ಭಾರತ- ಪಾಕಿಸ್ತಾನ ಪಂದ್ಯಕ್ಕೂ ಮುನ್ನ ಗುಡ್‌ನ್ಯೂಸ್ : ಅಹಮದಾಬಾದ್‌ನಲ್ಲಿ ನೆಟ್‌ ಫ್ರ್ಯಾಕ್ಟಿಸ್‌ ನಡೆಸಿದ ಶುಭಮನ್‌ ಗಿಲ್‌

ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ದದ ಪಂದ್ಯಕ್ಕೂ ಮುನ್ನ ಭಾರತ ಕ್ರಿಕೆಟ್‌ ತಂಡಕ್ಕೆ ಗುಡ್‌ನ್ಯೂಸ್‌ ಸಿಕ್ಕಿದೆ. ಡೆಂಗ್ಯೂದಿಂದ ಬಳಲುತ್ತಿರುವ ಶುಭಮನ್‌ ಗಿಲ್‌ (Shubman Gill Net Practice) ಅಭ್ಯಾಸ ನಡೆಸಿದ್ದಾರೆ.

ಅಹಮದಾಬಾದ್‌ : ವಿಶ್ವಕಪ್‌ನಲ್ಲಿ (World Cup 2023 ODI) ಭಾರತ ಹಾಗೂ ಪಾಕಿಸ್ತಾನ (India vs Pakistan) ವಿರುದ್ದದ ಪಂದ್ಯಕ್ಕೆ ವಿಶ್ವವೇ ಕಾತರವಾಗಿದೆ. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ದದ ಪಂದ್ಯಕ್ಕೂ ಮುನ್ನ ಭಾರತ ಕ್ರಿಕೆಟ್‌ ತಂಡಕ್ಕೆ ಗುಡ್‌ನ್ಯೂಸ್‌ ಸಿಕ್ಕಿದೆ. ಡೆಂಗ್ಯೂದಿಂದ ಬಳಲುತ್ತಿರುವ ಶುಭಮನ್‌ ಗಿಲ್‌ (Shubman Gill Net Practice) ಅಭ್ಯಾಸ ನಡೆಸಿದ್ದಾರೆ.

ಅಕ್ಟೋಬರ್‌ 14 ರಂದು ಅಹಮದಾಬಾದನ ನರೇಂದ್ರ ಮೋದಿ ಕ್ರೀಡಾಂಗಣ (Narendra Modi Stadium) ದಲ್ಲಿ ಭಾರತದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡದ ವಿರುದ್ದ ಸೆಣೆಸಾಡಲಿದೆ. ಬದ್ದವೈರಿಗಳ ಕಾದಾಟ ಕುತೂಹಲ ಮೂಡಿಸಿದೆ. ಡೆಂಗ್ಯೂ ಜ್ವರದಿಂದ ಬಳಲುತ್ತಿರುವ ಶುಭಮನ್‌ ಗಿಲ್‌ ಪಂದ್ಯದಲ್ಲಿ ಆಡುವ ಸುಳಿವು ಸಿಕ್ಕಿದೆ.

India vs Pakistan World Cup 2023 Shubman Gill net practice in Ahmedabad
Image Credit to Original Source

ಕಳೆದ ಕೆಲವು ದಿನಗಳಿಂದಲೂ ಡೆಂಗ್ಯೂ ಜ್ವರದಿಂದ ಬಳಲುತ್ತಿರುವ ಶುಭಮನ್‌ ಗಿಲ್‌ ಚೆನ್ನೈನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ದದ ಪಂದ್ಯದ ವೇಳೆಯಲ್ಲಿ ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೀಗ ಅವರು ಚೇತರಿಕೆ ಕಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದು, ಇಂದು ಅಹಮದಾಬಾದ್ ಗೆ ಪ್ರಯಾಣ ಬೆಳೆಸಿದ್ದರು.

ಇದನ್ನೂ ಓದಿ : ವಿಶ್ವಕಪ್‌ ಭಾರತ Vs ಪಾಕಿಸ್ತಾನ ಪಂದ್ಯ: ಕೇಸರಿ ಜರ್ಸಿಯಲ್ಲಿ ಕಣಕ್ಕಿಳಿಯುತ್ತಾ ಭಾರತ, ಬಿಸಿಸಿಐ ಹೇಳಿದ್ದೇನು ?

