ದಿನಭವಿಷ್ಯ 11 ಅಕ್ಟೋಬರ್‌ 2023 : ಶುಭಯೋಗ, ಶುಕ್ಲ ಯೋಗ ಈ ರಾಶಿಯವರಿಗೆ ಶುಭ

Horoscope Today : ಮಾಘ ನಕ್ಷತ್ರ ಹಾಗೂ ಫಲ್ಗುಣಿ ನಕ್ಷತ್ರಗಳು ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಚಂದ್ರನು ಸಿಂಹರಾಶಿಯಲ್ಲಿ ಸಾಗುತ್ತಾನೆ. ಶುಭಯೋಗ, ಶುಕ್ಲ ಯೋಗವು ಹಲವು ರಾಶಿಗಳಿಗೆ ಶುಭವನ್ನು ತರಲಿದೆ.

Horoscope Today : ಇಂದು ಮಾಘ ನಕ್ಷತ್ರ ಹಾಗೂ ಫಲ್ಗುಣಿ ನಕ್ಷತ್ರಗಳು ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಚಂದ್ರನು ಸಿಂಹರಾಶಿಯಲ್ಲಿ ಸಾಗುತ್ತಾನೆ. ಶುಭಯೋಗ, ಶುಕ್ಲ ಯೋಗವು ಹಲವು ರಾಶಿಗಳಿಗೆ ಶುಭವನ್ನು ತರಲಿದೆ. ಮೇಷರಾಶಿಯಿಂದ ಮೀನರಾಶಿಯ ವರೆಗೆ ಒಟ್ಟು 12 ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ ಹೇಗಿದೆ.

ಮೇಷರಾಶಿ ದಿನಭವಿಷ್ಯ
ವ್ಯವಹಾರಸ್ಥರು ವ್ಯವಹಾರ ಕ್ಷೇತ್ರದಲ್ಲಿ ಹಲವು ಬದಲಾವಣೆಗಳನ್ನು ಮಾಡುತ್ತಾರೆ. ರಾಜಕಾರಣಿಗಳಿಗೆ ಶುಭಸುದ್ದಿ ದೊರೆಯಲಿದೆ. ಸಂಗಾತಿಯ ಆರೋಗ್ಯಕ್ಕೆ ಸಂಬಂಧಿಸಿದಂತೆ ಚಿಂತೆ ನಿಮ್ಮನ್ನು ಕಾಡಲಿದೆ. ವ್ಯವಹಾರದಲ್ಲಿ ಲಾಭ ಪಡೆಯಲು ಹೆಚ್ಚು ರಿಸ್ಕ್‌ ಬೇಡ. ದೂರ ಪ್ರಯಾಣ ಶುಭವನ್ನು ತರಲಿದೆ.

ವೃಷಭರಾಶಿ ದಿನಭವಿಷ್ಯ
ಕೆಲಸ ಕಾರ್ಯಗಳನ್ನು ಎಚ್ಚರಿಕೆಯಿಂದ ಮಾಡಿ. ವ್ಯವಹಾರ ಕ್ಷೇತ್ರದಲ್ಲಿ ಶತ್ರುಗಳು ಇಂದು ನಿಮಗೆ ನಷ್ಟವನ್ನು ಉಂಟು ಮಾಡುತ್ತಾರೆ. ವ್ಯವಹಾರ ಒಪ್ಪಂದದಲ್ಲಿ ಯಾವುದೇ ತಪ್ಪುಗಳು ನಡೆಯದಂತೆ ಎಚ್ಚರಿಕೆವಹಿಸಿ. ಯಾವುದೇ ಕಾರ್ಯಗಳಿಗೆ ಇಂದು ಹೆದರದೆ ಮುನ್ನುಗ್ಗಿ.

ಮಿಥುನರಾಶಿ ದಿನಭವಿಷ್ಯ
ಮಕ್ಕಳ ಮದುವೆಗೆ ಸಂಬಂಧಿಸಿದಂತೆ ಸೂಕ್ತ ಸಂಬಂಧ ಕೂಡಿಬರಲಿದೆ. ಶ್ರಮವಹಿಸಿ ಮಾಡಿದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. ಕುಟುಂಬದಲ್ಲಿ ಇಂದು ಸಂತೋಷದ ವಾತಾವರಣ ಕಂಡು ಬರಲಿದೆ. ವಾದ ವಿವಾದಗಳಲ್ಲಿ ಸಂಗಾತಿಯು ನಿಮ್ಮ ಬೆಂಬಲಕ್ಕೆ ನಿಲ್ಲುತ್ತಾರೆ.

ಕರ್ಕಾಟಕರಾಶಿ ದಿನಭವಿಷ್ಯ
ಸ್ನೇಹಿತರೊಂದಿಗೆ ಸಮಯವನ್ನು ಕಳೆಯುವಿರಿ. ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ. ವೈಯಕ್ತಿಕವಾದ ಖರ್ಚು ವೆಚ್ಚಗಳು ನಿಮ್ಮನ್ನು ಇಂದ ಕಂಗೆಡಿಸಲಿದೆ. ನಿಮ್ಮ ಯೋಚನೆಯಂತೆ ಕೆಲಸ ಕಾರ್ಯಗಳನ್ನು ನಿರ್ವಹಿಸಿ ಇದರಿಂದ ಗೆಲುವು ನಿಮ್ಮದಾಗಲಿದೆ.

ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆ : ಇದೇ ಕಾರಣಕ್ಕೆ 9 ಲಕ್ಷ ಜನರಿಗೆ ಸಿಗಲ್ಲ ಗೃಹಲಕ್ಷ್ಮೀ ಮೊದಲ ಕಂತಿನ ಹಣ

ಸಿಂಹರಾಶಿ ದಿನಭವಿಷ್ಯ
ನಿಮ್ಮ ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ. ಕುಟುಂಬ ಸದಸ್ಯರ ಜೊತೆಗೆ ಇಂದು ಸಮಯವನ್ನು ಕಳೆಯುವುರಿ. ಮಕ್ಕಳ ಆರೋಗ್ಯದ ಬಗ್ಗೆ ಗಮನಹರಿಸಿ. ನೀವು ನಿರೀಕ್ಷಿಸುತ್ತಿದ್ದ ಅಮೂಲ್ಯ ವಸ್ತುವೊಂದು ನಿಮ್ಮ ಕೈ ಸೇರಲಿದೆ. ಇದು ನಿಮ್ಮ ಖ್ಯಾತಿಯನ್ನು ವೃದ್ದಿಸುತ್ತದೆ.

Horoscope Today 11 October 2023 Zordic Sign
Image Credit to Original Source

ಕನ್ಯಾರಾಶಿ ದಿನಭವಿಷ್ಯ
ವ್ಯವಹಾರಿಕವಾಗಿ ಸಿಲುಕಿಕೊಂಡಿರುವ ಹಣವು ಇಂದು ನಿಮ್ಮ ಕೈ ಸೇರಲಿದೆ. ವಿರೋಧಿಗಳ ಟೀಕೆಯನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬೇಡಿ. ಅತಿಥಿಗಳ ಆಗಮನಕ್ಕಾಗಿ ಹಣವನ್ನು ವ್ಯಯಿಸಬೇಕಾಗುತ್ತದೆ. ಸಾಲ ಮರುಪಾವತಿಯಿಂದ ಮಾನಸಿಕ ನೆಮ್ಮದಿ.

ತುಲಾರಾಶಿ ದಿನಭವಿಷ್ಯ
ಆರೋಗ್ಯದ ಬಗ್ಗೆ ಜಾಗೃತೆವಹಿಸಿ. ಇತರರ ಸಲಹೆಯಿಂದ ಕೆಲಸ ಕಾರ್ಯಗಳನ್ನು ಮಾಡುವುದರಿಂದ ಯಶಸ್ಸು ದೊರೆಯುತ್ತದೆ. ಅಧಿಕಾರಿಗಳಿಗೆ ಭಡ್ತಿ ದೊರೆಯಲಿದೆ. ಅಲ್ಲದೇ ಇತರರ ಬೆಂಬಲವನ್ನು ನೀವು ಪಡೆಯಲಿದ್ದೀರಿ. ಸರಕಾರಿ ನೌಕರರಿಗೆ ಭಡ್ತಿ ದೊರೆಯುತ್ತದೆ. ಸಂಗಾತಿಯೊಂದಿಗೆ ಸುಂದರ ಕ್ಷಣಗಳನ್ನು ಕಳೆಯಲಿದ್ದಾರೆ.

ಇದನ್ನೂ ಓದಿ : ಖ್ಯಾತ ಗಾಯಕ ಡಾ.ವಿದ್ಯಾಭೂಷಣರಿಗೆ ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರಧಾನ

ವೃಶ್ಚಿಕರಾಶಿ ದಿನಭವಿಷ್ಯ
ಕುಟುಂಬಲ್ಲಿ ಶುಭ ಕಾರ್ಯದ ಕುರಿತು ಮಾತುಕತೆ ನಡೆಯಲಿದೆ. ಹಿರಿಯ ಸಲಹೆಯಂತೆ ಕೆಲಸ ಕಾರ್ಯಗಳನ್ನು ಮಾಡುವುದರಿಂದ ಯಶಸ್ಸು ದೊರೆಯಲಿದೆ. ಸಹೋದರಿಯ ನಡುವಿನ ಕಲಹ ಕೊನೆಗೊಳ್ಳಲಿದೆ. ಮನೆಯಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಲಿದೆ.

