ಕಣಿವೆ ರಾಜ್ಯದೊಳಗೆ ನುಸುಳಲು ಹೊಂಚು‌ ಹಾಕಿದ 250 ಉಗ್ರರು : ಗುಪ್ತಚರ ಇಲಾಖೆ

ನವದೆಹಲಿ : ದೇಶದಲ್ಲಿ ಉಗ್ರರ ಉಪಟಳ ಹೆಚ್ಚಾಗುತ್ತಿದೆ. ಇದೇ ಹೊತ್ತಲ್ಲೇ ಗುಪ್ತಚರ ಇಲಾಖೆ ಇಡೀ ದೇಶವೇ ಬೆಚ್ಚಿ ಬೀಳಿಸುವ ಮಾಹಿತಿ ಒಂದನ್ನು ಹೊರಹಾಕಿದೆ. ಹೌದು ಬರೋಬ್ಬರೀ 250 ಉಗ್ರರು ಜಮ್ಮು ಹಾಗೂ ಕಾಶ್ಮೀರಕ್ಕೆ ನುಸುಳಲು ಕಾಯುತ್ತಿದ್ದಾರೆ ಎನ್ನುವ ಸ್ಪೋಟಕ ವಿಷಯವನ್ನು ಗುಪ್ತಚರ ಇಲಾಖೆ ತಿಳಿಸಿದೆ.

ಈ ವರ್ಷದ ಅಂತ್ಯದ ಒಳಗೆ ದೇಶದ ಒಳಗೆ ನುಸುಳಲು ಎಲ್ ಒಸಿ ಯಲ್ಲಿ  250 ಉಗ್ರರು ಕಾಯುತ್ತಿದ್ದಾರೆ. ದೇಶದ ಒಳಗೆ ನುಸುಳಲು ಕಾಯುತ್ತಿರುವ ಬಹುತೇಕರು ಜೈಷ-ಇ-ಮೊಹಮ್ಮದ್‌ ಹಾಗೂ ಲಷ್ಕರ್‌-ಇ-ತೊಯ್ಬಾ   ಉಗ್ರ ಸಂಘಟನೆಗೆ ಸೇರಿದವರಾಗಿದ್ದಾರೆ ಎಂದು ಕೇಂದ್ರ ಗುಪ್ತಚರ ಇಲಾಖೆಗೆ ತಿಳಿಸಿದೆ.

ಇದನ್ನೂ ಓದಿ: NIA : ಬೆಂಗಳೂರು ಮೂಲದ ಉಗ್ರ ಮೊಹಮ್ಮದ್‌ ತಾಕೀರ್‌ ಅರೆಸ್ಟ್

ಈ ಭಾರಿ ಉಗ್ರರು ದೇಶದ ಒಳಗೆ ನುಸುಳಲು ಹೊಸ ಮಾರ್ಗವನ್ನು ಕಂಡುಕೊಂಡಿದ್ದಾರೆ. ನದಿಯ ಅಂತರಗಳ ಬಗ್ಗೆ ಹಾಗೂ ಪತ್ತೆಯಾಗದ ಸುರಂಗಗಳ ಮೂಲಕ ನುಸುಳಲು ಯತ್ನಿಸುತ್ತಿದ್ದಾರೆ ಎಂದು ಉನ್ನತ ಗುಪ್ತಚರ ಅಧಿಕಾರಿ ತಿಳಿಸಿದ್ದಾರೆ.

ಈಗಾಗಲೇ ಸಾಕಷ್ಟು ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಿದ್ಧರಾಗಿದ್ದೇವೆ. ಆದರೆ ಅಫ್ಘಾನಿಸ್ತಾನ ವನ್ನು ತಾಲಿಬಾನ್‌ ಸ್ವಾಧೀನ ಪಡಿಸಿಕೊಂಡಿದ್ದು ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳ ನೈತಿಕತೆ ಹೆಚ್ಚಿದೆ ಮತ್ತು ಭಯೋತ್ಪಾದಕಸಂಘಟಕರಿಗೆ ತರಬೇತಿಯನ್ನೂ ತೀವ್ರಗೊಳಿಸಿದ್ದಾರೆ ಎಂದು ಕೇಂದ್ರ ಗುಪ್ತಚರ ಇಲಾಖೆಗೆ ತಿಳಿಸಿದೆ.

ಇದನ್ನೂ ಓದಿ: Amith Sha : ಜಮ್ಮು -ಕಾಶ್ಮಿರದಲ್ಲಿ ಬುಲೆಟ್ ಫ್ರೂಪ್ ಜಾಕೆಟ್ ತೆಗೆದು ಭಾಷಣ ಮಾಡಿದ ಅಮಿತ್ ಶಾ

ಈ ವಿಷಯದ ಕುರಿತು ನಾವು ಜಾಗರೂಕರರಾಗಿದ್ದೇವೆ. ಹಾಗೂ ಯಾವುದೇ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಸಿದ್ಧವಿದ್ದೇವೆ ನಾವು ಎಲ್ಲಾ ರೀತಿಯ ಸಿದ್ಧತೆಯನ್ನು ಮಾಡಿಕೊಂಡಿದ್ದೇವೆ ಎಂದು  ಭಾರತದ ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

(250 militants ambushed to infiltrate valley state: Intelligence Bureau)

Comments are closed.