ಮಹಿಳೆಯರಿಗೆ ಫ್ರೀ..ಫ್ರೀ…ಫ್ರೀ.. ! ಆದ್ರೆ ಪುರುಷರ ಜೇಬಿಗೆ ಬೀಳಲಿದೆ ಕತ್ತರಿ: ಸದ್ಯದಲ್ಲೇ ಬಸ್ ಪ್ರಯಾಣ ದರ ದುಪ್ಪಟ್ಟು ಏರಿಕೆ

ರಾಜ್ಯದಲ್ಲಿ ಮಹಿಳೆಯರಿಗೆ ಶಕ್ತಿ ಯೋಜನೆಯ (Shakthi Yojana) ಮೂಲಕ  ಬಸ್ ಸಂಚಾರ ಉಚಿತ. ಆದರೆ ಇನ್ಮುಂದೇ ಪುರುಷರ ಪಾಲಿಗೆ ಮಾತ್ರ ಬಸ್ ಸಂಚಾರದಿಂದ ಕಿಸೆಗೆ ಕತ್ತರಿ ಖಚಿತ ಎಂಬಂತಾಗಲಿದೆ.‌

ಬೆಂಗಳೂರು : ರಾಜ್ಯದಲ್ಲಿ ಮಹಿಳೆಯರಿಗೆ ಶಕ್ತಿ ಯೋಜನೆಯ (Shakthi Yojana) ಮೂಲಕ  ಬಸ್ ಸಂಚಾರ ಉಚಿತ. ಆದರೆ ಇನ್ಮುಂದೇ ಪುರುಷರ ಪಾಲಿಗೆ ಮಾತ್ರ ಬಸ್ ಸಂಚಾರದಿಂದ ಕಿಸೆಗೆ ಕತ್ತರಿ ಖಚಿತ ಎಂಬಂತಾಗಲಿದೆ.‌ ನಷ್ಟ ಸೇರಿದಂತೆ ವಿವಿಧ ಕಾರಣ ಮುಂದಿಟ್ಟಿರೋ ಸಾರಿಗೆ ಇಲಾಖೆ ವಿದ್ಯುತ್ ರೀತಿ ವರ್ಷಕ್ಕೊಮ್ಮೆ ಬಸ್ ಪ್ರಯಾಣ ದರ (Bus Ticket Price hike) ಏರಿಕೆ ಪ್ರಸ್ತಾಪವನ್ನು ಸರ್ಕಾರಕ್ಕೆ ಸಲ್ಲಿಸಲು ಸಿದ್ಧವಾಗಿದೆ.

Karnataka Free Free Free for womens Scissors will fall into men pockets Bus fares to Hike soon
Image Credit to Original Source

ರಾಜ್ಯದ ನಾಲ್ಕು ಸಾರಿಗೆ ನಿಗಮಗಳು ಬಹುತೇಕ ನಷ್ಟದಲ್ಲಿವೆ. ಅದರಲ್ಲೂ ಮಹಿಳೆಯರ ಉಚಿತ ಬಸ್ ಪ್ರಯಾಣ ಆರಂಭವಾದ ಮೇಲಂತೂ ಬಸ್ ಗಳಲ್ಲಿ ಬರಿ‌ಮಹಿಳಾ ಪ್ರಯಾಣಿಕರೇ ತುಂಬಿ ತುಳುಕುವಂತಾಗಿದ್ದು, ಪುರುಷರು ಹಾಗೂ ವಿದಾರ್ಥಿಗಳಿಗೇ ಜಾಗವೇ ಇಲ್ಲದೆ ಪರದಾಡುವ ಸ್ಥಿತಿ ಇದೆ.

ಈ‌ ಮಧ್ಯೆ ಸದ್ಯದಲ್ಲೇ ಹೆಚ್ಚಳವಾಗಲಿದೆಯಾ ಬಸ್ ಟಿಕೆಟ್ ದರ ? ಅನ್ನೋ ಸಂಗತಿ ಈಗ ಚರ್ಚೆಗೆ ಗ್ರಾಸವಾಗಿದೆ. ಇದಕ್ಕೆ ಕಾರಣ ಆರ್ಥಿಕ ಪರಿಸ್ಥಿತಿ ಸರಿದೂಗಿಸಲು ಹಾಗೂ ಕಾಲಕಾಲಕ್ಕೆ ಪ್ರಯಾಣ ದರ ಹೆಚ್ಚಳಕ್ಕೆ ಆರ್ಥಿಕ ಇಲಾ ಖೆ ಪ್ರಸ್ತಾವನೆ ಸಲ್ಲಿಸಲು ಸಿದ್ಧವಾಗಿದೆ.

