ದಿನಭವಿಷ್ಯ 10 ನವೆಂಬರ್ 2023 : ಧನ ತ್ರಯೋದಶಿಯಿಂದ ಯಾವ ರಾಶಿಗಳಿಗೆ ಅನುಕೂಲ ?

Horoscope Today : ದಿನಭವಿಷ್ಯ 10 ನವೆಂಬರ್ 2023 ಶುಕ್ರವಾರ, ದ್ವಾದಶ ರಾಶಿಗಳ ಮೇಲೆ ಪುನರ್ವಸು ಹಸ್ತಾ ನಕ್ಷತ್ರದ ಪ್ರಭಾವ ಇರುತ್ತದೆ. ಇಂದು ಮಂಗಳಕರವಾದ ದಿನ. ಇಂದು ಧನ ತ್ರಯೋದಶಿ ಕರ್ಕಾಟಕ ಹಾಗೂ ಧನಸ್ಸು ರಾಶಿಯವರಿಗೆ ಆರ್ಥಿಕವಾಗಿ ಅನುಕೂಲ ನೀಡುತ್ತದೆ.

Horoscope Today : ದಿನಭವಿಷ್ಯ 10 ನವೆಂಬರ್ 2023 ಶುಕ್ರವಾರ, ದ್ವಾದಶ ರಾಶಿಗಳ ಮೇಲೆ ಪುನರ್ವಸು ಹಸ್ತಾ ನಕ್ಷತ್ರದ ಪ್ರಭಾವ ಇರುತ್ತದೆ. ಇಂದು ಮಂಗಳಕರವಾದ ದಿನ. ಇಂದು ಧನ ತ್ರಯೋದಶಿ ಕರ್ಕಾಟಕ ಹಾಗೂ ಧನಸ್ಸು ರಾಶಿಯವರಿಗೆ ಆರ್ಥಿಕವಾಗಿ ಅನುಕೂಲ ನೀಡುತ್ತದೆ. ಹಾಗಾದ್ರೆ ಮೇಷ ರಾಶಿಯಿಂದ ಮೀನ ರಾಶಿಯವರೆಗೆ ಒಟ್ಟು 12  ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ ಹೇಗಿದೆ.

ಮೇಷರಾಶಿ ದಿನಭವಿಷ್ಯ
ಬಾಕಿ ಉಳಿದಿರುವ ಮನೆಯ ಕೆಲಸವನ್ನು ಪೂರ್ಣಗೊಳಿಸಲು ಪ್ರಯತ್ನಿಸುವಿರಿ. ಸ್ನೇಹಿತರಿಂದ ನೀವು ಹಣಕಾಸಿನ ಸಹಾಯವನ್ನು ಪಡೆಯುವಿರಿ. ಬಿಡುವಿಲ್ಲದ ಕೆಲಸದ ವೇಳಾಪಟ್ಟಿಯ ನಡುವಲ್ಲೂ ಕುಟುಂಬಸ್ಥರಿಗೆ ಸಮಯ ನೀಡುವಿರಿ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಣವನ್ನು ವಿನಿಯೋಗ ಮಾಡುವಿರಿ.

ವೃಷಭ ರಾಶಿ ದಿನಭವಿಷ್ಯ
ಆರೋಗ್ಯದ ವಿಚಾರದಲ್ಲಿ ನೀವು ತುಂಬಾ ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ. ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆಯಿದೆ. ಸಂಬಂಧಿಕರ ಜೊತೆಗೆ ವ್ಯವಹಾರ ಮಾಡುವಾಗ ಎಚ್ಚರಿಕೆ ವಹಿಸಿ. ಸ್ನೇಹಿತರ ನಡುವೆ ಭಿನ್ನಾಭಿಪ್ರಾಯಗಳು ಕಂಡು ಬರುವ ಸಾಧ್ಯತೆಯಿದೆ. ಉದ್ಯೋಗಕ್ಕಾಗಿ ಹುಡುಕುತ್ತಿರುವವರು ಶುಭ ಸುದ್ದಿಯನ್ನು ಕೇಳುವಿರಿ.