ಧನಸ್ಸುರಾಶಿ ದಿನಭವಿಷ್ಯ
ವ್ಯವಹಾರಗಳ ವಿಚಾರವಾಗಿ ಇಂದು ಚಿಂತೆ ನಿಮ್ಮನ್ನು ಕಾಡಲಿದೆ. ಪ್ರೀತಿಯ ಜೀವನದಲ್ಲಿ ಸಂಗಾತಿಯ ವಿಚಾರದಲ್ಲಿ ಶುಭ ಸುದ್ದಿಯೊಂದು ದೊರೆಯಲಿದೆ. ಸಂಬಂಧಿಕ ಮನೆಗೆ ಭೇಟಿ ನೀಡುವುದರಿಂದ ಹೆಚ್ಚು ಲಾಭದಾಯಕ. ಸಹೋದರಿಯ ಸಹಕಾರಿಂದ ವ್ಯವಹಾರದಲ್ಲಿ ಯಶಸ್ಸು ನಿಮ್ಮದಾಗಲಿದೆ.

ಮಕರರಾಶಿ ದಿನಭವಿಷ್ಯ
ಸ್ನೇಹಿತರೊಂದಿಗೆ ದಿನ ಕಳೆಯುವಿರಿ. ವ್ಯವಹಾರಿಕೆವಾಗಿ ಹೆಚ್ಚು ಲಾಭದಾಯಕವಾಗಿ ಇರುತ್ತದೆ. ಕುಟುಂಬ ಸದಸ್ಯರ ಇಷ್ಟಾರ್ಥಗಳನ್ನು ಈಡೇರಿಸುವಿರಿ. ಪ್ರಮುಖ ಕಾರ್ಯಗಳಲ್ಲಿ ಗೆಲುವು ನಿಮ್ಮದಾಗಲಿದೆ. ಇದರಿಂದ ಮನಸಿಗೆ ಸಂತಸವಾಗಲಿದೆ.

ಇದನ್ನೂ ಓದಿ : ವಿಶ್ವಕಪ್‌ ಭಾರತ Vs ಪಾಕಿಸ್ತಾನ ಪಂದ್ಯ: ಕೇಸರಿ ಜರ್ಸಿಯಲ್ಲಿ ಕಣಕ್ಕಿಳಿಯುತ್ತಾ ಭಾರತ, ಬಿಸಿಸಿಐ ಹೇಳಿದ್ದೇನು ?

ಕುಂಭರಾಶಿ ದಿನಭವಿಷ್ಯ
ಮಕ್ಕಳ ಜೊತೆಗೆ ಸಮಯ ಕಳೆಯುವಿರಿ. ಭವಿಷ್ಯದ ದೃಷ್ಟಿಯಿಂದ ಹೊಸ ವ್ಯವಹಾರದಲ್ಲಿ ಹೂಡಿಕೆ ಮಾಡುವುದು ಉತ್ತಮ. ಸಂಗಾತಿಯೊಂದಿಗಿನ ವಿವಾದಗಳು ಇಂದೇ ಕೊನೆಯಾಗಲಿದೆ. ಪೋಷಕರ ಆಶೀರ್ವಾದದಿಂದ ಎಲ್ಲಾ ಕಾರ್ಯಗಳಲ್ಲಿಯೂ ಗೆಲುವು ನಿಮ್ಮದಾಗಲಿದೆ.

ಮೀನರಾಶಿ ದಿನಭವಿಷ್ಯ
ಪ್ರೀತಿಯ ಜೀವನದಲ್ಲಿ ಸಂಗಾತಿಯ ಬಗ್ಗೆ ಜಾಗರೂಕರಾಗಿ ಇರಬೇಕು. ತಲೆ ನೋವು, ಆಯಾಸ ನಿಮ್ಮನ್ನು ಕಂಗೆಡಿಸಲಿದೆ. ಮಗುವಿನ ವಿಚಾರದಲ್ಲಿ ನಿಮಗೆ ಸಂತಸದ ಸುದ್ದಿಯೊಂದನ್ನು ಕೇಳುವಿರಿ. ಆತಂಕದಿಂದ ಬಳಲುತ್ತಿದ್ದರೆ ಇಂದು ಭಯ ದೂರವಾಗಲಿದೆ. ರಾತ್ರಿಯ ವೇಳೆಗೆ ಮನೆಗೆ ಅತಿಥಿಗಳ ಆಗಮನವಾಗಲಿದೆ.

Horoscope Today 11 October 2023 Zordic Sign

Comments are closed.