ದಿನಭವಿಷ್ಯ 18 ಅಕ್ಟೋಬರ್ 2023 : ಸೌಭಾಗ್ಯ ಯೋಗದಿಂದ ಈ ಎರಡು ರಾಶಿಯವರಿಗೆ ಅದೃಷ್ಟ

Horoscope Today : ಇಂದು 18 ಅಕ್ಟೋಬರ್ 2023 ಬುಧವಾರ, ಜ್ಯೋತಿಷ್ಯ ಶಾಸ್ತ್ರದ ದ್ವಾದಶ ರಾಶಿಗಳ ಮೇಲೆ ಇಂದು ಅನುರಾಧಾ ನಕ್ಷತ್ರದ ಪ್ರಭಾವ ಇರುತ್ತದೆ. ಆಯುಷ್ಮಾನ್‌ ಯೋಗ ಹಾಗೂ ಸೌಭಾಗ್ಯ ಯೋಗದಿಂದಾಗಿ ಮೇಷ ಮಿಥುನರಾಶಿಯವರಿಗೆ ಅನುಕೂಲ.

Horoscope Today : ಇಂದು 18 ಅಕ್ಟೋಬರ್ 2023 ಬುಧವಾರ, ಜ್ಯೋತಿಷ್ಯ ಶಾಸ್ತ್ರದ ದ್ವಾದಶ ರಾಶಿಗಳ ಮೇಲೆ ಇಂದು ಅನುರಾಧಾ ನಕ್ಷತ್ರದ ಪ್ರಭಾವ ಇರುತ್ತದೆ. ಆಯುಷ್ಮಾನ್‌ ಯೋಗ ಹಾಗೂ ಸೌಭಾಗ್ಯ ಯೋಗದಿಂದಾಗಿ ಮೇಷ ಮಿಥುನರಾಶಿಯವರಿಗೆ ಅನುಕೂಲ. ಮೇಷರಾಶಿಯಿಂದ ಮೀನರಾಶಿಯ ವರೆಗೆ ಒಟ್ಟು 12 ದ್ವಾದಶರಾಶಿಗಳ ಇಂದಿನ ದಿನಭವಿಷ್ಯ ಹೇಗಿದೆ.

ಮೇಷರಾಶಿ ದಿನಭವಿಷ್ಯ
ಇಂದು ಸಾಕಷ್ಟು ಶ್ರಮವಹಿಸುವ ಅಗತ್ಯವಿದೆ. ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಏಕಾಗೃತೆ ಇರಲಿ. ಸ್ನೇಹಿತರು ನಿಮ್ಮ ಬೆಂಬಲಕ್ಕೆ ನಿಲ್ಲುತ್ತಾರೆ. ಅಲ್ಲದೇ ವಿಶೇಷವಾದ ಗೌರವವನ್ನು ನೀವು ಪಡೆಯಲಿದ್ದೀರಿ. ಕುಟುಂಬದ ಸದಸ್ಯರ ಸಲಹೆಯನ್ನು ಪಾಲಿಸಿದ್ರೆ ಉತ್ತಮ.

ವೃಷಭ ರಾಶಿ ದಿನಭವಿಷ್ಯ
ವೈವಾಹಿಕ ಜೀವನ ಸುಖಮಯವಾಗಿ ಇರುತ್ತದೆ. ತಾಳ್ಮೆಯಿಂದ ಕೆಲಸ ಕಾರ್ಯಗಳನ್ನು ಮಾಡಬೇಕು. ಆತುರದ ನಿರ್ಧಾರ ಕೈಗೊಳ್ಳಬೇಡಿ. ಕುಟುಂಬದ ಪ್ರತಿಷ್ಠೆ ಹೆಚ್ಚುತ್ತದೆ ಉದ್ಯಮಿಗಳು ಹೊಸ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಹೆಚ್ಚು ಲಾಭ.

ಮಿಥುನ ರಾಶಿ ದಿನಭವಿಷ್ಯ
ಉದ್ಯೋಗಿಗಳು ಇಂದು ಉತ್ತಮ ಫಲಿತಾಂಶ ಪಡೆಯುತ್ತಾರೆ. ಉದ್ಯೋಗ ಬದಲಾವಣೆಯ ನಿಮ್ಮ ಆಸೆ ಈಡೇರುತ್ತದೆ. ಉದ್ಯೋಗಳಿಗೆ ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳ ಬೆಂಬಲ ದೊರೆಯಲಿದೆ. ಆದಾಯಕ್ಕೆ ತಕ್ಕಂತೆ ಖರ್ಚು ಮಾಡಿ. ಯಾವುದೇ ಕಾರಣಕ್ಕೂ ಯಾರಿಗೂ ಸಾಲ ನೀಡಬೇಡಿ.

