ವಿಮಾನದ ಮೂಲಕ ನಡೆಯುತ್ತೆ ಸ್ಯಾನಿಟೈಸ್ ಕಾರ್ಯ ..!

ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ನಿಯಂತ್ರಣಕ್ಕೆ ರಾಜ್ಯ ಸರಕಾರ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಇದೀಗ ವಿಮಾನದ ಮೂಲಕ ಬೆಂಗಳೂರು ನಗರವನ್ನು ಸ್ಯಾನಿಟೈಸ್ ಮಾಡೋದಕ್ಕೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿಂದು ಬೆಂಗಳೂರಿನ ಜಕ್ಕೂರು ಏರೋಡ್ರೋಮ್​​ನಲ್ಲಿ ಯೋಜನೆಗೆ ಚಾಲನೆ‌ ನೀಡಲಾಗಿದೆ.

ಪ್ರಮುಖವಾಗಿ ಸಿಲಿಕಾನ್ ಸಿಟಿ ಬೆಂಗಳೂರಿನ ಜನನಿಬಿಡ ಪ್ರದೇಶ ಗಳಲ್ಲಿ ವಿಮಾನದ ಮೂಲಕ ಸ್ಯಾನಿಟೈಸೇಷನ್ ಮಾಡಲಾಗುತ್ತದೆ. ಬೆಳಗ್ಗೆ 8 ಗಂಟೆಯಿಂದ ಬೆಂಗಳೂರಿನ ಕೆ.ಆರ್.ಮಾರುಕಟ್ಟೆ, ಶಿಚಾಜಿನಗರ ಮಾತ್ರವಲ್ಲದೆ ನಗರದ ಜನನಿಬಿಡ ಪ್ರದೇಶಗಳಲ್ಲಿ ಸ್ಯಾನಿಟೈಸ್ ಮಾಡುವ ಕಾರ್ಯವನ್ನು ಮಾಡಲಾಗುತ್ತದೆ.

ಮೂರು ದಿನಗಳ ಕಾಲ ಪ್ರಾಯೋಗಿಕವಾಗಿ ಸಿಂಪಡನೆ  ಮಾಡಲಾಗು ತ್ತದೆ. 1 ಗಂಟೆಗಳ ಕಾಲ ಸುಮಾರು 300 ಲೀ. ರಾಸಾಯನಿಕವನ್ನು ಸುಮಾರು 300 ಹೆಕ್ಟೇರ್ ಪ್ರದೇಶಕ್ಕೆ ಸ್ಯಾನಿಟೈಸ್ ಮಾಡಲಾಗುತ್ತದೆ. ರಾಸಾಯನಿಕ ಸಿಂಪಡನೆಯಿಂದ ಬ್ಯಾಕ್ಟೀರಿಯಾ, ವೈರಸ್, ಶೀಲಿಂದ್ರ ವಿರುದ್ದ ಕಾರ್ಯನಿರ್ವಹಿಸಲಿದೆ.‌ ಆದರೆ ಇದರಿಂದ ಯಾವುದೇ ಸಮಸ್ಯೆಯಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

https://kannada.newsnext.live/karnataka-lock-down-cm-yediyurappa-clarification/amp/

ಏರಿಯಲ್ ವರ್ಕ್ಸ್ ಏರೋ ಎಲ್​ಎಲ್​ಪಿ ಕ್ಯಾಪ್ಟನ್ ಮುರಳಿ ರಾಮಕೃಷ್ಣ ನೇತೃತ್ವದಲ್ಲಿ ಸ್ಯಾನಿಟೈಸ್ ಸಿಂಪಡನೆಯ ಕಾರ್ಯ ‌ನಡೆಯಲಿದ್ದು, ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾದ್ರೆ ಉಳಿದ ಕಡೆಯೂ ಸಿಂಪಡನೆಯ ಫ್ಲ್ಯಾನ್ ಸರಕಾರ ಮುಂದಿದೆ. ಜಕ್ಕೂರಿನಲ್ಲಿ ನಡೆದ ರಾಸಾಯನಿಕ ಸಿಂಪಡನೆಯ ಕಾರ್ಯಕ್ಕೆ ಕಂದಾಯ ಸಚಿವ ಆರ್. ಅಶೋಕ್, ಬಿಡಿಎ ಅಧ್ಯಕ್ಷ ವಿಶ್ವನಾಥ್, ಶಾಸಕ ಕೃಷ್ಣ ಭೈರೇಗೌಡ ಅವರು ಚಾಲನೆ ನೀಡಿದ್ದಾರೆ.

https://kannada.newsnext.live/bollywood-kishwer-merchant-bigboss-casting-couch-actress-model/amp/

Comments are closed.