ಮಂಗಳವಾರ, ಏಪ್ರಿಲ್ 29, 2025
Homehoroscopeನಿತ್ಯಭವಿಷ್ಯ : 18-07-2020

ನಿತ್ಯಭವಿಷ್ಯ : 18-07-2020

- Advertisement -

ಮೇಷರಾಶಿ
ಆರ್ಥಿಕವಾಗಿ ಹಣಕಾಸಿನ ಚಿಂತೆಯು ನಿವಾರಣೆಯಾಗಲಿದೆ. ಖರ್ಚುವೆಚ್ಚಗಳನ್ನು ನಿಯಂತ್ರಿಸಿಕೊಳ್ಳಿರಿ. ರಾಹುಬಲದಿಂದ ನಿರೀಕ್ಷಿತ ಕಾರ್ಯಸಾಧನೆಯಾಗಲಿದೆ.ಯೋಗ್ಯ ವಯಸ್ಕರಿಗೆಕಂಕಣಬಲದ ಯೋಗ ವಿರುವುದು. ಎಲೆಕ್ಟ್ರಿಕಲ್, ಸಾರಿಗೆ ಕೇತ್ರದಲ್ಲಿ ಉದ್ಯೋಗಾವಕಾಶ, ಆರ್ಥಿಕ ಪರಿಸ್ಥಿತಿ ಉತ್ತಮ, ತಾಯಿಯಿಂದ ಧನಾಗಮನ, ಆರೋಗ್ಯದಲ್ಲಿ ತೊಂದರೆ.

ವೃಷಭರಾಶಿ
ವ್ಯವಹಾರಗಳಲ್ಲಿ ಎಚ್ಚರ, ಆಗಾಗ ಆತಂಕಗಳನ್ನು ಸೃಷ್ಟಿಸುವ ಸಾಧ್ಯತೆಯು ಇಲ್ಲದಿಲ್ಲಾ. ಇದಕ್ಕೆ ರಾಹುಗ್ರಹದ ಪ್ರತಿಕೂಲತೆಯು ಕಾರಣವಾಗಲಿದೆ. ವಿದ್ಯಾರ್ಥಿಗಳಿಗೆ ತಪ್ಪದೆ ಓದುವ ಅಭ್ಯಾಸದ ಅಗತ್ಯವಿದೆ. ಸರಕಾರಿ ಅಧಿಕಾರಿಗಳಿಗೆ ಮುನ್ನಡೆಯು ತೋರಿ ಬಂದೀತು. ಬಂಧುಗಳು-ನೆರೆಹೊರೆಯವರಿಂದ ಸಂಕಷ್ಟ, ಮಕ್ಕಳಲ್ಲಿ ದುಶ್ಚಟ ಹೆಚ್ಚಾಗುವುದು, ಕುಟುಂಬದಲ್ಲಿ ತೊಂದರೆ.

ಮಿಥುನರಾಶಿ
ವಾಹನ-ಭೂಮಿಗಾಗಿ ಖರ್ಚು, ಸಾಲ ಬಾಧೆ, ಚಿಂತೆಯಿಂದ ನಿದ್ರಾಭಂಗ, ಆತುರ ಸ್ವಭಾವ, ಅಧಿಕವಾದ ಕೋಪ.ರಾಹುವಿನ ಕಾಟವಿದ್ದರೂ ಗುರುಬಲವು ಉತ್ತಮವಿದ್ದು ಪರಿಸ್ಥಿತಿಯನ್ನು ಎದುರಿಸಬಹುದಾಗಿದೆ. ಯೋಗ್ಯ ವಯಸ್ಕರು ಕಂಕಣಬಲವನ್ನು ಹೊಂದಲಿದ್ದಾರೆ. ಆರ್ಥಿಕ ಬಿಕ್ಕಟ್ಟು ಆಗಾಗ ತೋರಿ ಬಂದರೂ ಸಕಾಲದಲ್ಲಿ ಧನಾಗಮನವಿದೆ.

ಕಟಕರಾಶಿ
ಮಕ್ಕಳಲ್ಲಿ ವೈಮನಸ್ಸು, ಬಂಧುಗಳು ದೂರಾಗುವರು, ಸಾಂಸಾರಿಕವಾಗಿ ಮನಕ್ಲೇಶಗಳು ಹೆಚ್ಚಾಗ ದಂತೆ ಗಮನ ಹರಿಸಿರಿ. ಶುಭಮಂಗಲ, ದೇವತಾಕಾರ್ಯಗಳಿಗೆ ಅಡಚಣೆಗಳು ತೋರಿ ಬಂದಾವು. ರಾಹುಗ್ರಹದಿಂದ ಅಲರ್ಜಿಗಳು ಆರೋಗ್ಯ ಸ್ಥಿತಿಯಲ್ಲಿ ಸಮಸ್ಯೆಯನ್ನು ತರಲಿವೆ. ಮಿತ್ರರಿಂದ ಉದ್ಯೋಗ ಕಂಟಕ, ವ್ಯಾಪಾರದಲ್ಲಿ ತೊಂದರೆ, ಭೂ ವ್ಯವಹಾರದಲ್ಲಿ ಹಿನ್ನಡೆ.

ಸಿಂಹರಾಶಿ
ನೀವಾಡುವ ಮಾತಿನಲ್ಲಿ ಎಚ್ಚರ, ಉದ್ಯೋಗ ಸ್ಥಳದಲ್ಲಿ ಕಲಹ, ಸಾಲದ ಚಿಂತೆ, ರಾಜಕೀಯ ವ್ಯಕ್ತಿಗಳಿಗೆ ತಮ್ಮ ಕ್ಷೇತ್ರದಲ್ಲಿ ಉತ್ತಮ ಫ‌ಲಗಳು ಗೋಚರಕ್ಕೆ ಬಂದಾವು. ಚಿಂತಿತ ಕೆಲಸಕಾರ್ಯಗಳನ್ನು ಚಾಲನೆಗೆ ತರಲು ನಿಮಗಿದು ಉತ್ತಮ ಸಮಯ. ಮಕ್ಕಳ ಬಗ್ಗೆ ತುಸು ಕಿರಿಕಿರಿ ಉಂಟಾಗಲಿದೆ. ಕೆಲಸ ಕಾರ್ಯಗಳಲ್ಲಿ ತೊಂದರೆ, ಆಸ್ತಿ ಬಗ್ಗೆ ಕುಟುಂಬದಲ್ಲಿ ಮಾತು.

ಕನ್ಯಾರಾಶಿ
ಅವಿವಾಹಿತರು ಮಂಗಲಕಾರ್ಯಗಳನ್ನು ಶೀಘ್ರವಾಗಿ ಮುಗಿಸುವ ಆಲೋಚನೆ ಮಾಡಿಯಾರು. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಯಶಸ್ಸುನ್ನು ಸಾಧಿಸಲಿದ್ದಾರೆ. ಕೋರ್ಟುಕಚೇರಿ ವ್ಯವಹಾರಗಳು ಆತಂಕ ತಂದಾವು. ಪ್ರಯಾಣದಲ್ಲಿ ಎಚ್ಚರಿಕೆ, ಆಕಸ್ಮಿಕ ಅವಘಡ ಸಂಭವ, ದಾಯಾದಿಗಳಿಂದ ಕಲಹ, ಗೌರವಕ್ಕೆ ಚ್ಯುತಿ, ಮಹಿಳಾ ಮಿತ್ರರಿಂದ ತೊಂದರೆ.

ತುಲಾರಾಶಿ
ಉದ್ಯೋಗದಲ್ಲಿ ಅಧಿಕ ಒತ್ತಡ, ಸಾಂಸಾರಿಕವಾಗಿ ಬದಲಾವಣೆಯ ಸಾಧ್ಯತೆ ಇದೆ. ಆರ್ಥಿಕವಾಗಿ ಹಣದ ವಿಚಾರದಲ್ಲಿ ಹೆಚ್ಚಿನ ಗಮನ ಹರಿಸಬೇಕು. ವಿದ್ಯಾರ್ಥಿಗಳು ತಮ್ಮ ಅಭ್ಯಾಸದಲ್ಲಿ ನಿರೀಕ್ಷಿತ ಫ‌ಲಿತಾಂಶವನ್ನು ಪಡೆಯಲಿದ್ದಾರೆ. ಸಂಚಾರದಲ್ಲಿ ಜಾಗ್ರತೆ ಮಾಡಿರಿ. ಆರ್ಥಿಕ ಸಂಕಷ್ಟ, ಅನಿರೀಕ್ಷಿತ ತೊಂದರೆ, ದಾಂಪತ್ಯದಲ್ಲಿ ಅನುಮಾನ, ನೆಮ್ಮದಿ ಇಲ್ಲದ ಜೀವನ.

ವೃಶ್ಚಿಕರಾಶಿ
ತಂದೆಯಿಂದ ಅಪಮಾನ, ನಿಂದನೆಗೆ ಗುರಿಯಾಗುವಿರಿ, ತಾರುಣ್ಯದ ಮಂದಿಗೆ ಉತ್ತಮ ವೈವಾಹಿಕ ಸಂಬಂಧಗಳು ಕೂಡಿ ಬರಲಿವೆ. ಸಾರ್ವಜನಿಕ ಕಾರ್ಯಕ್ಷೇತ್ರದಲ್ಲಿ ಉತ್ತಮ ಗೌರವಾದಾರಗಳನ್ನು ಪಡೆಯಲಿದ್ದಾರೆ. ಆರ್ಥಿಕವಾಗಿ ಅನಿರೀಕ್ಷಿತ ಧನಾಗಮನವು ಅಚ್ಚರಿ ತರಲಿದೆ. ಉದ್ಯೋಗದಲ್ಲಿ ಬಡ್ತಿ, ಪ್ರಗತಿಯಲ್ಲಿ ಹಿನ್ನಡೆ, ಮೆಕ್ಯಾನಿಕಲ್-ಸಾರಿಗೆ ಕ್ಷೇತ್ರದವರಿಗೆ ಲಾಭ.