ಇದನ್ನೂ ಓದಿ : ಯುವತಿಯರ ಮದುವೆಗೆ 10 ಗ್ರಾಂ ಚಿನ್ನ, 1 ಲಕ್ಷ ರೂಪಾಯಿ ಉಚಿತ : ಗೃಹಲಕ್ಷ್ಮೀ ಬೆನ್ನಲ್ಲೇ ಮಹಾಲಕ್ಷ್ಮೀ ಯೋಜನೆ ಘೋಷಣೆ

ಕರ್ಕಾಟಕ ರಾಶಿ ದಿನಭವಿಷ್ಯ
ಕೆಲಸ ಕಾರ್ಯಗಳನ್ನು ಬುದ್ದಿವಂತಿಕೆಯಿಂದ ಮಾಡಬೇಕು. ಉದ್ಯೋಗ ಕ್ಷೇತ್ರದಲ್ಲಿ ಯಾವುದೇ ನಿರ್ಧಾರಗಳನ್ನು ಕೈಗೊಳ್ಳಬೇಡಿ. ಹಿರಿಯ ಮಾತನ್ನು ಆಲಿಸಿ, ನಿಮ್ಮ ಸ್ನೇಹಿತರ ಜೊತೆಗೆ ಸುಂದರ ಕ್ಷಣಗಳನ್ನು ಕಳೆಯುವಿರಿ. ಶಿಕ್ಷಣ ಕ್ಷೇತ್ರದಲ್ಲಿ ಹಲವು ಅವಕಾಶಗಳು ದೊರೆಯಲಿದೆ.

ಸಿಂಹ ರಾಶಿ ದಿನಭವಿಷ್ಯ
ಕುಟುಂಬದಲ್ಲಿ ಶಾಂತಿ, ನೆಮ್ಮದಿ ನೆಲೆಸುತ್ತದೆ. ಸ್ನೇಹಿತರ ಸಹಕಾರದಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸು. ವೈಯಕ್ತಿಕ ವಿಚಾರದಲ್ಲಿ ಹೆಚ್ಚು ಜವಾಬ್ದಾರಿಯುತ ವಾಗಿ ವರ್ತಿಸಿ. ಕುಟುಂಬ ಸದಸ್ಯರ ಜೊತೆಗೆ ಧಾರ್ಮಿಕ ಕ್ಷೇತ್ರಗಳ ಭೇಟಿ. ವಿರೋಧಿಗಳು ಕೆಲಸದಲ್ಲಿ ಅಡೆತಡೆ ಉಂಟು ಮಾಡುತ್ತಾರೆ.

Horoscope Today 18 October 2023 Zordic Sign
Image credit to Original Source

ಕನ್ಯಾ ರಾಶಿ ದಿನಭವಿಷ್ಯ
ಸ್ನೇಹಿತರ ಜೊತೆಗೆ ವಿವಿಧ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಕುಟುಂಬದಲ್ಲಿನ ಭಿನ್ನಾಭಿಪ್ರಾಯಗಳು ಶಮನವಾಗಲಿದೆ. ಸಾಮಾಜಿಕ ವಿಷಯಗಳಲ್ಲಿ ಆಸಕ್ತಿ ಮೂಡಲಿದೆ. ಮಕ್ಕಳಿಂದ ಒಳ್ಳೆಯ ಸುದ್ದಿಯನ್ನು ಕೇಳಬಹುದು. ಪ್ರವಾಸಕ್ಕೆ ತೆರಳುವ ಸಾಧ್ಯತೆಯಿದೆ.

ಇದನ್ನೂ ಓದಿ : ವಾಟ್ಸಾಪ್‌ ಹೊಸ ಫೀಚರ್ಸ್‌, ಪಾಸ್‌ವರ್ಡ್‌ ಇಲ್ಲದೇ ಆಗುತ್ತೆ ಲಾಗಿನ್‌ : ಹೊಸ ಪಾಸ್‌ ಕೀ ವೈಶಿಷ್ಟ್ಯದ ಬಗ್ಗೆ ನಿಮಗೆಷ್ಟು ಗೊತ್ತು ?

ತುಲಾ ರಾಶಿ ದಿನಭವಿಷ್ಯ
ನಿಮ್ಮ ಸುತ್ತಮುತ್ತಲಿನ ವಾತಾವರಣವು ಉತ್ತಮವಾಗಿ ಇರುತ್ತದೆ. ಕುಟುಂಬದ ಜನರೊಂದಿಗೆ ಹೆಚ್ಚು ಸಂತಸವಾಗಿ ಇರುವಿರಿ. ಸಾಮಾಜಿಕವಾಗಿ ನಿಮ್ಮ ಮೇಲಿನ ಗೌರವ ಹೆಚ್ಚಲಿದೆ. ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಹೆಚ್ಚು ಅನುಕೂಲ. ಹೊಸ ವ್ಯಕ್ತಿಗಳ ಭೇಟಿಯಿಂದ ಅನುಕೂಲ.