ಮಿಥುನ ರಾಶಿ ದಿನಭವಿಷ್ಯ
ಯಾವುದೇ ಕೆಲಸ ಕಾರ್ಯಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಿ. ಆದರೆ ನಿಮ್ಮ ಕೆಲಸಕ್ಕೆ ಸಾಕಷ್ಟು ಮಂದಿ ಅಡ್ಡಿ ಪಡಿಸುತ್ತಾರೆ. ಅನಗತ್ಯ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಿ. ಮಕ್ಕಳ ವಿಚಾರದಲ್ಲಿ ನೀವು ಶುಭ ಸುದ್ದಿಯೊಂದನ್ನು ಕೇಳುವಿರಿ. ಸಂಜೆಯ ವೇಳೆಗೆ ಮನಸಿಗೆ ನೆಮ್ಮದಿ ದೊರೆಯಲಿದೆ.

ಕರ್ಕಾಟಕ ರಾಶಿ ದಿನಭವಿಷ್ಯ
ಕುಟುಂಬ ಆಸ್ತಿ ಸಂಪಾದನೆಯಿಂದ ಮನಸಿಗೆ ನೆಮ್ಮದಿ ದೊರೆಯಲಿದೆ. ಕುಟುಂಬ ಸದಸ್ಯರ ಜೊತೆಗೆ ಪಾರ್ಟಿ ಆಯೋಜನೆ ಮಾಡುವಿರಿ. ವ್ಯಾಪಾರಿಗಳಿಗೆ ವ್ಯವಹಾರದಲ್ಲಿ ಚಿಂತೆ ಮೂಡಲಿದೆ. ಕರ್ಕಾಟಕ ರಾಶಿಯವರಿಗೆ ಆರ್ಥಿಕವಾಗಿ ಚೇತರಿಕೆ ಕಂಡುಬರಲಿದೆ. ಸಾಮಾಜಿಕವಾಗಿ ಗೌರವ ವೃದ್ದಿಸಲಿದೆ.

ಇದನ್ನೂ ಓದಿ : ಒಂದೇ ಹೆಸರಲ್ಲಿ 2 ಸಂಸ್ಥೆ ನೋಂದಣಿ : ಉತ್ತರ ಕನ್ನಡ ಜಿಲ್ಲಾ ಅಮೆಚೂರ್‌ ಕಬಡ್ಡಿ ಅಸೋಸಿಯೇಷನ್‌ ನೋಂದಣಿ ರದ್ದು

ಸಿಂಹ ರಾಶಿ ದಿನಭವಿಷ್ಯ
ಕಾನೂನು ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಮೊರೆ ಹೋಗಬೇಕಾಗಿ ಬರುತ್ತದೆ. ಆರ್ಥಿಕ ಪರಿಸ್ಥಿತಿಯನ್ನು ಬಲ ಪಡಿಸಲು ನೀವು ಮಾಡುವ ಯಾವುದೇ ಕೆಲಸ ಕಾರ್ಯಗಳಲ್ಲಿಯೂ ನೀವು ಯಶಸ್ವಿ ಆಗುತ್ತೀರಿ. ನೌಕರರು ಯಾವುದೇ ಕಾರಣಕ್ಕೂ ಅಧಿಕಾರಿಗಳ ವಾಗ್ವಾದ ಮಾಡಬಾರದು. ಹೊಂದಾಣಿಕೆಯಿಂದ ಕಾರ್ಯಾನುಕೂಲವಿದೆ.