ಧನಸ್ಸುರಾಶಿ
ಉದ್ಯೋಗದಲ್ಲಿ ಅಧಿಕ ಒತ್ತಡ, ಅನಿರೀಕ್ಷಿತ ಸಮಸ್ಯೆ, ಆರೋಗ್ಯಭಾಗ್ಯ ಉಲ್ಲಾಸ ತರಲಿದೆ. ವಿದ್ಯಾರ್ಥಿಗಳು ಹೆಚ್ಚಿನ ಗಮನ ಹರಿಸಬೇಕಾದೀತು. ಆರ್ಥಿಕವಾಗಿ ಸಮಸ್ಯೆ ಇದ್ದರೂ ಸರಿಯಾದ ಸಮಯದಲ್ಲಿ ಧನಾಗಮನ ವಿರುತ್ತದೆ. ಕೋರ್ಟು ಕಚೇರಿ ವ್ಯವಹಾರದಲ್ಲಿ ನಂಬಿಕೆಬೇಡ. ಉದ್ಯೋಗ ಸ್ಥಳದಲ್ಲಿ ಮೋಸ, ದುಷ್ಟ ಜನರಿಂದ ಕೆಟ್ಟ ನಡವಳಿಕೆ, ಉಳ್ಳವರಿಂದ ತೊಂದರೆ.

ಮಕರರಾಶಿ
ಹಿರಿಯರೊಡನೆ ವಾದ, ವಿವಾದಗಳಿಂದ ದೂರವಿರಿ. ವೃತ್ತಿರಂಗದಲ್ಲಿ ಆಗಾಗ ಆತಂಕಗಳೆದುರಾದಾವು. ಅಪರಿಚಿತರೊಡನೆ ಹೆಚ್ಚಿನ ಜಾಗ್ರತೆ ಮಾಡಿರಿ. ಆರೋಗ್ಯದಲ್ಲಿ ಶೀತ, ಕಫ‌, ಪ್ರವೃತ್ತಿಯು ತೋರಿ ಬಂದೀತು. ಪ್ರೇಮ ವಿಚಾರದಲ್ಲಿ ಮೋಸ, ಆಸ್ತಿ ವಿಚಾರವಾಗಿ ಗೊಂದಲ, ದಾಯಾದಿಗಳ ಕಲಹ, ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲ, ಅಧಿಕವಾದ ಲಾಭ.

ಕುಂಭರಾಶಿ
ಆರೋಗ್ಯದ ಬಗ್ಗೆ ಚಿಂತೆ, ಕೈಗಾರಿಕೋದ್ಯಮದಲ್ಲಿ ಲಾಭ, ಅನಿರೀಕ್ಷಿತ ಉದ್ಯೋಗಾವಕಾಶ ಪ್ರಾಪ್ತಿ, ಸಾಂಸಾರಿಕವಾಗಿ ಮನಸ್ಸಿಗೆ ಸಮಾಧಾನವಿಲ್ಲದ ಘಟನೆ ನಡೆಯಬಹುದು. ಯೋಗ್ಯ ವಯಸ್ಕರಿಗೆ ಶುಭ ಸಮಾಚಾರವಿದೆ. ಆರೋಗ್ಯದ ಮೇಲೆ ನಕಾರಾತ್ಮಕ ಸಮಸ್ಯೆಗಳು ತೋರಿ ಬಂದಾವು. ಸಂಚಾರದಲ್ಲಿ ಜಾಗ್ರತೆ. ವ್ಯಾಪಾರ-ವ್ಯವಹಾರದಲ್ಲಿ ಆತುರದ ನಿರ್ಧಾರ, ಆಕಸ್ಮಿಕ ತೊಂದರೆಗೆ ಸಿಲುಕುವಿರಿ.

ಮೀನರಾಶಿ
ಸಂತಾನ ವಿಚಾರದಲ್ಲಿ ವೈಮನಸ್ಸು, ಧನಾಗಮನಕ್ಕೆ ತೊಂದರೆ ಇಲ್ಲದೆ ಹೆಚ್ಚಿನ ಕೆಲಸಕಾರ್ಯಗಳು ನಡೆದು ಹೋಗಲಿವೆ. ಉದ್ಯೋಗಸ್ಥ ಮಹಿಳೆಯರಿಗೆ ಮುನ್ನಡೆಯ ಅನುಭವವಾಗಲಿದೆ. ವಿದ್ಯಾರ್ಥಿವರ್ಗಕ್ಕೆ ಉತ್ತಮ ಫ‌ಲವಿದೆ. ಮುನ್ನಡೆಯಿರಿ. ದಾಂಪತ್ಯದಲ್ಲಿ ಕಲಹ, ಶುಭ ಕಾರ್ಯಗಳಿಗೆ ಸುದಿನ, ಆಕಸ್ಮಿಕ ದುರ್ಘಟನೆ, ಕುಟುಂಬದಲ್ಲಿ ಆತಂಕ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular