Horoscope : ದಿನಭವಿಷ್ಯ : ಸ್ನೇಹಿತರು ದೊಡ್ಡ ಮೊತ್ತದ ಸಾಲ ನೀಡಲಿದ್ದಾರೆ

ಮೇಷರಾಶಿ
ಸ್ನೇಹಿತರು, ಕುಟುಂಬಸ್ಥರ ಜೊತೆಗೆ ಪ್ರವಾಸಕ್ಕೆ ತೆರಳುವಿರಿ, ಹೂಡಿಕೆಯಿಂದ ಅಧಿಕ ಲಾಭ ದೊರೆಯಲಿದೆ, ಹೂಡಿಕೆ ಇಂದು ಲಾಭವನ್ನು ತರಲಿದೆ, ಯಾರನ್ನೂ ನಂಬುವ ಮೊದಲು ಸತ್ಯವನ್ನು ಮನವರಿಕೆ ಮಾಡಿಕೊಳ್ಳಿ, ಸಂಜೆಗೆ ಏನಾದರೂ ವಿಶೇಷವಾದುದನ್ನು ಯೋಚಿಸಿ, ಹೊಸ ಆಲೋಚನೆಗಳು ಫಲಕೊಡಲಿದೆ.

ವೃಷಭರಾಶಿ
ಭೂಮಿ ಸಂಬಂಧಿಸಿದ ಸಮಸ್ಯೆಗೆ ಹಣ ವ್ಯಯವಾಗಲಿದೆ, ಹಣಕಾಸಿನ ವಿಚಾರಕ್ಕೆ ಗೆಚ್ಚಾಗಿ ಪ್ರತಿಕ್ರಿಯಿಸಬೇಡಿ, ಮನೆಯಲ್ಲಿ ಅಹಿತಕರ ಘಟನೆಗಳು ನಡೆಯುವ ಸಾಧ್ಯತೆಯಿದೆ, ಕೆಲಸ ದಿಂದ ಸ್ವಲ್ಪ ವಿಶ್ರಾಂತಿಯನ್ನು ಪಡೆಯುವಿರಿ, ಸಂಗಾತಿಯೊಂದಿಗೆ ಸಮಯ ಕಳೆಯುವಿರಿ, ದೂರ ಪ್ರಯಾಣ ಲಾಭವನ್ನು ತರಲಿದೆ.

ಮಿಥುನರಾಶಿ
ಆರೋಗ್ಯದ ಬಗ್ಗೆ ಕಾಳಜಿಯನ್ನು ವಹಿಸಿ, ನ್ಯಾಯಾಲಯದಲ್ಲಿನ ವ್ಯಾಜ್ಯಗಳು ಪರಿಹಾರವನ್ನು ಕಾಣಲಿದೆ, ಕುಟುಂಬದ ಸ್ಥಿತಿ ಸಾಮಾನ್ಯವಾಗಿರುವುದಿಲ್ಲ, ಕುಟುಂಬದಲ್ಲಿ ವಾದ ವಿವಾದಗಳು ಏರ್ಪಡುವ ಸಾಧ್ಯತೆಯಿದೆ, ವ್ಯಾಪಾರ ವ್ಯವಹಾರಗಳಿಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.

ಕರ್ಕಾಟಕರಾಶಿ
ಆರೋಗ್ಯ ಚೆನ್ನಾಗಿರುತ್ತದೆ, ನಿಮ್ಮ ಸ್ನೇಹಿತರು ದೊಡ್ಡ ಮೊತ್ತದ ಸಾಲವನ್ನು ನೀಡಲಿದ್ದಾರೆ. ನಿಮ್ಮ ಆರ್ಥಿಕ ಸ್ಥಿತಿ ಸುಧಾರಣೆಯನ್ನು ಕಾಣಲಿದೆ, ನಿಮ್ಮ ಎಣಿಕೆಯಂತೆಯೇ ಕೆಲಸ ಕಾರ್ಯಗಳು ನಡೆಯಲಿವೆ, ಯಾರಿಗೂ ಕೂಡ ಖಚಿತ ಭರವಸೆಯನ್ನು ನೀಡಬೇಡಿ, ವೈವಾಹಿಕ ಜೀವನದಲ್ಲಿ ಸಮಸ್ಯೆ ತಲೆದೋರುವ ಸಾಧ್ಯತೆಯಿದೆ.

ಸಿಂಹರಾಶಿ
ಮಸುಕಾದ ಆರ್ಥಿಕ ಸ್ಥಿತಿಯಿಂದ ಪ್ರಮುಖ ಕೆಲಸಗಳು ಸ್ಥಗಿತಗೊಳ್ಳಲಿದೆ, ವ್ಯವಹಾರ ಕ್ಷೇತ್ರದಲ್ಲಿ ಹೊಸ ಭರವಸೆಯು ಮೂಡಲಿದೆ, ಬಾಕಿ ಇರುವ ಯೋಜನೆಗಳನ್ನು ಪೂರ್ಣ ಗೊಳಿಸಲು ಚಿಂತಿಸಿ, ಕೆಲಸ ಕಾರ್ಯಗಳು ನಿಮ್ಮ ಎಣಿಕೆಯಂತೆಯೇ ನಡೆಯಲಿದೆ, ದಿನಾಂತ್ಯಕ್ಕೆ ಶುಭ ವಾರ್ತೆಯೊಂದನ್ನು ಕೇಳುವಿರಿ.

ಇದನ್ನೂ ಓದಿ : ಅಮವಾಸ್ಯೆಯನ್ನೇ ಮಾಂತ್ರಿಕರು ಆಯ್ಕೆ ಮಾಡಿಕೊಳ್ಳೋದು ಯಾಕೆ ಗೊತ್ತಾ..? ಆ ಕತ್ತಲಲ್ಲೇ ನಡೆಯೋದು ಕರಾಮತ್ತು..!

ಕನ್ಯಾರಾಶಿ
ಆರೋಗ್ಯದ ಬಗ್ಗೆ ಕಾಳಜಿವಹಿಸಿ, ದೀರ್ಘ ಕಾಲದವರೆಗೆ ಎದುರಾಗಿದ್ದ ಆರ್ಥಿಕ ಬಿಕ್ಕಟ್ಟು ನಿವಾರಣೆಯಾಗಲಿದೆ, ಹಲವು ಸಮಸ್ಯೆಗಳು ಕ್ಷಣಾರ್ಧದಲ್ಲೇ ಪರಿಹಾರವಾಗಲಿದೆ, ಕುಟುಂಬ ಸದಸ್ಯರು ನಿಮಗೆ ಬೆಂಬಲ ನೀಡಲಿದ್ದಾರೆ, ವಿದೇಶಿ ವ್ಯಾಪಾರದಲ್ಲಿ ಅಧಿಕ ಲಾಭ ದೊರೆಯಲಿದೆ, ಕೆಲಸದ ಸ್ಥಳದಲ್ಲಿ ಇತರರ ಸಹಕಾರ ದೊರೆಯಲಿದೆ.

ತುಲಾರಾಶಿ
ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿವಹಿಸಿ, ಹೂಡಿಕೆ ಮತ್ತು ಭವಿಷ್ಯದ ಗುರಿಗಳ ಬಗ್ಗೆ ರಹಸ್ಯವಾಗಿರಿ, ದೇಶೀಯ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಿ, ಕೆಲಸದ ಸ್ಥಳದಲ್ಲಿ ನಿಮ್ಮ ಹಳೆಯ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗಲಿದೆ, ವ್ಯಾಪಾರಿಗಳು ಹೆಚ್ಚಿನ ಲಾಭವನ್ನು ಪಡೆಯಲಿದ್ದಾರೆ, ಅನುಭವಿ ಜನರಿಂದ ಉಪಯುಕ್ತ ಸಲಹೆ ಪಡೆಯುವಿರಿ.

ವೃಶ್ಚಿಕರಾಶಿ
ಸ್ನೇಹಿತರು ನಿಮ್ಮನ್ನು ಬೆಂಬಲಿಸಲಿದ್ದಾರೆ. ನಿಧಿಯ ಹಠಾತ್‌ ಹರಿವು ಖರ್ಚನ್ನು ಅಧಿಕವಾಗಿಸಲಿದೆ, ಸಂಗಾತಿಯೊಂದಿಗಿನ ಭೋಜನ ಸಂತಸ ತರಲಿದೆ, ನಿಮ್ಮ ಶಕ್ತಿಯ ಮಟ್ಟವು ಅಧಿಕವಾಗಿರಲಿದೆ, ಕಚೇರಿಯಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಯತ್ನಿಸಿ, ಸಾಮರ್ಥ್ಯವು ಉತ್ತಮ ಲಾಭವನ್ನು ತರಲಿದೆ, ವೈವಾಹಿಕ ಜೀವನ ಉತ್ತಮವಾಗಿರಲಿದೆ.

ಧನಸುರಾಶಿ
ಹೊರಾಂಗಣ ಕ್ರೀಡೆಗಳು ನಿಮ್ಮನ್ನು ಆಕರ್ಷಿಸಲಿದೆ, ಆರೋಗ್ಯದ ವೃದ್ದಿಗಾಗಿ ಯೋಗ ಹಾಗೂ ಧ್ಯಾನವನ್ನು ಮಾಡಿ, ಗ್ರಹಗತಿಗಳು ನಿಮಗೆ ಹಲವು ವಿಚಾರಗಳಲ್ಲಿ ಲಾಭವನ್ನು ತರಲಿದೆ, ನಿಮ್ಮ ಕೆಲಸಕ್ಕಾಗಿ ಇತರರು ಸಾಲ ಪಡೆಯಲು ಅವಕಾಶ ಕೊಡಬೇಡಿ, ಹಳೆಯ ಸ್ನೇಹಿತರ ಭೇಟಿ ಸಂತಸವನ್ನು ತರಲಿದೆ.

ಇದನ್ನೂ ಓದಿ : ನನ್ನ ಕಣ್ಣ ಮುಂದೆಯೇ ಅವನು ಬೇವಿನ ಎಲೆಯಲ್ಲಿ ಚೇಳುಗಳನ್ನ ಮಾಡಿ ತೋರಿಸಿದ್ದ..! 

ಮಕರರಾಶಿ
ಸ್ನೇಹಿತರಿಂದ ವಿಶೇಷ ಅಭಿನಂದನೆಯನ್ನು ಪಡೆಯುವಿರಿ, ಪ್ರಾಚೀನ ವಸ್ತುಗಳು ಹಾಗೂ ಆಭರಣಗಳ ಮೇಲೆ ಹೂಡಿಕೆಯನ್ನು ಮಾಡಿ, ಗೌಪ್ಯ ಮಾಹಿತಿಯನ್ನು ಸಂಗಾತಿಯೊಂದಿಗೆ ಹಂಚಿಕೊಳ್ಳುವ ಮುನ್ನ ಎಚ್ಚರವಾಗಿರಿ, ಕೆಲಸದ ಒತ್ತಡ ನಿಮ್ಮನ್ನು ಸಂಕಷ್ಟಕ್ಕೆ ಸಿಲುಕಿಸಲಿದೆ, ಧಾರ್ಮಿಕ ಕ್ಷೇತ್ರಗಳ ಭೇಟಿಯಿಂದ ಮನಸಿಗೆ ನೆಮ್ಮದಿ.

ಕುಂಭರಾಶಿ
ಆರೋಗ್ಯದ ದೃಷ್ಟಿಯಿಂದ ಬಹಳ ಉತ್ತಮ ದಿನ, ನಿಮ್ಮ ಹರ್ಷ ಚಿತ್ತದ ಮನಸ್ಥಿತಿಯು ನಿಮಗೆ ಬೇಕಾದ ಟಾನಿಕ್‌ ನೀಡುತ್ತದೆ, ನಿಮಗೆ ಇಂದು ಹೆಚ್ಚು ಆತ್ಮವಿಶ್ವಾಸವನ್ನು ನೀಡಲಿದೆ, ಪೋಷಕರು ನಿಮ್ಮ ಬಗ್ಗೆ ಚಿಂತಿತರಾಗುವ ಸಾಧ್ಯತೆಯಿದೆ, ಮಕ್ಕಳ ಸಮಸ್ಯೆ ನಿಭಾಯಿಸಲು ಸ್ವಲ್ಪ ಸಮಯವನ್ನು ತೆಗೆದುಕೊಳ್ಳುವಿರಿ.

ಮೀನರಾಶಿ
ಸಾಕಷ್ಟು ವಿಶ್ರಾಂತಿಯನ್ನು ಪಡೆದುಕೊಳ್ಳಿ, ಹಣಕಾಸಿನ ಸ್ಥಿತಿಯು ಸುಧಾರಣೆಯನ್ನು ಕಾಣಲಿದೆ, ಮಕ್ಕಳ ಬಗ್ಗೆ ಹೆಚ್ಚಿನ ಗಮನವನ್ನು ಹರಿಸಿ, ಪ್ರೀತಿ ಪಾತ್ರರಿಗಾಗಿ ವಿಶೇಷ ಯೋಜನೆ ಯನ್ನು ಮಾಡಲು ಮರೆಯದಿರಿ, ಹೊಸ ಪ್ರಸ್ತಾಪಗಳು ಹೆಚ್ಚು ಲಾಭವನ್ನು ತರಲಿದೆ, ಕುಟುಂಬದ ಹಿರಿಯ ಸದಸ್ಯರ ಜೊತೆ ಕಾಳ ಕಳೆಯುವಿರಿ.

ಇದನ್ನೂ ಓದಿ : ಹಲವು ಮಕ್ಕಳ ತಾಯಿಯ ಮಹಿಮೆ ಅಪಾರ- ಬೇಡಿ ಬಂದವರಿಗೆ ನೀಡುತ್ತಾಳೆ ಸಂತಾನ ಭಾಗ್ಯ

ಇದನ್ನೂ ಓದಿ :  ಪ್ರಪಂಚದಲ್ಲಿವೆ ವಿಚಿತ್ರ ಆಹಾರ : ಇಂತಹ ಆಹಾರವನ್ನೂ ತಿನ್ನುತ್ತಾರಾ ?

( Horoscope today astrological prediction for October 08 )

Comments are closed.