ರಾಜ್ಯದಲ್ಲಿ ಹೊಸ ದಾಖಲೆ ಬರೆದ ಹೆಮ್ಮಾರಿ : 24 ಗಂಟೆಯಲ್ಲಿ 23,558 ಮಂದಿಗೆ ಕೊರೊನಾ

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಹೆಮ್ಮಾರಿ ಅಟ್ಟಹಾಸ‌‌ ಮೆರೆದಿದೆ. ಕಳೆದ 24 ಗಂಟೆಗಳ ಅವಧಿ ಯಲ್ಲಿ ದಾಖಲೆಯ ಸಂಖ್ಯೆ ಯಲ್ಲಿ ಕೊರೊನಾ ಪ್ರಕರಣಗಳು ದಾಖಲಾಗಿದೆ. ಬರೋಬ್ಬರಿ, 23,558 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು, 116 ಜನರನ್ನು ಕೊರೊನಾ ಬಲಿ ಪಡೆದಿದೆ.

ಸಿಲಿಕಾನ್ ಸಿಟಿ ಬೆಂಗಳೂರಲ್ಲಿ 13,460 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸಕ್ರೀಯ ಪ್ರಕರಣಗಳ ಸಂಖ್ಯೆ1,24,894 ಕ್ಕೆ ಏರಿಕೆಯಾಗಿದೆ. ಉಳಿದಂತೆ ಮೈಸೂರು 975, ರಾಯಚೂರು 220, ರಾಮನಗರ 90, ಶಿವಮೊಗ್ಗ 266, ತುಮಕೂರು 1,176, ಉಡುಪಿ 471, ಬಳ್ಳಾರಿ 792, ಬೆಳಗಾವಿ 301, ಬೆಂಗಳೂರು ಗ್ರಾಮಾಂತರ 544 ಮಂದಿಗೆ ಸೋಂಕು ದೃಢಪಟ್ಟಿದೆ.

ಬಾಗಲಕೋಟೆ 153,ಬೆಂಗಳೂರು ನಗರ 13,640, ಬೀದರ್ 202, ಚಾಮರಾಜನಗರ 170, ಚಿಕ್ಕಬಳ್ಳಾಪುರ 221, ಚಿಕ್ಕಮಗಳೂರು 198, ಚಿತ್ರದುರ್ಗ 118, ದಕ್ಷಿಣ ಕನ್ನಡ 401, ದಾವಣಗೆರೆ 200, ಬೆಂಗಳೂರು ಗದಗ 72, ಹಾಸನ 445, ಹಾವೇರಿ 27, ಕಲಬುರಗಿ 757, ಕೊಡಗು 141, ಕೋಲಾರ 369, ಕೊಪ್ಪಳ 133, ಮಂಡ್ಯ 492, ಉತ್ತರ ಕನ್ನಡ 171, ವಿಜಯಪುರ ಮತ್ತು 335 ಯಾದಗಿರಿಯಲ್ಲಿ 99 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

Comments are closed.