ದಿನಭವಿಷ್ಯ 23 ಅಕ್ಟೋಬರ್‌ 2023 : ಶೂಲ ಯೋಗದಿಂದ ಈ ರಾಶಿಯವರಿಗೆ ಹಣದ ಹೊಳೆಯೇ ಹರಿಯಲಿದೆ

Horoscope Today ಇಂದು ಅಕ್ಟೋಬರ್‌ 23 2023 ಸೋಮವಾರ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದ್ವಾದಶ ರಾಶಿಗಳ ಮೇಲೆ ಶ್ರವಣ ನಕ್ಷತ್ರದ ಪ್ರಭಾವ ಇರುತ್ತೆ. ಅಲ್ಲದೇ ಶೂಲ ಯೋಗದಿಂದ ವೃಷಭರಾಶಿ, ಕರ್ಕಾಟಕರಾಶಿ ಹಾಗೂ ತುಲಾರಾಶಿಯವರು ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ.

Horoscope Today ಇಂದು ಅಕ್ಟೋಬರ್‌ 23 2023 ಸೋಮವಾರ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದ್ವಾದಶ ರಾಶಿಗಳ ಮೇಲೆ ಶ್ರವಣ ನಕ್ಷತ್ರದ ಪ್ರಭಾವ ಇರುತ್ತೆ. ಅಲ್ಲದೇ ಶೂಲ ಯೋಗದಿಂದ ವೃಷಭರಾಶಿ, ಕರ್ಕಾಟಕರಾಶಿ ಹಾಗೂ ತುಲಾರಾಶಿಯವರು ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಮೇಷರಾಶಿಯಿಂದ ಮೀನರಾಶಿಯ ವರೆಗೆ ಒಟ್ಟು 12 ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ ಹೇಗಿದೆ.

ಮೇಷರಾಶಿ ದಿನಭವಿಷ್ಯ
ರಾಜಕಾರಣಿಗಳಿಗೆ ಇಂದು ಉತ್ತಮವಾದ ದಿನ. ಕುಟುಂಬದಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ. ಹಣಕಾಸಿನ ವಿಚಾರದಲ್ಲಿ ಸ್ಪಷ್ಟತೆ ಇರಲಿ. ವೈಯಕ್ತಿಕ ವಿಚಾರಗಳನ್ನು ಎಚ್ಚರಿಕೆಯಿಂದ ನಿಭಾಯಿಸಿ. ವ್ಯವಹಾರಿಕ ಕ್ಷೇತ್ರದಲ್ಲಿ ಅಭಿವೃದ್ದಿ ಗೋಚರವಾಗಲಿದೆ.

ವೃಷಭರಾಶಿ ದಿನಭವಿಷ್ಯ
ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಮೂಡಲಿದೆ. ಕುಟುಂಬ ಸದಸ್ಯರು ಸಂತೋಷವಾಗಿ ಇರುತ್ತಾರೆ. ಯಾರ ಬಳಿಯಲ್ಲಾದ್ರೂ ಸಾಲ ಪಡೆದುಕೊಂಡಿದ್ದರೆ ಅದನ್ನು ನೀವು ತೀರಿಸುವಿರಿ. ನಿಮ್ಮ ಗುರಿಯನ್ನು ಸಾಧಿಸುವಿರಿ.

ಮಿಥುನರಾಶಿ ದಿನಭವಿಷ್ಯ
ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡಬೇಡಿ. ಕೆಲಸ ಕಾರ್ಯಗಳನ್ನು ತಾಳ್ಮೆಯಿಂದ ನಿಭಾಯಿಸಿ. ಮನೆಗೆ ಅತಿಥಿಗಳು ಆಗಮಿಸುತ್ತಾರೆ. ಹೆತ್ತವರ ಆಶೀರ್ವಾದ ಇರುತ್ತದೆ. ನಿಮ್ಮ ಮಕ್ಕಳಿಂದ ಸಂತಸದ ಸುದ್ದಿಯೊಂದನ್ನು ಕೇಳುವಿರಿ.

ಇದನ್ನೂ ಓದಿ : ಶಕ್ತಿ ಯೋಜನೆ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ : ಮತ್ತೊಂದು ಗುಡ್‌ನ್ಯೂಸ್‌ ಕೊಟ್ಟ ಸಿಎಂ ಸಿದ್ದರಾಮಯ್ಯ

ಕರ್ಕಾಟಕರಾಶಿ ದಿನಭವಿಷ್ಯ
ಪಾಲುದಾರಿಕೆ ವ್ಯವಹಾರದಿಂದ ಯಶಸ್ಸು. ಹಿರಿಯರ ಮಾರ್ಗದರ್ಶನದಿಂದ ಅಧಿಕ ಲಾಭ. ಮಕ್ಕಳಿಗೆ ವೃತ್ತಿ ಜೀವನದಲ್ಲಿ ಯಶಸ್ಸು, ಸಾಮಾಜಿಕವಾಗಿ ನಿಮ್ಮ ಮೇಲಿನ ಗೌರವ ಹೆಚ್ಚಾಗಲಿದೆ. ವೈಯಕ್ತಿಕ ಸಮಸ್ಯೆಗಳು ಪರಿಹಾರವನ್ನು ಕಾಣಲಿದೆ. ದೂರ ಪ್ರಯಾಣದಿಂದ ಲಾಭ.

Horoscope Today 23 October 2023 Zordic Sign 
Image Credit to Original Source

ಸಿಂಹರಾಶಿ ದಿನಭವಿಷ್ಯ
ವ್ಯಾಪಾರಿಗಳು ಆರ್ಥಿಕವಾಗಿ ಲಾಭವನ್ನು ಪಡೆಯಲಿದ್ದಾರೆ. ಕುಟುಂಬ ಸದಸ್ಯರ ಜೊತೆಗೆ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ. ಸ್ನೇಹಿತರನ್ನು ಭೇಟಿಯಾಗುವ ಸಾಧ್ಯತೆಯಿದೆ. ಸಂಜೆ ನೀವು ಪೋಷಕರ ಜೊತೆ ನಿಮ್ಮ ಆಲೋಚನೆಯನ್ನು ಹಂಚಿಕೊಳ್ಳುವಿರಿ.

ಕನ್ಯಾರಾಶಿ ದಿನಭವಿಷ್ಯ
ಹಣಕಾಸಿನ ಸಮಸ್ಯೆಗಳು ಇಂದು ಪರಿಹಾರವನ್ನು ಕಾಣಲಿದೆ. ಇಂದು ಯಾರ ಮಾತಿಗೂ ಪ್ರಭಾವ ಬೀರಬಾರದು. ವ್ಯಾಪಾರಿಗಳಿಗೆ ಇಂದು ನಿರೀಕ್ಷಿತ ಫಲಿತಾಂಶ ಸಿಗುವುದು ಕಷ್ಟ. ವಿದೇಶಿ ವ್ಯವಹಾರ ಮಾಡುವವರಿಗೆ ಶುಭ ಸುದ್ದಿ ಸಿಗಲಿದೆ. ಮನೆಗೆ ಅತಿಥಿಗಳ ಆಗಮನದಿಂದ ಮನಸಿಗೆ ಸಂತಸ.

ತುಲಾರಾಶಿ ದಿನಭವಿಷ್ಯ
ಕುಟುಂಬ ಸದಸ್ಯರ ಜೊತೆಗೆ ದೀರ್ಘ ಪ್ರಯಾಣ. ವಿದ್ಯಾರ್ಥಿಗಳು ಕಠಿಣ ಶ್ರಮದಿಂದ ಪರೀಕ್ಷೆಗಳಲ್ಲಿ ಯಶಸ್ಸು ದೊರೆಯಲಿದೆ. ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ ಅದರಿಂದ ಭವಿಷ್ಯದಲ್ಲಿ ಲಾಭ ದೊರೆಯಲಿದೆ. ಮಗುವಿನ ಆರೋಗ್ಯದ ಬಗ್ಗೆ ಎಚ್ಚರಿಕೆವಹಿಸಿ.

ಇದನ್ನೂ ಓದಿ : ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಕಾರು ಲೋನ್‌ ಆಫರ್‌ ನೀಡುತ್ತಿವೆ ಈ ಬ್ಯಾಂಕ್‌ಗಳು

ವೃಶ್ಚಿಕರಾಶಿ ದಿನಭವಿಷ್ಯ
ನಿಮ್ಮ ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಸಹೋದರನ ಜೊತೆಗೆ ಪ್ರಮುಖ ವಿಚಾರಗಳನ್ನು ಚರ್ಚಿಸುವಿರಿ. ಹಿರಿಯರ ಸಲಹೆಯಿಂದ ಅನುಕೂಲ. ಇತರರು ನಿಮಗೆ ಇಂದು ಸಹಾಯವನ್ನು ಮಾಡುತ್ತಾರೆ

ಧನಸ್ಸುರಾಶಿ ದಿನಭವಿಷ್ಯ
ಕುಟುಂಬದ ಸದಸ್ಯರ ಬಗ್ಗೆ ಚಿಂತೆ ಕಾಡಲಿದೆ. ಮಕ್ಕಳ ನಡುವೆ ನಡೆಯುತ್ತಿರುವ ವಿವಾದಗಳಿಗೆ ಇಂದು ಕುಟುಂಬದ ಸದಸ್ಯರ ಸಹಾಯ ಪಡೆಯಬಹುದು. ಆಧ್ಯಾತ್ಮಿಕ ಪ್ರಯಾಣ ಸಾಧ್ಯತೆಯಿದೆ. ದೂರದ ಬಂಧುಗಳ ಭೇಟಿಯಿಂದ ಅನುಕೂಲ.

ಮಕರರಾಶಿ ದಿನಭವಿಷ್ಯ
ಹೊಸ ವ್ಯವಹಾರವನ್ನು ಆರಂಭಿಸಿದ್ದರೆ ಉತ್ತಮ ಫಲಿತಾಂಶವನ್ನು ಪಡೆಯುತ್ತೀರಿ. ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸುವಲ್ಲಿ ಯಶಸ್ವಿ ಆಗುತ್ತೀರಿ. ಯಾವುದೇ ಕೆಲಸವನ್ನು ಮುಂದೂಡಬೇಡಿ. ದೈನಂದಿನ ಅಗತ್ಯತೆ ಪೂರೈಸುವಲ್ಲಿ ಯಶಸ್ವಿ ಆಗುತ್ತೀರಿ.

ಇದನ್ನೂ ಓದಿ : ದಸರಾ ರಜೆ ನವೆಂಬರ್ 1ರ ವರೆಗೆ ವಿಸ್ತರಣೆ ? ಇಲ್ಲಿದೆ ಬಿಗ್‌ ಅಪ್ಡೇಟ್ಸ್‌

ಕುಂಭರಾಶಿ ದಿನಭವಿಷ್ಯ
ಯಾವುದೇ ಕಾರಣಕ್ಕೂ ನಕಾರಾತ್ಮಕ ಆಲೋಚನೆಗಳು ಬಾರದಂತೆ ಎಚ್ಚರಿಕೆಯನ್ನು ವಹಿಸಿ. ನೀವು ಏನೇ ಮಾಡಿದರೂ ಇಂದು ಪೂರ್ಣಗೊಳ್ಳುತ್ತದೆ. ಅಪರಿಚಿತರ ಜೊತೆಗೆ ವ್ಯವಹಾರ ಮಾಡುವ ವೇಳೆಯಲ್ಲಿ ಬಹಳ ಎಚ್ಚರಿಕೆ ಅಗತ್ಯ. ಇಲ್ಲದಿದ್ದರೆ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ.

ಮೀನರಾಶಿ ದಿನಭವಿಷ್ಯ
ಧಾರ್ಮಿಕ ಪುಣ್ಯಕ್ಷೇತ್ರಗಳ ಭೇಟಿಯಿಂದ ಮನಸಿಗೆ ಸಂತಸ. ಅವಿವಾಹಿತರಿಗೆ ಯೋಗ್ಯ ಕಂಕಣಬಲ ಕೂಡಿಬರಲಿದೆ. ಹೊಂದಾಣಿಕೆಯಿಂದ ಅನುಕೂಲ. ದೂರದ ಬಂಧುಗಳ ಭೇಟಿಯಿಂದ ಮನಸಿಗೆ ಸಂತಸ. ವ್ಯವಹಾರ ಕ್ಷೇತ್ರದಲ್ಲಿ ಯಶಸ್ಸು ನಿಮ್ಮನ್ನು ಹಿಂಬಾಲಿಸಲಿದೆ.

Horoscope Today 23 October 2023 Zordic Sign

Comments are closed.