ಅಯ್ಯಪ್ಪ ಭಕ್ತರಿಗೆ ಗುಡ್‌ನ್ಯೂಸ್‌ : ಶಬರಿಮಲೆಯಲ್ಲಿ ದೇವರ ದರ್ಶನ ಅವಧಿ 1 ಗಂಟೆ ಹೆಚ್ಚಳ, ನೂಕುನುಗ್ಗಲು ನಿಯಂತ್ರಣ

Sabarimala Ayyappa Temple  :  ವಾರ್ಷಿಕ ಮಂಡಲಂ ಯಾತ್ರೆಯ ಸಂದರ್ಭದಲ್ಲಿ ಭಾರತದ ಪ್ರಮುಖ ಪುಣ್ಯಕ್ಷೇತ್ರ ಶಬರಿಮಲೆಯ ಅಯ್ಯಪ್ಪ ದೇಗುವಲ್ಲಿ ಯಾತ್ರಾರ್ಥಿಗಳ ನೂಕು ನುಗ್ಗಲು ನಿಯಂತ್ರಣಕ್ಕೆ ಬಂದಿದೆ. ಅಯ್ಯಪ್ಪಸ್ವಾಮಿ ದರ್ಶನದ ಅವಧಿಯನ್ನು ಒಂದು ಗಂಟೆ ಹೆಚ್ಚಳ ಮಾಡಲಾಗಿದೆ.

Sabarimala Ayyappa Temple  :  ವಾರ್ಷಿಕ ಮಂಡಲಂ ಯಾತ್ರೆಯ ಸಂದರ್ಭದಲ್ಲಿ ಭಾರತದ ಪ್ರಮುಖ ಪುಣ್ಯಕ್ಷೇತ್ರ ಶಬರಿಮಲೆಯ ಅಯ್ಯಪ್ಪ ದೇಗುಲದಲ್ಲಿ ಯಾತ್ರಾರ್ಥಿಗಳ ನೂಕು ನುಗ್ಗಲು ನಿಯಂತ್ರಣಕ್ಕೆ ಬಂದಿದೆ. ಸದ್ಯ ಅಧಿಕಾರಿಗಳು ವರ್ಚುಲವ್‌ ಕ್ಯೂ (Sabarimala Online virtual queue ) ಬುಕ್ಕಿಂಗ್‌ಗಳನ್ನು ಸೀಮಿತ ಗೊಳಿಸಿದ್ದಾರೆ. ಮಾತ್ರಲ್ಲ ದೇವಸ್ಥಾನದಲ್ಲಿ ಅಯ್ಯಪ್ಪಸ್ವಾಮಿ ದರ್ಶನದ ಅವಧಿಯನ್ನು ಒಂದು ಗಂಟೆ ಹೆಚ್ಚಳ ಮಾಡಲಾಗಿದೆ.

ಪತ್ತನಂತಿಟ್ಟದ ಶಬರಿಮಲೆ ದೇವಸ್ಥಾನಕ್ಕೆ ಕಳೆದ ಕೆಲವು ದಿನಗಳಿಂದಲೂ ಭಕ್ತರ ದಂಡೇ ಹರಿದು ಬರುತ್ತಿದೆ. ಇದರಿಂದಾಗಿ ಶಬರಿಮಲೆಯಲ್ಲಿ ನೂಕುನುಗ್ಗಲು ಉಂಟಾಗಿತ್ತು. ಕೇರಳ ಸರಕಾರ ಅಗತ್ಯಕ್ರಮವನ್ನು ಕೈಗೊಳ್ಳಲು ದೇವಸ್ಥಾನದ ಆಡಳಿತ ಮಂಡಳಿಗೆ ಸೂಚನೆಯನ್ನು ನೀಡಿದೆ. ಇದೀಗ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವನ್ನು ಕೈಗೊಳ್ಳುವ ಸಲುವಾಗಿ ದೇವಸ್ಥಾನದ ಮಾರ್ಗದಲ್ಲಿ ಭದ್ರತೆಯನ್ನು ಹೆಚ್ಚಳ ಮಾಡಲಾಗಿದೆ.

