ಗುಡ್​ ನ್ಯೂಸ್​ : ಶೀಘ್ರದಲ್ಲೇ ಮಾರುಕಟ್ಟೆಗೆ ಬರ್ತಿದೆ 15 ಸಾವಿರಕ್ಕೂ ಕಡಿಮೆ ದರದ ಜಿಯೋ ಲ್ಯಾಪ್​ಟಾಪ್​​

Jio Laptops Just Rs 15000 :ನಿಮ್ಮ ಸಮಸ್ಯೆಗಳಿಗೆ ರಿಲಯನ್ಸ್​ ಜಿಯೋ ಹೊಸ ಪರಿಹಾರವೊಂದನ್ನು ನೀಡಿದೆ. ಜಿಯೋ ಕಂಪನಿಯು ಮಾರುಕಟ್ಟೆಗೆ ಅತ್ಯಂತ ಕಡಿಮೆ ಬೆಲೆಯ ಲ್ಯಾಪ್​ಟಾಪ್​ನ್ನು(Jio Laptops) ತಂದಿದೆ.

Jio Laptops Just Rs 15000 : ಕೊರೊನಾ ಬಳಿಕ ಐಟಿ ಕಂಪನಿಗಳು ವರ್ಕ್ ಫ್ರಾಮ್​ ಹೋಮ್​ ಆರಂಭಿಸಿದ ಬಳಿಕ ಲ್ಯಾಪ್​ಟಾಪ್​ಗೆ ಡಿಮ್ಯಾಂಡ್​ ಎಂದಿಗಿಂತ ಜಾಸ್ತಿಯಾಯ್ತು. ಇದಾದ ಬಳಿಕ ಕಡಿಮೆ ಬೆಲೆಗೆ ಲ್ಯಾಪ್​ಟಾಪ್​ (Laptop) ಸಿಗೋದೇ ಕಷ್ಟವಾಯ್ತು. ನಮಗೆ ಬೇಕಾದ ಎಲ್ಲಾ ಫೀಚರ್​ಗಳು ಇರೋದಿಲ್ಲ. ಎಲ್ಲಾ ಫೀಚರ್​​ಗಳು ಇರುವ ಲ್ಯಾಪ್​ಟಾಪ್​ ಬೇಕು ಅಂದರೆ ಹೆಚ್ಚು ಹಣ ಖರ್ಚು ಮಾಡ್ಬೇಕು. ಆದರೆ ಈ ಎಲ್ಲಾ ನಿಮ್ಮ ಸಮಸ್ಯೆಗಳಿಗೆ ರಿಲಯನ್ಸ್​ ಜಿಯೋ ಹೊಸ ಪರಿಹಾರವೊಂದನ್ನು ನೀಡಿದೆ. ಜಿಯೋ ಕಂಪನಿಯು ಮಾರುಕಟ್ಟೆಗೆ ಅತ್ಯಂತ ಕಡಿಮೆ ಬೆಲೆಯ ಜಿಯೋ ಲ್ಯಾಪ್​ಟಾಪ್​ನ್ನು(Jio Laptops) ತಂದಿದೆ.

ಮುಕೇಶ್​ ಅಂಬಾನಿ ಮಾಲೀಕತ್ವದ ರಿಲಾಯನ್ಸ್​ ಜಿಯೋ ಕಂಪನಿಯು ಅತೀ ಕಡಿಮೆ ದರದಲ್ಲಿ ಗ್ಯಾಜೆಟ್​ಗಳನ್ನು ಮಾರುಕಟ್ಟೆಗೆ ಪರಿಚಯಿಸೋದಕ್ಕೆ ಹೆಸರುವಾಸಿಯಾಗಿದೆ. ಈಗಾಗಲೇ ಅತೀ ಕಡಿಮೆ ದರಕ್ಕೆ ಇಂಟರ್ನೆಟ್​ ಸೌಕರ್ಯ, ಕೀಪ್ಯಾಡ್​ ಫೋನ್​ಗಳು ಹಾಗೂ ಸ್ಮಾರ್ಟ್ ಫೋನ್​ಗಳು ಇದು ಸಾಲದು ಎಂಬಂತೆ ಕಡಿಮೆ ದರಕ್ಕೆ ಪ್ರಿಪೇಯ್ಡ್​ ಸೌಕರ್ಯ ಹೀಗೆ ಕಡಿಮೆ ದರದಲ್ಲಿ ಹೆಚ್ಚಿನ ಲಾಭದ ಯೋಜನೆಗಳು ಜಿಯೋ ಕಂಪನಿಯ ಸಿಗ್ನೇಚರ್​ ಸ್ಟೈಲ್​ ಇದ್ದಂತೆ. ಇದೀಗ ಈ ಸಾಲಿಗೆ ಜಿಯೋ ಕಂಪನಿಯ ಲ್ಯಾಪ್​ಟಾಪ್​ ಕೂಡ ಸೇರಿದೆ. ಕೇವಲ 14,999 ರೂಪಾಯಿಗಳಿಗೆ ಲ್ಯಾಪ್​ಟಾಪ್​ನ್ನು ಮಾರುಕಟ್ಟೆಗೆ ತರಲು ರಿಲಯನ್ಸ್​ ಜಿಯೋ ಕಂಪನಿ ಎಲ್ಲಾ ರೀತಿಯ ತಯಾರಿಯನ್ನು ಮಾಡಿದೆ ಎನ್ನಲಾಗಿದೆ.

Jio Laptops Just rs 15000 Mukesh Ambani many launch cloud Laptop in coming months chansing rs 70000 crore
Image Credit to Original Source

15 ಸಾವಿರ ರೂಪಾಯಿಗಳಿಗಿಂತಲೂ ಕಡಿಮೆ ದರದ ಲ್ಯಾಪ್​ಟಾಪ್​ ಮಾರುಕಟ್ಟೆಗೆ ಬರ್ತಿರೋದು ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿಯೇ ಆಗಿದೆ. ಈ ಕೈಗೆಟಕುವ ದರದ ಜಿಯೋ ಕಂಪನಿಯ ಲ್ಯಾಪ್​ಟಾಪ್​ನಲ್ಲಿ ಕ್ಲೌಡ್​​ ಕಂಪ್ಯೂಟಿಂಗ್​​ಗೆ ಚಂದಾದಾರಿಕೆ ಶುಲ್ಕ ಇರದಲಿ. ಒಂದು ಲ್ಯಾಪ್​ಟಾಪ್​ನಲ್ಲಿ ಹಲವು ಚಂದಾದಾರಿಕೆಯನ್ನು ಹೊಂದಬಹುದಾಗಿದೆ. ಭಾರತದಲ್ಲಿ ಇದೊಂದು ಹೊಸ ಪ್ರಯತ್ನವೇ ಅಗಿದೆ. ಶಿಕ್ಷಣ ಸಂಸ್ಥೆಗಳಿಗೆ ಹಾರ್ಡವೇರ್​ ವೆಚ್ಚ ಕಡಿಮೆ ಆಗೋದ್ರಿಂದ ನಿಜಕ್ಕೂ ಈ ಲ್ಯಾಪ್​ಟಾಪ್​ಗಳು ಉತ್ತಮ ಆಯ್ಕೆ ಆಗಿವೆ,

ಇದನ್ನೂ ಓದಿ : ಕೇವಲ 35,000 ರೂ.ಗೆ ನಿಮ್ಮದಾಗಬಹುದು ಐಫೋನ್​ : ಈ ಚಾನ್ಸ್​ ಮಿಸ್​ ಮಾಡಿಕೊಳ್ಳಬೇಡಿ..!

ಮೂಲಗಳ ಪ್ರಕಾರ ಮುಂದಿನ ತಿಂಗಳಿನಿಂದ ಈ ಅಗ್ಗದ ಬೆಲೆಯ ಲ್ಯಾಪ್​ಟಾಪ್​ ಮೇಕಿಂಗ್​ ಕಾರ್ಯ ಆರಂಭಗೊಳ್ಳಲಿದೆ ಅಂತಾ ಹೇಳಲಾಗ್ತಿದೆ. ಇದು ಕ್ಲೌಡ್​ನಿಂದ ಚಾಲಿತವಾಗುವ ಲ್ಯಾಪ್​ಟಾಪ್​ ಆಗಿರೋದ್ರಿಂದ ಜಿಯೋ ಕಂಪನಿಗೆ ಲ್ಯಾಪ್​ಟಾಪ್ ಕಡಿಮೆ ದರದಲ್ಲಿ ಮಾರಾಟ ಮಾಡಲು ಯಾವುದೇ ನಷ್ಟ ಇರೋದಿಲ್ಲ ಎನ್ನಲಾಗ್ತಿದೆ. ಹೊಸ ಲ್ಯಾಪ್​ಟಾಪ್​ ಆವಿಷ್ಕಾರದ ಬಗ್ಗೆ ರಿಲಯನ್ಸ್​ ಜಿಯೋ ಕಂಪನಿಯು ಈಗಾಗಲೇ ಪ್ರತಿಷ್ಠಿತ ಕಂಪನಿಗಳಾದ ಹೆಚ್​ಪಿ, ಡೆಲ್​​ , ಲೆನೋವೋಗಳ ಜೊತೆ ಮೊದಲನೇ ಹಂತದ ಮಾತುಕತೆ ನಡೆಸಿದೆ ಎನ್ನಲಾಗಿದೆ.

Jio Laptops Just rs 15000 Mukesh Ambani many launch cloud Laptop in coming months chansing rs 70000 crore
Image Credit to Original Source

ಆದರೆ ಜಿಯೋ ಕಂಪನಿಯು ಈವರೆಗೆ ತನ್ನ ಕಂಪನಿಯ ಲ್ಯಾಪ್​ಟಾಪ್​ನಲ್ಲಿ ಇರಲಿರುವ ಫೀಚರ್​ಗಳ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿಲ್ಲ. ರಿಲಯನ್ಸ್​ ಜಿಯೋ ಕಂಪನಿಯು ಜಿಯೋ ಬುಕ್​ ಬಿಡುಗಡೆ ಮಾಡಿದ್ದು ಇದರ ಬೆಲೆ 16, 499 ರೂಪಾಯಿ ಆಗಿದೆ . ರಿಲಯನ್ಸ್​ ಜಿಯೋ ಕಂಪನಿಯು ತಮ್ಮ ಕಂಪನಿಯ ಹೊಸ ಲ್ಯಾಪ್​ಟಾಪ್​ ಖರೀದಿದಾರರಿಗೆ 100 ಜಿಬಿ ಕ್ಲೌಡ್​ ಸ್ಟೋರೇಜ್​ ಉಚಿತವಾಗಿ ನೀಡೋದಾಗಿ ಹೇಳಿದೆ.

ಇದನ್ನೂ ಓದಿ : 200 MP ಕ್ಯಾಮೆರಾ, 8GB RAM… ಅಬ್ಬಬ್ಬಾ Motorola Edge 30 Ultra 5G ಫೀಚರ್ಸ್‌ ನೋಡಿದ್ರೆ ಸುಸ್ತಾಗೋದು ಗ್ಯಾರಂಟಿ

ಈಗಾಗಲೇ ಲ್ಯಾಪ್​ಟಾಪ್​ ತಯಾರಿಕೆಗೆ ವಿವಿಧ ಪ್ರಯೋಗಳು ಕೂಡ ಆರಂಭಗೊಂಡಿವೆ ಎನ್ನಲಾಗಿದೆ. ಕ್ಲೌಡ್​ ಚಂದಾದಾರಿಕೆಯಲ್ಲಿ ನೀವು ಒಂದೇ ಲ್ಯಾಪ್​ಟಾಪ್​ ಅನೇಕ ಚಂದಾದಾರಿಕೆ ಹೊಂದಬಹುದಾಗಿದ್ದು ಇದೊಂದು ರೀತಿಯಲ್ಲಿ ಮಲ್ಟಿ ಯುಸೇಜ್​ ಲ್ಯಾಪ್​ಟಾಪ್​ ಆಗಿರಲಿದೆ. ಇದು ಸಾರ್ವಜನಿಕವಾಗಿ ಲ್ಯಾಪ್​ಟಾಪ್​ ಬಳಕೆಗೆ ಇಡುವವರಿಗೆ ಖಂಡಿತವಾಗಿಯೂ ಒಂದು ಉತ್ತಮ ಆಯ್ಕೆಯಾಗಿದೆ.

Jio Laptops Just rs 15000 : Mukesh Ambani many launch cloud Laptop in coming months chansing rs 70000 crore

Comments are closed.