ಇದನ್ನೂ ಓದಿ : ಈ ಕೆಲಸ ಮಾಡಿಸದಿದ್ರೆ ನಿಷ್ಕ್ರೀಯಗೊಳ್ಳಲಿದೆ ನಿಮ್ಮ ಪ್ಯಾನ್‌ಕಾರ್ಡ್‌ : ಸರಕಾರದಿಂದ ಹೊಸ ರೂಲ್ಸ್‌ ಜಾರಿ

ಈ ಕುರಿತು ಸಮಿತಿ ರಚಿಸಲು ಸಾರಿಗೆ ಇಲಾಖೆಗೆ ಆರ್ಥಿಕ ಇಲಾಖೆ ಸಲಹೆ ನೀಡಿದೆ ಎನ್ನಲಾಗ್ತಿದೆ. KERC ಮಾದರಿಯಲ್ಲೇ ಆಯೋಗ ರಚಿಸಲು ಸೂಚನೆ ನೀಡಲಾಗಿದ್ದು, ಡೀಸಲ್, ಬಸ್ ನ ಬಿಡಿ ಭಾಗಗಳ ದರ, ನೌಕರರ ವೇತನ ಹೆಚ್ಚಳ ಇನ್ನಿತರ ಕಾರಣಗಳಿಂದ ನಿಗಮದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಸಾರಿಗೆ ನೌಕರರಿಗೆ ಸಮಯಕ್ಕೆ ಸರಿಯಾಗಿ ಸಂಬಳ ನೀಡೋದು ಕಷ್ಟ ಎಂಬಂತಾಗಿದೆ.

Karnataka Free Free Free for womens Scissors will fall into men pockets Bus fares to Hike soon
Image Credit to Original Source

ಹೀಗಾಗಿ ದರ ಪರಿಷ್ಕರಣೆಗೆ ಮುಂದಾಗಿರುವ ಕರ್ನಾಟಕ ಸಾರಿಗೆ ನಿಗಮ ಪ್ರಸ್ತಾಪವನೆ ಸಲ್ಲಿಸಲು ಸಿದ್ಧತೆ ನಡೆಸಿದೆ. ಮೂಲಗಳ‌ ಮಾಹಿತಿ ಪ್ರಕಾರ ನಾಲ್ಕು ನಿಗಮಗಳಿಂದ ಸಾರಿಗೆ ಇಲಾಖೆ ನಾಲ್ಕು ಸಾವಿರ ಕೋಟಿ ಸಾಲದಲ್ಲಿದೆ. ರಾಜ್ಯದಲ್ಲಿ ಪ್ರತಿ ವರ್ಷ ಬೆಸ್ಕಾಂ ಸೇರಿದಂತೆ ಎಲ್ಲಾ ಐದು ಹೆಸ್ಕಾಂಗಳು ವಿದ್ಯುತ್ ಖರೀದಿ, ನಿರ್ವಹಣೆ ಹಾಗೂ ವೆಚ್ಚಕ್ಕೆ ತಕ್ಕಂತೆ ದರ ಏರಿಕೆ ಮಾಡಲು KERC ಗೆ ಪ್ರಸ್ತಾವನೆ ಸಲ್ಲಿಸುತ್ತವೆ.

ಇದನ್ನೂ ಓದಿ : ಪದವೀಧರರಿಗೆ 3000, ಡಿಪ್ಲೋಮಾ ಆದ್ರೆ 1500 ರೂ. : ಕರ್ನಾಟಕ ಯುವನಿಧಿ ಯೋಜನೆ ಅರ್ಜಿ ಸಲ್ಲಿಸಿದ್ರಾ ?

KERC ಎಲ್ಲಾ ಹೆಸ್ಕಾಂ ಗಳ ಆದಾಯ ಖರ್ಚು ಅಂದಾಜಿಸಿ ಬೆಲೆ ಏರಿಕೆ ಮಾಡುತ್ತದೆ ಅದೇ ಮಾದರಿಯನ್ನು ಸಾರಿಗೆ ಇಲಾಖೆಯ ನಾಲ್ಕು ನಿಗಮಗಳಿಗೂ ಅಳವಡಿಸಲು ಆರ್ಥಿಕ ಇಲಾಖೆ ಸೂಚನೆ ನೀಡಿದೆ‌.ಪ್ರತಿ ವರ್ಷ ಸಾರಿಗೆ ಇಲಾಖೆಯು ನಾಲ್ಕು ನಿಗಮಗಳ ಆರ್ಥಿಕ ಪರಿಸ್ಥಿತಿಯನ್ನು ಆಯೋಗದ ಮುಂದೆ ಇರಿಸ ಆರ್ಥಿಕ ಪರಿಸ್ಥಿತಿ ತಕ್ಕಂತೆ ಪ್ರಯಾಣ ದರ ಹೆಚ್ಚಳ ಮಾಡೋದು ಇಲಾಖೆಯ ಪ್ಲ್ಯಾನ್.

ದರ ಏರಿಕೆ ಮಾಡೋದರಿಂದ ಮಹಿಳಾ‌ ಪ್ರಯಾಣಿಕರ ಉಚಿತ ಪ್ರಯಾಣದಿಂದ ಸಾರಿಗೆ ಇಲಾಖೆಗೆ ಉಂಟಾಗ್ತಿರೋ ನಷ್ಟವನ್ನು ಸರಿತೂಗಿಸೋದು ಒಂದೆಡೆಯಾದರೆ ಇನ್ನೊಂದೆಡೆ ಸಾರಿಗೆ ವಿಭಾಗಗಳ ಪರಿಸ್ಥಿತಿ ಸುಧಾರಿಸಿಕೊಂಡು ಸಿಬ್ಬಂದಿಗಳಿಗೆ ವೇತನ ನೀಡೋದು ಕೂಡ ಇಲಾಖೆಯ ಗುರಿ. ಆದರೆ ಸದ್ಯ ಲೋಕಸಭೆ ಚುನಾವಣೆಯ ಹೊತ್ತಿನಲ್ಲಿ ಉಚಿತ ಬಸ್ ಪ್ರಯಾಣದ ಲಾಭವನ್ನು ಮತವಾಗಿ ಪರಿವರ್ತಿಸುವ ಕನಸಿನಲ್ಲಿರೋ ರಾಜ್ಯದ ಕಾಂಗ್ರೆಸ್ ಸರ್ಕಾರ ತಕ್ಷಣವೇ ಬೆಲೆ ಏರಿಕೆ ಘೋಷಿಸುವ ಸಾಧ್ಯತೆಗಳಿಲ್ಲ.

ಇದನ್ನೂ ಓದಿ : ವಾರಕ್ಕೆ 5 ದಿನ ಕೆಲಸ, ವೇತನದಲ್ಲಿ ಶೇ.15ರಷ್ಟು ಹೆಚ್ಚಳ : ನೌಕರರಿಗೆ ಇಲ್ಲಿದೆ ಭರ್ಜರಿ ಗುಡ್‌ನ್ಯೂಸ್‌

ಈ ವಿಚಾರವನ್ನು ಸ್ವತಃ ರಾಜ್ಯದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಖಚಿತ ಪಡಿಸಿದ್ದು ರಾಜ್ಯ ಸರ್ಕಾರ ಇನ್ನೂ ನಿರ್ಧಾರ ಕೈಗೊಂಡಿಲ್ಲ ಎಂದಿದ್ದಾರೆ. ಕೆ ಇ ಆರ್ ಸಿ ರೀತಿ ದರ ಏರಿಕೆ ಪ್ರಸ್ತಾವನೆ ಸಲ್ಲಿಸುವ ಸಲಹೆ ಹಂತದಲ್ಲಿಯೇ ಇದೆ. ಬಸ್ ದರ ಸದ್ಯ ಹೆಚ್ಚಿಸಲ್ಲ ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಮಾಹಿತಿ ನೀಡಿದ್ದಾರೆ.

Karnataka Free Free Free for womens Scissors will fall into men pockets Bus fares to Hike soon

Comments are closed.