Sabarimala Ayyappa Temple 1 hour Extend darshan Period, Rush under Control Good news for Ayyappa devotees
Image Credit to Original Source

ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ (ಎಲ್‌ಡಿಎಫ್) ನೇತೃತ್ವದ ಕೇರಳ ಸರಕಾರ ಬೆಟ್ಟದ ಅಯ್ಯಪ್ಪ ದೇಗುಲದಲ್ಲಿ ಪಾದಯಾತ್ರೆಯನ್ನು ಸರಿಯಾಗಿ ನಿರ್ವಹಣೆ ಮಾಡುವಲ್ಲಿ ವಿಫಲವಾಗಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್‌ ಹಾಗೂ ಬಿಜೆಪಿ ತೀವ್ರ ಟೀಕೆ ಮಾಡಿದ್ದವು. ಇದರ ಬೆನ್ನಲ್ಲೇ ದೇವಸ್ವಂ ಸಚಿವ ಕೆ. ರಾಧಾಕೃಷ್ಣನ್‌ ಅವರು ಶಬರಿಮಲೆಗೆ ಭೇಟಿಯನ್ನು ನೀಡಿದ್ದರು. ಅಲ್ಲದೇ ಶಬರಿಮಲೆ ಅಯ್ಯಪ್ಪ ದೇವಸ್ಥಾನವನ್ನು ನಿರ್ವಹಣೆ ಮಾಡುವ ತಿರುವಾಂಕೂರು ದೇವಸ್ವಂ ಮಂಡಳಿಯ ಉನ್ನತ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಿದ್ದಾರೆ.

ಇದನ್ನೂ ಓದಿ : ಮನೆಯಲ್ಲಿ ಎಷ್ಟು ನಗದು ಇರಿಸಿಕೊಳ್ಳಬಹುದು ? ಹಣ ವರ್ಗಾವಣೆಗೆ ಜಾರಿಯಾಯ್ತು ಹೊಸ ರೂಲ್ಸ್‌

ಶಬರಿಮಲೆಯಲ್ಲಿ ಅಯ್ಯಪ್ಪ ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ವ್ಯವಸ್ಥೆ ಮಾಡವಂತೆ ಅಧಿಕಾರಿಗಳಿಗೆ ಸಚವರು ಸೂಚನೆಯನ್ನು ನೀಡಿದ್ದರು. ಈ ಬಾರಿ ಶಬರಿಮಲೆಗೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರ ದಂಡು ಆಗಮಿಸಿದೆ. ಡಿಸೆಂಬರ್‌ 7 ರಂದು, ಶಬರಿಮಲೆಯಲ್ಲಿ ದಾಖಲೆಯ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು, ಒಂದೇ 1.02 ಲಕ್ಷ ಭಕ್ತರು ಶಬರಿಮಲೆಗೆ ಆಗಮಿಸಿದ್ದರು.

ಸಾಮಾನ್ಯವಾಗಿ ನಿತ್ಯವೂ ಸರಾಸರಿ 80,000ದಷ್ಟು ಭಕ್ತರು ನಿತ್ಯವೂ ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ದರು. ಕಳೆದ ವರ್ಷಗಳಿಗೆ ಹೋಲಿಕೆ ಮಾಡಿದ್ರೆ, ಈ ಬಾರಿ ಮಹಿಳೆಯರು, ಮಕ್ಕಳು ಮತ್ತು ವೃದ್ಧ ಯಾತ್ರಾರ್ಥಿಗಳ ಸಂಖ್ಯೆಯಲ್ಲಿ ಶೇ.30ರಷ್ಟು ಏರಿಕೆ ಆಗಿದೆ. ಇದರಿಂದಾಗಿ ಭಕ್ತರಿಗೆ ‘ಪತಿನೆಟ್ಟಂಪಾಡಿ’ (ದೇವಾಲಯಕ್ಕೆ ಹೋಗುವ ಪವಿತ್ರ 18 ಮೆಟ್ಟಿಲುಗಳು) ಏರಲು ಸಾಧ್ಯವಾಗಿರಲಿಲ್ಲ. ಭಕ್ತರ ಸಂಖ್ಯೆಯ ಹೆಚ್ಚಳದಿಂದಲೇ ಪರಿಸ್ಥಿತಿ ನಿಯಂತ್ರಣ ಮಾಡಲು ಸಾಧ್ಯವಾಗಿಲ್ಲ ಎಂದು ಸಚಿವರು ತಿಳಿಸಿದ್ದಾರೆ.

