ದಿನಭವಿಷ್ಯ 20 ಅಕ್ಟೋಬರ್‌ 2023 : ಈ ರಾಶಿಯವರು ಇಂದು ಎಚ್ಚರವಾಗಿ ಇರಬೇಕು

Horoscope Today : ಅಕ್ಟೋಬರ್‌ 20 2023 ಇಂದು ದ್ವಾದಶ ರಾಶಿಗಳ ಮೇಲೆ ಮೂಲಾ ನಕ್ಷತ್ರದ ಪ್ರಭಾವ ಇರುತ್ತದೆ. ಜೊತೆಗೆ ಅತಿಗಂಧ ಯೋಗವು ರೂಪುಗೊಳ್ಳುತ್ತದೆ. ಮಾತಾ ಕಾತ್ಯಾಯನನ ಅನುಗ್ರಹದಿಂದ ಧನಸ್ಸು, ಕುಂಭ ರಾಶಿಯವರಿಗೆ ಆರ್ಥಿಕ ಲಾಭವಿದೆ.

Horoscope Today : ಅಕ್ಟೋಬರ್ 20 2023‌, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇಂದು ದ್ವಾದಶ ರಾಶಿಗಳ ಮೇಲೆ ಮೂಲಾ ನಕ್ಷತ್ರದ ಪ್ರಭಾವ ಇರುತ್ತದೆ. ಜೊತೆಗೆ ಅತಿಗಂಧ ಯೋಗವು ರೂಪುಗೊಳ್ಳುತ್ತದೆ. ಮಾತಾ ಕಾತ್ಯಾಯನನ ಅನುಗ್ರಹದಿಂದ ಧನಸ್ಸು, ಕುಂಭ ರಾಶಿಯವರಿಗೆ ಆರ್ಥಿಕ ಲಾಭವಿದೆ. ಆದರೆ ಮಿಥುನ, ಸಿಂಹ, ಕನ್ಯಾ ರಾಶಿಯವರು ಎಚ್ಚರಿಕೆಯಿಂದ ಇರಬೇಕು. ಮೇಷರಾಶಿಯಿಂದ ಮೀನರಾಶಿಯ ವರೆಗೆ ಒಟ್ಟು 12  ರಾಶಿಗಳ ಇಂದಿನ ದಿನಭವಿಷ್ಯ ಹೇಗಿದೆ.

ಮೇಷರಾಶಿ ದಿನಭವಿಷ್ಯ
ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ. ದೂರ ಪ್ರಯಾಣಕ್ಕೆ ಯೋಚನೆ. ಸ್ಥಗಿತಗೊಂಡಿರುವ ಯೋಜನೆಗಳು ಪುನರಾರಂಭಗೊಳ್ಳುತ್ತದೆ. ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಬಗ್ಗೆ ಆಸಕ್ತಿ ಹೆಚ್ಚಲಿದೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಉತ್ತಮ ಸಾಧನೆ ಮಾಡುವಿರಿ.

ವೃಷಭರಾಶಿ ದಿನಭವಿಷ್ಯ
ಪ್ರಮುಖ ವ್ಯವಹಾರಗಳನ್ನು ತಾಳ್ಮೆಯಿಂದ ಮಾಡಬೇಕು. ವ್ಯಾಪಾರಿಗಳು ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳಬಾರದು. ಆತುರದ ನಿರ್ಧಾರಗಳಿಂದಾಗಿ ಇಂದು ಆರ್ಥಿಕ ಸಮಸ್ಯೆ ಎದುರಿಸುವಿರಿ. ಕುಟುಂಬದ ಹಿರಿಯ ಸದಸ್ಯರ ಸಲಹೆಯನ್ನು ಪಾಲಿಸಿ.

ಮಿಥುನರಾಶಿ ದಿನಭವಿಷ್ಯ
ಹೊಸ ಉದ್ಯಮದಲ್ಲಿ ಹೂಡಿಕೆ ಮಾಡುವ ಮೂಲಕ ಉತ್ತಮ ಆದಾಯ. ಸಮಾಜಿಕವಾಗಿ ಗೌರವ ಪ್ರಾಪ್ತಿಯಾಗಲಿದೆ. ಕುಟುಂಬ ಸದಸ್ಯರೊಬ್ಬರು ಮನೆಯಿಂದ ತೊರೆಯುತ್ತಾರೆ. ಹೊಸ ಆದಾಯದ ಮೂಲಗಳು ಗೋಚರಿಸಲಿದೆ. ಹೊಂದಾಣಿಕೆಯಿಂದ ಕಾರ್ಯಾನುಕೂಲ.

ಕರ್ಕಾಟಕರಾಶಿ ದಿನಭವಿಷ್ಯ
ಕೆಲಸ ಕಾರ್ಯಗಳಲ್ಲಿ ಯಶಸ್ಸು, ಆದಾಯ, ಖರ್ಚು ತಾಳೆ ಹಾಕಿ ವ್ಯವಹಾರ ಮಾಡಿ. ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣ ಕ್ಷೇತ್ರದಲ್ಲಿ ಯಶಸ್ಸು. ಕೆಲಸದಲ್ಲಿನ ಅಡೆತಡೆಗಳು ಇಂದು ನಿವಾರಣೆ ಆಗುತ್ತದೆ. ಯಾವುದೇ ಕಾರ್ಯವನ್ನು ತಾಳ್ಮೆಯಿಂದ ಮಾಡಿ.

ಇದನ್ನೂ ಓದಿ :ಬಿಪಿಎಲ್‌ ಕಾರ್ಡ್‌ದಾರರಿಗೆ ಇಂದಿನಿಂದ ಹೊಸ ರೂಲ್ಸ್‌ ಜಾರಿ : ಸರಕಾರದಿಂದ ಮಹತ್ವದ ಘೋಷಣೆ

ಸಿಂಹರಾಶಿ ದಿನಭವಿಷ್ಯ
ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿನ ಸಮಸ್ಯೆಯ ಕುರಿತು ಶಿಕ್ಷಕರ ಜೊತೆಗೆ ಮಾತನಾಡಿ, ಅನೇಕ ಕ್ಷೇತ್ರಗಳಲ್ಲಿ ಇಂದು ಧನಾತ್ಮಕ ಫಲಿತಾಂಶಗಳನ್ನು ಪಡೆಯುತ್ತೀರಿ. ವೈಯಕ್ತಿಕವಾಗಿ ನಿಮ್ಮ ಕಾರ್ಯಕ್ಷಮತೆ ಉತ್ತಮವಾಗಿದೆ. ವ್ಯವಹರಿಸುವ ವೇಳೆಯಲ್ಲಿ ನೀವು ಜಾಗರೂಕರಾಗಿ ಇರಬೇಕು.

ಕನ್ಯಾರಾಶಿ ದಿನಭವಿಷ್ಯ
ಕೌಟುಂಬಿಕ ಜೀವನದ ವಿಚಾರದಲ್ಲಿ ಜಾಗರೂಕರಾಗಿ ಇರಿ. ನೀವು ಯಾವುದೇ ವಿಚಾರದಲ್ಲಿಯೂ ಮಧ್ಯಪ್ರವೇಶ ಮಾಡಬಾರದು. ಮಾತಿನ ಮೇಲೆ ಹಿಡಿತವಿರಲಿ. ತಾಳ್ಮೆ ಮತ್ತು ನಂಬಿಕೆಯಿಂದ ಕಾರ್ಯನಿರ್ವಹಿಸಬೇಕು. ಆತುರದ ನಿರ್ಧಾರಗಳು ನಿಮ್ಮ ಕೆಲಸವನ್ನು ಹಾಳುಮಾಡುತ್ತದೆ.

Horoscope Today 20 October 2023 Zordic Sign
Image Credit to Original Source

ತುಲಾರಾಶಿ ದಿನಭವಿಷ್ಯ
ಮನಯ ಸುತ್ತಮುತ್ತಲೂ ಆಹ್ಲಾದಕರ ವಾತಾವರಣ ಇರುತ್ತದೆ. ಸೋಮಾರಿತನವನ್ನು ಇಂದು ತ್ಯೆಜಿಸಲೇ ಬೇಕು. ಸಂಗಾತಿಯೊಂದಿಗೆ ಸುಂದರ ಕ್ಷಣ. ಹೊಂದಾಣಿಕೆಯಿಂದ ಕಾರ್ಯಾನುಕೂಲ. ಸಹೋದರರಿಂದ ಸಂಪೂರ್ಣ ಬೆಂಬಲ ಪಡೆಯುತ್ತೀರಿ. ವಿಶ್ವಾಸಾರ್ಹತೆ ಹಾಗೂ ಗೌರವ ಹೆಚ್ಚಲಿದೆ.

ವೃಶ್ವಿಕರಾಶಿ ದಿನಭವಿಷ್ಯ
ಆದಾಯ ವೃದ್ದಿಸಲಿದೆ. ಕೆಲವು ಅಪರೂಪದ ಜನರ ಭೇಟಿ. ಜೀವನದಲ್ಲಿ ಅತೀ ದೊಡ್ಡ ಬದಲಾವಣೆಯನ್ನು ನಿರೀಕ್ಷೆ ಮಾಡಬಹುದು. ಕೌಟುಂಬಿಕ ವಿಚಾರದಲ್ಲಿ ಇತರರ ಸಹಾಯ ಪಡೆಯಬೇಡಿ. ಮಕ್ಕಳಿಂದ ಸಂತಸದ ಸುದ್ದಿಯನ್ನು ಕೇಳುವಿರಿ.

