Cucumber Water : ಬೆಳಗ್ಗೆ ಎದ್ದ ತಕ್ಷಣ ಸೌತೆಕಾಯಿ ನೆನೆಸಿಟ್ಟ ನೀರು ಕುಡಿಯಿರಿ : ಎಷ್ಟೆಲ್ಲಾ ಲಾಭವಿದೆ ಗೊತ್ತಾ ?

ದಿನದ ಪ್ರಾರಂಭವನ್ನು ಆರೋಗ್ಯಕರವಾಗಿ ಶುರು ಮಾಡಿದರೆ ದೇಹಕ್ಕೆ ಅನೇಕ ಲಾಭಗಳು ಸಿಗುತ್ತದೆ. ಹಾಗೆಯೇ ಬೆಳಗ್ಗೆ ಎದ್ದ ತಕ್ಷಣ ಬಿಸಿ ನೀರು ಕುಡಿಯುವ ಅಭ್ಯಾಸ ಕೆಲವರಿಗೆ ಇದೆ. ಇನ್ನು ಕೆಲವರು ಗ್ರೀನ್ ಟೀಯನ್ನು ಕುಡಿಯುತ್ತಾರೆ. ಆದ್ರೆ ದೇಹದಲ್ಲಿನ ವಿಷಕಾರಿ ಅಂಶವನ್ನು ಹೊರಹಾಕಲು ಸೌತೆಕಾಯಿ ನೆನೆಸಿಟ್ಟ ನೀರು ಕುಡಿಯುವುದು ಉತ್ತಮ. ಅಷ್ಟೇ ಅಲ್ಲಾ ತೂಕ ಇಳಿಸಲು ಕೂಡ ಈ ನೀರು ಪ್ರಯೋಜನಕಾರಿ.

ಆಹಾರದಲ್ಲಿ ಹೆಚ್ಚಾಗಿ ಇರುವ ಉಪ್ಪಿನ ಅಂಶ ರಕ್ತದೊತ್ತಡಕ್ಕೆ ಪ್ರಮುಖವಾಗಿ ಕಾರಣವಾಗುತ್ತಿದೆ. ಸೌತೆಕಾಯಿಯಲ್ಲಿರುವ ಪೊಟ್ಯಾಶಿಯಮ್,​ ಇಲೆಕ್ಟ್ರೊಲೈಟ್​ ರೀತಿ ಕೆಲಸ ಮಾಡಿ ಸೋಡಿಯಮ್​ ಪ್ರಮಾಣವನ್ನು ನಿಯಂತ್ರಿಸುತ್ತದೆ. ತ್ವಚೆಯ ಆರೋಗ್ಯವನ್ನು ಒಳಗಿನಿಂದಲೂ ಹಾಗೆ ಹೊರಗಿನಿಂದ ಕಾಪಾಡಲು ಕೂಡ ಇದು ಸಹಕಾರಿ. ಇದು ದೇಹದಲ್ಲಿನ ಟಾಕ್ಸಿನ್​ ಅಂಶವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದರಲ್ಲಿರುವ ವಿಟಮಿನ್​ ಬಿ5 ಆರೋಗ್ಯಕಾರಿ ವರ್ಣವನ್ನು ನೀಡುತ್ತದೆ.

ಇದನ್ನೂ ಓದಿ: ಚಿಕ್ಕು ಹಣ್ಣಿನಲ್ಲಿದೆ ಆರೋಗ್ಯ ವೃದ್ದಿಸುವ ಪೋಷಕಾಂಶ

ಸೌತೆಕಾಯಿಯಲ್ಲಿ ವಿಟಮಿನ್​ ಕೆ ಅಂಶವಿದೆ. ಇದು ಪ್ರೋಟಿನ್​ ಉತ್ಪತ್ತಿಗೆ ಸಹಾಯ ಮಾಡಿ ಮೂಳೆಯ ಆರೋಗ್ಯವನ್ನು ಕಾಪಾಡುತ್ತದೆ. ಜೊತೆಗೆ ರಕ್ತ ಹೆಪ್ಪುಗಟ್ಟುವಿಕೆಯನ್ನು ನಿಯಂತ್ರಿಸುತ್ತದೆ. ಸೌತೆಕಾಯಿ ನೀರು ದೇಹದ ಚಯಾಪಚನ ಕ್ರಿಯೆಯನ್ನು ಹೆಚ್ಚಿಸಿ ಪದೇ ಪದೇ ಹಸಿವಾಗುವುದನ್ನು ತಡೆಯುತ್ತದೆ. ಜೊತೆಗೆ ದೇಹಕ್ಕೆ ಎನರ್ಜಿಯನ್ನೂ ನೀಡುತ್ತದೆ.

ಸೌತೆಕಾಯಿಯಲ್ಲಿರುವ ಫಿಸ್ಟೆನ್​ ಅಂಶ ಮೆದುಳಿನ ಕಾರ್ಯಕ್ಷಮತೆ ಹೆಚ್ಚಲು ಮತ್ತು ನೆನಪಿನ ಶಕ್ತಿ ಉತ್ತಮಗೊಳ್ಳಲು ಸಹಾಯ ಮಾಡುತ್ತದೆ. ಇದು ಮೆದುಳು ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ಸೌತೆಕಾಯಿಯಲ್ಲಿ ಡೈಯೆಟರಿ ಫೈಬರ್​ ಅಂಶ ಸಮೃದ್ಧವಾಗಿರುವುದರಿಂದ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

ಇದನ್ನೂ ಓದಿ: ಕುಂಬಳ ಕಾಯಿ ತಿಂದ್ರೆ ಕಣ್ಣಿನ ಆರೋಗ್ಯ ಹೆಚ್ಚುತ್ತೆ, ಯೌವನ ಮರುಕಳಿಸುತ್

(Drink cucumber soaked water as soon as you get up in the morning: How much do you know?)

Comments are closed.