ಇದನ್ನೂ ಓದಿ : ಪ್ರಧಾನ ಮಂತ್ರಿ ಜನಧನ್‌ ಯೋಜನೆ : ಯಾರೆಲ್ಲಾ ಖಾತೆ ತೆರೆಯಲು ಅರ್ಹರು ? ಏನಿದರ ಪ್ರಯೋಜನ

ಶಬರಿಮಲೆಯಲ್ಲಿ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು, ಜನಸಂದಣಿಯನ್ನು ನಿಯಂತ್ರಣ ಮಾಡುವ ಸಲುವಾಗಿ ಅಯ್ಯಪ್ಪಸ್ವಾಮಿಯ ದರ್ಶನದ ಅವಧಿಯನ್ನು ದಿನಕ್ಕೆ 17 ರಿಂದ 18 ಗಂಟೆಗೆ ಹೆಚ್ಚಳ ಮಾಡಲಾಗಿದೆ. ಅಲ್ಲದೇ ವರ್ಚುವಲ್ ಕ್ಯೂ ಬುಕಿಂಗ್ ಅನ್ನು ದಿನಕ್ಕೆ 90,000 ರಿಂದ 80,000 ಕ್ಕೆ ಕಡಿತಗೊಳಿಸಲಾಗಿದೆ. ಇನ್ನು ಎರುಮೆಲಿ, ಪಂಪಾಗಳಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತೆಯನ್ನು ಒದಗಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

Sabarimala Ayyappa Temple 1 hour Extend darshan Period, Rush under Control Good news for Ayyappa devotees
Image Credit to Original Source

ಅಯ್ಯಪ್ಪಸ್ವಾಮಿ ದೇಗುಲದ ಬೆಟ್ಟದಲ್ಲಿ ಜನಸಂದಣಿಯನ್ನು ನಿಯಂತ್ರಣ ಮಾಡುವ ಸಲುವಾಗಿ ಯಾತ್ರಾರ್ಥಿಗಳಿಗೆ ಸ್ಥಳದಲ್ಲಿಯೇ ನೋಂದಣಿಯನ್ನು ಸೀಮಿತಗೊಳಿಸಲಾಗಿದೆ. ನವೆಂಬರ್ 17 ರಂದು ಮಂಡಲ ಪೂಜೆ ಆರಂಭಗೊಂಡಿದ್ದು, ಈ ಋತುವಿನ ಮೊದಲ 19 ದಿನಗಳಲ್ಲಿ ಪ್ರತಿದಿನ ಸುಮಾರು 62,000ಕ್ಕೂ ಯಾತ್ರಿಕರು ಶಬರಿಮಲೆಗೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದರು.

ಆದರೆ ಡಿಸೆಂಬರ್ 6ರ ನಂತರ ಭಕ್ತರ ಸಂಖ್ಯೆಯಲ್ಲಿ ಬಾರೀ ಏರಿಕೆಯಾಗಿದ್ದು, ನೂಕುನುಗ್ಗಲು ಉಂಟಾಗಿತ್ತು. 2015ರಲ್ಲಿ 15 ಅಥವಾ 16 ಗಂಟೆಗಳ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದುಕೊಂಡಿದ್ದರು. ಆ ನಂತರದಲ್ಲಿ ಅಂತಹ ಪ್ರಕರಣಗಳು ನಡೆದಿರಲಿಲ್ಲ. ಇದೀಗ ಭಕ್ತರ ಸಂಖ್ಯೆ ಹೆಚ್ಚಳವಾದ ಹಿನ್ನೆಲೆಯಲ್ಲಿ ಸರತಿ ಸಾಲುಗಳು ಉಂಟಾಗಿದೆ ಎನ್ನುತ್ತಾರೆ ಅರ್ಚಕರು.

ಇದನ್ನೂ ಓದಿ :  Post Office Fixed Deposits: ಅಂಚೆ ಇಲಾಖೆ ಸ್ಥಿರ ಠೇವಣಿ ಹಿಂಪಡೆಯಲು ಸರಕಾರದಿಂದ ಹೊಸ ರೂಲ್ಸ್‌

ಅಯ್ಯಪ್ಪ ಭಕ್ತರಿಗೆ ಮೂಲಸೌಕರ್ಯ
ಶಬರಿಮಲೆಯಲ್ಲಿ ಕಳೆದ ಕೆಲವು ದಿನಗಳಿಂದಲೂ ದೇವಾಲಯಕ್ಕೆ ತೆರಳುವ ಮಾರ್ಗದಲ್ಲಿ ಕುಡಿಯುವ ನೀರು, ಆಹಾರ, ಶೌಚಾಲಯ ಸೇರಿದಂತೆ ಮೂಲಸೌಕರ್ಯಗಳ ಕೊರತೆ ಉಂಟಾಗಿರುವ ಕುರಿತು ಭಕ್ತರಿಂದ ದೂರುಗಳು ಕೇಳಬರುತ್ತಿವೆ. ಅಲ್ಲದೇ ಭಕ್ತರು ಬರುವ ಬಸ್ಸು ಹಾಗೂ ವಾಹನಗಳನ್ನು ಗಂಟೆಗಳ ಕಾಲ ಮನಬಂದತೆ ನಿಲ್ಲಿಸಲಾಗುತ್ತಿದೆ ಎಂಬ ಆರೋಪವೂ ಕೇಳಿಬರುತ್ತಿದೆ. ಈದೀಗ ಎಚ್ಚೆತ್ತಿರುವ ಸರಕಾರ ಮೂಲಸೌಕರ್ಯ ಒದಗಿಸಲು ಸಜ್ಜಾಗಿದೆ.