ವೃಶ್ಚಿಕ ರಾಶಿ ದಿನಭವಿಷ್ಯ
ಪಾಲುದಾರಿಕೆ ವ್ಯವಹಾರವು ಹೆಚ್ಚು ಲಾಭವನ್ನು ತಂದುಕೊಡಲಿದೆ. ಸುತ್ತಮುತ್ತಲಿನ ವಾತಾವರಣವು ಆಹ್ಲಾದಕರ ವಾಗಿ ಇರುತ್ತದೆ. ಆಸ್ತಿ ಖರೀದಿಸುವ ನಿಮ್ಮ ಕನಸು ನನಸಾಗುತ್ತದೆ. ತಾಯಿಯ ಆಸೆಯನ್ನು ಈಡೇರಿಸುವಿರಿ. ಕೆಲಸದ ಸ್ಥಳದಲ್ಲಿ ನಿಮಗೆ ಗೌರವ ದೊರೆಯಲಿದೆ.

ಧನಸ್ಸು ರಾಶಿ ದಿನಭವಿಷ್ಯ
ಸಾಮಾಜಿಕ ಕ್ಷೇತ್ರಗಳಲ್ಲಿ ಗೌರವ ಹೆಚ್ಚಲಿದೆ. ಅನಗತ್ಯ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಿ. ಯಾವುದೇ ಕೆಲಸ ಕಾರ್ಯಗಳನ್ನು ಬಹಳ ಎಚ್ಚರಿಕೆಯಿಂದ ಮಾಡಿ. ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಕೈಗೊಳ್ಳಬೇಡಿ. ಸ್ಪರ್ಧೆಗಳಲ್ಲಿ ನೀವು ಯಶಸ್ಸಿ ಆಗುವಿರಿ. ವ್ಯವಹಾರದಲ್ಲಿ ಯಾವುದೇ ಕಾರಣಕ್ಕೂ ಸೋಮಾರಿತನ ಬೇಡ.

ಇದನ್ನೂ ಓದಿ : ರೇಷನ್ ಕಾರ್ಡ್‌ ತಿದ್ದುಪಡಿಗೆ ಕೊನೆಯ ಅವಕಾಶ : ರಾಜ್ಯ ಸರಕಾರದಿಂದ ಮಹತ್ವದ ಆದೇಶ

ಮಕರ ರಾಶಿ ದಿನಭವಿಷ್ಯ
ಆರ್ಥಿಕವಾಗಿ ಇಂದು ಉತ್ತಮವಾದ ದಿನ. ವಾಹನ ಚಾಲನೆಯಲ್ಲಿ ಎಚ್ಚರಿಕೆ ಅಗತ್ಯ. ಸ್ನೇಹಿತರ ಜೊತೆಗೆ ಸಮಯ ಕಳೆಯುವಿರಿ. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿನ ಸಮಸ್ಯೆಯಿಂದ ಪಾರಾಗುವಿರಿ. ವಿರೋಧಿಗಳು ನಿಮಗೆ ಕಿರುಕುಳ ನೀಡುತ್ತಾರೆ. ನಿಮ್ಮ ಪ್ರಭಾವ ಹಾಗೂ ಖ್ಯಾತಿ ಹೆಚ್ಚುತ್ತದೆ.

ಕುಂಭ ರಾಶಿ ದಿನಭವಿಷ್ಯ
ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದ ವಿಷಯದಲ್ಲಿ ಉತ್ತಮ ಫಲಿತಾಂಶ ದೊರೆಯಲಿದೆ. ದೀರ್ಘಾವಧಿಯ ಯೋಜನೆಗಳಿಂದ ಶುಭಫಲ. ನಿರೀಕ್ಷೆಗಿಂತ ಹೆಚ್ಚಿನ ಹಣವನ್ನು ಪಡೆಯುವಿರಿ. ಶತ್ರುಗಳಿಂದ ಮಾನಸಿಕ ಕಿರಿಕಿರಿ. ಹೊಂದಾಣಿಕೆಯಿಂದ ಕಾರ್ಯಾನುಕೂಲ. ದೂರದ ಬಂಧುಗಳ ಭೇಟಿಯಿಂದ ಸಂತಸ.

ಮೀನರಾಶಿ ದಿನಭವಿಷ್ಯ
ಆಧ್ಯಾತ್ಮದ ಕಡೆಗೆ ಒಲವು ಹೆಚ್ಚಲಿದೆ. ಧಾರ್ಮಿಕ ಕ್ಷೇತ್ರಗಳ ಭೇಟಿಯಿಂದ ಮನಸಿಗೆ ನೆಮ್ಮದಿ. ಸಾಲದ ಮರುಪಾವತಿಯಿಂದ ಸಂತಸ. ಹಳೆಯ ಸ್ನೇಹಿತರು ನಿಮಗೆ ಆರ್ಥಿಕವಾಗಿ ಸಹಕಾರವನ್ನು ನೀಡಲಿದ್ದಾರೆ. ಮಕ್ಕಳ ಶಿಕ್ಷಣದ ವಿಚಾರದಲ್ಲಿ ಶುಭ ಸುದ್ದಿ ಕೇಳುವಿರಿ. ಸಂಜೆಯ ವೇಳೆಗೆ ಮನೆಗೆ ಅತಿಥಿಗಳ ಆಗಮನ ಆಗಲಿದೆ.

Horoscope Today 18 October 2023 Zordic Sign

Comments are closed.