ಭಾನುವಾರ, ಏಪ್ರಿಲ್ 27, 2025
Homehoroscopeದಿನಭವಿಷ್ಯ 07 ನವೆಂಬರ್ 2023 : ಮಾಘ ನಕ್ಷತ್ರದ ಪ್ರಭಾವ ಸಿಂಹ, ಧನಸ್ಸು ರಾಶಿಯವರಿಗೆ ಧನಲಾಭ

ದಿನಭವಿಷ್ಯ 07 ನವೆಂಬರ್ 2023 : ಮಾಘ ನಕ್ಷತ್ರದ ಪ್ರಭಾವ ಸಿಂಹ, ಧನಸ್ಸು ರಾಶಿಯವರಿಗೆ ಧನಲಾಭ

- Advertisement -

Horoscope today : ದಿನಭವಿಷ್ಯ 07 ನವೆಂಬರ್ 2023 ಮಂಗಳವಾರ, ದ್ವಾದಶ ರಾಶಿಗಳ ಮೇಲೆ ಮಾಘ ನಕ್ಷತ್ರವು ಪ್ರಭಾವ ಬೀರುತ್ತದೆ. ಬ್ರಹ್ಮಯೋಗದಿಂದ ಸಿಂಹರಾಶಿ, ಧನಸ್ಸುರಾಶಿಗಳಿಗೆ ಲಾಭವಾಗುವ ಸಾಧ್ಯತೆಯಿದೆ. ಮೇಷರಾಶಿಯಿಂದ ಮೀನರಾಶಿಯ ವರೆಗೆ ಒಟ್ಟು 12 ದ್ವಾದಶರಾಶಿಗಳ ಇಂದಿನ ದಿನಭವಿಷ್ಯ ಹೇಗಿದೆ.

ಮೇಷ ರಾಶಿ ದಿನಭವಿಷ್ಯ
ಸ್ನೇಹಿತರ ಜೊತೆ ಲಾಭದಾಯಕ ಒಪ್ಪಂದ ಮಾಡಿಕೊಳ್ಳುತ್ತಾರೆ. ಹಣವನ್ನು ಸರಿಯಾದ ಕಡೆ ಹೂಡಿಕೆ ಮಾಡಿ. ದಾನ ಮಾಡುವುದರಿಂದ ಮಾನಸಿಕವಾದ ನೆಮ್ಮದಿ ದೊರೆಯಲಿದೆ. ಮಕ್ಕಳ ಜೊತೆಗೆ ಸುಂದರ ಸಂಜೆಯನ್ನು ಕಳೆಯುವಿರಿ.

ವೃಷಭ ರಾಶಿ ದಿನಭವಿಷ್ಯ
ಕುಟುಂಬದಲ್ಲಿನ ಸಮಸ್ಯೆ ಪರಿಹಾರಕ್ಕೆ ಇತರರನ್ನು ಆಶ್ರಯಿಸುವಿರಿ. ನಿಮಗೆ ತೊಂದರೆ ಉಂಟಾಗುವ ಸಾಧ್ಯತೆಯಿದೆ. ಮನೆಗೆ ಇಂದು ಅತಿಥಿಗಳ ಆಗಮನವಾಗುವ ಸಾಧ್ಯತೆಯಿದೆ. ಹಳೆಯ ಮಧುರ ಕ್ಷಣಗಳು ನಿಮಗೆ ನೆನಪಾಗಲಿದ್ದು, ಮನಸಿಗೆ ಸಂತೋಷವನ್ನು ನೀಡುತ್ತವೆ.

ಮಿಥುನ ರಾಶಿ ದಿನಭವಿಷ್ಯ
ಅಮೂಲ್ಯವಾದ ಆಸ್ತಿಯೊಂದನ್ನು ಪಡೆಯುವಿರಿ. ವಾಹನ ಚಾಲನೆ ಮಾಡುವ ವೇಳೆಯಲ್ಲಿ ಎಚ್ಚರವಾಗಿರಿ. ಅನಗತ್ಯ ಖರ್ಚು ವೆಚ್ಚಗಳನ್ನು ತಪ್ಪಿಸಿ, ಇಲ್ಲವಾದ್ರೆ ಹಣವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಪ್ರೀತಿ ಪಾತ್ರರನ್ನು ಭೇಟಿ ಮಾಡಿ, ನೈತಿಕ ಬೆಂಬಲ ಹೆಚ್ಚಲಿದೆ.

ಇದನ್ನೂ ಓದಿ : ಕರ್ನಾಟಕದಲ್ಲಿ ರೇಷನ್‌ ಅಂಗಡಿಗಳು ನವೆಂಬರ್‌ 10 ರಿಂದ ಬಂದ್‌ : ಇನ್ಮುಂದೆ ಅಕ್ಕಿ ಬದಲು ನಗದು ಸಿಗೋದು ಅನುಮಾನ

ಕರ್ಕಾಟಕ ರಾಶಿ ದಿನಭವಿಷ್ಯ
ಕುಟುಂಬ ಜೀವನದಲ್ಲಿ ಬಹಳ ಜಾಗರೂಕರಾಗಿ ಇರಿ. ಇಲ್ಲವಾದ್ರೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನೀವು ದೊಡ್ಡ ಮೊತ್ತದ ಲಾಭವನ್ನು ಇಂದು ಪಡೆಯುವ ಸಾಧ್ಯತೆಯಿದೆ. ಕುಟುಂಬ ಸದಸ್ಯರ ಇಷ್ಟಾರ್ಥಗಳನ್ನು ಈಡೇರಿಸಲು ಹಣವನ್ನು ವ್ಯಯಿಸುವಿರಿ.

Horoscope Today 07 november 2023 daily astrology of zodiac signs in kannada language Kannada News
Image Credit to Original Source

ಸಿಂಹ ರಾಶಿ ದಿನಭವಿಷ್ಯ
ಇಂದು ತುಂಬಾ ಒಳ್ಳೆಯ ದಿನ. ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವವರು ಖಂಡಿತಾ ಅನಿರೀಕ್ಷಿತ ಯಶಸ್ಸು ಪಡೆಯುತ್ತಾರೆ. ಆರೋಗ್ಯ ಸಮಸ್ಯೆಗಳಿಂದ ತೊಂದರೆ, ಶುಭ ಕಾರ್ಯಗಳಲ್ಲಿ ಭಾಗವಹಿಸುವಿರಿ. ಸ್ಪರ್ಧಾ ಕ್ಷೇತ್ರಗಳಲ್ಲಿ ಮುನ್ನಡೆಯುತ್ತೀರಿ. ನಿಮ್ಮ ಮಕ್ಕಳ ಜವಾಬ್ದಾರಿಯನ್ನು ಪೂರೈಸುವಲ್ಲಿ ಯಶಸ್ವಿ ಆಗುತ್ತೀರಿ.

ಕನ್ಯಾ ರಾಶಿ ದಿನಭವಿಷ್ಯ
ಆಹ್ಲಾದಕರ ಫಲಿತಾಂಶವನ್ನು ಪಡೆಯುತ್ತೀರಿ. ಎಲ್ಲಾ ಕೆಲಸ ಕಾರ್ಯಗಳನ್ನು ನಿಗದಿತ ಸಮಯದಲ್ಲಿಯೇ ಮುಗಿಸುತ್ತೀರಿ. ಕೆಲಸದ ಕಡೆಗೆ ವಿಶೇಷವಾದ ಗಮನ ಹರಿಸುತ್ತೀರಿ. ಸಂಗಾತಿಯ ಪ್ರೀತಿ ನೋಡಿ ಸಂತಸ ಪಡುವಿರಿ.

ಇದನ್ನೂ ಓದಿ : ಈ ಕೆಲಸ ಮಾಡಿಸದಿದ್ರೆ ನಿಷ್ಕ್ರೀಯಗೊಳ್ಳಲಿದೆ ನಿಮ್ಮ ಪ್ಯಾನ್‌ಕಾರ್ಡ್‌ : ಸರಕಾರದಿಂದ ಹೊಸ ರೂಲ್ಸ್‌ ಜಾರಿ

ತುಲಾ ರಾಶಿ ದಿನಭವಿಷ್ಯ
ಯಾವುದೇ ವ್ಯವಹಾರವನ್ನು ಆರಂಭಿಸಿದರೆ ನೀವು ಖಂಡಿತವಾಗಿಯೂ ಯಶಸ್ಸಿ ಆಗುತ್ತೀರಿ. ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಮುನ್ನಡೆ, ನಿಮ್ಮ ಮಾತಿನಲ್ಲಿ ಮಾಧುರ್ಯ ಕಾಪಾಡಿಕೊಳ್ಳಿ. ಬಂಧುಗಳಲ್ಲಿ ಬಿರುಕು. ಸಂಗಾತಿಯೊಂದಿಗೆ ಸುಂದರ ಕ್ಷಣ. ಹೊಂದಾಣಿಕೆಯಿಂದ ಕಾರ್ಯಾನುಕೂಲ.

ವೃಶ್ಚಿಕ ರಾಶಿ ದಿನಭವಿಷ್ಯ
ಆರ್ಥಿಕವಾಗಿ ಯಶಸ್ವಿ ಆಗುತ್ತೀರಿ. ಸಂಗಾತಿಯೊಂದಿಗೆ ಜಗಳವಾಡುವ ಸಾಧ್ಯತೆಯಿದೆ. ಯಾರಿಗೆ ಹಣವನ್ನು ನೀಡಬೇಕಾದ್ರೂ ಸಾಕಷ್ಟು ಯೋಚನೆಯನ್ನು ಮಾಡಿ. ಕೊಟ್ಟ ಸಾಲ ವಾಪಾಸ ಕೇಳುವ ಸಾಧ್ಯತೆಯಿದೆ. ಧಾರ್ಮಿಕ ಕ್ಷೇತ್ರಗಳ ಭೇಟಿಯಿಂದ ಮನಸಿಗೆ ನೆಮ್ಮದಿ ದೊರೆಯಲಿದೆ. ಹೊಂದಾಣಿಕೆಯಿಂದ ಕಾರ್ಯಾನುಕೂಲ.

ಇದನ್ನೂ  ಓದಿ : ಮಹಿಳೆಯರಿಗೆ ಫ್ರೀ..ಫ್ರೀ…ಫ್ರೀ.. ! ಆದ್ರೆ ಪುರುಷರ ಜೇಬಿಗೆ ಬೀಳಲಿದೆ ಕತ್ತರಿ: ಸದ್ಯದಲ್ಲೇ ಬಸ್ ಪ್ರಯಾಣ ದರ ದುಪ್ಪಟ್ಟು ಏರಿಕೆ

ಧನಸ್ಸುರಾಶಿ ದಿನಭವಿಷ್ಯ
ಸಂಗಾತಿಯೊಂದಿಗೆ ಶಾಪಿಂಗ್‌ಗೆ ತೆರಳುವ ಸಾಧ್ಯತೆಯಿದೆ. ಹೂಡಿಕೆ ಮಾಡುವ ಮೊದಲು ಸಹೋದರ ಹಾಗೂ ತಂದೆಯಿಂದ ಸಲಹೆಯನ್ನು ಪಡೆಯುವಿರಿ. ಉದ್ಯೋಗಿಗಳು ಇಂದು ಹೊಸ ಕೊಡುಗೆಗಳನ್ನು ಪಡೆಯುವ ಸಾಧ್ಯತೆಯಿದೆ. ಇದರಿಂದ ನಿಮ್ಮ ಮನಸಿಗೆ ಸಂತಸ ಮೂಡಲಿದೆ. ದೂರದ ಬಂಧುಗಳ ಆಗಮನದಿಂದ ನೆಮ್ಮದಿ.

ಮಕರ ರಾಶಿ ದಿನಭವಿಷ್ಯ
ಒಳ್ಳೆಯ ಕೆಲಸಗಳನ್ನು ಮಾಡುವುದರಿಂದ ಮನಸಿಗೆ ಸಂತಸ. ಆರ್ಥಿಕ ಪರಿಸ್ಥಿತಿ ಎಂದಿಗೂ ಉತ್ತಮವಾಗಿರುತ್ತದೆ. ಸಂಜೆಯ ವೇಳೆಗೆ ನೀವು ಯಾವುದೇ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿ ಆಗುತ್ತೀರಿ. ದೂರ ಪ್ರಯಾಣ ಸುಖಕರವಾಗಿ ಇರಲಿದೆ.

ಕುಂಭ ರಾಶಿ ದಿನಭವಿಷ್ಯ
ಸಂಗಾತಿಯೊಂದಿಗೆ ಜಾಗರೂಕರಾಗಿ ಇರಬೇಕು. ಯಾವುದೇ ಆಸ್ತಿ ಖರೀದಿ ಅಥವಾ ಮಾರಾಟ ಮಾಡಲು ನಿರ್ಧರಿಸಿದ್ದರೆ, ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ. ಇಲ್ಲದಿದ್ದರೆ ಭವಿಷ್ಯದಲ್ಲಿ ಮೋಸ ಹೋಗುವ ಸಾಧ್ಯತೆಯಿದೆ.ಸಹೋದರನ ಜೊತೆಗಿನ ವಿವಾದಗಳು ಕೊನೆಗೊಳ್ಳಬಹುದು.

ಮೀನ ರಾಶಿ ದಿನಭವಿಷ್ಯ
ಶುಭ ಸುದ್ದಿಯನ್ನು ಕೇಳುವಿರಿ. ಪ್ರವಾಸ ಮಾಡಬೇಕಾಗುತ್ತದೆ. ಇದರಿಂದ ನಿಮಗೆ ಲಾಭದಾಯಕವಾಗಲಿದೆ. ವಿದೇಶದಲ್ಲಿ ವ್ಯವಹಾರ ಮಾಡುವವರಿಗೆ ಆರ್ಥಿಕ ಪ್ರಗತಿ. ವಿದ್ಯಾರ್ಥಿಗಳಿಗೆ ನೆಮ್ಮದಿ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರು ಪರಿಶ್ರಮ ಪಟ್ಟರೆ ಇಂದು ಯಶಸ್ಸು ಖಚಿತ. ಧಾರ್ಮಿಕ ಕ್ಷೇತ್ರಗಳ ಭೇಟಿಯಿಂದ ನೆಮ್ಮದಿ.

Horoscope Today 07 november 2023 daily astrology of zodiac signs in kannada language  

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular