Horoscope Today : ದಿನಭವಿಷ್ಯ 22 ನವೆಂಬರ್ 2023 ಬುಧವಾರ. ದ್ವಾದಶ ರಾಶಿಗಳ ಮೇಲೆ ಉತ್ತರಾಭಾದ್ರ ನಕ್ಷತ್ರದ ಪ್ರಭಾವ ಇರುತ್ತದೆ. ಅದ್ರಲ್ಲೂ ಹರ್ಷ ಯೋಗ, ವಜ್ರ ಯೋಗದಿಂದ ಹಲವು ರಾಶಿಯವರಿಗೆ ಆರ್ಥಿಕವಾಗಿ ಅನುಕೂಲವಿದೆ. ಮೇಷರಾಶಿಯಿಂದ ಹಿಡಿದು ಮೀನರಾಶಿಯ ವರರೆಗೆ ಹೇಗಿದೆ ಇಂದಿನ ದಿನಭವಿಷ್ಯ.
ಮೇಷರಾಶಿ ದಿನಭವಿಷ್ಯ
ಮಕ್ಕಳೊಂದಿಗೆ ದಿನ ಕಳೆಯುವಿರಿ. ಕೆಲವೊಂದು ವಿಚಾರಕ್ಕೆ ಸಂಬಂಧಿಸಿದಂತೆ ವಿಶೇಷ ಕಾಳಜಿವಹಿಸಬೇಕು. ಉದ್ಯೋಗಿಗಳಿಗೆ ಶತ್ರುಗಳ ಕಾಟ. ಎಚ್ಚರಿಕೆಯಿಂದ ಇರಬೇಕು. ಆಹಾರದ ಕಡೆಗೆ ಹೆಚ್ಚಿನ ಅಧ್ಯತೆಯನ್ನು ನೀಡಿದೆ.
ವೃಷಭರಾಶಿ ದಿನಭವಿಷ್ಯ
ದಿಢೀರ್ ಹಣಗಳಿಕೆಯ ಅವಕಾಶಗಳು ಒದಗಿ ಬರಲಿದೆ. ಯಾರನ್ನೇ ಆದ್ರೂ ನಂಬುವ ಮೊದಲು ಹತ್ತು ಬಾರಿ ಯೋಚಿಸಿ. ವ್ಯವಹಾದಲ್ಲಿ ಹಲವು ರೀತಿಯಲ್ಲಿ ಲಾಭ ದೊರೆಯಲಿದೆ. ಒತ್ತಡದಲ್ಲಿಯೇ ಕೆಲಸ ಕಾರ್ಯಗಳು ನಡೆಯಲಿದೆ.
ಮಿಥುನರಾಶಿ ದಿನಭವಿಷ್ಯ
ಶುಭ ಕಾರ್ಯಗಳಲ್ಲಿ ಭಾಗವಹಿಸುವಿರಿ. ಪ್ರಭಾವಿ ವ್ಯಕ್ತಿಗಳ ಭೇಟಿಯಾಗುವಿರಿ. ಮೇಲಾಧಿಕಾರಿಗಳಿಂದ ಪ್ರಶಂಸೆ ದೊರೆಯಲಿದೆ. ಆರೋಗ್ಯದ ವಿಚಾರದಲ್ಲಿ ನೀವು ಎಚ್ಚರವಾಗಿ ಇರಬೇಕು. ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವಿರಿ. ಹೊಂದಾಣಿಕೆಯಿಂದ ಕಾರ್ಯಾನುಕೂಲ.
ಕರ್ಕಾಟಕರಾಶಿ ದಿನಭವಿಷ್ಯ
ಆಸ್ತಿ ಖರೀದಿಸುವ ಸಾಧ್ಯತೆ. ಮಕ್ಕಳಿಂದ ನಿಮ್ಮ ಮೇಲೆ ಒತ್ತಡ ಹೆಚ್ಚಲಿದೆ. ಯಾವುದೇ ಸಮಸ್ಯೆಗಳು ನಿಮಗೆ ಇಂದು ಪರಿಹಾರ ಆಗಲಿದೆ. ಕುಟುಂಬ ಸದಸ್ಯರಿಂದ ಬೆಂಬಲ ದೊರೆಯಲಿದೆ. ದೂರ ಪ್ರಯಾಣದಲ್ಲಿ ಅನುಕೂಲಕರ.
ಇದನ್ನೂ ಓದಿ : ಹುಂಡೈ ಎಕ್ಸ್‌ಟರ್ 1 ಲಕ್ಷ ಕಾರು ಬುಕ್ಕಿಂಗ್ : ಆಟೋ ಮೊಬೈಲ್ ಕ್ಷೇತ್ರದಲ್ಲಿ ಹೊಸ ದಾಖಲೆ
ಸಿಂಹರಾಶಿ ದಿನಭವಿಷ್ಯ
ವ್ಯವಹಾರಕ್ಕೆ ಸಂಬಂಧಿಸಿದಂತೆ ಸಂಜೆಯ ವೇಳೆ ಶುಭ ಸಮಾಚಾರವೊಂದು ದೊರೆಯಲಿದೆ. ಉದ್ಯೋಗಿಗಳಿಗೆ ಕಚೇರಿಯಲ್ಲಿ ಸಹೋದ್ಯೋಗಿಗಳ ಸಹಕಾರ ದೊರೆಯಲಿದೆ. ದೀರ್ಘಕಾಲದಿಂದ ಬಾಕಿ ಉಳಿದಿದ್ದ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿದೆ.
ಕನ್ಯಾರಾಶಿ ದಿನಭವಿಷ್ಯ
ವ್ಯವಹಾರದಲ್ಲಿ ಉತ್ತಮ ಲಾಭ. ಉದ್ಯೋಗಸ್ಥರಿಗೆ ಕೆಲಸದ ಸ್ಥಳದಲ್ಲಿ ಅನುಕೂಲಕರ. ರಿಯಲ್ ಎಸ್ಟೇಟ್ ವ್ಯವಹಾರ ಮಾಡುವವರಿಗೆ ಆರ್ಥಿಕ ಲಾಭ. ಸಂತೋಷದ ಸುದ್ದಿಯೊಂದು ನಿಮ್ಮ ಮನಸಿಗೆ ಮುದವನ್ನು ನೀಡಲಿದೆ. ಮಕ್ಕಳ ವಿಚಾರದಲ್ಲಿ ಸಂತಸ.

ತುಲಾರಾಶಿ ದಿನಭವಿಷ್ಯ
ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆ ಉತ್ತಮ ಫಲಿತಾಂಶ ದೊರೆಯಲಿದೆ. ವ್ಯವಹಾರಕ್ಕೆ ಸಂಬಂಧಿಸಿದಂತೆ ವಿಶೇಷವಾದ ವ್ಯಕ್ತಿಗಳನ್ನು ಭೇಟಿಯಾಗುವಿರಿ. ಯಾವುದೇ ಕ್ಷೇತ್ರದಲ್ಲಿಯೂ ನಿಮಗೆ ಧನಾತ್ಮಕ ಫಲಿತಾಂಶಗಳು ದೊರೆಯಲಿದೆ. ಆರೋಗ್ಯದ ಸಮಸ್ಯೆ ನಿಮ್ಮನ್ನು ಚಿಂತೆಗೀಡು ಮಾಡಲಿದೆ.
ವೃಶ್ಚಿಕರಾಶಿ ದಿನಭವಿಷ್ಯ
ಸಾಮಾಜಿಕ ಕಾರ್ಯಗಳಿಂದಾಗಿ ಗೌರವ ಹೆಚ್ಚಲಿದೆ. ವ್ಯಾಪಾರಿಗಳು ಪಾಲುದಾರರ ಸಹಾಯವನ್ನು ಪಡೆಯಿರಿ. ಕಚೇರಿಯಲ್ಲಿ ಹಲವು ಬದಲಾವಣೆಗಳನ್ನು ನಿರೀಕ್ಷೆ ಮಾಡಬಹುದು. ಸಂಗಾತಿಯೊಂದಿಗೆ ಸುಂದರ ಸಂಜೆಯನ್ನು ಕಳೆಯುವುರಿ.
ಇದನ್ನೂ ಓದಿ : ಗೃಹಲಕ್ಷ್ಮೀ ಹಣ ಬರ್ತಿಲ್ಲ ಯಾಕೆ ? ಲಕ್ಷ್ಮೀ ಹೆಬ್ಬಾಳ್ಕರ್ ಕೊಟ್ರು ಅಸಲಿ ಕಾರಣ
ಧನಸ್ಸುರಾಶಿ ದಿನಭವಿಷ್ಯ
ಸಂಗಾತಿಯ ಆರೋಗ್ಯದ ಬಗ್ಗೆ ಚಿಂತೆ ಮಾಡುವುರಿ. ಯಾವುದೇ ವ್ಯವಹಾರವನ್ನು ಆರಂಭಿಸಲು ಇದು ಸಕಾಲ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಕಡೆಗೆ ಆಸಕ್ತಿ ಹೆಚ್ಚಲಿದೆ. ರಾಜಕಾರಣಿಗಳ ಕಾರ್ಯಕ್ಕೆ ಎಲ್ಲೆಡೆಯಿಂದಲೂ ಪ್ರಶಂಸೆ ವ್ಯಕ್ತವಾಗಿದೆ.
ಇದನ್ನೂ ಓದಿ : ಗುಡ್ ನ್ಯೂಸ್ : ಶೀಘ್ರದಲ್ಲೇ ಮಾರುಕಟ್ಟೆಗೆ ಬರ್ತಿದೆ 15 ಸಾವಿರಕ್ಕೂ ಕಡಿಮೆ ದರದ ಜಿಯೋ ಲ್ಯಾಪ್ಟಾಪ್
ಮಕರರಾಶಿ ದಿನಭವಿಷ್ಯ
ಜಾಣ್ಮೆಯಿಂದ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಿ. ಭವಿಷ್ಯಕ್ಕಾಗಿ ಹಣವನ್ನು ಕೂಡಿಡುವಿರಿ. ಕೆಲಸ ಕಾರ್ಯಗಳಿಗೆ ಶತ್ರುಗಳಿಂದ ತಡೆ ಉಂಟಾಗಲಿದೆ. ಸರಕಾರಿ ಕಾರ್ಯಗಳಲ್ಲಿ ಎಚ್ಚರಿಕೆ ವಹಿಸಬೇಕು.
ಕುಂಭರಾಶಿ ದಿನಭವಿಷ್ಯ
ನ್ಯಾಯಾಲಯಕ್ಕೆ ಸಂಬಂಧಿಸಿದಂತೆ ತೀರ್ಪು ನಿಮ್ಮ ಪರ ಬರಲಿದೆ. ಕೆಲವು ವ್ಯಕ್ತಿಗಳ ಜೊತೆಗೆ ಉತ್ತಮ ಬಾಂಧವ್ಯ ವೃದ್ದಿಸಲಿದೆ. ಕಚೇರಿಯಲ್ಲಿ ಯಾರ ಜೊತೆಗಾದ್ರೂ ಜಗಳವಾಡುವ ಸಾಧ್ಯತೆ ಯಿದೆ. ಸಂಜೆಯ ವೇಳೆಗೆ ನೀವು ಶುಭ ಸುದ್ದಿಯೊಂದನ್ನು ಕೇಳುವಿರಿ.
ಮೀನರಾಶಿ ದಿನಭವಿಷ್ಯ
ಈ ಹಿಂದೆ ಮಾಡಿದ ಹೂಡಿಕೆ ಲಾಭವನ್ನು ತರಲಿದೆ. ಸಾಲ ಪಡೆಯುವ ಯೋಚನೆಯಲ್ಲಿದ್ದರೆ ನಿಮಗೆ ಸುಲಭವಾಗಿ ಸಾಲ ದೊರೆಯಲಿದೆ. ಕುಟುಂಬ ಸದಸ್ಯರ ಆಸೆಯನ್ನು ನೀವಿಂದು ಪೂರೈಸುವಿರಿ. ಮನೆಯಲ್ಲಿ ಹಿರಿಯರ ಸಲಹೆಯನ್ನು ಪಾಲಿಸಿ.
Horoscope Today 22 November 2023 Zordic Sign