ದಿನಭವಿಷ್ಯ 16 ಡಿಸೆಂಬರ್‌ 2023 : ಶ್ರವಣ ನಕ್ಷತ್ರ ಪ್ರಭಾವ ಈ 3 ರಾಶಿಯವರಿಗೆ ಬಾರೀ ಅದೃಷ್ಟ

Horoscope Today  : ದಿನಭವಿಷ್ಯ 16 ಡಿಸೆಂಬರ್‌ 2023 ಶನಿವಾರ. ಇಂದು ದ್ವಾದಶರಾಶಿಗಳ ಮೇಲೆ ಶ್ರವಣ ನಕ್ಷತ್ರದ ಪ್ರಭಾವ ಇರುತ್ತದೆ. ಧನಸ್ಸುರಾಶಿಗೆ ಸೂರ್ಯನು ಇಂದು ಮಕರರಾಶಿಯಿಂದ ಸಂಚಾರ ಮಾಡುತ್ತಾನೆ. ಸಿಂಹರಾಶಿ, ಮೀನರಾಶಿ ಸೇರಿದಂತೆ ಹಲವು ರಾಶಿಯವರು ಇಂದು ವಿಶೇಷ ಫಲಗಳನ್ನು ಪಡೆಯಲಿದ್ದಾರೆ.

Horoscope Today  : ದಿನಭವಿಷ್ಯ 16 ಡಿಸೆಂಬರ್‌ 2023 ಶನಿವಾರ. ಇಂದು ದ್ವಾದಶರಾಶಿಗಳ ಮೇಲೆ ಶ್ರವಣ ನಕ್ಷತ್ರದ ಪ್ರಭಾವ ಇರುತ್ತದೆ. ಧನಸ್ಸುರಾಶಿಗೆ ಸೂರ್ಯನು ಇಂದು ಮಕರರಾಶಿಯಿಂದ ಸಂಚಾರ ಮಾಡುತ್ತಾನೆ. ಸಿಂಹರಾಶಿ, ಮೀನರಾಶಿ ಸೇರಿದಂತೆ ಹಲವು ರಾಶಿಯವರು ಇಂದು ವಿಶೇಷ ಫಲಗಳನ್ನು ಪಡೆಯಲಿದ್ದಾರೆ. ಮೇಷರಾಶಿಯಿಂದ ಮೀನರಾಶಿಯ ವರೆಗೆ ಒಟ್ಟು 12 ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ ಹೇಗಿದೆ.

ಮೇಷರಾಶಿ ದಿನಭವಿಷ್ಯ
ನಿಮ್ಮ ಪಾಲಿಗೆ ಇಂದು ವಿಶೇಷವಾದ ದಿನ. ಇಷ್ಟು ದಿನಗಳ ಸಂಕಷ್ಟಕ್ಕೆ ಮುಕ್ತಿ ದೊರೆಯಲಿದೆ. ಭವಿಷ್ಯದಲ್ಲಿ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಸಂಬಂಧಿಕರಿಂದ ನಿಮಗೆ ಹಣಕಾಸಿನ ನೆರವು ದೊರೆಯಲಿದೆ. ಆರೋಗ್ಯದ ವಿಚಾರದಲ್ಲಿ ವಿಶೇಷವಾದ ಕಾಳಜಿಯನ್ನು ವಹಿಸುವಿರಿ.

ವೃಷಭರಾಶಿ ದಿನಭವಿಷ್ಯ
ಶುಭ ಸುದ್ದಿಗಳನ್ನು ಕೇಳುವಿರಿ. ಮಕ್ಕಳ ವಿಚಾರದಲ್ಲಿ ನೆಮ್ಮದಿ. ಅಗತ್ಯಕ್ಕಿಂತ ಖರ್ಚು ಅಧಿಕವಾದ್ರೆ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ. ವೆಚ್ಚಗಳು ಹೆಚ್ಚಳವಾಗುವುದರಿಂದ ಮನಸಿಗೆ ಚಿಂತೆ ಕಾಡಲಿದೆ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಅಗತ್ಯ.

ಮಿಥುನರಾಶಿ ದಿನಭವಿಷ್ಯ
ವ್ಯವಹಾರದಲ್ಲಿ ಹೂಡಿಕೆ ಮಾಡುವ ಮೊದಲು ಸಾಕಷ್ಟು ಯೋಚಿಸಿ. ಆರ್ಥಿಕವಾಗಿ ನಷ್ಟವನ್ನು ಅನುಭವಿಸುವ ಸಾಧ್ಯತೆಯಿದೆ. ಆರೋಗ್ಯದ ವಿಚಾರದಲ್ಲಿ ನೀವು ಚಿಂತಿತರಾಗುವ ಸಾಧ್ಯತೆಯಿದೆ. ವಿದೇಶದಲ್ಲಿರುವ ಕುಟುಂಬಸ್ಥರಿಂದ ಶುಭ ಸುದ್ದಿಯನ್ನು ಕೇಳುವಿರಿ.

ಕರ್ಕಾಟಕರಾಶಿ ದಿನಭವಿಷ್ಯ
ಅವಿವಾಹಿತರಿಗೆ ಯೋಗ್ಯ ಸಂಬಂಧಗಳು ಕೂಡಿಬರಲಿದೆ. ಹಣವನ್ನು ನೀವು ಕಳೆದುಕೊಳ್ಳಬೇಕಾಗುತ್ತದೆ. ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ. ಸಂಗಾತಿಯೊಂದಿಗೆ ಪ್ರವಾಸಕ್ಕೆ ತೆರಳುವ ಸಾಧ್ಯತೆಯಿದೆ. ಹೊಂದಾಣಿಕೆಯಿಂದ ಕಾರ್ಯಾನುಕೂಲ.

ಇದನ್ನೂ ಓದಿ : ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾದವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಅವಕಾಶ : 3000 ಹುದ್ದೆಗಳಿಗೆ ಅರ್ಜಿ ಆಹ್ವಾನ

ಸಿಂಹರಾಶಿ ದಿನಭವಿಷ್ಯ
ಉದ್ಯೋಗವನ್ನು ಹುಡುಕುತ್ತಿರುವವರು ಶುಭ ಸುದ್ದಿಯನ್ನು ಕೇಳುವಿರಿ. ಸಾಲ ಪಡೆಯುವ ಯೋಚನೆಯಿದ್ದರೆ ಯಾವುದೇ ಕಾರಣಕ್ಕೂ ಸಾಲವನ್ನು ಮಾಡಬೇಡಿ. ಯಾಕೆಂದರೆ ಅದರ ಮರುಪಾವತಿ ಕಷ್ಟಸಾಧ್ಯ. ಆರೋಗ್ಯದ ವಿಚಾರದಲ್ಲಿ ಚೇತರಿಕೆ ಕಂಡು ಬರಲಿದೆ.

ಕನ್ಯಾರಾಶಿ ದಿನಭವಿಷ್ಯ
ಕುಟುಂಬದಲ್ಲಿ ಶುಭ ಕಾರ್ಯದ ಬಗ್ಗೆ ಚರ್ಚೆ ನಡೆಯಲಿದೆ. ಸಹೋದ್ಯೋಗಿಗಳ ಬೆಂಬಲ ದೊರೆಯಲಿದೆ. ಶತ್ರುಗಳ ಬಗ್ಗೆ ನೀವು ಎಚ್ಚರವಾಗಿ ಇರುವುದು ಒಳಿತು. ಉದ್ಯೋಗದ ಸ್ಥಳದಲ್ಲಿ ಸಹೋದ್ಯೋಗಿಗಳಿಂದ ತೊಂದರೆ ಅನುಭವಿಸುವಿರಿ. ಹೊಂದಾಣಿಕರಯಿಂದ ಕಾರ್ಯಾನುಕೂಲ.

Horoscope Today 16 December 2023 Zodiac Sign 
Image Credit to Original Source

ತುಲಾರಾಶಿ ದಿನಭವಿಷ್ಯ
ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುವಿರಿ. ವೈದ್ಯಕೀಯ ಸಲಹೆಯನ್ನು ಪಡೆಯುವಿರಿ. ಉದ್ಯೋಗಿಗಳು ಮೇಲಾಧಿಕಾರಿಗಳ ಜೊತೆಗೆ ಯಾವುದೇ ಕಾರಣಕ್ಕೂ ವಾಗ್ವಾದಕ್ಕೆ ಇಳಿಯಬೇಡಿ. ಇದು ನಿಮ್ಮ ಭವಿಷ್ಯದಲ್ಲಿ ನಿಮಗೆ ತೊಂದರೆಯನ್ನು ನೀಡುತ್ತದೆ. ರೋಮ್ಯಾಂಟಿಕ್‌ ನೆನಪುಗಳು ನಿಮ್ಮನ್ನು ಕಾಡಲಿದೆ.

ಇದನ್ನೂ ಓದಿ : Redmi Note 13 5G : ಅತ್ಯಂತ ಕಡಿಮೆ ಬೆಲೆ ಭಾರತದ ಮಾರುಕಟ್ಟೆಗೆ ಎಂಟ್ರಿಯಾಗಲಿದೆ ರೆಡ್ ಮೀ ನೋಟ್‌ 13 5ಜಿ ಮೊಬೈಲ್‌, ಏನಿದರ ವಿಶೇಷತೆ ?

ವೃಶ್ಚಿಕರಾಶಿ ದಿನಭವಿಷ್ಯ
ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಹಣಕಾಸಿನ ತೊಂದರೆ ಉಂಟಾಗಲಿದೆ. ಸಣ್ಣ ವ್ಯಾಪಾರಿಗಳು ಇಂದು ನಿರೀಕ್ಷಿತ ಲಾಭವನ್ನು ಪಡೆಯುತ್ತಾರೆ. ಹಳೆಯ ನೆನಪುಗಳು ನಿಮ್ಮನ್ನು ಕಾಡುತ್ತದೆ. ಭವಿಷ್ಯದ ಯೋಜನೆಯ ಕುರಿತು ಮನೆಯಲ್ಲಿ ನೀವು ಇಂದು ಚರ್ಚೆ ನಡೆಸುವ ಸಾಧ್ಯತೆಯಿದೆ.

ಧನಸ್ಸುರಾಶಿ ದಿನಭವಿಷ್ಯ
ಯಾರ ಜೊತೆಗೆ ಮಾತನಾಡುವ ವೇಳೆಯಲ್ಲಿ ಬಹಳ ಎಚ್ಚರಿಕೆಯನ್ನು ವಹಿಸಿ. ಸಂಬಂಧಿಕರಿಂದ ಇಂದು ಆರ್ಥಿಕ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ಬಾಳ ಸಂಗಾತಿಗಾಗಿ ಇಂದು ವಿಶೇಷವಾಗಿರುವ ಉಡುಗೊರೆಯೊಂದನ್ನು ನೀವು ಖರೀದಿ ಮಾಡುವ ಸಾಧ್ಯತೆಯಿದೆ. ಆದಾಯ, ಖರ್ಚುಗಳನ್ನು ಲೆಕ್ಕ ಹಾಕಲು ಮರೆಯದಿರಿ.

ಮಕರರಾಶಿ ದಿನಭವಿಷ್ಯ
ಮಕ್ಕಳ ವಿಚಾರದಲ್ಲಿ ನೀವಿಂದು ಸಕಾರಾತ್ಮಕ ಸುದ್ದಿಯೊಂದನ್ನು ಕೇಳುವಿರಿ. ಪ್ರೇಮಿಗಳ ಜೀವನದಲ್ಲಿ ಇಂದು ಧನಾತ್ಮಕವಾದ ಫಲಿತಾಂಶ ದೊರೆಯಲಿದೆ. ಪ್ರೇಮಿಗಳ ನಡುವೆ ಪ್ರೀತಿ, ಹೊಂದಾಣಿಕೆ ಮೂಡಲಿದೆ. ಕುಟುಂಬದವರ ಜೊತೆಗೆ ಪ್ರವಾಸಕ್ಕೆ ತೆರಳುವ ಸಾಧ್ಯತೆಯಿದೆ.

ಇದನ್ನೂ ಓದಿ : ಅಯ್ಯಪ್ಪ ಭಕ್ತರಿಗೆ ಗುಡ್‌ನ್ಯೂಸ್‌ : ಶಬರಿಮಲೆಯಲ್ಲಿ ದೇವರ ದರ್ಶನ ಅವಧಿ 1 ಗಂಟೆ ಹೆಚ್ಚಳ, ನೂಕುನುಗ್ಗಲು ನಿಯಂತ್ರಣ

ಕುಂಭರಾಶಿ ದಿನಭವಿಷ್ಯ
ಹಳೆಯ ಸ್ನೇಹಿತರನ್ನು ಇಂದು ಭೇಟಿ ಮಾಡುವಿರಿ. ಸರಕಾರಿ ಕೆಲಸ ಮಾಡುವವರಿಗೆ ಭಡ್ತಿ ಸಾಧ್ಯತೆಯಿದೆ. ಕೆಲಸ ಕಾರ್ಯಗಳಲ್ಲಿ ಇಂದು ಮಿಶ್ರ ಫಲಿತಾಂಶವನ್ನು ಪಡೆಯುತ್ತೀರಿ. ನಿಮ್ಮ ಬಹು ದಿನದ ಕನಸು ಇಂದು ನನಸಾಗುವ ಸಾಧ್ಯತೆಯಿದೆ. ಶತ್ರುಗಳ ಬಗ್ಗೆ ಕಾಳಜಿಯನ್ನು ವಹಿಸಿ.

ಮೀನರಾಶಿ ದಿನಭವಿಷ್ಯ
ವ್ಯಾಪಾರಿಗಳು ಇಂದು ಶುಭ ಸುದ್ದಿಯೊಂದನ್ನು ಕೇಳುತ್ತಾರೆ. ಸಂಗಾತಿಯ ಜೊತೆಗೆ ಇರುವ ಭಿನ್ನಾಭಿಪ್ರಾಯಗಳು ಬಗೆ ಹರಿಯಲಿದೆ. ಮಕ್ಕಳ ಭವಿಷ್ಯದ ಯೋಜನೆಗಾಗಿ ಚಿಂತೆ ಮಾಡುವಿರಿ. ಬಾಕಿ ಇರುವವ ಕೆಲಸ ಕಾರ್ಯಗಳು ಇಂದು ಪೂರ್ಣಗೊಳ್ಳಲಿದೆ. ದೂರ ಪ್ರಯಾಣದಿಂದ ಆರ್ಥಿಕ ಲಾಭ.

Horoscope Today 16 December 2023 Zodiac Sign 

Comments are closed.