರದಲ್ಲಿ ತಗಾದೆ, ಪತ್ರವ್ಯವಹಾರಗಳಲ್ಲಿ ಎಚ್ಚರ, ಪಿತ್ತದೋಷದಿಂದ ಹಿರಿಯರಿಗೆ ಆರೋಗ್ಯ ಕೆಡಲಿದೆ. ಮಕ್ಕಳಿಗೆ ಉದ್ಯೋಗ ಲಾಭದ ಯೋಗ ಸಂತಸ ತರಲಿದೆ. ವೃತ್ತಿರಂಗದಲ್ಲಿ ಕೈಕೆಳಗಿನವರ ಅಸಹಕಾರದಿಂದ ದುಡಿಮೆ ಬೇಸರ ತರಲಿದೆ. ನೌಕರ ವರ್ಗಕ್ಕೆ ನಿರಾಸೆ ಇದೆ. ಸ್ನೇಹಿತರಿಂದ ಧನಾಗಮನ.

ಕಟಕರಾಶಿ
ಸ್ವಯಂಕೃತ್ಯಗಳಿಂದ ನಷ್ಟ, ಕುಟುಂಬ ಸಮೇತ ಪ್ರಯಾಣ, ಮಿತ್ರರಿಗಾಗಿ ಅಧಿಕ ಖರ್ಚು, ಆರ್ಥಿಕವಾಗಿ ಎಷ್ಟಿದ್ದರೂ ಸಾಲದು ಎಂಬ ಅನುಭವ ಉಂಟಾದೀತು. ಕುಟುಂಬ ಕಲಹ ಮೂರನೆಯವರ ಮಧ್ಯಸ್ಥಿಕೆಯಿಂದ ಕಾರ್ಯ ಸಾಧನೆಯಾದೀತು. ಆರೋಗ್ಯದಲ್ಲಿ ಸುಧಾರಣೆ ಕಂಡರೂ ಪ್ರಯಾಣದಿಂದ ಆರೋಗ್ಯ ಕೆಡಲಿದೆ. ಮಹಿಳೆಯರಿಗಾಗಿ ವೆಚ್ಚ, ನಷ್ಟಗಳು ಅಧಿಕ, ಸಾಲ ಮಾಡುವ ಪರಿಸ್ಥಿತಿ.

ಸಿಂಹರಾಶಿ
ಮಿತ್ರರಿಂದ ಉದ್ಯೋಗ ಪ್ತಾಪ್ತಿ, ಚಾಡಿ ಮಾತಿಗೆ ಮನಕೊಟ್ಟು ಸಂಬಂಧಿಕರೊಳಗೆ ಕಲಹ ತಂದೀತು. ಉನ್ನತ ವ್ಯಾಸಂಗಕ್ಕಾಗಿ ವಿದ್ಯಾರ್ಥಿಗಳಿಗೆ ಪರಸ್ಥಳಯಾನವಿದೆ. ಕೋರ್ಟು ಕಚೇರಿಯ ಕಾರ್ಯದಲ್ಲಿ ಮುನ್ನಡೆ ಇದೆ. ದಿನಾಂತ್ಯದಲ್ಲಿ ಒಳ್ಳೆಯ ವಾತಾವರಣ. ಮಕ್ಕಳಿಂದ ಅವಮಾನ, ನಿದ್ರಾಭಂಗ, ಇಲ್ಲ ಸಲ್ಲದ ಅಪವಾದ, ಬಂಧುಗಳಲ್ಲಿ ಕಲಹ.

ಕನ್ಯಾರಾಶಿ
ತಂದೆಯಿಂದ ಅನುಕೂಲ, ಆತ್ಮೀಯರೊಂದಿಗೆ ಮನಃಸ್ತಾಪ, ಹಲವು ಕಾರ್ಯಗಳಲ್ಲಿ ತೊಡಗಿಸಿದ ಹಣ ಫ‌ಲಿತಕ್ಕೆ ಬಾರದೆ ಹಪಹಪಿಸುವಂತಾ ದೀತು. ವಿನಾಕಾರಣ ಖರ್ಚುವೆಚ್ಚ ಹೆಚ್ಚಲಿದೆ. ಕಲಿತ ವಿದ್ಯೆ ಫ‌ಲ ನೀಡಲಿದೆ. ಸ್ಥಿರ ಸೊತ್ತುಗಳ ಖರೀದಿಗಾಗಿ ಧನವ್ಯಯವು ತೋರಿಬರಲಿದೆ. ದಾಯಾದಿಗಳ ಕಲಹ, ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ, ಗೌರವ ಸನ್ಮಾನಕ್ಕೆ ಮನಸ್ಸು.