ಇದೀಗ ಭಾರತೀಯ ಅಭಿಮಾನಿಗಳಿಗೆ ಶುಭಮನ್‌ ಗಿಲ್‌ ಗುಡ್‌ನ್ಯೂಸ್‌ ಕೊಟ್ಟಿದ್ದಾರೆ. ಟೀಂ ಇಂಡಿಯಾದ ಆರಂಭಿಕ ಆಟಗಾರ ಶುಭಮನ್‌ ಗಿಲ್‌ ಇಂದು ಅಹಮದಾಬಾದ್‌ನಲ್ಲಿ ನೆಟ್ಸ್‌ ಪ್ರಾಕ್ಟಿಸ್‌ ನಡೆಸಿದ್ದಾರೆ. ಇಂದು ವಿಮಾನ ನಿಲ್ದಾಣದಿಂದ ಶುಭಮನ್‌ ಗಿಲ್‌ ತೆರಳುತ್ತಿದ್ದ ಪೋಟೋ ಸಾಕಷ್ಟು ವೈರಲ್‌ ಆಗಿತ್ತು.

ಅಫ್ಘಾನಿಸ್ತಾನ ವಿರುದ್ದದ ಪಂದ್ಯಕ್ಕೂ ಮೊದಲು ಸುದ್ದಿಗೋಷ್ಠಿ ನಡೆಸಿದ ಭಾರತ ತಂಡ ಬ್ಯಾಟಿಂಗ್‌ ಕೋಚ್‌ ವಿಕ್ರಮ್ ರಾಥೋರ್ ಶುಭಮನ್‌ ಗಿಲ್‌ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲದೇ ಅವರು ಚೇತರಿಸಿ ಕೊಳ್ಳುತ್ತಿದ್ದಾರೆ. ಅವರಿಗೆ ಬಿಸಿಸಿಐ ತಜ್ಞ ವೈದ್ಯರ ತಂಡ ನಿಗಾ ಇರಿಸಿದೆ. ಅವರು ಶೀಘ್ರದಲ್ಲಿಯೇ ಚೇತರಿಸಿಕೊಳ್ಳುತ್ತಾರೆ ಎಂದು ಹೇಳಿದ್ದರು.

ಇದನ್ನೂ ಓದಿ : ಭಾರತ – ಪಾಕಿಸ್ತಾನ ಪಂದ್ಯಕ್ಕೆ ಶುಭಮನ್‌ ಗಿಲ್‌ : ಆರೋಗ್ಯದ ಬಗ್ಗೆ ಸಿಕ್ತು ಬಿಗ್‌ ಅಪ್ಡೇಟ್ಸ್‌

ಇನ್ನೊಂದೆಡೆಯಲ್ಲಿ ಡೆಂಗ್ಯೂ ಜ್ವರದಿಂದ ಶುಭಮನ್‌ ಗಿಲ್‌ ವಿಶ್ವಕಪ್‌ನಿಂದ ಸಂಪೂರ್ಣವಾಗಿ ಹೊರಗೆ ಬೀಳಲಿದ್ದಾರೆ. ಅವರ ಸ್ಥಾನದಲ್ಲಿ ಸಂಜು ಸ್ಯಾಮ್ಸನ್‌, ರುತುರಾಜ್‌ ಗಾಯಕ್ವಾಡ್‌ ಅಥವಾ ಯಶಸ್ವಿ ಜೈಸ್ವಾಲ್‌ ತಂಡಕ್ಕೆ ಆಯ್ಕೆಯಾಗಲಿದ್ದಾರೆ ಎನ್ನಲಾಗುತ್ತಿತ್ತು. ಆದ್ರೀಗ ಶುಭಮನ್‌ ಗಿಲ್‌ ಚೇತರಿಕೆ ಭಾರತಕ್ಕೆ ಸಂತಸ ತಂದಿದೆ.

India vs Pakistan World Cup 2023 Shubman Gill net practice in Ahmedabad
Image Credit to Original Source

ಆಸ್ಟ್ರೇಲಿಯಾ ವಿರುದ್ದ ಸರಣಿಯಲ್ಲಿ ಕೊನೆಯ ಏಕದಿನ ಪಂದ್ಯವನ್ನು ಶುಭಮನ್‌ ಗಿಲ್‌ ಮಿಸ್‌ ಮಾಡಿಕೊಂಡಿದ್ದರು. ಅಲ್ಲದೇ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಹಾಗೂ ಅಪ್ಘಾನಿಸ್ತಾನ ವಿರುದ್ದದ ಪಂದ್ಯಗಳನ್ನು ಅವರು ತಪ್ಪಿಸಿಕೊಂಡಿದ್ದಾರೆ. ಇದೀಗ ಪಾಕಿಸ್ತಾನ ವಿರುದ್ದದ ಪಂದ್ಯದಲ್ಲಿ ಗಿಲ್‌ ಆಡುವ ಸಾಧ್ಯತೆಯಿದೆ.