ಕನ್ಯಾ ರಾಶಿ ದಿನಭವಿಷ್ಯ
ಯಾವುದೇ ವಿಚಾರದಲ್ಲಿ ಸಂಗಾತಿಯೊಂದಿಗಿನ ಭಿನ್ನಾಭಿಪ್ರಾಯ ಕೊನೆಗೊಳ್ಳುತ್ತದೆ. ಸಂಬಂಧಿಕರಿಗೆ ನೀಡಿದ ಹಣ ವಾಪಾಸ್‌ ಬರುವ ಸಾಧ್ಯತೆಯಿದೆ. ವ್ಯಾಪಾರಿಗಳು ತಮ್ಮ ಕೆಲಸವನ್ನು ಇತರರಿಗೆ ಬಿಟ್ಟು ಕೊಡುಬಹುದು. ದೂರದ ಬಂಧುಗಳ ಆಗಮನ ಮನಸಿಗೆ ನೆಮ್ಮದಿಯನ್ನು ತರಲಿದೆ.

Horoscope Today 10 November 2023 Zordic Sign
Image Credit to Original Source

ತುಲಾ ರಾಶಿ ದಿನಭವಿಷ್ಯ
ಸಂಗಾತಿಯ ಸಲಹೆಯಿಂದ ವ್ಯವಹಾರ ಕ್ಷೇತ್ರದಲ್ಲಿ ಅಧಿಕ ಲಾಭ. ಯಾವುದೇ ಕಾರಣಕ್ಕೂ ನಿಮ್ಮ ಹುದ್ದೆಯನ್ನು ಬಿಟ್ಟು ಕೊಡಬೇಡಿ. ಇದರಿಂದ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ. ಹಳೆಯ ಸ್ನೇಹಿತರ ಭೇಟಿ ಹೊಸ ಚೈತನ್ಯವನ್ನು ಮೂಡಿಸಿದೆ. ಮಕ್ಕಳ ಜೊತೆಗೆ ಪ್ರವಾಸಕ್ಕೆ ತೆರಳುವ ಸಾಧ್ಯತೆಯಿದೆ.

ವೃಶ್ಚಿಕ ರಾಶಿ ದಿನಭವಿಷ್ಯ
ಹೊಸ ಕೆಲಸ ಕಾರ್ಯಗಳನ್ನು ಮಾಡಲು ಯತ್ನಿಸುವವರಿಗೆ ಇಂದು ಫಲ ದೊರೆಯಲಿದೆ. ಉದ್ಯೋಗ ಕ್ಷೇತ್ರದಲ್ಲಿ ಹಲವು ಅವಮಾನಗಳನ್ನು ಎದುರಿಸಬೇಕಾಗುತ್ತದೆ. ಕುಟುಂಬ ಸದಸ್ಯರು ಮಕ್ಕಳೊಂದಿಗೆ ಶುಭ ಕಾರ್ಯಗಳಲ್ಲಿ ಭಾಗವಹಿಸಲಿದ್ದಾರೆ. ಹೊಸ ಯೋಜನೆಯನ್ನು ಆರಂಭಿಸಲು ಇಂದು ಸಕಾಲ. ದೂರದ ಬಂಧುಗಳ ಆಗಮನದಿಂದ ಸಂತಸ.

ಇದನ್ನೂ ಓದಿ : ಶೂಟಿಂಗ್ ಸೆಟ್ ನಲ್ಲಿ ಪುನೀತ್ ಪುತ್ರಿ: ನಟನೆಗೆ ಎಂಟ್ರಿಕೊಟ್ಟರಾ ವಂದಿತಾ ಪುನೀತ್ ರಾಜ್ ಕುಮಾರ್

ಧನಸ್ಸುರಾಶಿ ದಿನಭವಿಷ್ಯ
ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವಲ್ಲಿ ಅಸಡ್ಡೆ ತೋರುವಿರಿ. ಖರ್ಚು ವೆಚ್ಚಗಳನ್ನು ನಿಯಂತ್ರಿಸುವಲ್ಲಿ ವಿಫಲರಾಗುತ್ತೀರಿ. ಉದ್ಯೋಗಳಿಗೆ ಶುಭ ಸುದ್ದಿಯೊಂದು ಕೇಳಿಬರಲಿದೆ. ಹೊಂದಾಣಿಕೆಯಿಂದ ಕಾರ್ಯಾನುಕೂಲ. ಧಾರ್ಮಿಕ ಕ್ಷೇತ್ರಗಳ ಭೇಟಿಯಿಂದ ಮನಸಿಗೆ ನೆಮ್ಮದಿ ದೊರೆಯಲಿದೆ.

ಮಕರ ರಾಶಿ ದಿನಭವಿಷ್ಯ
ಹೆಚ್ಚಿನ ಜವಾಬ್ದಾರಿ ಇಂದು ನಿಮ್ಮ ಹೆಗಲೇರಲಿದೆ. ಹೊಸ ಅವಕಾಶಗಳು ನಿಮಗೆ ಸಿಗಲಿದೆ. ಪ್ರೀತಿ ಪಾತ್ರರಾಗಿ ನೀವಿಂದು ಉಡುಗೊರೆಯನ್ನು ನೀಡುವಿರಿ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ. ವ್ಯವಹಾರ ಕ್ಷೇತ್ರದಲ್ಲಿ ಚೇತರಿಕೆ ಕಂಡು ಬರಲಿದೆ. ಇದರಿಂದ ಮನಸಿಗೆ ಸಮಾಧಾನವಾಗಲಿದೆ.

ಕುಂಭ ರಾಶಿ ದಿನಭವಿಷ್ಯ
ಸಹೋದರರ ಬೆಂಬಲದಿಂದ ಬಾಕಿ ಉಳಿದ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿದೆ. ಹೊಸ ವ್ಯವಹಾರವನ್ನು ಆರಂಭಿಸಿದ್ರೆ ನೀವು ಉತ್ತಮ ಪ್ರಯೋಜನವನ್ನು ಪಡೆಯಲಿದ್ದೀರಿ. ಮಕ್ಕಳಿಂದ ನೆಮ್ಮದಿ ದೊರೆಯಲಿದೆ. ಮನೆಗೆ ಸಂಜೆಯೆ ವೇಳೆಗೆ ಅನಿರೀಕ್ಷಿತ ಅತಿಥಿಗಳ ಆಗಮನ ಆಗಲಿದೆ.

ಇದನ್ನೂ ಓದಿ : New Pet Alert : ದರ್ಶನ್ ತೂಗುದೀಪ್ ಪತ್ನಿ‌ ವಿಜಯಲಕ್ಷ್ಮೀ ಟಾಂಗ್ ಕೊಟ್ಟಿದ್ದ್ಯಾರಿಗೆ ಗೊತ್ತಾ ?

ಮೀನರಾಶಿ ದಿನಭವಿಷ್ಯ
ನಕಾರಾತ್ಮಕ ಆಲೋಚನೆಗಳನ್ನು ದೂರವಿಡಿ. ಆಗ ಮಾತ್ರ ನೀವು ಯಶಸ್ಸನ್ನು ಕಾಣಲು ಸಾಧ್ಯವಾಗುತ್ತದೆ. ಸಂಗಾತಿಯ ಸಹಕಾರಿದಿಂದ ಎಲ್ಲಾ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಾಣುವಿರಿ. ವಿದೇಶಿ ಕಂಪೆನಿ ಜೊತೆಗಿನ ವ್ಯವಹಾರ ನಿಮಗೆ ಶುಭ ಫಲವನ್ನು ತಂದು ಕೊಡಲಿದೆ. ಪ್ರೀತಿಯ ಜೀವನದಲ್ಲಿ ಹೊಸ ಶಕ್ತಿ ಮೂಡಲಿದೆ. ದೀರ್ಘ ಕಾಲದ ಭಿನ್ನಾಭಿಪ್ರಾಯ ದೂರವಾಗುವ ಸಾಧ್ಯತೆಯಿದೆ.

Horoscope Today 10 November 2023 Zordic Sign

Comments are closed.