ಬ್ಯಾಂಕ್ ನಿಂದ ನೀವೇನಾದ್ರೂ ಸಾಲ ಪಡೆದಿದ್ದೀರಾ ? ರಾತ್ರೋ ರಾತ್ರಿ ಹೊಸ ರೂಲ್ಸ್‌ ಜಾರಿ ಮಾಡಿದೆ ಆರ್‌ಬಿಐ

ವೈಯಕ್ತಿಕ ಸಾಲ (Personal Loans), ಗೃಹಸಾಲ (Home Loans), ವಾಹನ ಸಾಲವನ್ನು ( Vehicals Loans) ಪಡೆದುಕೊಳ್ಳುತ್ತಾರೆ. ಇದೀಗ ಬ್ಯಾಂಕ್‌ ಸಾಲಕ್ಕೆ ಸಂಬಂಧಿಸಿದಂತೆ ಆರ್‌ಬಿಐ ಹೊಸ ನಿಯಮವನ್ನು (RBI New Rules) ಜಾರಿಗೆ ತಂದಿದೆ.

ಸಾಮಾನ್ಯವಾಗಿ ಜನರು ಬ್ಯಾಂಕುಗಳಲ್ಲಿ ವೈಯಕ್ತಿಕ ಸಾಲ (Personal Loans), ಗೃಹಸಾಲ (Home Loans), ವಾಹನ ಸಾಲವನ್ನು ( Vehicals Loans) ಪಡೆದುಕೊಳ್ಳುತ್ತಾರೆ. ಆದರೆ ಸಾಲದ ಮೇಲಿನ ಬಡ್ಡಿದರ, ಸಾಲದ ನಿಯಮಗಳನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ ( Reserve Bank India) ಕಾಲ ಕಾಲಕ್ಕೆ ಬದಲಾವಣೆಯನ್ನು ಮಾಡುತ್ತದೆ. ಇದೀಗ ಬ್ಯಾಂಕ್‌ ಸಾಲಕ್ಕೆ ಸಂಬಂಧಿಸಿದಂತೆ ಆರ್‌ಬಿಐ ಹೊಸ ನಿಯಮವನ್ನು (RBI New Rules)  ಜಾರಿಗೆ ತಂದಿದೆ.

ನೀವೇವಾದ್ರೂ ವೈಯಕ್ತಿಕ ಸಾಲ, ಇಲ್ಲಾ ವೈಯಕ್ತಿಕ ಸಾಲವನ್ನು ಪಡೆದುಕೊಂಡಿದ್ರೆ ಭಾರತೀಯ ರಿಸರ್ವ್‌ ಬ್ಯಾಂಕ್‌ ಜಾರಿ ಮಾಡಿರುವ ಹೊಸ ನಿಯಮ ಅನ್ವಯವಾಗಲಿದೆ. ಭಾರತೀಯ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಸಾಲದ ವಿಚಾರದಲ್ಲಿ ಹೊಸ ನಿಯಮವನ್ನು ಜಾರಿಗೆ ತಂದಿದೆ.

Reserve Bank India  RBi Introduce new Rules for These Loans
Image Credit to Original Source

ಆರ್‌ಬಿಐ ಎನ್‌ಬಿಎಫ್‌ಸಿ ಬ್ಯಾಂಕುಗಳಿಗೆ ಸಾಲವನ್ನು ಪೂರ್ಣಗೊಳಿಸಿದ ಎಲ್ಲಾ ಗ್ರಾಹಕರ ದಾಖಲೆಗಳನ್ನು 30 ದಿನಗಳ ಒಳಗೆ ಹಿಂದಿರುಗಿಸುವಂತೆ ಸೂಚನೆಯನ್ನು ನೀಡಿದೆ. ಒಂದೊಮ್ಮೆ ಆರ್‌ಬಿಐ ನಿಯಮವನ್ನು ಬ್ಯಾಂಕುಗಳು ಪಾಲನೆ ಮಾಡದೇ ಇದ್ರೆ ಬ್ಯಾಂಕುಗಳು ದಿನಕ್ಕೆ 5000 ರೂಪಾಯಿ ದಂಡ ಪಾವತಿ ಮಾಡಬೇಕಾಗಿದೆ.

ಇದನ್ನೂ ಓದಿ : PAN Card ಕಳೆದು ಹೋದ್ರೆ ಹೊಸ ಪ್ಯಾನ್ ಕಾರ್ಡ್‌ ಪಡೆಯುವುದು ಹೇಗೆ ?

ಆಸ್ತಿಗಾಗಿ ವೈಯಕ್ತಿಕ ಸಾಲವನ್ನು ತೆಗೆದುಕೊಂಡಿದ್ದರೆ, ಶೀಘ್ರದಲ್ಲೇ ಅದರ ನಿಯಮಗಳಲ್ಲಿ ಬಾರೀ ಬದಲಾವಣೆ ಆಗಲಿದೆ. ಸಾಮಾನ್ಯವಾಗಿ ಬ್ಯಾಂಕುಗಳು ನೀಡುವ ಒಟ್ಟು ಸಾಲಗಳಲ್ಲಿ ಶೇ. 25 ರಷ್ಟು ಸಾಲವು ಗೃಹ ಸಾಲವಾಗಿರುತ್ತೆ. ಆದರೆ ಈ ಬಾರಿ ಗೃಹಸಾಲದ ಮೇಲಿನ ಬಡ್ಡಿದರವನ್ನು ಹಲವು ಬ್ಯಾಂಕುಗಳು ಏರಿಕೆ ಮಾಡಿಲ್ಲ.

