ಮೇಷರಾಶಿ
ಹತ್ತು ಹಲವು ಕೆಲಸಗಳಿಂದ. ದ್ರವ್ಯ ಲಾಭ, ಹಣಕಾಸು ಅನುಕೂಲ, ನಾನಾ ಮೂಲಗಳಿಂದ ಧನಾಗಮನ, ಕಾರ್ಯ ಸಾಧನೆಗಾಗಿ ತಿರುಗಾಟ, ವಿರೋಧಿಗಳಿಂದ ತೊಂದರೆ, ಮನೆಯಲ್ಲಿ ಅಶಾಂತಿ ವಾತಾವರಣ, ಈ ದಿನ ಸಾಧಾರಣ ಪ್ರಗತಿನಿರುದ್ಯೋಗಿಗಳಿಗೆ ತಾತ್ಕಾಲಿಕ ವಾಗಿ ಉದ್ಯೋಗ ದೊರಕಲಿದೆ.ಧರ್ಮಕಾರ್ಯಗಳಲ್ಲಿ ವಿಳಂಬವಾಗಲಿದೆ. ವೃತ್ತಿರಂಗದಲ್ಲಿ ಚೇತರಿಕೆಯು ಇದೆ.
ವೃಷಭರಾಶಿ
ಸಾಮಾಜಿಕವಾಗಿ ಕೈಗೊಂಡ ಕಾರ್ಯಗಳು ಸಫಲತೆಯನ್ನು ಪಡೆಯಲಿವೆ. ಮಾನಸಿಕ ವೇದನೆ, ಕುಟುಂಬದಲ್ಲಿ ಅಶಾಂತಿ, ಉದ್ಯೋಗದಲ್ಲಿ ಬಡ್ತಿ, ಶರೀರದಲ್ಲಿ ತಳಮಳ, ಸ್ತ್ರೀಯರಿಗೆ ತೊಂದರೆ. ಬಹುಪಾಲು ನೀವು ಸುಖೀಗಳನ್ನಬಹುದು.ಸರಕಾರಿ ಕೆಲಸದಲ್ಲಿ ಲಾಭವಿದೆ. ಮಕ್ಕಳ ಬಗ್ಗೆ ಚಿಂತೆ ಇದೆ.
ಮಿಥುನರಾಶಿ
ಶುಭಮಂಗಲ ಕಾರ್ಯಗಳಿಗೆ ವಿಘ್ನಭಯ ತೋರಿ ಬಂದರೂ ಹಿರಿಯರ ಅನುಗ್ರಹದಿಂದ ಕಾರ್ಯಸಾಧನೆಯಾಗಲಿದೆ. ಆಕಸ್ಮಿಕ ಧನವ್ಯಯ, ಸ್ತ್ರೀಯರಿಗೆ ಲಾಭ, ಅವಿವಾಹಿತರಿಗೆ ವಿವಾಹಯೋಗ, ಮಾನಸಿಕ ನೆಮ್ಮದಿ, ಗುರು ಹಿರಿಯರ ದರ್ಶನ, ಆರೋಗ್ಯ ಪರಿಸ್ಥಿತಿ ಚೇತರಿಕೆ. ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆಯ ಸಾಧ್ಯತೆ ಇದೆ.ನ್ಯಾಯಾಲಯದಲ್ಲಿ ಜಯವಿದೆ.

ಕಟಕರಾಶಿ
ರಾಜಕೀಯದಲ್ಲಿ ತಟಸ್ಥ ಧೋರಣೆ ಅತೀ ಉತ್ತಮವೆನಿಸಲಿದೆ. ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ವಾಹನ ಚಾಲನೆಯಲ್ಲಿ ಎಚ್ಚರ, ಅಪಘಾತವಾಗುವ ಸಾಧ್ಯತೆ, ಸ್ಥಳ ಬದಲಾವಣೆಗೆ ಆಲೋಚನೆ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ. ಹಿರಿಯರಿಗೆ ಕಫ ದೋಷದಿಂದ ಅನಾರೋಗ್ಯ ಕಂಡು ಬಂದೀತು.ದುಡುಕಿನ ನಿರ್ಧಾರಗಳು ಎಲ್ಲಾ ವಿಚಾರದಲ್ಲಿ ಪರಿಣಾಮವನ್ನು ಬೀರಲಿವೆ.
ಸಿಂಹರಾಶಿ
ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಧನವ್ಯಯ ಕಂಡು ಬರಲಿದೆ. ವಿದ್ಯಾಭ್ಯಾಸದಲ್ಲಿ ಆಸಕ್ತಿ, ಅಲ್ಪ ಆದಾಯ, ಅಧಿಕವಾದ ಖರ್ಚು, ಮಾಡುವ ಕೆಲಸ ಕಾರ್ಯಗಳಲ್ಲಿ ವಿಳಂಬ, ಆತ್ಮೀಯರಿಂದ ಸಹಾಯ. ವ್ಯಾಪಾರ, ವ್ಯವಹಾರದಲ್ಲಿ ನಿರೀಕ್ಷಿತ ಲಾಭ ತಂದೀತು.ಗೃಹಿಣಿಗೆ ಇಷ್ಟಾಪೂರ್ತಿಯಿಂದ ತೃಪ್ತಿ ತರಲಿದೆ.ಹೊಸ ಮಿತ್ರರ ಸ್ನೇಹಲಾಭದಿಂದ ಕಾರ್ಯಸಾಧನೆಯಾಗಲಿದೆ.
ಕನ್ಯಾರಾಶಿ
ಬಂಧು-ಮಿತ್ರರಿಂದ ಸಹಕಾರ, ಪರಸ್ತ್ರೀಯರಿಂದ ಧನ ಲಾಭ, ಅತಿಯಾದ ನಿದ್ರೆ, ಸಜ್ಜನರ ವಿರೋಧ, ಮನಃಕ್ಲೇಷ, ಭವಿಷ್ಯದ ಆಲೋಚನೆ, ದುಷ್ಟ ಚಿಂತನೆ.ಅನಾವಶ್ಯಕವಾಗಿ ಕಲಹಗಳು ತೋರಿ ಬಂದಾವು.ನಿರುದ್ಯೋಗಿಗಳು ತಾತ್ಕಾಲಿಕ ವೃತ್ತಿಯಲ್ಲೇ ನೆಮ್ಮದಿಯನ್ನು ಹೂಡಿಯಾರು. ಸಾಂಸಾರಿಕವಾಗಿ ಕೆಲವೊಂದು ಸಮಸ್ಯೆಗಳು ಹಿರಿಯರಿಗೆ ಪ್ರತಿಕೂಲವಾಗಿ ಬೇಸರವಾಗಲಿದೆ.

ತುಲಾರಾಶಿ
ವಾಹನ ಖರೀದಿಯ ಚಿಂತನೆ ಚಾಲನೆಗೆ ಬರಲಿದೆ. ದೃಷ್ಠಿ ದೋಷದಿಂದ ತೊಂದರೆ, ವ್ಯಾಪಾರ ವ್ಯವಹಾರದಲ್ಲಿ ಸಮಸ್ಯೆ, ಒಪ್ಪಂದಗಳಲ್ಲಿ ಎಚ್ಚರಿಕೆ, ಯೋಚಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ, ಶತ್ರುಗಳ ಬಾಧೆ, ಮಾನಸಿಕ ವ್ಯಥೆ, ಆರೋಗ್ಯದಲ್ಲಿ ವ್ಯತ್ಯಾಸ. ನಿರೀಕ್ಷಿತ ಧನಾಗಮನದಿಂದ ಕಾರ್ಯಸಾಧನೆಯಾಗಲಿದೆ. ಪಾಲು ಬಂಡವಾಳದಲ್ಲಿ ಹಲವಾರು ಸಮಸ್ಯೆಗಳು ನಿಮ್ಮನ್ನು ಮುತ್ತಿಕೊಳ್ಳಲಿವೆ. ಜಾಗ್ರತೆ.
ವೃಶ್ಚಿಕರಾಶಿ
ದಾಂಪತ್ಯದಲ್ಲಿ ಅನಾವಶ್ಯಕ ಕಲಹಗಳು ಕಂಡು ಬರಲಿವೆ. ರಾಜಕೀಯ ಕ್ಷೇತ್ರದವರಿಗೆ ಮಾನಸಿಕವಾಗಿ ನೆಮ್ಮದಿ ಇರದು. ಸರ್ಕಾರಿ ಕೆಲಸದಲ್ಲಿ ಸಮಸ್ಯೆ, ಯತ್ನ ಕಾರ್ಯದಲ್ಲಿ ವಿಘ್ನ, ಅನ್ಯ ಜನರಲ್ಲಿ ವೈಮನಸ್ಸು, ಆಕಸ್ಮಿಕ ಕೋಪ ಹೆಚ್ಚಾಗುವುದು, ಇಲ್ಲ ಸಲ್ಲದ ಅಪವಾದ, ದಿನಾಂತ್ಯದಲ್ಲಿ ನೆಮ್ಮದಿ ಪ್ರಾಪ್ತಿ. ಯೋಗ್ಯ ವಯಸ್ಕರಿಗೆ ಕಂಕಣಬಲದ ಸಾಧ್ಯತೆ ಇದೆ.ಪ್ರಯತ್ನಬಲ ಅಗತ್ಯವಿದೆ.
ಧನುರಾಶಿ
ದೂರ ಸಂಚಾರದಲ್ಲಿ ಕಾರ್ಯಸಾಧನೆ ಇದೆ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಆಸಕ್ತಿ ಬೆಳೆಯಲಿದೆ. ಮಾಡುವ ಕೆಲಸ ಕಾರ್ಯಗಳಲ್ಲಿ ಜಯ, ಗುರುಗಳಿಂದ ಉತ್ತಮ ಸಲಹೆ, ಮಾನಸಿಕ ನೆಮ್ಮದಿ, ಸಾಲ ಮರುಪಾವತಿ ಸಾಧ್ಯತೆ, ಪ್ರಭಾವಿ ವ್ಯಕ್ತಿಗಳ ಭೇಟಿ, ವ್ಯವಹಾರದಲ್ಲಿ ಅನುಕೂಲ. ಕೌಟುಂಬಿಕವಾಗಿ ಆಗಾಗ ಕಿರಿಕಿರಿ ಇದ್ದರೂ ಸುಧಾರಿಸಿಕೊಂಡು ಹೋಗಬಹುದಾಗಿದೆ. ಮುನ್ನಡೆಯಿರಿ.

ಮಕರರಾಶಿ
ಸಕಾಲಿಕ ಯೋಜನೆಗಳು ಕಾರ್ಯರೂಪಕ್ಕೆ ಬಂದರೂ ಮನಸ್ಸಿಗೆ ನೆಮ್ಮದಿ ಇರದು. ರಿಯಲ್ ಎಸ್ಟೇಟ್‍ನವರಿಗೆ ಲಾಭ, ಭೂ ವ್ಯವಹಾರದಲ್ಲಿ ಅನುಕೂಲ, ಮುಂಗೋಪ ಹೆಚ್ಚಾಗುವುದು, ಯಾರನ್ನೂ ಹೆಚ್ಚು ನಂಬಬೇಡಿ, ವಿದ್ಯಾಭ್ಯಾಸದಲ್ಲಿ ಅಲ್ಪ ಮುನ್ನಡೆ. ವೃತ್ತಿರಂಗದಲ್ಲಿ ಸಾವಧಾನವಾಗಿ ಮುನ್ನಡೆಯಿರಿ.ಹೊಸ ಸಾಮಗ್ರಿಗಳು ಮನೆಯನ್ನು ಅಲಂಕರಿಸಿವುದು.ಶುಭವಿದೆ.
ಕುಂಭರಾಶಿ
ನೆರೆಹೊರೆಯವರೊಡನೆ ಅನಾವಶ್ಯಕ ಘರ್ಷಣೆ ತಂದೀತು. ಮಿತ್ರರ ಜೊತೆ ವಾದ ವಿವಾದ, ತಾಳ್ಮೆಯಿಂದ ಕಾರ್ಯ ಸಿದ್ಧಿ, ಉದ್ಯೋಗದಲ್ಲಿ ಬಡ್ತಿ, ವಸ್ತ್ರಾಭರಣ ಯೋಗ, ಇಷ್ಟಾರ್ಥ ಸಿದ್ಧಿ. ಆಗಾಗ ಉದ್ವೇಗ ಪರಿಸ್ಥಿತಿಯಿಂದ ಮನಸ್ಸಿಗೆ ಸಮಾಧಾನವಿರದು.ದೇವತಾ ಕಾರ್ಯಗಳಿಗಾಗಿ ಧನವ್ಯಯವಿದೆ.ಅನಿರೀಕ್ಷಿತ ಭೇಟಿ ಇರುವುದು.
ಮೀನರಾಶಿ
ಆಗಾಗ ಬಂಧುಮಿತ್ರರ ಆಗಮನದಿಂದ ಸಂತಸವಿದೆ.ಸಂಪಾದನೆಯ ಇನ್ನೊಂದು ದಾರಿಯು ಗೋಚರಿಸಲಿದೆ. ಋಣ ವಿಮೋಚನೆ, ವಾಹನ ಯೋಗ, ಕುಟುಂಬದಲ್ಲಿ ಕಲಹ ಸಾಧ್ಯತೆ, ವಾಗ್ವಾದಗಳಿಂದ ದೂರವಿರಿ, ತಾಳ್ಮೆಯನ್ನು ಕಳೆದುಕೊಳ್ಳಬೇಡಿ, ಶತ್ರುಗಳ ಕುತಂತ್ರ, ಕುಟುಂಬದಲ್ಲಿ ಕಲಹ, ಅಕಾಲ ಭೋಜನ. ಹಿರಿಯರ ಆರೋಗ್ಯದ ಬಗ್ಗೆ ಎಚ್ಚರವಿರಲಿ. ವಿವಾಹಿತರಿಗೆ ಸದ್ಯದಲ್ಲೇ ಶುಭವಾರ್ತೆ ಇದೆ.