ನಿತ್ಯಭವಿಷ್ಯ : ಈ ರಾಶಿಯವರು ಆರ್ಥಿಕ ಪ್ರಗತಿ‌ ಸಾಧಿಸಲಿದ್ದಾರೆ

tಮೇಷರಾಶಿ
ಇಂದು ನೀವು ತಾಳ್ಮೆಯಿಂದ ಕೆಲಸ ಮಾಡಿ, ಹಿರಿಯ ಅಧಿಕಾರಿಗಳ ಜೊತೆ ಮಾತನಾಡುವಾಗ ಎಚ್ಚರವಹಿಸಿ, ನೀವು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸಬೇಕು. ಪ್ರವಾಸದ ಸಮಯದಲ್ಲಿ ಜಾಗರೂಕ ರಾಗಿರಬೇಕು ಏಕೆಂದರೆ  ಅಪಘಾತ ಸಂಭವಿಸುವ ಯೋಗವಿದೆ.

ವೃಷಭರಾಶಿ
ಇಂದು ವೈವಾಹಿಕ ಜೀವನವು ಸುಖ ಶಾಂತಿಯಿಂದ ತುಂಬಿರುತ್ತದೆ ಕೆಲಸದಲ್ಲಿ ನಿಮ್ಮ ತೊಂದರೆಗಳು ಕಡಿಮೆಯಾಗುತ್ತದೆ. ವ್ಯಾಪಾರಿಗಳು ಉತ್ತಮ ಆರ್ಥಿಕ ಲಾಭವನ್ನು ಪಡೆಯಬಹುದು. ಈ ದಿನ ಅವಸರ ದಿಂದ ದೂರವಿರಿ. ಮಸಾಲೆಯುಕ್ತ ಆಹಾರವನ್ನು ತಪ್ಪಿಸಿ.

ಮಿಥುನರಾಶಿ
ಸಹೋದರ ವರ್ಗದಿಂದ ಅನಗತ್ಯವಾಗಿ ವಿವಾದಗಳು ಹೆಚ್ಚಾಗಲಿದೆ. ಆದಾಗ್ಯೂ, ಈ ವ್ಯಾಪಕ ಸಾಂಕ್ರಾಮಿಕ ರೋಗದಿಂದ ನೀವು ಜಾಗರೂಕರಾಗಿರಿ. ಹಣದ ವಿಷಯದಲ್ಲಿ ಇಂದು ನಿಮಗೆ ತುಂಬಾ ಶುಭವಾಗಲಿದೆ. ಇಂದು ಸಿಗಬೇಕಾಗಿದ್ದ ಹಣ ಕೈ ಸೇರುವುದು. ನಿಮ್ಮ ಸ್ಥಗಿತಗೊಂಡ ಕೆಲಸ ಪೂರ್ಣಗೊಳಿಸಬಹುದು.

ಕರ್ಕಾಟಕರಾಶಿ
ವಿದ್ಯಾರ್ಥಿಗಳಿಗೆ  ಸವಾಲು ಎದುರಾಗುವ ದಿನ. ನಿಮ್ಮ ಶಿಕ್ಷಣದಲ್ಲಿ ದೊಡ್ಡ ಅಡಚಣೆ ಉಂಟಾಗುವ ಸಾಧ್ಯತೆ ಇದೆ. 

ಸಿಂಹರಾಶಿ
ಇಂದು ಆರ್ಥಿಕ ದೃಷ್ಟಿಯಿಂದ  ನಿಮಗೆ ಉತ್ತಮ‌ ವಾಗಿರುವುದಿಲ್ಲ. ಫ್ಯಾಷನ್‌ನಲ್ಲಿ ಕೆಲಸ ಮಾಡುವ ಜನರು ಉತ್ತಮ ಯಶಸ್ಸನ್ನು ಪಡೆಯ ಬಹುದು. ಕುಟುಂಬ ದೊಂದಿಗೆ ಹೆಚ್ಚು ಸಮಯ ಕಳೆಯಲು ಪ್ರಯತ್ನಿಸಿ.

ಕನ್ಯಾರಾಶಿ
ಇಂದು ಮನಸ್ಸಿಗೆ ಅನೇಕ ಕೆಟ್ಟ ಆಲೋಚನೆಗಳು ಬರಬಹುದು.‌ ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುವ ಪ್ರಬಲ ಸಾಧ್ಯತೆಯಿದೆ. ನೀವು ದೇವರನ್ನು ಧ್ಯಾನಿಸಿ. ನೀವು ಮನೆಯ ಸದಸ್ಯರ  ಬೆಂಬಲವನ್ನು ಪಡೆಯಿರಿ.

ತುಲಾರಾಶಿ
ಅನಗತ್ಯ ಕೆಲಸದ ಬಗ್ಗೆ ಚಿಂತಿಸಬೇಕಾಗಿಲ್ಲ ತಾಳ್ಮೆಯಿಂದಿರಿ. ಆದಾಯ ಕ್ಕಿಂತ ಹೆಚ್ಚು ಖರ್ಚು ಮಾಡುವ ಸಾಧ್ಯತೆಯಿದೆ. ನಿಮ್ಮ ಅವಶ್ಯಕತೆಗೆ ತಕ್ಕಂತೆ ಖರ್ಚು ಮಾಡುವುದು ಉತ್ತಮ. ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ.

ವೃಶ್ಚಿಕರಾಶಿ
ಹಣವನ್ನು ಎಚ್ಚರಿಕೆಯಿಂದ ಬಳಸಿ . ಕಚೇರಿಯಲ್ಲಿ ನಿಮ್ಮ ಕೆಲಸದ ಬಗ್ಗೆ ನಿಮ್ಮ ಗಮನವನ್ನು ಕೇಂದ್ರೀಕರಿಸಿ. ನಿಮ್ಮ ಕೆಲವು ಆಸೆ, ಆಕಾಂಕ್ಷೆ ಗಳು ವಿರುದ್ಧತೆಗಳಿಂದ ಕೂಡಿರುತ್ತದೆ.

ಧನುರಾಶಿ
ಈ ದಿನ ನೀವು ಯಾರಿಗೂ ಹಣವನ್ನು ಕೊಡುವ ಮುನ್ನ ಯೋಚಿಸಿ ಇಲ್ಲದಿದ್ದರೆ  ಮುಂದಿನ ದಿನ ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗ ಬಹುದು.

ಮಕರರಾಶಿ
ಕೆಲಸದ ಸ್ಥಳದಲ್ಲಿ ವರಿಷ್ಠ ಅಧಿಕಾರಿಗಳೊಂದಿಗೆ  ಭಿನ್ನಾಭಿಪ್ರಾಯಗಳು ಮತ್ತು ಯಾವುದೇ ರೀತಿಯ ತಪ್ಪು ಮಾತನಾಡಬೇಡಿ . ಕೌಟುಂಬಿಕ ಜೀವನದಲ್ಲಿ ಸಾಕಷ್ಟು ಉತ್ತಮವಾಗಿರುತ್ತದೆ.

ಕುಂಭರಾಶಿ
ಈ ದಿನ ಪ್ರೀತಿಯ ಜೀವನಕ್ಕಾಗಿ ಅನುಕೂಲಕರ ವಾಗಲಿದೆ. ಆದರೆ ಜೀವನ ಸಂಗಾತಿಯ ಕೋಪವನ್ನು ಅನುಭವಿಸ ಬೇಕಾಗ ಬಹುದು. ನಿಮ್ಮ ಹಣವನ್ನು ದುಬಾರಿ ಭೌತಿಕ ವಸ್ತುವಿಗೆ ಖರ್ಚು ಮಾಡಬಹುದು.

ಮೀನರಾಶಿ
ಸ್ನಾಯುಗಳು ಮತ್ತು ನರಗಳಿಗೆ ಸಂಬಂಧಿಸಿದ ತೊಂದರೆಗಳು ಸಂಭವಿಸಬಹುದು. ತಂದೆ ತಾಯಿಯ ಆರೋಗ್ಯದ ಮೇಲೆ ಎಚ್ಚರ ವಹಿಸಿ ವಿದ್ಯಾರ್ಥಿಗಳಿಗೆ ಈ ದಿನ ಅನುಕೂಲಕರವಾಗಿದೆ.

Comments are closed.