ತುಲಾರಾಶಿ
ಆಕಸ್ಮಿಕ ಉದ್ಯೋಗದಲ್ಲಿ ಪ್ರಗತಿ, ಪುನಃಹ ನಿವೇಶನ ಖರೀದಿ ಯೋಗವಿದೆ. ಕೋಪ, ಉದ್ರೇಕದಿಂದ, ರಕ್ತದೋಷದಿಂದ ಆರೋಗ್ಯದಲ್ಲಿ ಏರುಪೇರಾದೀತು. ಸಂಚಾರದಿಂದ ದೂರವಿದ್ದಷ್ಟು ಉತ್ತಮ. ಶತ್ರುಗಳ ಕಾಟ ದಮನ ಕಾರ್ಯದಲ್ಲಿ ವಿಘ್ನ ಭಯವಿದೆ. ಉತ್ತಮ ಅವಕಾಶ ಪ್ರಾಪ್ತಿ, ಕೋರ್ಟ್ ಕೇಸ್‍ಗಳಲ್ಲಿ ಅನುಕೂಲ, ವಿಚ್ಛೇದನ ಕೇಸ್‍ಗಳಲ್ಲಿ ಜಯ, ಹಣಕಾಸು ಸಮಸ್ಯೆ, ಪ್ರಯಾಣ ರದ್ದು.

ವೃಶ್ಚಿಕರಾಶಿ
ದಾಂಪತ್ಯದಲ್ಲಿ ವಿರಸ, ಮಾನಸಿಕ ವ್ಯಥೆ, ಪಾಲು ಬಂಡವಾಳದಲ್ಲಿ ಅಂತಃಕಲಹವಾದೀತು ಹೋಟೇಲ್‌ , ಬೀದಿ ಬದಿ ವ್ಯಾಪಾರಸ್ಥರಿಗೆ ಆತಂಕ ಕಡಿಮೆಯಾಗಲಿದೆ. ವಿಲಾಸೀ ಸಾಮಾಗ್ರಿಗಳ ವರ್ತಕರಿಗೆ ಲಾಭಾಂಶ ಹೆಚ್ಚಲಿದೆ. ರಾಜಕೀಯದಲ್ಲಿ ಸ್ಥಾನಭ್ರಂಶ ಯೋಗವಿದೆ. ಮಕ್ಕಳ ಬಗ್ಗೆ ಗಮನಹರಿಸಿ, ಮಕ್ಕಳ ಬಗ್ಗೆ ಅಧಿಕ ಚಿಂತೆ, ಸ್ಥಿರಾಸ್ತಿಯಿಂದ ಲಾಭ, ಹಳೆ ವಸ್ತುಗಳಿಂದ ಲಾಭ.

ಧನಸ್ಸುರಾಶಿ
ವಿಪರೀತ ರಾಜಯೋಗ, ಆಕಸ್ಮಿಕ ಅದೃಷ್ಟ, ವಿದ್ಯಾಭ್ಯಾಸದಲ್ಲಿ ವಿದ್ಯಾರ್ಥಿಗಳಿಗೆ ನಿರುತ್ಸಾಹ ತರಲಿದೆ. ಬಾಡಿಗೆದಾರರಿಗೆ ಗೃಹ ಬದಲಿ ಸಂಭವವಿದೆ. ಹೊಸ ಉದ್ಯೋಗವೊಂದು ಅಭಿವೃದ್ಧಿಗೆ ತೆರೆದುಕೊಳ್ಳಲಿದೆ. ಹಿರಿಯರ ದುರಾಭಿಮಾನದ ವರ್ತನೆ ಬೇಸರ ತಂದೀತು. ವಿಶ್ರಾಂತಿ ವೇತನ ಪ್ರಾಪ್ತಿ, ಆಕಸ್ಮಿಕ ಸಂಪತ್ತು ಲಭಿಸುವುದು, ಉದ್ಯೋಗ ನಿಮಿತ್ತ ಪ್ರಯಾಣ.

ಮಕರರಾಶಿ
ಕೆಲಸದಲ್ಲಿ ಮೇಲಾಧಿಕಾರಿಗಳ ಶ್ಲಾಘನೆಯಿಂದ ತುಸು ಸಂತಸವಾಗಲಿದೆ. ಯೋಗ್ಯ ವಯಸ್ಕರಿಗೆ ಮಂಗಲ ಕಾರ್ಯದ ಪ್ರಸ್ತಾಪ ಬಂದೀತು. ಕಾರ್ಯಕ್ಷೇತ್ರದಲ್ಲಿ ಕಾರ್ಯದೊತ್ತಡವಿದೆ. ವೈಯಕ್ತಿಕ ಆರೋಗ್ಯದಲ್ಲಿ ಜಾಗ್ರತೆ. ಸಂಗಾತಿಯಿಂದ ಆರ್ಥಿಕ ಸಹಾಯ, ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಆಕಸ್ಮಿಕ ಲಾಭ ಪ್ರಮಾಣ ಹೆಚ್ಚು, ಮಕ್ಕಳಿಗೆ ಉತ್ತಮ ಅವಕಾಶ, ರೋಗ ಬಾಧೆಗಳಿಂದ ಮುಕ್ತಿ.

ಕುಂಭರಾಶಿ
ಉದ್ಯೋಗ ಸ್ಥಳದಲ್ಲಿ ನಿರಾಸಕ್ತಿ, ಒತ್ತಡ ಹೆಚ್ಚಾಗುವುದು, ದುಡುಕು ಬುದ್ಧಿಯಿಂದ ಆಕಸ್ಮಿಕವಾಗಿ ಧನವ್ಯಯವಾದೀತು. ವಾತದೋಷಾಧಿಗಳಿಂದ ಹಿರಿಯರಿಗೆ ಔಷಧಿ ಸೇವನೆ ಅನಿವಾರ್ಯವಾದೀತು. ಸಂಚಾರದಿಂದ ದೂರವಿರಿ. ಜಲವೃತ್ತಿಯವರಿಗೆ ಉನ್ನತಿ ಇದೆ. ಸಾಲ ಬಾಧೆ, ಸಲ್ಲದ ಅಪವಾದ-ನಿಂದನೆ, ಸ್ಥಿರಾಸ್ತಿ-ವಾಹನ ಸಾಲ ಕೇಳುವಿರಿ.

ಮೀನರಾಶಿ
ಕಲ್ಪನಾ ಲೋಕದಲ್ಲಿ ವಿಹಾರ, ಸ್ವಾಭಿಮಾನಕ್ಕೆ ಧಕ್ಕೆಯಾಗಲಿದೆ. ಸ್ವಲ್ಪದರಲ್ಲಿ ಅಪಘಾತ ಭಯ ತಪ್ಪಲಿದೆ. ಉದ್ಯೋಗಿಗಳಿಗೆ ಮುಂಭಡ್ತಿ ಸಂಭವವಿದೆ. ಕ್ರೀಡಾ ಕಾರ್ಯಕ್ರಮಗಳಲ್ಲಿ ಯಶೋಲಾಭವಿದೆ. ದಿನಸಿ ವ್ಯಾಪಾರಿಗಳಿಗೆ ಒಳ್ಳೆ ಲಾಭ ಸಿಗಲಿದೆ. ಪತ್ರ ವ್ಯವಹಾರಗಳಿಂದ ಅನುಕೂಲ, ಮಕ್ಕಳಲ್ಲಿ ಉದ್ಯೋಗಾಸಕ್ತಿ, ಆರೋಗ್ಯ ಸಮಸ್ಯೆಗಳಿಂದ ತೊಂದರೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular