ಕೃಷಿಪಂಪ್‌ ಸಕ್ರಮ, ಒಬಿಸಿಗೆ ಕುಂಚಿಟಿಗರ ಸಮುದಾಯ : ಇಲ್ಲಿದೆ ಸಚಿವ ಸಂಪುಟ ಸಭೆಯ ಮುಖ್ಯಾಂಶಗಳು

ಬೆಂಗಳೂರು : ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ (CM siddaramaiah) ಅವರ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ (Karnataka cabinet meeting) ನಡೆಯಿತು. ಸಭೆಯಲ್ಲಿ ಹಲವು ವಿಚಾರಗಳ ಕುರಿತು ಚರ್ಚೆ ನಡೆದಿದೆ.

ಬೆಂಗಳೂರು : ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ (CM siddaramaiah) ಅವರ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ (Karnataka cabinet meeting) ನಡೆಯಿತು. ಸಭೆಯಲ್ಲಿ ಹಲವು ವಿಚಾರಗಳ ಕುರಿತು ಚರ್ಚೆ ನಡೆದಿದೆ. ಪ್ರಮುಖವಾಗಿ ಹಿಂದುಳಿದ ವರ್ಗಗಳಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ಕಲ್ಪಿಸುವ ನ್ಯಾಯಮೂರ್ತಿ ಭಕ್ತ ವತ್ಸಲ ಆಯೋಗದ ಎರಡನೇ ವರದಿಗೆ ಸಂಪುಟ ಅಸ್ತು ಎಂದಿದೆ.

ನೀರಾವರಿ ಪಂಪುಗಳಿಗೆ ಸೋಲಾರ್‌ ಅಳವಡಕೆ, ರಾಜ್ಯದ ಏಳು ಕಡೆಗಳಲ್ಲಿ ಕೈಗಾರಿಕಾ ವಸಹಾತು. ಕೃಷಿ ನವೋದ್ಯಮ ಯೋಜನೆ ಜಾರಿ, ಮಂಗಳೂರು ಮೀನುಗಾರಿಕೆ ಬಂದರಿನ 3 ನೇ ಹಂತದ ವಿಸ್ತರಣೆ ಕಾಮಗಾರಿಗೆ ಅನುಮೋದನೆ, ಕೊಡಗರ ಬದಲು ಕೊಡವ ಬದಲಾವಣೆ ಸೇರಿದಂತೆ ಸಂಪುಟ ಸಭೆಯ ಮುಖ್ಯಾಂಶಗಳು ಇಲ್ಲಿದೆ.

ನ್ಯಾ.ಭಕ್ತವತ್ಸಲ ಆಯೋಗದ ವರದಿ ಅಂಗೀಕಾರ :
ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿ ಕಲ್ಪಿಸಲು ಸಂಬಂಧ ರಚಿಸಲಾಗಿದ್ದ ನ್ಯಾ.ಭಕ್ತವತ್ಸಲ ಆಯೋಗದ ಎರಡನೇ ವರದಿ ಬಗ್ಗೆ ಸಂಪುಟದಲ್ಲಿ ಚರ್ಚೆ ನಡೆದು ಅಂಗೀಕರಿಸಲಾಗಿದೆ. ಈ ವರದಿಯನ್ನು ಆಧರಿಸಿ ಸುಪ್ರಿಂಕೋರ್ಟ್‌ಗೆ ಅಫಿಡೆವಿಟ್ ಸಲ್ಲಿಸಲಾಗುತ್ತದೆ. ಈ ಹಿಂದೆ ಯಾವ ಆಧಾರದಲ್ಲಿ ರಾಜಕೀಯ ಮೀಸಲು ನೀಡಲಾಗುತ್ತಿದೆ ಎಂದು ಮಹಾರಾಷ್ಟ್ರ ಪ್ರಕರಣದಲ್ಲಿ ಸುಪ್ರಿಂಕೋರ್ಟ್ ಪ್ರಶ್ನಿಸಿತ್ತಲ್ಲದೇ ಎಲ್ಲ ರಾಜ್ಯಗಳಿಗೂ ಅನ್ವಯಿಸಿತ್ತು.‌ ಇದರಿಂದ ನಗರ, ಗ್ರಾಮೀಣ ಸ್ಥಳೀಯ ಸಂಸ್ಥೆ ಚುನಾವಣೆ ನೆನೆಗುದಿಗೆ ಬಿದ್ದಿತ್ತು. ಹೀಗಾಗಿ ಬಿಜೆಪಿ ಸರ್ಕಾರ ನ್ಯಾ. ಭಕ್ತವತ್ಸಲ ಸಮಿತಿ ರಚಿಸಿತ್ತು. ಈ ಸಮಿತಿ ಎರಡನೇ ಪೂರಕ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು.

ನೀರಾವರಿ ಪಂಪ್ ಸೆಟ್ ಸೌರೀಕರಣ
ನೀರಾವರಿ ಪಂಪ್ ಸೆಟ್ ಗಳಿಗೆ ಸ್ಟಾಂಡ್ ಅಲೋನ್, ಆಫ್ ಗ್ರಿಡ್ ಸೋಲಾರ್ ಪಂಪ್ ಸೆಟ್ ಒದಗಿಸಲು ಬೆಂಬಲ ಹಾಗೂ ನೀರಾವರಿ ಪಂಪ್ ಸೆಟ್ ಫೀಡರ್ ಗಳ ಸೌರೀಕರಣಕ್ಕೆ ಕೈಗೆತ್ತಿಕೊಳ್ಳಲು ಸಂಪುಟ ಒಪ್ಪಿಗೆ ನೀಡಿದೆ. ಅದೇ ರೀತಿ ರಾಜ್ಯದಲ್ಲಿ ನೀರಾವರಿ ಪಂಪ್‌ಸೆಟ್‌ಗಳನ್ನು 2015 ರಿಂದ ಸಕ್ರಮ ಗೊಳಿಸಿರುವ ಕ್ರಮಕ್ಕೆ ಘಟನೋತ್ತರ ಅನುಮೋದನೆ.

ಇದನ್ನೂ ಓದಿ : ಜೆಡಿಎಸ್- ಬಿಜೆಪಿ ಮೈತ್ರಿಗೆ ಇಂದೇ ಕ್ಲೈಮ್ಯಾಕ್ಸ್‌ : ಯಾವ ಯಾವ ಕ್ಷೇತ್ರ ಯಾರಿಗೆ ಗೊತ್ತಾ ? ಇಲ್ಲಿದೆ ಇನ್‌ಸೈಡ್‌ ಸ್ಟೋರಿ

ಏಳುಕಡೆ ಕೈಗಾರಿಕಾ ವಸಾಹತು
ಕೆಎಸ್‌ಎಸ್‌ಐಡಿಸಿ ವತಿಯಿಂದ ರಾಜ್ಯದ ಏಳು ಕೈಗಾರಿಕಾ ವಸಾಹತು ಸ್ಥಾಪನೆಗೆ ನಿರ್ಧರಿಸಲಾಗಿದೆ. ಚಿತ್ತಾಪುರ, ಕೋಡ್ಕಣಿ, ಕಣಗಾಲ, ಬದನಗುಪ್ಪೆ, ಇಂಡಿಯಲ್ಲಿ ವಸಾಹತು ಸ್ಥಾಪನೆಗೆ 166 ಕೋಟಿ ರೂ. ಹಾಗೂ ಹುಬ್ಬಳ್ಳಿ ಮತ್ತು ಶಹಪೂರದಲ್ಲಿ ಭೂ ಸ್ವಾಧೀನಕ್ಕೆ ಸಮ್ಮತಿ

ಪೊಲೀಸ್ ಇಲಾಖೆಗೆ 1682 ಹೊಸ ವಾಹನ ಖರೀದಿ
ಪೊಲೀಸ್ ಮೊಬಿಲಿಟಿ ಯೋಜನೆಯಡಿ ಪೊಲೀಸ್ ಇಲಾಖೆಯು 1682 ವಾಹನಗಳನ್ನು 83.38 ಕೋಟಿ ರೂ. ವೆಚ್ಚದಲ್ಲಿ ಖರೀದಿಸಲು ಅನುಮೋದನೆ.

Karnataka Chief Minister Siddaramaiah Held cabinet meeting Highlights
Image credit To Original Source

ಕೃಷಿ ನವೋದ್ಯಮ ಯೋಜನೆ ಜಾರಿ
ಕೃಷಿ ಪ್ರೋತ್ಸಾಹಿಸಲು ಕೃಷಿ ನವೋದ್ಯಮ ಯೋಜನೆ ಜಾರಿ ಮಾಡಲಾಗುತ್ತಿದೆ. ಕೃಷಿ ಕ್ಷೇತ್ರದಲ್ಲಿ ಉದ್ಯಮಶೀಲತೆ ಹೆಚ್ಚಿಸಲು ಹಾಗೂ ಕೃಷಿ ಪದವೀಧರರು, ಆಸಕ್ತ ಪ್ರಗತಿಪರ ರೈತರು ಕೃಷಿಯಲ್ಲಿ ನವೋದ್ಯಮ ಆರಂಭಿಸಲು ಮತ್ತು ಕೃಷಿಯಲ್ಲಿ ನವೀನ‌ ಪರಿಕಲ್ಪನೆಗಳ ವಾಣಿಜ್ಯೀಕರಣ ಉತ್ತೇಜಿಸಲು ಕೃಷಿ ನವೋದ್ಯಮ ಯೋಜನೆ ಜಾರಿಗೆ ಅನುಮೋದನೆ

ಒಂದು ವರ್ಷದ ದಂಡ ವಿನಾಯಿತಿ
ರಾಜ್ಯದಲ್ಲಿ ನೋಂದಾಯಿತ ವಾಹನಗಳ ಸ್ಕ್ರಾಪಿಂಗ್ ಪಾಲಿಸಿ 2022 ಜಾರಿಗೊಳಿಸಲು ನಿರ್ಧರಿಸಲಾಗಿದೆ. ಸರ್ಕಾರಿ ಇಲಾಖೆಗಳು, ನಿಗಮಗಳು, ಮಂಡಳಿಗಳಲ್ಲಿರುವ 15 ವರ್ಷ ಪೂರೈಸಿರುವ ವಾಹನಗಳನ್ನು ನಾಶ ಪಡಿಸಲು ಹಾಗೂ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ನಾಶ ಪಡಿಸಲು ಉದ್ದೇಶಿಸಿರುವ ವಾಹನಗಳ ಮೇಲೆ ಕೊನೆಯ ಒಂದು ವರ್ಷದಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿನ ಬಾಕಿ ದಂಡಗಳ ವಸೂಲಿಯಿಂದ ಒಂದು ವರ್ಷದ ವರೆಗೆ ಮಾತ್ರ ವಿನಾಯಿತಿ ನೀಡಲು ಅನುಮೋದನೆ

ಇದನ್ನೂ ಓದಿ : ಸಿಎಂ ಆಯ್ತು, ಕಾಂಗ್ರೆಸ್ ನಲ್ಲಿ ಇನ್ಮುಂದೇ ಡಿಸಿಎಂ ಫೈಟ್‌ : ಸಿದ್ದರಾಮಯ್ಯ Vs ಡಿಕೆ ಶಿವಕುಮಾರ್‌

ಆಶಾಕಿರಣ ಯೋಜನೆಯಲ್ಲಿ ಕಣ್ಣಿನ ತಪಾಸಣೆ
ಆಶಾಕಿರಣ ಯೋಜನೆಯಲ್ಲಿ ಕಣ್ಣಿನ ತಪಾಸಣೆ ನಡೆಸಿ, ಅರ್ಹ ಫಲಾನುಭವಿಗಳಿಗೆ ಕನ್ನಡಕ ವಿತರಣೆಗೆ ಚಿತ್ರದುರ್ಗ, ರಾಯಚೂರು, ಉತ್ತರ ಕನ್ನಡ, ಮಂಡ್ಯ ಜಿಲ್ಲೆಯಲ್ಲಿ ಜಾರಿಗೆ 29.14 ಕೋಟಿ ರೂ. ಯೋಜನೆಗೆ ಸಮ್ಮತಿ

ಮೀನುಗಾರಿಕಾ ಬಂದರು ವಿಸ್ತರಣೆ ಕಾಮಗಾರಿ 

ಮಂಗಳೂರು ಮೀನುಗಾರಿಕೆ ಬಂದರಿನ 3 ನೇ ಹಂತದ ವಿಸ್ತರಣೆ ಕಾಮಗಾರಿ ಪೂರ್ಣಗೊಳಿಸಲು 49.50 ಕೋಟಿ ರೂ.ಪರಿಷ್ಕೃತ ಅಂದಾಜಿಗೆ ಅನುಮೋದನೆ

ಕೊಡಗರ ಬದಲು ಕೊಡವ 

ಕೊಡಗರು ಎಂಬುದನ್ನು ಕೊಡವ ಎಂದು ಬದಲಾವಣೆ ಮಾಡಲು ನಿರ್ಣಯ

Karnataka Chief Minister Siddaramaiah Held cabinet meeting Highlights
Image Credit : Twitter

ಒಬಿಸಿ ಪಟ್ಟಿಗೆ ಕುಂಚಿಟಿಗರ ಸಮುದಾಯ

ಕೇಂದ್ರ ಹಿಂದುಳಿದ ವರ್ಗಗಳ (ಒಬಿಸಿ)ಪಟ್ಟಿಗೆ ಕುಂಚಿಟಿಗರ ಸಮುದಾಯ(ವರ್ಗ) ಸೇರ್ಪಡೆಗೆ ಶಿಫಾರಸು

ನಿವೃತ್ತಿ ವೇತನ ಕಾಯ್ದೆ ತಿದ್ದುಪಡಿ

ಕೆಪಿಎಸ್‌ಸಿ ಅಧ್ಯಕ್ಷ ಮತ್ತು ಸದಸ್ಯರಿಗೆ ನಿವೃತ್ತಿ ವೇತನಕ್ಕೆ ಕಾಯ್ದೆ ತಿದ್ದುಪಡಿ

ಕೆಪಿಎಸ್‌ಸಿ ವರದಿ ಮಂಡನೆ

ಕಾನೂನು ಮಾಪನ ಇಲಾಖೆಯ ನೇಮಕಾತಿ ನಿಯಮಗಳಿಗೆ ತಿದ್ದುಪಡಿ

ಬಿಟಿಎಂ ಬಡಾವಣೆಯಲ್ಲಿ ಪ್ರಯಾಣಿಕ ತಂಗುದಾಣ 

ಬೆಂಗಳೂರಿನ ಬಿಟಿಎಂ ಬಡಾವಣೆಯಲ್ಲಿ 2.17 ಎಕರೆಯಲ್ಲಿ ಪ್ರಯಾಣಿಕರ ತಂಗುದಾಣ ನಿರ್ಮಿಸಲು 67.62 ಕೋಟಿ ರೂ.‌ಮಂಜೂರು

ಕೃಷಿ ವಿವಿಗೆ ಜಮೀನು ಮಂಜೂರು 

ರಾಷ್ಟ್ರೀಯ ವಿಧಿ ವಿಜ್ಞಾನಗಳ ವಿಶ್ವ ವಿದ್ಯಾಲಯ ಸ್ಥಾಪನೆಗೆ ಧಾರವಾಡದ ಕೃಷಿ ವಿಜ್ಞಾನಗಳ ವಿವಿ ಅಧೀನದಲ್ಲಿರುವ 45.19 ಎಕರೆ ಜಮೀನನ್ನು 30 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದಲ್ಲಿ ನೀಡಲು ಸಮ್ಮತಿ

ಲೋಕಾಯುಕ್ತ ಅಪರ ನಿಬಂಧಕರ ಹುದ್ದೆ ಮುಂದುವರಿಕೆ 

ಲೋಕಾಯುಕ್ತ ಸಂಸ್ಥೆಯಲ್ಲಿ ಅಪರ ನಿಬಂಧಕರು (ವಿಚಾರಣೆಗಳು) ಹುದ್ದೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಮೂವರು ನಿವೃತ್ತ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರುಗಳ ಸೇವೆ ಇನ್ನೊಂದು ವರ್ಷದ ಅವಧಿಗೆ ಮುಂದುವರಿಕೆ.

ರಾಯಚೂರು ರಸ್ತೆ ಅಭಿವೃದ್ದಿಗೆ 1695.85 ಕೋಟಿ ರೂ. :

ರಾಯಚೂರು ಬಳಿಯ ಕಲ್ಮಲ ಜಂಕ್ಷನ್‌ನಿಂದ ಸಿಂಧನೂರು ಬಳಿಯ ಬಳ್ಳಾರಿ ಲಿಂಗಸಗೂರು ರಸ್ತೆ ವೃತ್ತದವವರೆಗೆ (78.45 ಕಿಮೀ) ರಸ್ತೆ ಅಭಿವೃದ್ಧಿಗೆ 1695.85 ಕೋಟಿ ರೂ. ಯೋಜನಾ ವೆಚ್ಚಕ್ಕೆ ಅನುಮತಿ. ಎಚ್ ಎಎಂ ಮಾದರಿಯಲ್ಲಿ ಕೈಗೊಳ್ಳವಲ್ಲಿ ಕೆ ಆರ್ ಡಿಸಿಎಲ್ ಗೆ ಅನುಮತಿ ನೀಡಲಾಗಿದೆ.

ಇಷ್ಟೇ ಅಲ್ಲದೇ ಮೋಟಾರು ವಾಹನ ಕಾಯ್ದೆ 1988ರ ಕಲಂ 136ಎ ಮತ್ತು ಕೇಂದ್ರ ಮೋಟಾರು ವಾಹನ ನಿಯಮಾವಳಿಗಳ ನಿಯಮ 1989ರ ನಿಯಮ 167ಎ ಅಡಿಯಲ್ಲಿ ಎಲೆಕ್ಟ್ರಾನಿಕ್ ಮಾನಿಟರಿಂಗ್ ಮತ್ತು ಎನ್ ಫೋರ್ಸ್ ಮೆಂಟ್ ಆಫ್ ರೋಡ್ ಸೇಫ್ಟಿ ಯೋಜನೆಯನ್ನು 20 ಕೋಟಿ ರೂ.ವೆಚ್ಚದಲ್ಲಿ ಅನುಷ್ಠಾನ ಗೊಳಿಸಲು ಅನುಮೋದನೆಗೆ ಸಂಪುಟ ಸಭೆ ಅಸ್ತು ಎಂದಿದೆ.

Karnataka Chief Minister Siddaramaiah Held cabinet meeting Highlights

Comments are closed.