IND vs ENG 4ನೇ ಟೆಸ್ಟ್ : ರಾಂಚಿ ಟೆಸ್ಟ್‌ನಲ್ಲಿ ರಜತ್ ಪಾಟಿದಾರ್‌ ಬದಲು KL ರಾಹುಲ್

IND vs ENG 4th Testಗಾಯದ ಸಮಸ್ಯೆಯಿಂದ 3ನೇ ಟೆಸ್ಟ್‌ ಪಂದ್ಯದಿಂದ ಹೊರ ಉಳಿದಿರುವ ಕೆಎಲ್‌ ರಾಹುಲ್‌ (KL Rahul ) 4ನೇ ಟೆಸ್ಟ್‌ ಪಂದ್ಯದಲ್ಲಿ ಕಣಕ್ಕೆ ಇಳಿಯಲಿದ್ದು, ರಜತ್‌ ಪಾಟಿದಾರ್‌ (Rajat Patidar) ಹೊರಗುಳಿಯುವ ಸಾಧ್ಯತೆಯಿದೆ.

IND vs ENG 4th Test : ಭಾರತ ಕ್ರಿಕೆಟ್‌ ತಂಡ ಇಂಗ್ಲೆಂಡ್‌ ತಂಡದ ವಿರುದ್ದ ಭರ್ಜರಿ ಆಟದ ಪ್ರದರ್ಶನ ನೀಡುತ್ತಿದೆ. ಆರಂಭಿಕ ಆಟಗಾರರು ಅಬ್ಬರಿಸುತ್ತಿದ್ದರೆ, ಮಧ್ಯಮ ಕ್ರಮಾಂಕ ಮಾತ್ರ ಕೈಕೊಡುತ್ತಿದೆ. ಗಾಯದ ಸಮಸ್ಯೆಯಿಂದ 3ನೇ ಟೆಸ್ಟ್‌ ಪಂದ್ಯದಿಂದ ಹೊರ ಉಳಿದಿರುವ ಕೆಎಲ್‌ ರಾಹುಲ್‌ (KL Rahul ) 4ನೇ ಟೆಸ್ಟ್‌ ಪಂದ್ಯದಲ್ಲಿ ಕಣಕ್ಕೆ ಇಳಿಯಲಿದ್ದು, ರಜತ್‌ ಪಾಟಿದಾರ್‌ (Rajat Patidar) ಹೊರಗುಳಿಯುವ ಸಾಧ್ಯತೆಯಿದೆ.

Ind vs eng 4th test kl rahul replaces rajat patidar in ranchi test
Image credit to original source

ರಜತ್‌ ಪಾಟಿದಾರ್ ವೈಜಾಗ್ ಮತ್ತು ರಾಜ್‌ಕೋಟ್ ಟೆಸ್ಟ್‌ನ ಪ್ಲೇಯಿಂಗ್ XI‌ನಲ್ಲಿ ಕಾಣಿಸಿಕೊಂಡಿದ್ದರೂ ಕೂಡ ಬ್ಯಾಟಿಂಗ್‌ನಿಂದ ಕಮಾಲ್‌ ಮಾಡಲಿಲ್ಲ. ಆದರೆ ಕಳೆದ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದ ಧ್ರುವ್‌ ಜುರೆಲ್‌ ಹಾಗೂ ಸರ್ಫರಾಜ್‌ ಖಾನ್‌ ಉತ್ತಮ ಬ್ಯಾಟಿಂಗ್‌ ನಿರ್ವಹಿಸಿದ್ದಾರೆ. ಆದರೆ ರಜತ್‌ ಪಾಟೀದಾರ್‌ ನಿರಾಸೆ ಮೂಡಿಸಿದ್ದಾರೆ. .

ಇಂಗ್ಲೆಂಡ್‌ ವಿರದ್ದವೈಜಾಗ್ ಟೆಸ್ಟ್‌ ಪಂದ್ಯದಲ್ಲಿ ರಜತ್‌ ಪಾಟೀದಾರ್ ಎರಡೂ ಇನ್ನಿಂಗ್ಸ್‌ಗಳಲ್ಲಿ 32 ಮತ್ತು 9 ರನ್‌ ಮಾತ್ರವೇ ಗಳಿಸಿದ್ದಾರೆ. ರಾಜ್‌ ಕೋಟ್‌ ಟೆಸ್ಟ್‌ ಪಂದ್ಯದಲ್ಲಿ ಅವರು ಎರಡೂ ಇನ್ನಿಂಗ್ಸ್‌ಗಳಲ್ಲಿ ಹರಿದು ಬಂದಿದ್ದು, ಕೇವಲ 5ರನ್.‌ ಮೊದಲ ಇನ್ನಿಂಗ್ಸ್‌ನಲ್ಲಿ 5 ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ಶೂನ್ಯಕ್ಕೆ ಔಟಾಗಿದ್ದರು.

ಇದನ್ನೂ ಓದಿ : T20 ವಿಶ್ವಕಪ್‌ನಲ್ಲಿ ಭಾರತ ಕ್ರಿಕೆಟ್‌ ತಂಡಕ್ಕೆ ರೋಹಿತ್‌ ಶರ್ಮಾ ನಾಯಕ : ಭಗ್ನವಾಯ್ತು ಹಾರ್ದಿಕ್‌ ಪಾಂಡ್ಯ ಕನಸು

ಎರಡೂ ಟೆಸ್ಟ್‌ ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿರುವ ರಜತ್‌ ಪಾಟೀದಾರ್‌ಗೆ ಮುಂದಿನ ಟೆಸ್ಟ್‌ ಪಂದ್ಯದಲ್ಲಿ ಅವಕಾಶ ಸಿಗುವುದು ತೀರಾ ಕಡಿಮೆ. ಒಂದೊಮ್ಮೆ ಕನ್ನಡಿಗ ಕೆಎಲ್‌ ರಾಹುಲ್‌ ಫಿಟ್‌ ಆಗಿದ್ದರೆ ಅವರು ಮುಂದಿನ ಟೆಸ್ಟ್‌ ಪಂದ್ಯದಲ್ಲಿ ಆಡುವುದು ಖಚಿತ ಎನ್ನಲಾಗುತ್ತಿದೆ. ಅಷ್ಟೇ ಅಲ್ಲದೇ ಟೀಂ ಇಂಡಿಯಾದ ಕೋಚ್‌ ರಾಹುಲ್‌ ದ್ರಾವಿಡ್‌ ಕೂಡ ಕೆಎಲ್‌ ರಾಹುಲ್‌ ಮುಂದಿನ ಟೆಸ್ಟ್‌ ಪಂದ್ಯದಲ್ಲಿ ಆಡುವ ಕುರಿತು ಸುಳಿವು ನೀಡದ್ದರು.

Ind vs eng 4th test kl rahul replaces rajat patidar in ranchi test
Image credit to original source

ಹೈದ್ರಾಬಾದ್‌ನಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಕೆಎಲ್‌ ರಾಹುಲ್‌ ಅವರು ಕ್ವಾಡ್ ಗಾಯದ ಸಮಸ್ಯೆಗೆ ತುತ್ತಾಗಿದ್ದರು. ಇದೇ ಕಾರಣದಿಂದಲೇ ಅವರು ಎರಡನೇ ಟೆಸ್ಟ್‌ ಪಂದ್ಯದಿಂದ ಹೊರಗುಳಿದಿದ್ದರು. ಇದೇ ಕಾರಣದಿಂದಲೇ ರಜತ್‌ ಪಾಟಿದಾರ್‌ ಅವರು ರಾಹುಲ್‌ ಸ್ಥಾನದಲ್ಲಿ ಅವಕಾಶ ನೀಡಲಾಗಿತ್ತು.

ಇದನ್ನೂ ಓದಿ :  ಭಾರತದಲ್ಲೇ ನಡೆಯಲಿದೆ ಐಪಿಎಲ್ 2024 : ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್

ಅಷ್ಟೇ ಅಲ್ಲದೇ ಕೆಎಲ್‌ ರಾಹುಲ್‌ ಫಿಟ್‌ ಆಗಿರದ ಕಾರಣಕ್ಕೆ ರಾಜ್‌ಕೋಟ್‌ ಪಂದ್ಯಕ್ಕೂ ಅಲಭ್ಯರಾಗಿದ್ದರು. ಆದರೆ ಮೊದಲ ಟೆಸ್ಟ್‌ನಲ್ಲಿ ಗಾಯಗೊಂಡಿದ್ದ ರವೀಂದ್ರ ಜಡೇಜಾ ಮೂರನೇ ಟೆಸ್ಟ್‌ ಪಂದ್ಯದಲ್ಲಿ ತಂಡವನ್ನು ಸೇರಿಕೊಂಡಿದ್ದರು. ಅಷ್ಟೇ ಅಲ್ಲದೇ ಬ್ಯಾಟಿಂಗ್‌ನಲ್ಲಿ ಜಡೇಜಾ ಕಮಾಲ್‌ ಮಾಡಿದ್ದರು. ಆದರೆ ರಜತ್‌ ಪಾಟಿದಾರ್‌ ಎರಡೂ ಪಂದ್ಯದಲ್ಲಿಯೂ ವಿಫಲತೆಯನ್ನು ಅನುಭವಿಸಿದ್ದಾರೆ.

IND vs ENG 4th Test KL Rahul replaces Rajat Patidar in Ranchi Test

Comments are closed.