ಭಾನುವಾರ, ಏಪ್ರಿಲ್ 27, 2025
Homehoroscopeದಿನಭವಿಷ್ಯ 06 ನವೆಂಬರ್ 2023 : ಈ ರಾಶಿಯವರಿಗೆ ಶುಕ್ರ ಯೋಗದಿಂದ ಹಠಾತ್‌ ಆರ್ಥಿಕ ಲಾಭ

ದಿನಭವಿಷ್ಯ 06 ನವೆಂಬರ್ 2023 : ಈ ರಾಶಿಯವರಿಗೆ ಶುಕ್ರ ಯೋಗದಿಂದ ಹಠಾತ್‌ ಆರ್ಥಿಕ ಲಾಭ

- Advertisement -

Horoscope Today : ದಿನಭವಿಷ್ಯ 06 ನವೆಂಬರ್ 2023 ಸೋಮವಾರ. ಇಂದು ದ್ವಾದಶ ರಾಶಿಗಳ ಮೇಲೆ ಆಶ್ಲೇಷಾ ನಕ್ಷತ್ರದ ಪ್ರಭಾವ ಇರುತ್ತದೆ. ಈ ವೇಳೆಯಲ್ಲಿ ಶುಕ್ರ ಯೋಗದಿಂದ ಕೆಲವು ರಾಶಿಗಳಿಗೆ ಹಠಾತ್‌ ಆರ್ಥಿಕ ಲಾಭವಾಗಲಿದೆ. ಮೇಷರಾಶಿಯಿಂದ ಮೀನ ರಾಶಿಯ ವರೆಗೆ ಒಟ್ಟು 12 ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ ಹೇಗಿದೆ.

ಮೇಷ ರಾಶಿ ದಿನಭವಿಷ್ಯ
ವ್ಯಾಪಾರಿಗಳ ಎಚ್ಚರಿಕೆಯ ನಿರ್ಧಾರದಿಂದ ನಕಾರಾತ್ಮಕ ವಿಚಾರಗಳು ಧನಾತ್ಮಕವಾಗಿ ಪರಿವರ್ತನೆ ಆಗಲಿದೆ. ಕೆಲಸ ಕಾರ್ಯಗಳನ್ನು ಸರಿಯಾದ ಸಮಯದಲ್ಲಿ ಪೂರ್ಣಗೊಳಿಸುವಲ್ಲಿ ಯಶಸ್ವಿ ಆಗುವಿರಿ. ಸಂಗಾತಿಯಿಂದ ನೀವು ಸಂಪೂರ್ಣ ಸಹಕಾರ ಪಡೆಯುವಿರಿ. ಖರ್ಚು ವೆಚ್ಚಗಳ ಮೇಲೆ ನಿಯಂತ್ರಣ ಹೇರಿ.

ವೃಷಭ ರಾಶಿ ದಿನಭವಿಷ್ಯ
ಅವಿವಾಹಿತರಿಗೆ ಯೋಗ್ಯ ವಿವಾಹ ಸಂಬಂಧ ಕೂಡಿಬರಲಿದೆ. ನಿಮ್ಮ ಯಶಸ್ಸು ನೋಡಿ ಸಂಗಾತಿಯು ಇಂದು ಸಂತೋಷದಿಂದ ಇರುತ್ತಾರೆ. ರಾಜಕೀಯಕ್ಕೆ ಸಂಬಂಧಿಸಿದ ಜನರಿಂದ ಇಂದು ಸಂತೋಷ ಪಡುತ್ತೀರಿ. ಸರಕಾರಿ ಉದ್ಯೋಗಕ್ಕೆ ಸಂಬಂಧಿಸಿದಂತೆ ಶುಭ ಸುದ್ದಿಯೊಂದು ದೊರೆಯಲಿದೆ.

ಮಿಥುನ ರಾಶಿ ದಿನಭವಿಷ್ಯ
ಮಕ್ಕಳ ಜೊತೆಗೆ ಪ್ರವಾಸಕ್ಕೆ ತೆರಳುವ ಸಾಧ್ಯತೆಯಿದೆ. ವ್ಯಾಪಾರಿಗಳು ಬೆಲೆ ಬಾಳುವ ವಸ್ತುಗಳನ್ನು ಖರೀದಿಸುವ ಸಾಧ್ಯತೆಯಿದೆ. ಪ್ರೇಮ ಜೀವನದಲ್ಲಿ ಧನಾತ್ಮಕ ಫಲಿತಾಂಶಗಳು ದೊರೆಯುತ್ತದೆ. ಮಕ್ಕಳಿಂದ ಶುಭ ಸುದ್ದಿಯೊಂದನ್ನು ಕೇಳುವಿರಿ.

ಇದನ್ನೂ ಓದಿ : ಕಾರು ಅಪಘಾತವಾದ್ರೆ ಜೀವ ಉಳಿಸುತ್ತೆ ಗೂಗಲ್‌ ! ಭಾರತದಲ್ಲಿ ರಿಲಿಸ್‌ ಆಯ್ತು ಗೂಗಲ್‌ ಫಿಕ್ಸೆಲ್‌ ಫೀಚರ್ಸ್‌

ಕರ್ಕಾಟಕ ರಾಶಿ ದಿನಭವಿಷ್ಯ
ಏಕಾಗ್ರತೆಯಿಂದ ಯಶಸ್ಸು ಸಾಧಿಸುವಿರಿ. ಹಠಾತ್‌ ಆರ್ಥಿಕ ಪ್ರಗತಿ ಈ ರಾಶಿಯವರಿಗೆ ಕಂಡು ಬರಲಿದೆ. ಕುಟುಂಬ ಸದಸ್ಯರ ಚಿಂತೆ ದೂರವಾಗಲಿದೆ. ಯಾವುದೇ ಕೆಲಸ ಮಾಡುವ ಮೊದಲು ಸಂಗಾತಿಯಿಂದ ಸಲಹೆ ಪಡೆಯುವುದು ಉತ್ತಮ. ನೀವು ಸ್ನೇಹಿತರ ಜೊತೆಗೆ ಪಿಕ್ನಿಕ್‌ಗೆ ತೆರಳಬಹುದು.

ಸಿಂಹ ರಾಶಿ ದಿನಭವಿಷ್ಯ
ಹೊಸ ಆದಾಯದ ಮೂಲವನ್ನು ಪಡೆಯಬಹುದು. ಉದ್ಯೋಗಳಿಗೆ ಕೆಲಸದ ಸ್ಥಳದಲ್ಲಿ ಎಚ್ಚರಿಕೆ ಇಂದ ಇರಬೇಕು. ಕೆಲಸ ಕಾರ್ಯಗಳು ಇದ್ದಕ್ಕಿದ್ದಂತೆಯೇ ನಿಲ್ಲುವ ಸಾಧ್ಯತೆಯಿದೆ. ವ್ಯಾಪಾರಿಗಳು ಕೆಲಸದ ಸಮಸ್ಯೆಯನ್ನು ಎದುರಿಸಬಹುದು. ನಿಮ್ಮ ಮಾತಿನಿಂದ ಸಾಮಾಜಿಕವಾಗಿ ಗೌರವ ಹೆಚ್ಚುತ್ತದೆ. ಸ್ಪರ್ಧಾ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳಿಗೆ ಯಶಸ್ಸು.

Horoscope Today 06 November 2023 Zordic Sign 
Image credit to Original Source

ಕನ್ಯಾ ರಾಶಿ ದಿನಭವಿಷ್ಯ
ಮಕ್ಕಳಿಂದ ಶುಭ ಸುದ್ದಿಯೊಂದನ್ನು ಕೇಳುವಿರಿ. ವ್ಯಾಪಾರಿಗಳು ಪಾಲುದಾರರಿಂದ ಹಲವು ಲಾಭಗಳನ್ನು ಪಡೆದುಕೊಳ್ಳಲಿದ್ದಾರೆ. ಸಂಜೆಯ ವೇಳೆಗೆ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ. ನಿಮ್ಮ ಸಹೋದರ ಜೊತೆಗೆ ಯಾವುದೇ ವಿವಾದಗಳಿದ್ದರೂ ಕೂಡ ಅದು ಕೊನೆಯಾಗಲಿದೆ.

