ಹುಂಡೈ ಎಕ್ಸ್‌ಟರ್‌ 1 ಲಕ್ಷ ಕಾರು ಬುಕ್ಕಿಂಗ್‌ : ಆಟೋ ಮೊಬೈಲ್‌ ಕ್ಷೇತ್ರದಲ್ಲಿ ಹೊಸ ದಾಖಲೆ

Hyundai Exter: ಹ್ಯುಂಡೈ ಕಂಪೆನಿ ಬಿಡುಗಡೆ ಮಾಡಿರುವ ಹುಂಡೈ ಎಕ್ಸ್‌ಟರ್ ಕಾರು ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದೆ. ಅದ್ರಲ್ಲೂ ಗ್ರಾಹಕರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕಾರುಗಳನ್ನು ಬುಕ್ಕಿಂಗ್‌ ಮಾಡುತ್ತಿದ್ದಾರೆ

Hyundai Exter: ಹ್ಯುಂಡೈ ಕಂಪೆನಿ ಬಿಡುಗಡೆ ಮಾಡಿರುವ ಹುಂಡೈ ಎಕ್ಸ್‌ಟರ್ ಕಾರು ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದೆ. ಅದ್ರಲ್ಲೂ ಗ್ರಾಹಕರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕಾರುಗಳನ್ನು ಬುಕ್ಕಿಂಗ್‌ ಮಾಡುತ್ತಿದ್ದಾರೆ. 1 ಲಕ್ಷ ಕಾರು ಬುಕ್ಕಿಂಗ್‌ ಆಗುವ ಮೂಲಕ ಹುಂಡೈ ಎಕ್ಸ್‌ಟರ್‌ (Hyundai Exter) ಹೊಸ ದಾಖಲೆಯನ್ನು ಬರೆದಿದೆ.

 Hyundai Exter 1 lakh car bookings A new record in the auto mobile sector
Image Credit : Hyundai

ಭಾರತೀಯ ಮಾರುಕಟ್ಟೆಯಲ್ಲಿ ಕೈಗೆಟುಕುವ ದರದಲ್ಲಿ ದೊರೆಯುತ್ತಿರುವ ಜನಪ್ರೀಯ ಕಾರುಗಳಲ್ಲಿ ಹುಂಡೈ ಎಕ್ಸ್‌ಟರ್‌ ಕಾರು ಕೂಡ ಒಂದ. ಕಳೆದ ಜುಲೈನಿಂದ ಅಕ್ಟೋಬರ್‌ವರೆಗೆ ಭಾರತೀಯ ಮಾರುಕಟ್ಟೆಯಲ್ಲಿ ಒಟ್ಟು 31,174 ಕಾರುಗಳನ್ನು ಮಾರಾಟ ಮಾಡಿದೆ.

ಹ್ಯುಂಡೈನ ಅತ್ಯಂತ ಕೈಗೆಟುಕುವ ಎಸ್‌ಯುವಿ ಎಕ್ಸ್‌ಟರ್ ಈಗಾಗಲೇ 1 ಲಕ್ಷಕ್ಕೂ ಅಧಿಕ ಕಾರುಗಳು ಬುಕ್ಕಿಂಗ್‌ ಆಗಿವೆ. ಮೈಕ್ರೋ-ಎಸ್‌ಯುವಿ ಹುಂಡೈ ಎಕ್ಸ್‌ಟರ್‌ ಜುಲೈನಲ್ಲಿ ಬಿಡುಗಡೆ ಆಗಿತ್ತು. ಅದ್ರಲ್ಲೂ ಮೇ ತಿಂಗಳಿನಿಂದಲೇ ಬುಕ್ಕಿಂಗ್‌ ಆರಂಭಿಸಿತ್ತು.

Hyundai Exter 1 lakh car bookings A new record in the auto mobile sector
Image Credit : Hyundai

ಹ್ಯುಂಡೈ ಎಕ್ಸ್‌ಟರ್ ಕಾರು ಆರಂಭಿಕ ಬೆಲೆ 6 ಲಕ್ಷದಿಂದ ಆರಂಭಗೊಳ್ಳುತ್ತಿದ್ದು, 10.15 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ) ಆಗಿದೆ. ಟಾಟಾ ಕಂಪೆನಿಯ ಟಾಟಾ ಪಂಚ್‌, ನಿಸ್ಸಾನ್ ಮ್ಯಾಗ್ನೈಟ್ ಹಾಗೂ ರೆನಾಲ್ಟ್ ಕಿಗರ್ ಕಾರುಗಳಿಗೆ ಪ್ರಬಲ ಪೈಪೋಟಿಯನ್ನು ನೀಡಲಿದೆ.

ಇದನ್ನೂ ಓದಿ : ಕೇವಲ 8.69 ಲಕ್ಷ ರೂ.ಬೆಲೆಗೆ ಟಾಟಾ ಟಿಯಾಗೊ ಇವಿ : ಎಲೆಕ್ಟ್ರಿಕ್ ಕಾರಿನ ಮಾರಾಟದ ಮೇಲೆ ಭರ್ಜರಿ ಆಫರ್‌

ಜುಲೈನಿಂದ ಅಕ್ಟೋಬರ್ ವರೆಗಿನ ಅವಧಿಯಲ್ಲಿ ಹ್ಯುಂಡೈ ದೇಶೀಯ ಮಾರುಕಟ್ಟೆಯಲ್ಲಿ 31,174 ಕಾರುಗಳನ್ನು ಮಾರಾಟ ಮಾಡಿದೆ. ಹ್ಯುಂಡೈ ಜುಲೈ ನಲ್ಲಿ 7,000 ಕಾರು, ಆಗಸ್ಟ್‌ನಲ್ಲಿ 7,430 ಕಾರು, ಸೆಪ್ಟೆಂಬರ್‌ನಲ್ಲಿ 8,647 ಕಾರು ಮತ್ತು ಅಕ್ಟೋಬರ್‌ನಲ್ಲಿ 8,097 ಕಾರುಗಳನ್ನು ಮಾರಾಟ ಮಾಡಿದೆ.

Hyundai Exter 1 lakh car bookings A new record in the auto mobile sector
Image Credit : Hyundai

ಹ್ಯುಂಡೈ ಮೋಟಾರ್ ಇಂಡಿಯಾದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಒಒ) ತರುಣ್ ಗಾರ್ಗ್ ಮಾಧ್ಯಮಗಳಿಗೆ ಹುಂಡೈ ಎಕ್ಸ್‌ಟರ್‌ ಮಾರಾಟದ ಕುರಿತು ಮಾಹಿತಿ ನೀಡಿದ್ದಾರೆ. ಹುಂಡೈ ಎಕ್ಸ್‌ಟರ್ ಬುಕ್ಕಿಂಗ್‌ಗಳು ಇದೀಗ 1 ಲಕ್ಷ ಸಮೀಪದಲ್ಲಿದೆ. ಹೈ-ಎಂಡ್ ಟ್ರಿಮ್‌ಗಳು ಒಟ್ಟು ಬುಕಿಂಗ್‌ಗಳಲ್ಲಿ 31% ರಷ್ಟಿದ್ದರೆ, ಸನ್‌ರೂಫ್ ರೂಪಾಂತರಗಳು 78% ಬುಕಿಂಗ್‌ ಆಗಿವೆ.

 Hyundai Exter 1 lakh car bookings A new record in the auto mobile sector
Image Credit : Hyundai

ಹುಂಡೈ ಎಕ್ಸ್‌ಟರ್ 1.2-ಲೀಟರ್, 4-ಸಿಲಿಂಡರ್, ಕಪ್ಪಾ ಪೆಟ್ರೋಲ್ ಎಂಜಿನ್ ಒಳಗೊಂಡಿದೆ. ಅಲ್ಲದೇ 83PS ಮತ್ತು 113.8Nm ಅನ್ನು ಉತ್ಪಾದಿಸುತ್ತದೆ. ಎರಡು ಟ್ರಾನ್ಸ್ಮಿಷನ್ ಆಯ್ಕೆಗಳಿದ್ದು, 5-ಸ್ಪೀಡ್ MT ಮತ್ತು 5-ಸ್ಪೀಡ್ AMT, SUV ಸಹ CNG ಆಯ್ಕೆಯನ್ನು ಒಳಗೊಂಡಿದೆ. ಎಕ್ಸ್‌ಟರ್ ಎಂಟಿಯು 19.4ಕಿಮೀ ಲೀಟರ್, ಎಕ್ಸ್‌ಟರ್ ಎಎಮ್‌ಟಿ 19.2ಕಿಮೀ ಮತ್ತು ಎಕ್ಸ್‌ಟರ್ ಸಿಎನ್‌ಜಿ 27.1ಕಿಮೀ/ಕೆಜಿ ಮೈಲೆಜ್‌ ನೀಡುತ್ತದೆ.

ಇದನ್ನೂ ಓದಿ : ಜಾಗತಿಕವಾಗಿ ಲಾಂಚ್​ ಆಗಿದೆ ಹೊಸ ಆವೃತ್ತಿಯ ಹಿಮಾಲಯನ್​ ಮೋಟಾರ್​ ಸೈಕಲ್​: ಇಲ್ಲಿದೆ ವಿಶೇಷತೆ

ಹುಂಡೈ ಎಕ್ಸ್‌ಟರ್‌ ಕಾರಿನ ಬಾಹ್ಯ ವಿನ್ಯಾಸ ಗ್ರಾಹಕರ ಗಮನ ಸೆಳೆದಿದೆ ಅದ್ರಲ್ಲೂ ಪ್ಯಾರಾಮೆಟ್ರಿಕ್ ಗ್ರಿಲ್, LED ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಸಿಗ್ನೇಚರ್ H-LED ಟೈಲ್‌ಲ್ಯಾಂಪ್‌ಗಳು, ಮುಂಭಾಗ ಮತ್ತು ಹಿಂಭಾಗದ ಸ್ಕಿಡ್ ಪ್ಲೇಟ್‌ಗಳು, 15-ಇಂಚಿನ ಡೈಮಂಡ್-ಕಟ್ ಮಿಶ್ರಲೋಹದ ಚಕ್ರಗಳು, ಸೇತುವೆಯ ಮಾದರಿಯ ರೂಫ್ ರೈಲ್‌ಗಳು ಮತ್ತು ಶಾರ್ಕ್ ಫಿನ್ ಆಂಟೆನಾವನ್ನು ಹೊಂದಿದೆ.

 Hyundai Exter 1 lakh car bookings A new record in the auto mobile sector
Image Credit : Hyundai

ವಾಹನದ ಡ್ಯಾಶ್ ಬೋರ್ಡ, ಸ್ಟೀರಿಂಗ್ ಚಕ್ರ ಮತ್ತು ಗೇರ್ ನಾಬ್, ಫುಟ್‌ವೆಲ್ ಲೈಟಿಂಗ್ ಮತ್ತು ಲೋಹದ ಪೆಡಲ್‌ಗಳ ಮೇಲೆ ಕಪ್ಪು 3D ಮಾದರಿಯ ವಿನ್ಯಾಸ ವನ್ನು ಒಳಗೊಂಡಿದೆ. ಅಲ್ಲದೇ ಧ್ವನಿ-ಸಕ್ರಿಯಗೊಳಿಸಿದ ಎಲೆಕ್ಟ್ರಿಕ್ ಸನ್‌ರೂಫ್, ಡ್ಯುಯಲ್ ಕ್ಯಾಮೆರಾ ಹೊಂದಿರುವ ಡ್ಯಾಶ್‌ಕ್ಯಾಮ್, ವೈರ್‌ಲೆಸ್ ಚಾರ್ಜರ್, ಹಿಂಭಾಗದ ಎಸಿ ವೆಂಟ್‌ಗಳು ಮತ್ತು ಕೂಲ್ಡ್ ಗ್ಲೋವ್ ಬಾಕ್ಸ್ ಸೇರಿದಂತೆ ಹಲವು ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ.

ಇದನ್ನೂ ಓದಿ : ವ್ಹಾವ್​.. ವ್ಹಾವ್​.. ವ್ಹಾವ್​ : ಕೇವಲ 999 ರೂ. ನೀಡಿ ಬುಕ್​ ಮಾಡಿದ್ರೆ ಸಾಕು, ನಿಮಗೆ ಸಿಗುತ್ತೆ ಎಲೆಕ್ಟ್ರಿಕ್ ಬೈಕ್​

ಇನ್ನು ಹುಂಡೈ ಎಕ್ಸ್‌ಟರ್ ಕಾರಿನಲ್ಲಿ 8-ಇಂಚಿನ HD ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಹೊಂದಿದ್ದು, ಆಂಡ್ರಾಯ್ಡ್ ಆಟೋ ಮತ್ತು Apple CarPlay, 4.2-ಇಂಚಿನ ಬಣ್ಣದ TFT MID ಹೊಂದಿದೆ. ಅಲ್ಲದೇ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಕ್ರೂಸ್ ಕಂಟ್ರೋಲ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಆರು ಏರ್‌ಬ್ಯಾಗ್‌ಗಳು ಮತ್ತು ಸೀಟ್‌ಬೆಲ್ಟ್ ರಿಮೈಂಡರ್‌ಗಳಿಗೆ ಹೊಂದಿಕೆ ಆಗುತ್ತದೆ.

 Hyundai Exter 1 lakh car bookings A new record in the auto mobile sector

Comments are closed.