ಇದನ್ನೂ ಓದಿ : ರೋಹಿತ್‌ ಶರ್ಮಾ ಭರ್ಜರಿ ಶತಕ : ಒಂದೇ ಪಂದ್ಯದಲ್ಲಿ 2 ವಿಶ್ವದಾಖಲೆ ಬರೆದ ಟೀಂ ಇಂಡಿಯಾ ನಾಯಕ

ಭಾರತ ತಂಡದಲ್ಲಿ ಮೊದಲ ಎರಡು ಪಂದ್ಯಗಳಲ್ಲಿ ಕೇವಲ ಆರ್‌.ಅಶ್ವಿನ್‌ ಬದಲು ಶಾರ್ದೂಲ್‌ ಠಾಕೂರ್‌ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಆದರೆ ಪಾಕಿಸ್ತಾನ ವಿರುದ್ದದ ಪಂದ್ಯದಲ್ಲಿ ಬದಲಾವಣೆಯನ್ನು ನಿರೀಕ್ಷಿಸಲಾಗುತ್ತಿದೆ. ಅದ್ರಲ್ಲೂ ಶುಭಮನ್‌ ಗಿಲ್‌ ಫಿಟ್ನೆಸ್‌ ಸಾಭೀತಾದ್ರೆ ಆರಂಭಿಕರಾಗಿ ಕಣಕ್ಕೆ ಇಳಿಯುವ ಸಾಧ್ಯತೆಯಿದೆ.

ಇಂದು ಅಹಮದಾಬಾದ್‌ ನಲ್ಲಿ ಅಭ್ಯಾಸ ನಡೆಸಿದ್ದರು ಕೂಡ ಶುಭಮನ್ ಗಿಲ್‌ ಪಾಕಿಸ್ತಾನದ ವಿರುದ್ದ ಆಡುವ ಬಗ್ಗೆ ಇನ್ನೂ ಖಚಿತತೆ ಸಿಕ್ಕಿಲ್ಲ. ಬಿಸಿಸಿಐ ವೈದ್ಯರ ತಂಡ ಶುಭಮನ್‌ ಗಿಲ್‌ ಅವರ ಆರೋಗ್ಯ ತಪಾಸಣೆಯಲ್ಲಿ ನಿರತವಾಗಿದೆ. ಸದ್ಯಕ್ಕೆ ಬೇರೆ ಯಾವುದೇ ಬದಲಾವಣೆ ಅಸಾಧ್ಯ ಎನ್ನಲಾಗುತ್ತಿದೆ.

ಇನ್ನು ಭಾರತ ವಿರುದ್ದದ ಪಂದ್ಯಕ್ಕೆ ಪಾಕಿಸ್ತಾನ ತಂಡದಲ್ಲಿ ಹಲವು ಬದಲಾವಣೆಯನ್ನು ನಿರೀಕ್ಷೆ ಮಾಡಲಾಗುತ್ತಿದೆ. ಈಗಾಗಲೇ ಫಖರ್‌ ಜಮಾನ್‌ ಹಾಗೂ ಇಮಾಮ್‌ ಉಲ್‌ ಹಕ್‌ ವೈಫಲ್ಯದ ನಡುವೆ ಫಖರ್‌ ಜಮಾನ್‌ ಅವರನ್ನು ಶ್ರೀಲಂಕಾ ವಿರುದ್ದದ ಪಂದ್ಯಕ್ಕೆ ಕೈಬಿಡಲಾಗಿತ್ತು.

India vs Pakistan World Cup 2023 Shubman Gill net practice in Ahmedabad
Image Credit to Original Source

ಅವರ ಬದಲು ಅಬ್ದುಲ್ಲಾ ಶಫೀಕ್‌ ಅವರನ್ನು ಸೇರ್ಪಡೆಗೊಳಿಸಲಾಗಿದೆ. ಆದರೆ ಭಾರತ ವಿರುದ್ದ ಫಖರ್‌ ಜಮಾನ್‌ ಉತ್ತಮ ದಾಖಲೆಯನ್ನು ಹೊಂದಿದ್ದು, ಅವರನ್ನು ಆರಂಭಿಕರಾಗಿ ಕಾಣಕ್ಕೆ ಇಳಿಸಲು ಯೋಜನೆ ರೂಪಿಸಲಾಗುತ್ತಿದೆ.

ಇನ್ನು ಎಡಗೈ ಸ್ಪಿನ್ನರ್‌, ಆಲ್‌ರೌಂಡರ್‌ ಮೊಹಮ್ಮದ್‌ ನವಾಜ್‌ ಅವರನ್ನು ತಂಡದಿಂದ ಕೈ ಬಿಡುವ ಸಾಧ್ಯತೆಯಿದೆ. ಹೀಗಾಗಿ ಮೊಹಮ್ಮದ್‌ ವಾಸಿಂ ಅಥವಾ ಲೆಗ್‌ ಸ್ಪಿನ್ನರ್‌ ಉಸಾಮಾ ಮಿರ್‌ ಅವರನ್ನು ಆಡುವ ಬಳಗಕ್ಕೆ ಸೇರ್ಪಡೆಗೊಳಿಸುವ ಸಾಧ್ಯತೆಯಿದೆ.

India vs Pakistan World Cup 2023 Shubman Gill net practice in Ahmedabad

Comments are closed.