Horoscope Today : ದಿನಭವಿಷ್ಯ 26 ಡಿಸೆಂಬರ್ 2023 ಮಂಗಳವಾರ. ಇಂದು ದ್ವಾದಶರಾಶಿಗಳ ಮೇಲೆ ಮೃಗಶಿರಾ ನಕ್ಷತ್ರದ ಪ್ರಭಾವ ಇರುತ್ತದೆ. ಶುಕ್ರ ಯೋಗದಿಂದ ಕೆಲವು ರಾಶಿಗಳು ವಿಶೇಷವಾದ ಲಾಭವನ್ನು ಪಡೆಯುತ್ತಾರೆ. ಮೇಷರಾಶಿಯಿಂದ ಮೀನರಾಶಿಯ ವರೆಗೆ ಒಟ್ಟು 12 ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ ಹೇಗಿದೆ.
ಮೇಷರಾಶಿ ದಿನಭವಿಷ್ಯ
ಮನೆ ನಿರ್ಮಾಣದ ಕಡೆಗೆ ಗಮನ ಹರಿಸುವಿರಿ. ಹೊಸ ವಸ್ತುವಿನ ಖರೀದಿ. ಅವಿವಾಹಿತರಿಗೆ ಯೋಗ್ಯ ಸಂಬಂಧ ಕೂಡಿ ಬರಲಿದೆ. ಮಕ್ಕಳ ಜೊತೆಗೆ ವಿಹಾರಕ್ಕೆ ತೆರಳುವ ಸಾಧ್ಯತೆಯಿದೆ. ಇಂದು ನಿಮ್ಮ ಪಾಲಿಗೆ ಅದೃಷ್ಟದ ದಿನ. ಯಾವುದೇ ಕಾರ್ಯಗಳನ್ನು ಮಾಡಿದ್ರು ಯಶಸ್ವಿ ಆಗುತ್ತೀರಿ.
ವೃಷಭರಾಶಿ ದಿನಭವಿಷ್ಯ
ಕುಟುಂಬದಲ್ಲಿ ಸಂತಸ ಮೂಡಲಿದೆ. ವಿದ್ಯಾರ್ಥಿಗಳು ಗುರಿ ಸಾಧಿಸಲು ಸಾಕಷ್ಟು ಶ್ರಮಿಸಬೇಕಾಗುತ್ತದೆ. ಮಾತಿನಲ್ಲಿ ಮಾಧುರ್ಯವಿರಲಿ. ಅತಿಥಿಗಳ ಆಗಮನದಿಂದ ಮನೆಯಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಲಿದೆ. ಹೊಂದಾಣಿಕೆಯಿಂದ ಕಾರ್ಯಾನುಕೂಲ.
ಮಿಥುನರಾಶಿ ದಿನಭವಿಷ್ಯ
ನೀವಿಂದು ತಾಳ್ಮೆಯಿಂದ ಕೆಲಸ ಕಾರ್ಯಗಳನ್ನು ಪೂರೈಸಬೇಕು. ಸಹೋದ್ಯೋಗಿಗಳು ನಿಮ್ಮಿಂದ ಸಹಾಯವನ್ನು ಪಡೆಯುತ್ತಾರೆ. ಯಾವುದೇ ಪರಿಸ್ಥಿತಿಯಲ್ಲಿಯೂ ಸಹೋದರರಿಂದ ಬೆಂಬಲವನ್ನು ಪಡೆಯುತ್ತೀರಿ. ಸಂಗಾತಿಯಿಂದ ಶುಭ ಸುದ್ದಿ ಕೇಳುವಿರಿ.
ಕರ್ಕಾಟಕರಾಶಿ ದಿನಭವಿಷ್ಯ
ಕಣ್ಣಿಗೆ ಸಂಬಂಧಿಸಿದ ಸಮಸ್ಯೆ ಕಂಡು ಬರಲಿದೆ. ಯಾವುದಕ್ಕೂ ವೈದ್ಯರ ಸಲಹೆಯನ್ನು ಪಾಲಿಸುವುದು ಒಳಿತು. ಉದ್ಯೋಗಿಗಳು ಕೆಲಸ ಕಾರ್ಯಗಳಲ್ಲಿ ಎಚ್ಚರಿಕೆಯನ್ನು ವಹಿಸಿ. ಕುಟುಂಬ ಸದಸ್ಯರ ಜೊತೆಗೆ ಸಂತಸದ ಕ್ಷಣಗಳನ್ನು ಕಳೆಯುವಿರಿ.
ಸಿಂಹರಾಶಿ ದಿನಭವಿಷ್ಯ
ಸಂಗಾತಿಯ ಬೆಂಬಲ ದೊರೆಯಲಿದೆ. ಯಾವುದೇ ಕೆಲಸ ಕಾರ್ಯಗಳಲ್ಲಿಯೂ ಯಶಸ್ವಿ ಆಗುತ್ತೀರಿ. ಹಳೆಯ ಸ್ನೇಹಿತರ ಭೇಟಿಯಿಂದ ಸಂತಸ. ಮೇಲಾಧಿಕಾರಿಗಳ ಜೊತೆಗೆ ಉತ್ತಮ ಒಡನಾಟವಿರಲಿ. ಕೆಲವೊಂದು ಖಿನ್ನತೆಯ ಸುದ್ದಿಯನ್ನು ಕೇಳುವಿರಿ. ದೂರದ ಬಂಧುಗಳ ಭೇಟಿ.
ಇದನ್ನೂ ಓದಿ : ಜಾತಿಗಣತಿ ಎಂಬ ಬಿಸಿತುಪ್ಪ: ಸಿಎಂ ಸಿದ್ಧರಾಮಯ್ಯ ನಿರ್ಧಾರದ ಮೇಲೆ ನಿಂತಿದೆ ಕಾಂಗ್ರೆಸ್ ಭವಿಷ್ಯ
ಕನ್ಯಾರಾಶಿ ದಿನಭವಿಷ್ಯ
ಯಾವುದೇ ಹೂಡಿಕೆಗೆ ಮೊದಲು ಹಿರಿಯರ ಸಲಹೆಯನ್ನು ಆಲಿಸಿ. ಮಾತಿನಲ್ಲಿ ಮಾಧುರ್ಯವಿರಲಿ. ಸ್ನೇಹಿತರ ಸಂಖ್ಯೆಯಲ್ಲಿ ಹೆಚ್ಚಳ. ಅವಿವಾಹಿತರಿಗೆ ಯೋಗ್ಯ ಸಂಬಂಧಗಳು ಕೂಡಿಬರಲಿದೆ. ಕೆಲಸದ ಸ್ಥಳದಲ್ಲಿ ಧನಾತ್ಮಕ ಪರಿಣಾಮವನ್ನು ಪಡೆಯುವಿರಿ.

ತುಲಾರಾಶಿ ದಿನಭವಿಷ್ಯ
ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಸಾಕಷ್ಟು ಬಾರಿ ಯೋಚಿಸಿ. ಕುಟುಂಬದಲ್ಲಿ ಯಾರಿಗಾದರೂ ತೊಂದರೆ ಆಗುವ ಸೂಚನೆಯಿದೆ. ಯಾರ ಜೊತೆಗೂ ನೀವು ವಾದಕ್ಕೆ ಇಳಿಯ ಬೇಡಿ. ಪ್ರೀತಿಯ ಜೀವನದಲ್ಲಿ ಖುಷಿ ಸಿಗಲಿದೆ. ಸಂಗಾತಿಯ ಜೊತೆಗೆ ಮಾತುಗಳನ್ನು ನಿಯಂತ್ರಿಸಿ.
ವೃಶ್ಚಿಕರಾಶಿ ದಿನಭವಿಷ್ಯ
ಧಾರ್ಮಿಕ ಕೆಲಸ ಕಾರ್ಯಗಳಲ್ಲಿ ಭಾಗವಹಿಸುವಿರಿ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶವನ್ನು ಪಡೆಯುವಿರಿ. ಧಾರ್ಮಿಕ ಕ್ಷೇತ್ರಗಳ ಭೇಟಿಯಿಂದ ಮನಸಿಗೆ ಸಂತಸ.ಪಾಲುದಾರಿಕೆಯಲ್ಲಿ ವ್ಯವಹಾರ ಆರಂಭಿಸಿದ್ರೆ ಅಧಿಕ ಲಾಭ ದೊರೆಯಲಿದೆ. ಸಾಮಾಜಿಕ ಕಾರ್ಯಗಳಲ್ಲಿ ಮನ್ನಣೆ ದೊರೆಯಲಿದೆ.
ಇದನ್ನೂ ಓದಿ : ಕರ್ನಾಟಕದಲ್ಲಿ 8 ಮಂದಿಗೆ ಕೊರೊನಾ ರೂಪಾಂತರಿ JN1 ಸೋಂಕು ದೃಢ
ಧನಸ್ಸುರಾಶಿ ದಿನಭವಿಷ್ಯ
ಹಳೆಯ ಸಾಲ ಮರುಪಾವತಿ ಮಾಡುವಲ್ಲಿ ಯಶಸ್ವಿ ಆಗುತ್ತೀರಿ. ಸಂಬಂಧಿಕರ ನಡುವಿನ ವಾದ ವಿವಾದಗಳು ಬಗೆ ಹರಿಯಲಿದೆ. ಕುಟುಂಬದ ಸದಸ್ಯರಿಗಾಗಿ ಪಾರ್ಟಿಯನ್ನು ಆಯೋಜಿಸುವಿರಿ. ಮನೆಯಲ್ಲಿ ವಿವಾಹದ ಕುರಿತು ಮಾತುಕತೆ ನಡೆಯಲಿದೆ.
ಮಕರರಾಶಿ ದಿನಭವಿಷ್ಯ
ನ್ಯಾಯಾಲಯಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಯಶಸ್ಸು ದೊರೆಯಲಿದೆ. ಆಸ್ತಿ ಖರೀದಿ ಮತ್ತು ಮಾರಾಟದಿಂದ ಅಧಿಕ ಹಣ. ಖಾಸಗಿ ಉದ್ಯೋಗಿಗಳು ಕೆಲಸದ ಮೇಲೆ ಗಮನ ಹರಿಸಬೇಕಾಗುತ್ತದೆ. ದೂರ ಪ್ರಯಾಣದ ವೇಳೆ ಎಚ್ಚರಿಕೆ ವಹಿಸಿ.
ಇದನ್ನೂ ಓದಿ : ಭಾರತ – ದಕ್ಷಿಣ ಆಫ್ರಿಕಾ ಟೆಸ್ಟ್ ಪಂದ್ಯಕ್ಕೆ ಮಳೆಯ ಆತಂಕ : ಐತಿಹಾಸಿಕ ಗೆಲುವು ದಾಖಲಿಸುತ್ತಾ ರೋಹಿತ್ ಶರ್ಮಾ ಪಡೆ
ಕುಂಭರಾಶಿ ದಿನಭವಿಷ್ಯ
ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಅನುಕೂಲಕರ. ಬ್ಯಾಂಕಿನಿಂದ ಸಾಲ ಪಡೆಯುವ ನಿಮ್ಮ ಯೋಚನೆ ಕೈಗೂಡಲಿದೆ. ಶತ್ರುಗಳ ಬಗ್ಗೆ ಉದ್ಯೋಗದ ಸ್ಥಳದಲ್ಲಿ ಬಹಳ ಎಚ್ಚರಿಕೆಯನ್ನು ವಹಿಸಿ. ನಿಮ್ಮ ಕೆಲಸಕ್ಕೆ ಕುತ್ತು ತರುವ ತಂತ್ರವೊಂದು ನಡೆಯುತ್ತಿದೆ. ಆರೋಗ್ಯದ ಸಮಸ್ಯೆ ನಿಮ್ಮನ್ನು ಕಾಡುವ ಸಾಧ್ಯತೆಯಿದೆ.
ಮೀನರಾಶಿ ದಿನಭವಿಷ್ಯ
ಕುಟುಂಬ ಸದಸ್ಯರ ಆರೋಗ್ಯ ಹಠಾತ್ ಕೈಕೊಡುವ ಸಾಧ್ಯತೆಯಿದೆ. ಮಕ್ಕಳ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ದೂರ ಪ್ರಯಾಣದಿಂದ ನಿಮಗೆ ಅಧಿಕ ಲಾಭ ದೊರೆಯಲಿದೆ. ಹಿತ ಶತ್ರುಗಳ ಬಗ್ಗೆ ಎಚ್ಚರಿಕೆ ಇರಲಿ. ಪಾಲುದಾರಿಕೆ ವ್ಯವಹಾರದಿಂದ ಅಧಿಕ ಲಾಭ ದೊರೆಯಲಿದೆ.
Horoscope Today 26 December 2023 Zodiac Sign