ಇದನ್ನೂ ಓದಿ : ನಿಮ್ಮ ಹೆಣ್ಣು ಮಗಳ ಮದುವೆಗೆ ಸಿಗುತ್ತೆ 25 ಲಕ್ಷ ರೂ. : ಪ್ರಧಾನಿ ನರೇಂದ್ರ ಮೋದಿ ಸರಕಾರದಿಂದ ಹೊಸ ಯೋಜನೆ

ಬ್ಯಾಂಕುಗಳಿಂದ ಸಾಲ ಪಡೆದು ಅದನ್ನು ಸಕಾಲದಲ್ಲಿ ತೀರಿಸಿದ್ದರೂ ಕೂಡ ಗ್ರಾಹಕರು ದಾಖಲೆಗಳನ್ನು ಪಡೆಯಲು ಸಮಸ್ಯೆ ಆಗುತ್ತಿತ್ತು. ಈ ಕುರಿತು ಭಾರತೀಯ ರಿಸರ್ವ್‌ ಬ್ಯಾಂಕ್‌ಗೆ ಸಾಕಷ್ಟು ದೂರುಗಳು ಬರುತ್ತಿದ್ದವು. ಈ ಹಿನ್ನೆಲೆಯಲ್ಲಿ ಆರ್‌ಬಿಐ ಹೊಸ ನಿಯಮನ್ನು ಜಾರಿಗೆ ತಂದಿದೆ. ಸಾಲ ಪೂರ್ಣಗೊಂಡ ೩೦ ದಿನಗಳ ಒಳಗಾಗಿ ಗ್ರಾಹಕರ ಎಲ್ಲಾ ದಾಖಲೆಗಳನ್ನು ಬ್ಯಾಂಕುಗಳು ಪಾವಾಸ್‌ ನೀಡಬೇಕಾಗಿದೆ.

Reserve Bank India  RBi Introduce new Rules for These Loans
Image Credit to Original Source

ಇದೀಗ ಗ್ರಾಹಕರ ದೂರಿನ ಆಧಾರದ ಮೇಲೆ ಆರ್‌ಬಿಐ ಮಹತ್ವದ ಹೆಜ್ಜೆಯನ್ನು ಇರಿಸಿದೆ. ಹಿಂದೆಲ್ಲಾ ಬ್ಯಾಂಕ್‌ ಸಾಲವನ್ನು ತೀರಿಸಿದ್ದರು ಕೂಡ ಬ್ಯಾಂಕ್‌ಗಳು ದಾಖಲೆಗಳನ್ನು ನೀಡಲು ಹಲವಾರು ತಿಂಗಳುಗಳನ್ನು ಕಳೆಯುತ್ತಿದ್ದವು. ಇದರಿಂದ ಗ್ರಾಹಕರು ಸಮಸ್ಯೆ ಎದುರಿಸಬೇಕಾಯಿತು. ಇದಲ್ಲದೆ, ಗ್ರಾಹಕರ ದಾಖಲೆಗಳು ಕಳೆದುಹೋದ ಸಂದರ್ಭಗಳೂ ಇವೆ.

ಇದನ್ನೂ ಓದಿ : ಬಿಪಿಎಲ್‌ ಕಾರ್ಡ್‌ದಾರರಿಗೆ ಇಂದಿನಿಂದ ಹೊಸ ರೂಲ್ಸ್‌ ಜಾರಿ : ಸರಕಾರದಿಂದ ಮಹತ್ವದ ಘೋಷಣೆ

ಆದ್ದರಿಂದ, ಈಗ ದಾಖಲೆಗಳು ಕಳೆದುಹೋದ ಸಂದರ್ಭದಲ್ಲಿ, ಗ್ರಾಹಕರು ಈ ದಾಖಲೆಗಳನ್ನು ಸಾಧ್ಯವಾದಷ್ಟು ಬೇಗ ಪಡೆಯಲು ಬ್ಯಾಂಕ್ ಸಂಪೂರ್ಣವಾಗಿ ಸಹಾಯ ಮಾಡುತ್ತಿದೆ. ದೇಶದಲ್ಲಿ ಕೋವಿಡ್‌ ನಂತರದಲ್ಲಿ ವೈಯಕ್ತಿಕ ಸಾಲದ ಸಂಖ್ಯೆಯಲ್ಲಿ ಬಾರೀ ಏರಿಕೆ ಕಂಡು ಬಂದಿದೆ. 2020 ರ ಮೊದಲು, ಕೇವಲ 15 ಪ್ರತಿಶತದಷ್ಟು ವೈಯಕ್ತಿಕ ಸಾಲಗಳನ್ನು ಪಡೆಯುತ್ತಿದ್ದರು. ಆದರೆ ಇದೀಗ ಆದರೆ 2020 ರಿಂದ, NBFC ಸಾಲದ ದರವು ಶೇ 45 ರಷ್ಟು ಏರಿಕೆ ಕಂಡಿದೆ. ಇದರಲ್ಲಿಯೂ ಹಲವು ವಂಚನೆಗಳು ಸಂಭವಿಸಿದೆ. ಇದೇ ಕಾರಣದಿಂದಲೇ ಆರ್‌ಬಿಐ ಹೊಸ ನಿಯಮಗಳನ್ನು ಜಾರಿಗೆ ತಂದಿದೆ.

RBI Introduce new Rules for These Loans Reserve Bank India (RBI) has directed NBFC banks to return all customer documents within 30 days of loan completion. If this is not done, the bank will have to pay a penalty of Rs 5000 per day.

Comments are closed.