ಮಂಗಳವಾರ, ಏಪ್ರಿಲ್ 29, 2025
HomehoroscopeHoroscope : ದಿನಭವಿಷ್ಯ : ಆತ್ಮವಿಶ್ವಾಸದಿಂದ ಧನಲಾಭ

Horoscope : ದಿನಭವಿಷ್ಯ : ಆತ್ಮವಿಶ್ವಾಸದಿಂದ ಧನಲಾಭ

- Advertisement -

ಮೇಷರಾಶಿ
ಒತ್ತಡದ ಹೊರತಾಗಿ ಆರೋಗ್ಯ ಚೆನ್ನಾಗಿರುತ್ತದೆ, ಜೂಜಿನಿಂದಾಗಿ ಹಣವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ, ಅನಿರೀಕ್ಷಿತ ಪ್ರತಿಫಲವನ್ನು ತರುತ್ತದೆ, ಕಾರಣವಿಲ್ಲದೇ ಯಾರ ಜೊತೆಗೂ ವಾದಕ್ಕೆ ಇಳಿಯಬೇಡಿ, ಸಂಬಂಧಿಯೋರ್ವರು ನಿಮಗೆ ಆಶ್ಚರ್ಯವನ್ನು ಉಂಟು ಮಾಡಲಿದೆ, ಸಹೋದ್ಯೋಗಿಗಳಿಂದ ಸಹಕಾರ ದೊರೆಯಲಿದೆ.

ವೃಷಭರಾಶಿ
ಆರೋಗ್ಯದ ಕಡೆಗೆ ಗಮನ ಹರಿಸಿ, ಯಾವುದೇ ಚರ ಆಸ್ತಿ ಕಳ್ಳತನವಾಗಬಹುದು, ಹಳೆಯ ಸಂಬಂಧಗಳು ಪುನರುಜ್ಜೀವನಗೊಳ್ಳಲಿದೆ, ದೀರ್ಘಕಾಲದಿಂದ ಕೆಲಸ ಮಾಡುತ್ತಿರುವ ಪ್ರಮುಖ ಯೋಜನೆ ವಿಳಂಭವಾಗಲಿದೆ, ಹಳೆಯ ಸಂಬಂಧಗಳು ಮರಳಿ ಜೋಡಣೆಯಾಗಲಿದೆ, ಭಿನ್ನಾಭಿಪ್ರಾಯ ಉಂಟಾಗದಂತೆ ಎಚ್ಚರಿಕೆಯನ್ನು ವಹಿಸಿ.

ಮಿಥುನರಾಶಿ
ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯ ದಿನ. ನೀವು ಹರ್ಷ ಚಿತ್ತರಾಗಿರುವಿರಿ, ಆತ್ಮವಿಶ್ವಾಸ ಹೆಚ್ಚಳವಾಗಲಿದೆ, ದೀರ್ಘ ಕಾಲದ ಕಾಯಿಲೆಗಾಗಿ ಆಸ್ಪತ್ರೆಗೆ ಭೇಟಿ, ನಿಮ್ಮ ಪ್ರೀತಿ ಪಾತ್ರರು ಇಂದು ಬದ್ದತೆಯನ್ನು ಬಯಸುತ್ತಾರೆ, ಸಂಗಾತಿ ಇಂದು ಹತಾಶೆಗೊಳ್ಳಲಿದ್ದಾರೆ, ಶಿಕ್ಷಣದ ಮೇಲೆ ಪರಿಣಾಮ ಬೀರಲಿದೆ, ದೂರದ ಬಂದುಗಳ ಭೇಟಿ ನಿಮಗೆ ಲಾಭವನ್ನು ತರಲಿದೆ.

ಕರ್ಕಾಟಕರಾಶಿ
ಆರೋಗ್ಯ ಇಂದು ಪರಿಪೂರ್ಣವಾಗಿರುತ್ತದೆ. ನೀವು ಇಂದು ಗಣನೀಯ ಪ್ರಮಾಣದ ಹಣವನ್ನು ಹೊಂದಿರುತ್ತೀರಿ, ಮನಸಿಗೆ ಶಾಂತಿ ದೊರೆಯಲಿದೆ, ಮಕ್ಕಳಿಂದ ಕೆಲವು ಪಾಠವನ್ನು ನೀವು ಕಲಿಯಲಿದ್ದೀರಿ, ವ್ಯಾಪಾರ, ವ್ಯವಹಾರ ಅಭಿವೃದ್ದಿಯನ್ನು ಕಾಣಲಿದೆ, ಧಾರ್ಮಿಕ ಕ್ಷೇತ್ರಗಳ ಭೇಟಿಯಿಂದ ಮನಸಿಗೆ ಸಂತಸ.

ಸಿಂಹರಾಶಿ
ನಕಾರಾತ್ಮಕ ಆಲೋಚನೆಗಳು ಬಿಡಬೇಕು, ನಿಮ್ಮನ್ನು ಪ್ರೇರೇಪಿಸುವ ಭಾವನೆಗಳನ್ನು ಗುರುತಿಸಿ, ಆರ್ಥಿಕವಾಗಿ ಹೆಚ್ಚು ಲಾಭದಾಯಕ ವೆನಿಸಲಿದೆ. ನೀವು ಪಾರ್ಟಿಯನ್ನು ಆಯೋಜಿಸುವ ಮನಸ್ಥಿತಿ ಇದ್ದರೆ, ಸ್ನೇಹಿತರನ್ನು ಆಹ್ವಾನಿಸಿ. ನಿಮ್ಮ ಗಳಿಕೆಯ ಶಕ್ತಿಯು ಜ್ಞಾನವನ್ನು ವೃದ್ದಿಸಲಿದೆ, ಸ್ನೇಹಿತರೊಂದಿಗೆ ಅಗತ್ಯಕ್ಕಿಂತ ಹೆಚ್ಚು ಸಮಯವನ್ನು ಕಳೆಯುವಿರಿ.

ಇದನ್ನೂ ಓದಿ : ನಿಂಬೆ ಹಣ್ಣಿನಿಂದ ರಕ್ತ ಜಿನುಗುತ್ತೆ ! ದೀಪ ತಾನಾಗಿಯೇ ಹೊತ್ತಿಕೊಳ್ಳುತ್ತದೆ ಹೇಗೆ ಗೊತ್ತಾ ?

ಇದನ್ನೂ ಓದಿ : ಭಾನಾಮತಿ ರಹಸ್ಯ ಬಿಚ್ಚಿಟ್ಟು ಗಹಗಹಿಸಿ ನಕ್ಕಿದ್ದಳು ಆ ಹೆಣ್ಣು ಮಗಳು..!

ಕನ್ಯಾರಾಶಿ
ಸಕಾರಾತ್ಮಕ ದೃಷ್ಟಿಕೋನ, ಆತ್ಮವಿಶ್ವಾಸ ಸುತ್ತಮುತ್ತಲಿನ ಜನರನ್ನು ಆಕರ್ಷಿಸಲಿದೆ, ಸ್ನೇಹಿತರೊಂದಿಗೆ ಪಾರ್ಟಿಯಲ್ಲಿ ಹೆಚ್ಚು ಹಣ ವ್ಯಯ ಮಾಡುವಿರಿ, ಹಣಕಾಸಿನ ವಿಚಾರದಲ್ಲಿ ಸದೃಢರಾಗುವಿರಿ, ಯಾರಿಗೂ ನಂಬಿಕೆ ದ್ರೋಹ ಮಾಡಬೇಡಿ, ಮುಂದೆ ಭಾರೀ ಪಶ್ಚಾತಾಪ ಪಡಬೇಕಾದೀತು. ವೈವಾಹಿಕ ಜೀವನವು ಹೆಚ್ಚು ಮಹತ್ವವನ್ನು ಪಡೆದುಕೊಳ್ಳಲಿದೆ.

ತುಲಾರಾಶಿ
ಹಾಸ್ಯಮಯ ಸಂಬಂಧಿಗಳ ಸಹವಾಸ ಉದ್ವೇಗಕ್ಕೆ ಕಾರಣವಾಗಲಿದೆ, ಹಣಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ, ಬಾಕಿ ಉಳಿದ ಕೆಲಸಗಳು ಪೂರ್ಣಗೊಳ್ಳಲಿದೆ. ಕಠಿಣ ಪರಿಶ್ರಮ ಮತ್ತು ತಾಳ್ಮೆಯ ಮೂಲಕ ಗುರಿಯನ್ನು ತಲುಪುವಿರಿ, ಧನಾತ್ಮಕವಾಗಿ ಯೋಚನೆಯನ್ನು ಮಾಡಿ, ವೈವಾಹಿಕ ಜೀವನ ಇಂದು ಉತ್ತಮವಾಗಿರಲಿದೆ.

ವೃಶ್ಚಿಕರಾಶಿ
ನಿಮ್ಮನ್ನು ಹಿಡಿದಿಟ್ಟು ಕೊಳ್ಳುವ ಭಾವನಾತ್ಮಕ ಮನಸ್ಥಿತಿಯಿಂದ ಹೊರ ಬರಲು ನೀವು ಬಯಸಿದರೆ ಹಿಂದಿನದನ್ನು ಬಿಡಬೇಕು. ಉಳಿಕೆಯ ಹಣವು ಭವಿಷ್ಯದಲ್ಲಿ ನೆರವಿಗೆ ಬರಲಿದೆ, ಜೀವನದ ಸತ್ಯವನ್ನು ನೀವು ಅರಿತುಕೊಳ್ಳಬೇಕು, ಸತತ ಪರಿಶ್ರಮ ಇಂದು ಉತ್ತಮ ಪ್ರತಿಫಲವನ್ನು ನೀಡುತ್ತದೆ, ಸ್ನೇಹಿತರೊಂದಿಗೆ ಸಮಸ್ಯೆಯನ್ನು ಹಂಚಿಕೊಳ್ಳುವಿರಿ.

ಧನಸುರಾಶಿ
ನೀವು ಕೋಪವನ್ನು ನಿಯಂತ್ರಿಸಿಕೊಳ್ಳಿ, ಅಧಿಕ ಖರ್ಚುನಿಂದಾಗಿ ವರ್ತಮಾನದಲ್ಲಿ ಪರಿಣಾಮವನ್ನು ಎದುರಿಸಬೇಕಾಗುತ್ತದೆ, ಹಣದ ಅವಶ್ಯಕತೆ ನಿಮಗೆ ಎದುರಾಗಲಿದೆ, ಉತ್ತಮ ಸಂವಹನವು ನಿಮ್ಮ ನೈತಿಕತೆಯನ್ನು ಹೆಚ್ಚಿಸುತ್ತದೆ, ಸಾಮಾಜಿಕ ಕಾರ್ಯಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳುವಿರಿ, ಹೊಂದಾಣಿಕೆಯಿಂದ ಕಾರ್ಯಸಾಧನೆ.

ಮಕರರಾಶಿ
ನಿಮ್ಮ ಮುಖದ ಮೇಲೆ ಸದಾ ನಗು ಇರುತ್ತದೆ, ಅಪರಿಚಿತರು ನಿಮಗೆ ಪರಿಚಿತರಂತೆ ಕಾಣಿಸುತ್ತಾರೆ, ನಿಮಗಾಗಿ ಹಣ ಉಳಿಸುವ ನಿಮ್ಮ ಆಲೋಚನೆ ಇಂದು ಫಲಕೊಡಲಿದೆ, ಕುಟುಂಬ ಸದಸ್ಯರ ಮನಸ್ಸನ್ನು ನೋಯಿಸುವ ಕಾರ್ಯವನ್ನು ಮಾಡಬೇಡಿ, ಕೆಲಸ ಕಾರ್ಯಗಳು ನಿಮ್ಮ ಉಪಸ್ಥಿತಿಯಲ್ಲಿ ಸರಾಗವಾಗಿ ನಡೆಯಲಿದೆ, ಬಿಡುವಿನ ವೇಳೆಯನ್ನು ನೀವು ಸರಿಯಾಗಿ ಬಳಸಿಕೊಳ್ಳಿ.

ಕುಂಭರಾಶಿ
ಕೆಲವು ತೊಂದರೆಗಳನ್ನು ನೀವು ಎದುರಿಸುವ ಸಾಧ್ಯತೆಯಿದೆ, ನಿಮ್ಮನ್ನು ಕೆಲವು ಗಂಭೀರ ತೊಂದರೆಗಳಿಗೆ ಸಿಲುಕಿಸ ಬಹುದು, ಕೋಪವನ್ನು ನಿಯಂತ್ರಿಸಿಕೊಳ್ಳಿ, ಸ್ನೇಹಿತರೊಬ್ಬರು ದೊಡ್ಡ ಮೊತ್ತದ ಸಾಲವನ್ನು ನಿಮ್ಮಿಂದ ಕೇಳಬಹುದು, ಪ್ರೀತಿಯ ವಿಚಾರದಲ್ಲಿ ನೀವು ನೋವನ್ನು ಅನುಭವಿಸುವ ಸಾಧ್ಯತೆಯಿದೆ.

ಮೀನರಾಶಿ
ಧನಾತ್ಮಕ ಚಿಂತನೆಗೆ ಪ್ರತಿಫಲ ದೊರೆಯುತ್ತದೆ. ನಿಮ್ಮ ಪ್ರಯತ್ನದಲ್ಲಿ ನೀವು ಯಶಸ್ವಿಯಾಗುವ ಸಾಧ್ಯತೆಯಿದೆ. ಹೆಚ್ಚುವರಿ ಹಣ ಗಳಿಕೆಯ ಮಾರ್ಗವನ್ನು ಹುಡುಕುವಿರಿ, ಲಾಭದಾಯಕವಾದ ಕಡೆಯಲ್ಲಿ ಮಾತ್ರವೇ ಹೂಡಿಕೆಯನ್ನು ಮಾಡಿ, ಸಂಗಾತಿಯು ನಿಮ್ಮನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ, ಹಿಂದೆ ಮಾಡಿದ ತಪ್ಪಿನ ಬಗ್ಗೆ ಪಶ್ಚಾತಾಪ ಕಾಡಲಿದೆ, ಸಹೋದ್ಯೋಗಿಗಳು ಕಿರಿಕಿರಿಯನ್ನುಂಟು ಮಾಡಲಿದ್ದಾರೆ.

ಇದನ್ನೂ ಓದಿ : ಕೊಲ್ಲಾಪುರದಿಂದ ಬಂದು ನೆಲೆಸಿದ್ದಾಳೆ ಮಾಯಮ್ಮ: ದುಡ್ಡಿನ ಹರಕೆಯೇ ಈಕೆಗೆ ಪ್ರಿಯ

ಇದನ್ನೂ ಓದಿ : ನಿತ್ಯವೂ ಕ್ಯಾರೆಟ್‌ ತಿನ್ನುವುದು ಆರೋಗ್ಯಕ್ಕೆ ಉತ್ತಮವೇ ?

Horoscope today astrological prediction for October 27

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular