ಮೇಷರಾಶಿ
ಸಾಮಾಜಿಕ ಕಾರ್ಯಗಳಲ್ಲಿ ಮನ್ನಣೆ, ವ್ಯಾಪಾರ ವ್ಯವಹಾರದಲ್ಲಿ ಉತ್ತಮ, ಸ್ನೇಃಇತರಲ್ಲಿ ಕಲಹ, ಆಪ್ತರಿಂದ ಸಹಾಯ, ಸಂಸಾರದಲ್ಲಿ ಸುಖ-ಶಾಂತಿ, ಗೃಹದಲ್ಲಿ ಅಮಂಗಳವಾಗುವುದು ಎಚ್ಚರ, ವಾಹನ ಸಂಚಾರದಿಂದ ತೊಂದರೆ.
ವೃಷಭರಾಶಿ
ಆರ್ಥಿಕ ವಿಚಾರದಲ್ಲಿ ವಿವಾದ, ಸ್ತ್ರೀಸೌಖ್ಯ, ಗೃಹದಲ್ಲಿ ಹಾನಿ, ಅಶಾಂತಿ ವಾತಾವರಣ, ವೃತ್ತಿರಂಗದಲ್ಲಿ ಅಧಿಕಾರಿಗಳ ಸಹಕಾರ, ಕುಟುಂಬದಲ್ಲಿ ಒಬ್ಬರಿಗೆ ಅನಾರೋಗ್ಯ, ಹಣದ ತೊಂದರೆ, ಶತ್ರು ಬಾಧೆ, ಋಣಬಾಧೆ, ಕೆಲಸಕಾರ್ಯಗಳಲ್ಲಿ ವಿಘ್ನ, ಶೀತ ಸಂಬಂಧವಾದ ರೋಗ.
ಮಿಥುನರಾಶಿ
ಗೃಹ ನಿರ್ಮಾಣದ ಕಾರ್ಯಕ್ಕಾಗಿ ಓಡಾಟ, ಧನಲಾಭ, ಆಸ್ತಿ ಖರೀದಿ ಸಾಧ್ಯತೆ, ವಸ್ತ್ರ ಖರೀದಿ, ದ್ರವ್ಯಲಾಭ, ಗೃಹ ನಿರ್ಮಾಣದ ಕೆಲಸ ಪ್ರಾರಂಭಿಸುವಿರಿ, ವ್ಯಾಪಾರ ಉದ್ಯೋಗದಲ್ಲಿ ಲಾಭ, ಬಂಧು ಮಿತ್ರರಿಂದ ಸಹಾಯ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ.
ಕರ್ಕಾಟಕರಾಶಿ
ದುಂದು ವೆಚ್ಚಗಳ ಮೇಲೆ ಹಿಡಿತವಿರಲಿ, ಧಾರ್ಮಿಕ ಗುರುಗಳ ಭೇಟಿ, ಉದ್ಯೋಗದಲ್ಲಿ ಕಿರಿ-ಕಿರಿ, ಹಣದ ಅಡಚಣೆ, ನಂಬಿದ ಜನರಿಂದ ಆಶಾಂತಿ, ಮನಕ್ಲೇಷ, ಧನಹಾನಿ, ಯತ್ನಿಸಿದ ಕಾರ್ಯಭಂಗ, ಬಂಧು ಮಿತ್ರರಲ್ಲಿ ಕಲಹ, ಅಪಘಾತವಾಗುವ ಸಮಯ.
ಸಿಂಹರಾಶಿ
ಕಾರ್ಯಕ್ಷೇತ್ರದಿಂದ ದೂರ ಉಳಿಯಬೇಕಾದ ಸ್ಥಿತಿ, ಇಷ್ಟಾರ್ಥಸಿದ್ಧಿ, ಸ್ತ್ರೀ ಲಾಭ, ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯತ್ನ ಬಲ, ಉನ್ನತ ಅಧಿಕಾರ ಪ್ರಾಪ್ತಿ, ಭೂಮಿ ಕೊಳ್ಳುವಿಕೆ, ಅನಗತ್ಯ ಅಪವಾದ, ಸಮಾಜದಲ್ಲಿ ಗೌರವ, ಕೀರ್ತಿ ಲಭಿಸುತ್ತದೆ, ಅಮೂಲ್ಯ ವಸ್ತುಗಳ ಖರೀದಿ.
ಕನ್ಯಾರಾಶಿ
ಮೇಲಾಧಿಕಾರಿಗಳಿಂದ ಪ್ರಶಂಸೆ, ದಾಯಾದಿಗಳಿಂದ ಕಲಹ, ಅಧಿಕ ಖರ್ಚು, ವೃತ್ತಿರಂಗದಲ್ಲಿ ಇಚ್ಚಿನ ನಿರ್ಧಾರ, ಮಾತೃವಿಗೆ ತೊಂದರೆ, ಅಪಕೀರ್ತಿ, ಸಲ್ಲದ ಅಪವಾದ, ಸ್ಥಳ ಬದಲಾವಣೆ, ದ್ರವ್ಯ ನಷ್ಟ, ಸ್ವಲ್ಪ ಧನ ಬಂದರೂ ಉಳಿಯುವುದಿಲ್ಲ, ವ್ಯಾಸಂಗಕ್ಕೆ ತೊಂದರೆ, ಅಧಿಕ ತಿರುಗಾಟ.
ತುಲಾರಾಶಿ
ಧನಾರ್ಜನೆಯಲ್ಲಿ ಪ್ರಗತಿ, ಬಂದು ಅವಕಾಶವನ್ನು ಬಳಸಿಕೊಳ್ಳಿ, ಮಾನಸಿಕ ಉದ್ವೇಗ, ಉದ್ಯೋಗದಲ್ಲಿ ಕಿರಿ-ಕಿರಿ, ಹಣದ ಅಡಚಣೆ, ಕುಟುಂಬದಲ್ಲಿ ಅಶಾಂತಿ, ಅಧಿಕ ತಿರುಗಾಟ, ಮನಸ್ಸಿಗೆ ಚಿಂತೆ, ಶತ್ರು ಬಾಧ, ಸಾಲಬಾಧೆ, ಮನಕ್ಲೇಷ, ನಂಬಿದ ಜನರಿಂದ ಅಶಾಂತಿ.
ವೃಶ್ಚಿಕರಾಶಿ
ಸಾಂಸಾರಿಕ ಸಮಸ್ಯೆಗಳ ಪರಿಹಾರ, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ವಿದ್ಯಾಭಿವೃದ್ಧಿ, ಅವಿವಾಹಿತರಿಗೆ ಕಂಕಣ ಬಲ, ಕಾರ್ಯವೈಖರಿಯಿಂದ ಆರ್ಥಿಕ ಬಿಕ್ಕಟ್ಟಿನಿಂದ ಪಾರು, ವಾಹನ ಕೊಳ್ಳುವಿಕೆ, ಧಾನ ಧರ್ಮದಲ್ಲಿ ಆಸಕ್ತಿ, ಆಕಸ್ಮಿಕ ಧನಲಾಭ, ಕೈಹಾಕಿದ ಕೆಲಸಗಳಲ್ಲಿ ಜಯ,
ಧನಸ್ಸುರಾಶಿ
ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ, ಸಾಮಾಜಿಕ ಕಾರ್ಯಗಳಲ್ಲಿ ಪ್ರಶಂಸೆ, ಆರ್ಥಿಕ ಸ್ಥಿತಿ ಏರುಪೇರು, ಸರಕಾರಿ ಕೆಲಸಕಾರ್ಯಗಳಲ್ಲಿ ಪ್ರಗತಿ, ಸುಖ ಬಹುಜನ ಪ್ರಾಪ್ತಿ, ವೃಥಾ ತಿರುಗಾಟ, ಬಂಧು ಮಿತ್ರರಿಂದ ಸಹಾಯ, ವಸ್ತ್ರ ಖರೀದಿ, ಶುಭಕಾರ್ಯಗಳು ಜರುಗುವಿಕೆ.
ಮಕರರಾಶಿ
ಮೇಲಾಧಿಕಾರಿಗಳಿಂದ ಕಿರಿಕಿರಿ, ಉದ್ಯೋಗದಲ್ಲಿ ಕಿರಿ-ಕಿರಿ, ಕುಟುಂಬದಲ್ಲಿ ಅಹಿತಕರ ವಾತಾವರಣ, ವ್ಯವಹಾರದಲ್ಲಿ ಏರುಪೇರು, ಮನಸ್ಸಿಗೆ ನಾನಾ ರೀತಿಯ ಯೋಚನೆ, ಆರ್ಥಿಕವಾಗಿ ಆಶಾದಾಯಕ ಬೆಳವಣಿಗೆ, ಕಳ್ಳರ ಭೀತಿ, ವಾದ ವಿವಾದಗಳು ಎದುರಾಗಲಿದೆ, ವಾಹನ ಅಪಘಾತ, ಧನ ನಷ್ಟ.
ಕುಂಭರಾಶಿ
ಹಣಕಾಸಿನ ಸಮಸ್ಯೆಯಿಂದ ಪಾರಾಗಲಿದ್ದೀರಿ, ಸ್ತ್ರೀ ಸಂಬಂಧವಾದ ವ್ಯವಹಾರದಲ್ಲಿ ಮನಸ್ಸಿಗೆ ಚಿಂತೆ, ಶತ್ರುಗಳಿಂದ ತೊಂದರೆ, ಭಯಭೀತ ನಿವಾರಣೆ, ಮನಸ್ಸಿಗೆ ಶಾಂತಿ, ವಸ್ತ್ರ ಖರೀದಿ ಮಾಡುವಿರಿ, ಅವಿವಾಹಿತರಿಗೆ ಯೋಗ್ಯ ಪ್ರಸ್ತಾಪ. ಬಾಕಿ ಉಳಿದ ಕೆಲಸ ಕಾರ್ಯಗಳು ಮುಂದುವರಿಯುವುದು,
ಮೀನರಾಶಿ
ಹಿತಶತ್ರುಗಳ ಕಾಟ ಮುಂದುವರಿಯಲಿದೆ, ಅಲ್ಪ ಲಾಭ ಅಧಿಕ ಖರ್ಚು, ರಾಜಕಾರಣಿಗಳಿಗೆ ಆತಂಕ, ಬಂಧು ಮಿತ್ರರಲ್ಲಿ ಮನಸ್ತಾಪ, ಮಕ್ಕಳ ವಿದ್ಯಾಭ್ಯಾಸದ ಕುರಿತು ಕಾಳಜಿವಹಿಸಿ, ನಂಬಿದ ಜನರಿಂದ ಮೋಸ, ಆರ್ಥಿಕ ಪರಿಸ್ಥಿತಿ ಏರುಪೇರು, ಅಧಿಕಾರಿಗಳಲ್ಲಿ ಕಲಹ, ಸಲ್ಲದ ಅಪವಾದ, ಸಜ್ಜನ ವಿರೋಧ, ಬುದ್ಧಿ ಕ್ಲೇಷ.