ದಿನಭವಿಷ್ಯ 22 ಫೆಬ್ರವರಿ 2024 : ಯಾವ ರಾಶಿಗೆ ಇದೆ ರಾಯರ ಅನುಗ್ರಹ

Horoscope Today : ದಿನಭವಿಷ್ಯ 22 ಫೆಬ್ರವರಿ 2024. ದ್ವಾದಶ ರಾಶಿಗಳ ಮೇಲೆ ಇಂದು ಪುಷ್ಯ ನಕ್ಷತ್ರದ ಪ್ರಭಾವ ಇರಲಿದೆ. ಅಲ್ಲದೇ ಸರ್ವಾರ್ಥ ಸಿದ್ದಿಯೋಗ, ಅಮೃತ ಸಿದ್ದಿಯೋಗ, ರವಿ ಯೋಗ, ವಿಡಾಲ್‌ ಯೋಗಗಳು ಶುಭವನ್ನು ತರಲಿದೆ.

Horoscope Today : ದಿನಭವಿಷ್ಯ 22 ಫೆಬ್ರವರಿ 2024. ದ್ವಾದಶ ರಾಶಿಗಳ ಮೇಲೆ ಇಂದು ಪುಷ್ಯ ನಕ್ಷತ್ರದ ಪ್ರಭಾವ ಇರಲಿದೆ. ಅಲ್ಲದೇ ಸರ್ವಾರ್ಥ ಸಿದ್ದಿಯೋಗ, ಅಮೃತ ಸಿದ್ದಿಯೋಗ, ರವಿ ಯೋಗ, ವಿಡಾಲ್‌ ಯೋಗಗಳು ಶುಭವನ್ನು ತರಲಿದೆ. ಮೇಷರಾಶಿಯಿಂದ ಮೀನರಾಶಿಯ ವರೆಗೆ ಒಟ್ಟು 12 ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ ಹೇಗಿದೆ.

ಮೇಷರಾಶಿ ದಿನಭವಿಷ್ಯ
ಆರೋಗ್ಯದ ಬಗ್ಗೆ ಕಾಳಜಿವಹಿಸಿ. ದೂರ ಪ್ರಯಾಣದಿಂದ ಅಧಿಕ ಲಾಭ. ಮದುವೆಗೆ ಸಂಬಂಧಿಸಿದಂತೆ ಯೋಗ್ಯ ಸಂಬಂಧ ಕೂಡಿಬರಲಿದೆ. ಹೊಸ ಉದ್ಯಮವನ್ನು ಆರಂಭಿಸಲು ಇಂದು ಶುಭದಿನ. ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯಲಿದೆ.

ವೃಷಭರಾಶಿ ದಿನಭವಿಷ್ಯ
ಜೀವನವನ್ನು ಯಾವುದೇ ಕಾರಣಕ್ಕೂ ಲಘುವಾಗಿ ಪರಿಗಣಿಸಬೇಡಿ. ಕನಸಿನ ಚಿಂತೆಗಳನ್ನು ಬಿಟ್ಟು ಸಂಗಾತಿಯೊಂದಿಗೆ ಸಂತೋಷವಾಗಿರಿ. ಮೇಲಾಧಿಕಾರಿಗಳ ಪ್ರಶಂಸೆಯಿಂದ ಕೆಲಸ ಕಾರ್ಯಗಳಲ್ಲಿ ವಿಶೇಷ ಆಸಕ್ತಿ ಹೊಂದಲಿದ್ದೀರಿ.

ಮಿಥುನರಾಶಿ ದಿನಭವಿಷ್ಯ
ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ಆಸಕ್ತಿ ಮೂಡಲಿದೆ. ಯಾವುದೇ ಕಾರ್ಯವನ್ನು ಮಾಡುವ ಮೊದಲು ಹಿರಿಯರ ಸಲಹೆಯನ್ನು ಪಡೆದುಕೊಳ್ಳಿ. ಉದ್ಯೋಗದಲ್ಲಿ ಹೊಸ ಅವಕಾಶಗಳು ಒದಗಿ ಬರಲಿದ. ಯಾವುದೇ ದುಸ್ಸಾಹಸಕ್ಕೆ ಕೈ ಹಾಕುವ ಮುನ್ನ ಹಲವು ಬಾರಿ ಯೋಚಿಸಿ.

ಕರ್ಕಾಟಕರಾಶಿ ದಿನಭವಿಷ್ಯ
ಹಣಕಾಸಿನ ವಿಚಾರದಲ್ಲಿ ಸುಧಾರಣೆ ಕಂಡು ಬರಲಿದೆ. ಕುಟುಂಬ ಸದಸ್ಯರ ಜೊತೆಗಿನ ಮನಸ್ಥಾಪ ಇಂದು ದೂರವಾಗಲಿದೆ. ಧೈರ್ಯದಿಂದ ನೀವಿಂದು ಪ್ರೀತಿಯನ್ನು ಗೆಲ್ಲುತ್ತೀರಿ. ಜನರೊಡನೆ ವ್ಯವಹರಿಸುವ ವೇಳೆಯಲ್ಲಿ ಎಚ್ಚರಿಕೆಯನ್ನು ವಹಿಸಿ.

Horoscope Today 21 February 2024 Zodiac sign
Image Credit to Original Source

ಸಿಂಹರಾಶಿ ದಿನಭವಿಷ್ಯ
ಇಂದಿನ ದಿನ ಸಾಕಷ್ಟು ವಿಶ್ರಾಂತಿಯನ್ನು ಪಡೆದುಕೊಳ್ಳಬೇಕು. ಕುಟುಂಬ ಸದಸ್ಯರು ನಿಮ್ಮ ಆರ್ಥಿಕ ಸಮಸ್ಯೆಯನ್ನು ಪೂರೈಸಲಿದ್ದಾರೆ. ಪ್ರತಿಸ್ಪರ್ಧಿಗಳ ಬಗ್ಗೆ ನೀವಿಂದು ಎಚ್ಚರಿಕೆಯನ್ನು ವಹಿಸಬೇಕು. ದೂರದ ಬಂಧುಗಳ ಭೇಟಿಯಿಂದ ಮನಸಿಗೆ ನೆಮ್ಮದಿ ದೊರೆಯಲಿದೆ.

ಕನ್ಯಾರಾಶಿ ದಿನಭವಿಷ್ಯ
ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ. ನೀವಿಂದು ಆಹ್ಲಾದಕರ ವಾತಾವರಣವನ್ನು ಅನುಭವಿಸುತ್ತೀರಿ. ಉದ್ಯಮಿಗಳು ವ್ಯವಹಾರದಲ್ಲಿ ಅಧಿಕ ಲಾಭವನ್ನು ಪಡೆಯುತ್ತಾರೆ. ಸಂಗಾತಿಯು ಇಂದು ನಿಮ್ಮ ಬೆಂಬಲಕ್ಕೆ ನಿಲ್ಲುತ್ತಾರೆ. ಮೇಲಾಧಿಕಾರಿಗಳ ಸಹಕಾರ ದೊರೆಯಲಿದೆ.

ಇದನ್ನೂ ಓದಿ : IND vs ENG 4ನೇ ಟೆಸ್ಟ್ : ರಾಂಚಿ ಟೆಸ್ಟ್‌ನಲ್ಲಿ ರಜತ್ ಪಾಟಿದಾರ್‌ ಬದಲು KL ರಾಹುಲ್

ತುಲಾರಾಶಿ ದಿನಭವಿಷ್ಯ
ಭೂಮಿ ಖರೀದಿ ಯೋಗವಿದೆ. ವಿದೇಶದಲ್ಲಿ ನೆಲೆಸಿರುವವರಿಗೆ ಶುಭ ಸುದ್ದಿಯೊಂದು ದೊರೆಯಲಿದೆ. ಇತರರ ಜೊತೆಗೆ ಅನಾವಶ್ಯಕವಾಗಿ ಜಗಳಕ್ಕೆ ಇಳಿಯಬೇಡಿ. ಸಂಗಾತಿಯು ಇಂದು ನಿಮ್ಮನ್ನು ಸಂತೋಷವಾಗಿ ಇಡುತ್ತಾರೆ. ಯಾವುದೇ ವಸ್ತು ಖರೀದಿಗೂ ಮೊದಲು ಹಲವು ಬಾರಿ ಯೋಚಿಸಿ.

ವೃಶ್ಚಿಕರಾಶಿ ದಿನಭವಿಷ್ಯ
ಇಂದು ಯಾವುದೇ ಹೂಡಿಕೆಗಳನ್ನು ಮಾಡಬೇಡಿ. ಕೆಲಸದ ಸ್ಥಳದಲ್ಲಿ ಬಾಕಿ ಉಳಿದಿರುವ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ಧಾರ್ಮಿಕ ಕಾರ್ಯಗಳಲ್ಲಿ ನಿಮಗೆ ಇಂದು ಆಸಕ್ತಿ ಮೂಡಲಿದೆ. ಹಣಕಾಸಿನ ವಿಚಾರದಲ್ಲಿ ಹೆಚ್ಚು ಎಚ್ಚರವಾಗಿ ಇರುವುದು ಒಳಿತು.

ಧನಸ್ಸುರಾಶಿ ದಿನಭವಿಷ್ಯ
ಆರ್ಥಿಕವಾಗಿ ಇಂದು ಅಧಿಕ ಲಾಭ ದೊರೆಯಲಿದೆ. ಜೀವನದಲ್ಲಿನ ಅದೆಷ್ಟೋ ಸಮಸ್ಯೆಗಳು ಇಂದು ಪರಿಹಾರವನ್ನು ಕಾಣಲಿದೆ. ಸಹೋದರ, ಸಹೋದರಿಯಿಂದ ಆರ್ಥಿಕ ನೆರವು ದೊರಕಲಿದೆ. ದೂರದ ಬಂಧುಗಳ ಭೇಟಿಯಿಂದ ಸಂತಸ.

ಇದನ್ನೂ ಓದಿ : ಭಕ್ತರನ್ನು ಕಾಯುತ್ತಾಳೆ ಪರಶುರಾಮರ ತಾಯಿ – ಬೇವಿನ ಸೇವೆಯೇ ಈಕೆಗೆ ಅತಿಪ್ರಿಯ

ಮಕರರಾಶಿ ದಿನಭವಿಷ್ಯ
ಕುಟುಂಬದಲ್ಲಿ ಕಿರಿಕಿರಿಯ ವಾತಾವರಣ ಕಂಡು ಬರಲಿದೆ. ಮೂರನೇ ವ್ಯಕ್ತಿಯ ಜೊತೆಗೆ ವ್ಯವಹಾರ ಮಾಡುವ ಸಂದರ್ಭದಲ್ಲಿ ನೀವು ಬಹಳ ಎಚ್ಚರವಾಗಿ ಇರಬೇಕು. ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯತ್ನ ಬಲದ ಅಗತ್ಯವಿದೆ. ಧಾರ್ಮಿಕ ಕ್ಷೇತ್ರಗಳ ಭೇಟಿಯಿಂದ ಸಂತಸ, ನೆಮ್ಮದಿ ದೊರೆಯಲಿದೆ.

ಕುಂಭರಾಶಿ ದಿನಭವಿಷ್ಯ
ಆರೋಗ್ಯವನ್ನು ಸುಧಾರಿಸಲಿದೆ. ಹಣವನ್ನು ಸಂಗ್ರಹಿಸುವ ಕಡೆಗೆ ಹೆಚ್ಚಿನ ಗಮನ ಹರಿಸಿ. ಹೊಸ ಯೋಚನೆಗಳು ಇಂದು ನಿಮ್ಮ ಕೈಹಿಡಿಯಲಿದೆ. ಯಾವುದೇ ಕೆಲಸ ಕಾರ್ಯವನ್ನು ಮಾಡುವ ಮುನ್ನ ಎಚ್ಚರವಾಗಿರಿ. ಮೇಲಾಧಿಕಾರಿಗಳ ಕಿರುಕುಳದಿಂದ ಮಾನಸಿಕ ಕಿರಿಕಿರಿ.

ಮೀನರಾಶಿ ದಿನಭವಿಷ್ಯ
ದೈಹಿಕ ಆರೋಗ್ಯದ ಕಡೆಗೆ ನೀವು ಗಮನ ಹರಿಸಿ. ಇಡೀ ದಿನ ನಿಮ್ಮ ಕುಟುಂಬಕ್ಕೆ ಸಂತೋಷವನ್ನು ತರಲಿದೆ. ಆಧ್ಯಾತ್ಮದ ಕಡೆಗೆ ನಿಮ್ಮ ಮನಸ್ಸು ವಾಲಲಿದೆ. ಮನೆಗೆ ಸಂಬಂಧಿಕರ ಭೇಟಿಯಿಂದ ಮನಸಿಗೆ ನೆಮ್ಮದಿ ದೊರೆಯಲಿದೆ. ಹೊಂದಾಣಿಕೆಯಿಂದ ಕಾರ್ಯಾನುಕೂಲವಿದೆ.

ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆ : ಗೃಹಿಣಿಯರಿಗೆ ಭರ್ಜರಿ ಗುಡ್‌ನ್ಯೂಸ್‌ ಕೊಟ್ಟ ಲಕ್ಷ್ಮೀ ಹೆಬ್ಬಾಳ್ಕರ್‌

Horoscope Today 22 February 2024 Zodiac sign

Comments are closed.