ದೇವಸ್ಥಾನದ ಮಾರ್ಗದಲ್ಲಿ ಅಯ್ಯಪ್ಪ ಭಕ್ತನ ಸಾವು
ಅರಣ್ಯ ಮಾರ್ಗದ ಮೂಲಕ ಅಯ್ಯಪ್ಪ ದೇವಸ್ಥಾನಕ್ಕೆ ತೆರಳುವ ವೇಳೆಯಲ್ಲಿ ಅಯ್ಯಪ್ಪ ಭಕ್ತರೋರ್ವರು ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ ಎಂದು ಹಿಂದೂಸ್ಥಾನ್‌ ಟೈಮ್ಸ್‌ ವರದಿ ಮಾಡಿದೆ. ಕೊಲ್ಲಂ ಜಿಲ್ಲೆಯ ಚತ್ತನ್ನೂರಿನ 45 ವರ್ಷದ ಯಾತ್ರಾರ್ಥಿಯೊಬ್ಬರು ಬುಧವಾರ ಬೆಳಗ್ಗೆ ಸತ್ರಂ-ಶಬರಿಮಲ ಮಾರ್ಗದ ಝೀರೋ ಪಾಯಿಂಟ್‌ನಲ್ಲಿ ಸಾವನ್ನಪ್ಪಿದ್ದಾರೆ.

ಅರಣ್ಯ ಮಾರ್ಗದಲ್ಲಿ ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆಯಲ್ಲಿ ಈ ಅವಘಡ ಸಂಭವಿಸಿದ್ದು, ಮೃತದೇಹದ ಮರಣೋತ್ತರ ಕಾರ್ಯವನ್ನು ನಡೆಸಲಾಗಿದೆ. ಇನ್ನು ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ನಡೆದಿರುವ ನೂಕುನುಗ್ಗಲಿನ ಬೆನ್ನಲ್ಲೇ ಮಾರ್ಗಸೂಚಿಯನ್ನು ಹೊರಡಿಸಿದೆ. ಅಯ್ಯಪ್ಪ ಭಕ್ತರ ದರ್ಶನ ಸೇರಿದಂತೆ ಹಲವು ಕ್ರಮಗಳಿಗೆ ಸೂಚಿಸಿದೆ.

ಪ್ರಮುಖವಾಗಿ ಮಹಿಳೆಯರು, ಮಕ್ಕಳು ಮತ್ತು ಅಂಗವಿಕಲರಿಗೆ ವಿಶೇಷ ಸರತಿ ಸಾಲು, ಸರತಿ ಸಾಲಿನಲ್ಲಿ ನಿಂತವರಿಗೆ ಬಿಸ್ಕತ್‌ ವಿತರಣೆ ಮತ್ತು ಶುಂಠಿ ಶುಂಠಿ ಹಾಕಿ ಬೇಯಿಸಿದ ನೀರು ನೀಡುವಂತೆ ಸೂಚಿಸಿದೆ. ಇನ್ನು ರಾತ್ರಿಯ ಪಾಳಿಯಲ್ಲಿ ನೌಕರರನ್ನು ನಿಯೋಜನೆ ಮಾಡಬೇಕು. ದಾರಿಯಲ್ಲಿ ಹೆಚ್ಚಿನ ಪಾರ್ಕಿಂಗ್‌ ವ್ಯವಸ್ಥೆ ಹಾಗೂ ವಾಹನಗಳನ್ನು ನಿಲ್ಲಿಸಲು ಪರ್ಯಾಯ ವ್ಯವಸ್ಥೆ ಕಲ್ಪಿಸುವುದು ಸೇರಿದಂತೆ ಹಲವು ಅಂಶಗಳನ್ನು ಮಾರ್ಗಸೂಚಿಯಲ್ಲಿ ಸೂಚಿಸಿದೆ.

Sabarimala Ayyappa Temple 1 hour Extend darshan Period, Rush under Control Good news for Ayyappa devotees

Comments are closed.