ಇದನ್ನೂ ಓದಿ : ಸರಕಾರಿ ನೌಕರರಿಗೆ ದೀಪಾವಳಿ ಬೋನಸ್‌ ಘೋಷಣೆ : ಆದ್ರೆ ಈ ನೌಕರರಿಗೆ ಮಾತ್ರವೇ ಅವಕಾಶ

ಧನಸ್ಸುರಾಶಿ ದಿನಭವಿಷ್ಯ
ಜವಾಬ್ದಾರಿಯುತವಾಗಿ ವ್ಯವಹಾರ ಮಾಡಿ. ನಿಮ್ಮ ಪಾಲಿಗೆ ಇಂದು ಸಂತೋಷದ ದಿನ. ಮನೆಯಲ್ಲಿ ಶುಭ ಕಾರ್ಯಗಳು ನಡೆಯಲಿದೆ. ಎಲ್ಲಾ ಕಾರ್ಯಗಳಲ್ಲಿಯೂ ನೀವು ಯಶಸ್ಸಿಯಾಗುತ್ತೀರಿ. ಸಂಬಂಧಿಕರ ಭೇಟಿಯಿಂದ ಅನುಕೂಲಕರ. ಹೊಸ ಪ್ರಯತ್ನಗಳು ಫಲಕೊಡಲಿದೆ.

ಮಕರರಾಶಿ ದಿನಭವಿಷ್ಯ
ಕೆಲವು ಸಮಸ್ಯೆಗಳನ್ನು ಎದುರಿಸುವಿರಿ. ಹೂಡಿಕೆಗೆ ಸಂಬಂಧಿಸಿದ ವಿಚಾರದಲ್ಲಿ ಉತ್ತಮ ಫಲಿತಾಂಶ ಪಡೆಯುವಿರಿ. ಅಪರಾಧಿಗಳು ಹಾಗೂ ವಂಚಕರಿಂದ ನೀವು ಇಂದು ಜಾಗರೂಕರಾಗಿ ಇರಬೇಕು. ಕುಟುಂಬ ಜೀವನದಲ್ಲಿ ಇಂದು ಹಣಕಾಸಿನ ಅಗತ್ಯತೆ ಎದ್ದು ಕಾಣಲಿದೆ.

ಇದನ್ನೂ ಓದಿ : ಮಂಗಳಮುಖಿಯರಿಗೆ ಗೃಹಲಕ್ಷ್ಮೀ ಯೋಜನೆ : ರಾಜ್ಯ ಸರಕಾರದಿಂದ ಮಹತ್ವದ ನಿರ್ಧಾರ

ಕುಂಭರಾಶಿ ದಿನಭವಿಷ್ಯ
ದೊಡ್ಡ ಸಾಧನೆಗಳನ್ನು ಸಾಧಿಸಬಹುದು. ಹಣಕಾಸಿನ ವಿಚಾರದಲ್ಲಿ ಎಚ್ಚರವಾಗಿರಿ. ಸ್ಪರ್ಧೆಗಳ ವಿಚಾರದಲ್ಲಿ ನಿಮ್ಮ ಆಸಕ್ತಿ ಹೆಚ್ಚಲಿದೆ. ಯಾವುದೇ ಹಿಂಜರಿಕೆ ಇಲ್ಲದೇ ವ್ಯವಹಾರವನ್ನು ಮಾಡಿ. ವ್ಯವಹಾರದಲ್ಲಿ ಅಧಿಕ ಆದಾಯದಿಂದ ಮನಸಿಗೆ ನೆಮ್ಮದಿ ದೊರೆಯಲಿದೆ.

ಮೀನರಾಶಿ ದಿನಭವಿಷ್ಯ
ಪೂರ್ವಜರ ಆಸ್ತಿಗೆ ಸಂಬಂಧಿಸಿದಂತೆ ನೀವು ಎಚ್ಚರವಾಗಿ ಇರಬೇಕು. ವಿದ್ಯಾರ್ಥಿಗಳು ಅಧ್ಯಯನದ ಜೊತೆಗೆ ಇತರ ಕೋರ್ಸ್‌ಗಳಲ್ಲಿ ಆಸಕ್ತಿ ಮೂಡಲಿದೆ. ಉದ್ಯೋಗಿಗಳಿಗೆ ಕೆಲಸದಲ್ಲಿ ಪ್ರಶಂಸೆ. ಜನರಿಗೆ ಇಂದು ಸಾಮಾಜಿಕವಾಗಿ ಗೌರವ ಹೆಚ್ಚಲಿದೆ.

Horoscope Today 20 October 2023 Zordic Sign

Comments are closed.