ಇದನ್ನೂ ಓದಿ : ಪದವೀಧರರಿಗೆ 3000, ಡಿಪ್ಲೋಮಾ ಆದ್ರೆ 1500 ರೂ. : ಕರ್ನಾಟಕ ಯುವನಿಧಿ ಯೋಜನೆ ಅರ್ಜಿ ಸಲ್ಲಿಸಿದ್ರಾ ?

ತುಲಾ ರಾಶಿ ದಿನಭವಿಷ್ಯ
ರಾಜಕಾರಣಿಗಳ ಬಗೆಗಿನ ಗೌರವ ಹೆಚ್ಚಲಿದೆ. ಹಳೆಯ ಸಾಲವನ್ನು ಮರುಪಾವತಿ ಮಾಡುವಲ್ಲಿ ಯಶಸ್ವಿ ಆಗುವಿರಿ. ಸಂಗಾತಿಯೊಂದಿಗೆ ರೋಮ್ಯಾಂಟಿಕ್‌ ಕ್ಷಣಗಳನ್ನು ಕಳೆಯುವಿರಿ. ಇದರಿಂದ ಇಂದು ಹೆಚ್ಚು ಸಂತೋಷವಾಗಿ ಇರುತ್ತೀರಿ. ತಂದೆಗೆ ಕಣ್ಣಿನ ಸಮಸ್ಯೆ ಎದುರಾಗಲಿದೆ. ವೈದ್ಯಕೀಯ ಸಲಹೆಯನ್ನು ಪಡೆದುಕೊಳ್ಳುವುದು ಉತ್ತಮ. ಕುಟುಂಬ ಸದಸ್ಯರ ಸಂತೋಷ ಹೆಚ್ಚಲಿದೆ.

ವೃಶ್ಚಿಕ ರಾಶಿ ದಿನಭವಿಷ್ಯ
ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ನಷ್ಟವಾಗುವ ಸಾಧ್ಯತೆಯಿದೆ. ಕುಟುಂಬ ಸದಸ್ಯರು ನಿಮಗೆ ಅಚ್ಚರಿಯ ಸಮಾರಂಭವನ್ನು ಏರ್ಪಡಿಸಲಿದ್ದಾರೆ. ಹೊಸ ವ್ಯವಹಾರವನ್ನು ಆರಂಭಿಸಿದ್ರೆ ಹೆಚ್ಚು ಲಾಭವನ್ನು ಪಡೆಯುವ ಸಾಧ್ಯತೆಯಿದೆ. ಆದೆ ಆಸ್ತಿಗೆ ಸಂಬಂಧಿಸಿದ ಯಾವುದೇ ವಿವಾದದಲ್ಲಿ ಭಾಗಿಯಾಗಬೇಡಿ.

ಇದನ್ನೂ ಓದಿ : ಕರ್ನಾಟಕದಲ್ಲಿ ರೇಷನ್‌ ಅಂಗಡಿಗಳು ನವೆಂಬರ್‌ 10 ರಿಂದ ಬಂದ್‌ : ಇನ್ಮುಂದೆ ಅಕ್ಕಿ ಬದಲು ನಗದು ಸಿಗೋದು ಅನುಮಾನ

ಧನಸ್ಸುರಾಶಿ ದಿನಭವಿಷ್ಯ
ವಿರೋಧಿಗಳಿಂದ ಕೆಲಸ ಕಾರ್ಯಗಳಿಗೆ ತಡೆ ಉಂಟಾಗಲಿದೆ. ಯಾವುದೇ ಹೊಸ ಆವಿಷ್ಕಾರದಿಂದ ಯಶಸ್ಸು. ಸಾಲ ಪಡೆದುಕೊಂಡಿದ್ದರೆ ಅದನ್ನ ನೀವು ಮರುಪಾವತಿ ಮಾಡುವಿರಿ. ಸಂಬಂಧಿಕರಿಂದ ಸ್ವಲ್ಪ ಆರ್ಥಿಕ ಲಾಭವನ್ನು ಪಡೆಯುತ್ತೀರಿ. ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗಿಯಾಗುವಿರಿ.

ಮಕರ ರಾಶಿ ದಿನಭವಿಷ್ಯ
ಕುಟುಂಬದಲ್ಲಿ ನೆಮ್ಮದಿ. ಆರ್ಥಿಕ ವಿಚಾರಗಳಲ್ಲಿ ಯಶಸ್ಸು ಪಡೆಯುವಿರಿ. ಸ್ನೇಹಿತರಿಂದ ಸಹಾಯ ದೊರೆಯಲಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಯಶಸ್ವಿ ಆಗುವಿರಿ. ಸಂಜೆಯ ವೇಳೆಗೆ ಮನೆಗೆ ಅತಿಥಿಗಳು ಆಗಮಿಸಲಿದ್ದಾರೆ. ದೂರ ಪ್ರಯಾಣದಿಂದ ನೆಮ್ಮದಿ. ಧಾರ್ಮಿಕ ಪುಣ್ಯಕ್ಷೇತ್ರಗಳ ಭೇಟಿ ಸಾಧ್ಯತೆ.

ಕುಂಭ ರಾಶಿ ದಿನಭವಿಷ್ಯ
ಭವಿಷ್ಯದ ಬಗ್ಗೆ ಚಿಂತೆ ಕಾಡಲಿದೆ. ಪ್ರೀತಿ ಪಾತ್ರರಿಂದ ತೊಂದರೆಯನ್ನು ಅನುಭವಿಸುತ್ತೀರಿ. ನಕಾರಾತ್ಮಕ ಸುದ್ದಿಗಳಿಂದ ಮನಸಿಗೆ ಬೇಸರ. ಪ್ರೀತಿಯ ಜೀವನಕ್ಕೆ ಸಮಯ ಸಿಗದೆ ಬೇಸರವಾಗುವಿರಿ. ಸಂಗಾತಿ ನಿಮ್ಮ ಮೇಲೆ ಕೋಪಗೊಳ್ಳುವ ಸಾಧ್ಯತೆಯಿದೆ. ಧಾರ್ಮಿಕ ಕ್ಷೇತ್ರಗಳ ಭೇಟಿಯಿಂದ ನೆಮ್ಮದಿ.

ಮೀನ ರಾಶಿ ದಿನಭವಿಷ್ಯ
ಕಷ್ಟಪಟ್ಟು ದುಡಿದ ಹಣವನ್ನು ಭದ್ರವಾಗಿ ಇರಿಸಿಕೊಳ್ಳಿ. ಕಳ್ಳರು ಕನ್ನ ಹಾಕುವ ಸಾಧ್ಯತೆಯಿದೆ. ಸ್ನೇಹಿತರ ಸಂಖ್ಯೆ ಹೆಚ್ಚಳದಿಂದ ಆರ್ಥಿಕ ಸಹಕಾರ. ಯಾರಿಗೂ ಸಾಲವನ್ನು ನೀಡಬೇಡಿ. ವೈವಾಹಿಕ ಜೀವನದಲ್ಲಿನ ಅಡೆತಡೆಗಳಲ್ಲಿ ತಾಯಿ ಪರಿಹಾರ ಮಾಡುತ್ತಾರೆ. ಅವಿವಾಹಿತರಿಗೆ ಯೋಗ್ಯ ಸಂಬಂಧಗಳು ಕೂಡಿಬರಲಿದೆ. ಭವಿಷ್ಯದ ಯೋಜನೆಗಳಿಂದ ಅನುಕೂಲ.

 

Horoscope Today 06 November 2023 Zordic Sign

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular