ಸೋಮವಾರ, ಏಪ್ರಿಲ್ 28, 2025
Homehoroscopeನಿತ್ಯಭವಿಷ್ಯ : 03-07-2020

ನಿತ್ಯಭವಿಷ್ಯ : 03-07-2020

- Advertisement -

ಮೇಷರಾಶಿ
ವೃತ್ತಿರಂಗದಲ್ಲಿ ಜನರೊಂದಿಗಿನ ನಡವಳಿಕೆಯಲ್ಲಿ ಎಚ್ಚರವಿರಲಿ. ಸ್ಥಿರಾಸ್ತಿ ವ್ಯವಹಾರ ಮಾಡುವಿರಿ, ಬಂಧುಗಳಿಗಾಗಿ ಅಧಿಕ ಖರ್ಚು, ಆತ್ಮೀಯರೊಂದಿಗೆ ಓಡಾಟ, ನರ ದೌರ್ಬಲ್ಯ, ಕುತ್ತಿಗೆ ನೋವು, ಶರೀರದಲ್ಲಿ ಆಯಾಸ. ಕಾರ್ಯಕ್ಷೇತ್ರದಲ್ಲಿ ಅದೃಷ್ಟದ ತೆರೆಗಳು ಅನುಕೂಲವಾಗಿ ಬರಲಿವೆ. ಪತ್ರಿಕೋದ್ಯಮ, ವೈದ್ಯರು, ಇಂಜಿನಿಯರುಗಳಿಗೆ ಅಭಿವೃದ್ಧಿ ಇದೆ.

ವೃಷಭರಾಶಿ
ಇತರೆಲ್ಲಾ ವಿಚಾರಗಳಿಗಿಂತ ಸಂಸಾರದ ಕಡೆಗೆ ಹೆಚ್ಚಿನ ಗಮನ ಹರಿಸಬೇಕಾದೀತು. ಹಣಕಾಸು ವಿಚಾರವಾಗಿ ಅನುಕೂಲ, ಮಕ್ಕಳು ದೂರವಾಗುವರು, ಆಕಸ್ಮಿಕ ಬಂಧುಗಳ ಆಗಮನ. ಉದ್ಯೋಗ ವ್ಯವಹಾರದಲ್ಲಿ ಪರಿಣಾಮಕಾರಿಯಾಗಿ ಅಭಿವೃದ್ಧಿ ಕಂಡು ಬರಲಿದೆ. ದೂರ ಸಂಚಾರದಲ್ಲಿ ಜಾಗ್ರತೆ ಇರಲಿ.

ಮಿಥುನರಾಶಿ
ಕಾರ್ಯರಂಗದಲ್ಲಿ ನಾನಾ ರೀತಿಯಲ್ಲಿ ತಾಪತ್ರಯಗಳು ಕಂಡು ಬಂದಾವು. ಮಾರಾಟಗಾರರಿಗೆ ಅಧಿಕ ಲಾಭ, ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲ, ಉದ್ಯೋಗ ಬದಲಾಯಿಸುವ ಮನಸ್ಸು. ಆರೋಗ್ಯದ ಸ್ಥಿತಿಯಲ್ಲಿ ಏರುಪೇರು ಕಂಡು ಬಂದೀತು. ಸ್ನೇಹಿತರು ಬಂಧುಗಳು ಸಕಾಲಿಕವಾಗಿ ನೆರವಾಗಲಿದ್ದಾರೆ.

ಕಟಕರಾಶಿ
ಹಣಕಾಸಿನ ವಿಚಾರದಲ್ಲಿ ಸಮಯಕ್ಕೆ ಸರಿಯಾಗಿ ಸಿಗದೆ ಆರ್ಥಿಕಸ್ಥಿತಿ ಕೆಡಲಿದೆ. ಅಜೀರ್ಣ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ, ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ, ತಂದೆಯಿಂದ ಅನುಕೂಲ. ಕೆಲವು ಸಮಸ್ಯೆಗಳು ನಿಮ್ಮ ಮನಸ್ಸನ್ನು ಕುಂಠಿತಗೊಳಿಸಲಿವೆ. ಜೀವನವನ್ನು ಇದ್ದ ಹಾಗೆ ಮುಂದುವರಿಸುವುದು ಅಗತ್ಯವಿದೆ.

ಸಿಂಹರಾಶಿ
ಬಹುಕಾಲದ ತಾಳ್ಮೆಯ ನಂತರ ಒಂದು ಒಳ್ಳೆಯ ಘಟ್ಟವನ್ನು ತಲುಪಲಿದ್ದೀರಿ. ಗಂಡು ಮಕ್ಕಳಿಂದ ಲಾಭ, ಮಿತ್ರರಲ್ಲಿ ಮನಃಸ್ತಾಪ, ಹಿರಿಯ ಸಹೋದರಿಯಿಂದ ಲಾಭ, ಆಕಸ್ಮಿಕ ಧನಾಗಮನ. ಪ್ರಭಾವ ಬೀರುವ ಉತ್ತಮ ವ್ಯಕ್ತಿಗಳೊಡನೆ ಸಂಪರ್ಕ ಸಾಧಿಸಲಿದ್ದೀರಿ. ಮುಗಿದು ಹೋದ ವಿಚಾರವೆಂದೆಣಿಸಿದರೆ ಆರಂಭವಾಗಲಿದೆ.

ಕನ್ಯಾರಾಶಿ
ಕಾರ್ಯರಂಗದಲ್ಲಿ ಅನೇಕ ರೀತಿಯ ಸಮಸ್ಯೆಗಳು ತೋರಿ ಬಂದಾವು. ಉದ್ಯೋಗ ಪ್ರಾಪ್ತಿ, ಸ್ಥಿರಾಸ್ತಿ-ವಾಹನ ಯೋಗ, ಮಾತೃವಿನಿಂದ ಧನಾಗಮನ. ಇದಕ್ಕೆಲ್ಲಾ ನಿಮ್ಮ ಸ್ವಯಂಕೃತ ಅಪರಾಧವೇ ಕಾರಣವಾಗಿ ಕೆಟ್ಟ ಮಾತು ಕೇಳಿ ಬರುವುದು. ಆರೋಗ್ಯದಲ್ಲಿ ಆಗಾಗ ಏರುಪೇರುಗಳು ಕಂಡೀತು.

ತುಲಾರಾಶಿ
ವೃತ್ತಿರಂಗದಲ್ಲಿ ಒದಗಿ ಬರುವ ಅನೇಕ ಅವಕಾಶಗಳು ನಿಮ್ಮನ್ನು ಎತ್ತರಕ್ಕೆ ಕೊಂಡೊಯ್ಯಲಿವೆ. ಬಂಧುಗಳಿಂದ ನಿಂದನೆ, ಉದ್ಯೋಗಕ್ಕಾಗಿ ಪ್ರಯಾಣ, ಪರಸ್ಥಳ ಪ್ರವಾಸ, ಸಾಲ ಬಾಧೆ, ಶತ್ರುಕಾಟದಿಂದ ನಿದ್ರಾಭಂಗ. ಅವಿವಾಹಿತರಿಗೆ ಕಂಕಣಬಲದ ಸುಯೋಗ ಸಂತಸ ತರಲಿದೆ.ಆದರೂ ದುಡುಕಿ ಸಮಸ್ಯೆ ತಂದು ಕೊಳ್ಳದಿರಿ.

ವೃಶ್ಚಿಕರಾಶಿ
ಅನಿರೀಕ್ಷಿತ ಘಟನೆಗಳಿಂದ ಆಶ್ಚರ್ಯಕ್ಕೆ ಒಳಗಾಗುವಿರಿ. ಆಕಸ್ಮಿಕ ಉದ್ಯೋಗದಲ್ಲಿ ಬಡ್ತಿ, ಉತ್ತಮ ಸ್ಥಾನಮಾನ ಪ್ರಾಪ್ತಿ, ಶುಭ ಕಾರ್ಯಗಳಿಗೆ ಸುಸಮಯ, ಮನಸ್ಸಿನಲ್ಲಿ ಕೆಟ್ಟಾಲೋಚನೆ, ಕಾನೂನು ಬಾಹಿರ ಸಂಪಾದನೆ. ದಿನಾಂತ್ಯದಲ್ಲಿ ಅದೃಷ್ಟದ ಸಹಾಯವು ನಿಮಗಿರುತ್ತದೆ. ವ್ಯಾವಹಾರಿಕವಾಗಿ ಆರ್ಥಿಕ ಉನ್ನತಿ ತೋರಿ ಬಂದೀತು. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಫ‌ಲವಿದೆ.

ಧನುರಾಶಿ
ಕುಟುಂಬದಲ್ಲಿ ಅನಾರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಿರಿ. ಪೈನಾನ್ಸ್‍ನವರಿಗೆ ಲಾಭ, ವ್ಯವಹಾರಗಳಲ್ಲಿ ಅನುಕೂಲ, ಮನೋಭಿಲಾಷೆ ಈಡೇರುವುದು, ಸಂಗಾತಿಯಿಂದ ಮಾನಸಿಕ ನೆಮ್ಮದಿ. ಯೋಗ್ಯ ವಯಸ್ಕರಿಗೆ ಅನಿರೀಕ್ಷಿತ ವಿವಾಹ ಬಂಧನದ ಯೋಗವಿದೆ. ಅನಾವಶ್ಯಕವಾಗಿ ಚಿಂತೆಗೆ ಗುರಿಯಾಗದಿರಿ. ಸಂಚಾರದಲ್ಲಿ ಗಮನವಿರಲಿ.

ಮಕರರಾಶಿ
ವಿದ್ಯಾರ್ಥಿಗಳಿಗೆ ತಕ್ಕಮಟ್ಟಿನ ಫ‌ಲ ತೋರಿ ಬರಲಿದೆ. ಉದ್ಯೋಗ ಬದಲಾವಣೆ, ಪರಸ್ಥಳ ವಾಸ, ಸ್ವಯಂಕೃತ್ಯಗಳಿಂದ ನಷ್ಟ, ಸಾಲ ಬಾಧೆ, ಮಂಗಳ ಕಾರ್ಯಗಳಿಗೆ ಸಿದ್ಧತೆ. ಹಣಕಾಸಿನ ವಿಚಾರದಲ್ಲಿ ಹೆಚ್ಚಿನ ಜಾಗ್ರತೆ ಇರಲಿ. ಶ್ರೀದೇವರ ದರ್ಶನದ ಭಾಗ್ಯವಿದೆ. ವಾಹನ ಸಂಚಾರದಲ್ಲಿ ಜಾಗ್ರತೆ ಇರಲಿ. ಕಾಳಜಿ ಅಗತ್ಯವಿದೆ.

ಕುಂಭರಾಶಿ
ವ್ಯಾವಹಾರಿಕವಾಗಿ ಯಾವುದೇ ಆರಂಭಕ್ಕೆ ಇದು ಸಕಾಲವಲ್ಲಾ. ಕುಟುಂಬಕ್ಕೆ ಸಾಲಗಾರರಿಂದ ಕಿರಿಕಿರಿ, ಶತ್ರುಗಳಿಂದ ಹಿಂಸೆ, ಮಕ್ಕಳಲ್ಲಿ ಆಸಕ್ತಿ ಕುಂಠಿತ, ಶೀತ ಬಾಧೆ, ಆರೋಗ್ಯದಲ್ಲಿ ಏರುಪೇರು. ಅನಿರೀಕ್ಷಿತವಾಗಿ ಆರೋಗ್ಯ ಕೆಡುವ ಸಾಧ್ಯತೆ ಇದೆ. ಉದ್ಯೋಗರಂಗದಲ್ಲಿ ಸಮಸ್ಯೆಗಳೇ ಅಧಿಕವಾದಾವು.ಯಾವುದಕ್ಕೂ ತಾಳ್ಮೆಯಿಂದ ಮುನ್ನಡೆಯಿರಿ.

ಮೀನರಾಶಿ
ಎಲ್ಲಾ ವಿಚಾರಗಳಿಗಿಂತ ಸಾಂಸಾರಿಕವಾಗಿ ಗಮನ ಹರಿಸಿರಿ. ನಾನಾ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶ, ವಾಹನ ಖರೀದಿಗೆ ಮನಸ್ಸು, ವಸ್ತ್ರ, ಮೊಬೈಲ್ ಖರೀದಿ, ಹೆಚ್ಚು ವ್ಯಾಪಾರ ಮಾಡುವಿರಿ. ಉದ್ಯೋಗ, ವ್ಯವಹಾರಗಳಲ್ಲಿ ಹೆಚ್ಚಿನ ಅಭಿವೃದ್ಧಿ ಇದ್ದರೂ ಮನಸ್ಸಿಗೆ ಸಮಾಧಾನವಿರದು. ಬಂಧುಗಳೊಂದಿಗೆ ವಿರೋಧಗಳು ಕಂಡು ಬಂದಾವು.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular