ಜಾತಿಗಣತಿ ಎಂಬ ಬಿಸಿತುಪ್ಪ: ಸಿಎಂ ಸಿದ್ಧರಾಮಯ್ಯ ನಿರ್ಧಾರದ ಮೇಲೆ ನಿಂತಿದೆ ಕಾಂಗ್ರೆಸ್ ಭವಿಷ್ಯ

Caste Census Karnataka: ಗ್ಯಾರಂಟಿಗಳ ಜನಪ್ರಿಯತೆಯ ಮೇಲೆ ಲೋಕಸಭಾ ಚುನಾವಣೆಯನ್ನೂ ಗೆದ್ದು ಬೀಗಲು ಹೊರಟಿರೋ ಸಿದ್ಧರಾಮಯ್ಯ ನೇತೃತ್ವದ ಸರ್ಕಾರಕ್ಕೆ ಜಾತಿಗಣತಿಯೇ ಬಿಸಿತುಪ್ಪವಾಗಿ ಪರಿಣಮಿಸೋ ಸಾಧ್ಯತೆ ದಟ್ಟವಾಗಿದೆ.

Caste Census Karnataka: ಗ್ಯಾರಂಟಿಗಳ ಜನಪ್ರಿಯತೆಯ ಮೇಲೆ ಲೋಕಸಭಾ ಚುನಾವಣೆಯನ್ನೂ (Lok Sabha Election 2024) ಗೆದ್ದು ಬೀಗಲು ಹೊರಟಿರೋ ಸಿಎಂ ಸಿದ್ಧರಾಮಯ್ಯ (CM Siddaramaiah ) ನೇತೃತ್ವದ ಸರ್ಕಾರಕ್ಕೆ ಜಾತಿಗಣತಿಯೇ ಬಿಸಿತುಪ್ಪವಾಗಿ ಪರಿಣಮಿಸೋ ಸಾಧ್ಯತೆ ದಟ್ಟವಾಗಿದೆ. ರಾಜ್ಯದ ಪ್ರಬಲ ಜಾತಿಗಳ ಪರ ಹಾಗೂ ವಿರೋಧ ನಿಲುವಿನಿಂದ ಸಿಎಂ ಸಿದ್ದರಾಮಯ್ಯ ಸಂಕಷ್ಟಕ್ಕಿಡಾಗಿದ್ದು, ವರದಿ ಸ್ವೀಕರಿಸಿದರೇ ಲಿಂಗಾಯತ್ ಹಾಗೂ ಒಕ್ಕಲಿಗರ ವಿರೋಧ ಹಾಗೂ ಸ್ವೀಕರಿಸದೇ ಇದ್ದಲ್ಲಿ ತಮ್ಮದೇ ಆದ ಅಹಿಂದ ವರ್ಗಗಳ ಕೆಂಗಣ್ಣಿಗೆ ಗುರಿಯಾಗೋ ಭೀತಿಯಲ್ಲಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಪ್ರಸ್ತುತ ಒಂದು ಲೋಕಸಭಾ ಕ್ಷೇತ್ರ ಮಾತ್ರ‌ ಗೆದ್ದಿರೋ ಕಾಂಗ್ರೆಸ್ ಗೆ ಈ ಭಾರಿ 28 ಕ್ಷೇತ್ರಗಳಲ್ಲೂ ಗೆಲ್ಲಬೇಕೆಂಬ ಕನಸಿದೆ. ಗ್ಯಾರಂಟಿಗಳ ಜನಪ್ರಿಯತೆಯಿಂದ‌ ಈ ಗೆಲುವು ಸುಲಭ ಎಂಬ ನಂಬಿಕೆಯೂ ಇದೆ. ಆದರೆ ಜಾತಿಗಣತಿಎಂಬ ಕಾಂಗ್ರೆಸ್ ಒಳಗಿನ ಅಸ್ತ್ರವೇ ಈ ಗೆಲುವಿಗೆ ಅಡ್ಡಿಯಾದರೂ ಆಗಬಹುದೆಂಬ ಶಂಕೆ ವ್ಯಕ್ತವಾಗುತ್ತಿದೆ.

Caste Census Future of Congress depends on Karnataka CM Siddaramaiah decision
Image Credit to Original Source

ದಾವಣಗೆರೆಯಲ್ಲಿ ವೀರಶೈವ ಲಿಂಗಾಯತ ವಾರ್ಷಿಕ ಸಮ್ಮೇಳನದ ನೆಪದಲ್ಲಿ ಬೃಹತ ಶಕ್ತಿಪ್ರದರ್ಶನ ಮಾಡಿರೋ ನಾಡಿನ ವೀರಶೈವ ಹಾಗೂ ಲಿಂಗಾಯತ್ ಬಾಂಧವರು ಸಮ್ನೇಳನದ ನಿರ್ಣಯದಲ್ಲಿಯೇ ಯಾವ ಕಾರಣಕ್ಕೂ ಜಾತಿಗಣತಿಯನ್ನು ಸ್ವೀಕರಿಸಲು ಸಾಧ್ಯವಿಲ್ಲ. ಸರ್ಕಾರವೂ ಈ ಜಾತಿ ಗಣತಿ ವರದಿಯನ್ನು ಸ್ವೀಕರಿಸದೇ ಮತ್ತೊಮ್ಮೆ ಜಾತಿ ಗಣತಿ ಸಮಗ್ರವಾಗಿ ಮಾಡಿಸಬೇಕೆಂದು ಒತ್ತಡ ಹೇರಬೇಕೆಂಬ ನಿರ್ಣಯ ಮಾಡಲಾಗಿದೆ.

ಇದನ್ನೂ ಓದಿ : ಪುಷ್ಪಾ, ರೂಪಾ, ವೀಣಾ, ಸೌಮ್ಯ, ರಮ್ಯ, ಕುಸುಮಾ : ಕಾಂಗ್ರೆಸ್ ಲೋಕಸಭಾ ಟಿಕೇಟ್ ಗೆ 15 ಮಹಿಳಾ ಮಣಿಗಳ ಲಾಬಿ

ಹೀಗಾಗಿ ಈಗಾಗಲೇ ಜಾತಿಗಣತಿಯನ್ನು ವಿರೋಧಿಸುತ್ತಿರುವ ಒಕ್ಕಲಿಗ ಸಮುದಾಯದ ಕೂಗಿಗೆ ಈಗ ಮತ್ತಷ್ಟು ಬಲಬಂದಿದೆ. ಇನ್ನೊಂದೆಡೆ ವೀರಶೈವ ಲಿಂಗಾಯತ್ ಸಮಾವೇಶ ಹಾಗೂ ಅಲ್ಲಿ ಕೈಗೊಂಡ ನಿರ್ಣಯಗಳನ್ನು ಗಮನಿಸಿದ ಅಹಿಂದ ವರ್ಗಗಳು ಜನವರಿಯಲ್ಲಿ ಚಿತ್ರದುರ್ಗದಲ್ಲಿ ನಡೆಸುವ ಬೃಹತ ಸಮಾವೇಶದಲ್ಲಿ ಸಿಎಂ ಸಿದ್ಧರಾಮಯ್ಯನವರನ್ನು ಕರೆಯಿಸಿ ಜಾತಿಗಣತಿ ವರದಿ ಸ್ವೀಕರಿಸುವಂತೆ ಒತ್ತಡ ಹೇರಲು ತೀರ್ಮಾನಿಸಿವೆ.

ಜಮೀರ್, ಸುನೀಲ್ ಕುಮಾರ್ ಸೇರಿದಂತೆ ಪಕ್ಷಾತೀತವಾಗಿ ಎಲ್ಲರನ್ನೂ ಕರೆದು ಸಮಾವೇಶದಲ್ಲಿ ಜಾತಿ ಗಣತಿ ಸ್ವೀಕರಿಸಲು ಒತ್ತಾಯಿಸುವ ನಿರ್ಣಯ ಕೈಗೊಳ್ಳಲಾಗಿದೆ. ಮೂಲತಃ ಅಹಿಂದ ವರ್ಗದೊಂದಿಗೆ ಗುರುತಿಸಿಕೊಂಡಿರೋ ಸಿಎಂ ಸಿದ್ಧ ರಾಮಯ್ಯನವರಿಗೆ ಇದೇ ವಿಚಾರ ಸಂಕಷ್ಟ ತಂದಿಡುವಂತಿದೆ.

Caste Census Future of Congress depends on Karnataka CM Siddaramaiah decision
Image Credit to Original Source

ಸರ್ಕಾರದ ಬಹುದೊಡ್ಡ ಭಾಗವೇ ಅಗಿರೋದು ಲಿಂಗಾಯತ್ ಹಾಗೂ ಒಕ್ಕಲಿಗ ನಾಯಕರು. ‌ಹೀಗಾಗಿ ಅವರನ್ನು ಎದುರಿಸಿ ಜಾತಿಗಣತಿ ವರದಿ ಸ್ವೀಕರಿಸುವ ಐತಿಹಾಸಿಕ ತೀರ್ಮಾನ ಕೈಗೊಳ್ಳುವುದು ಸಿದ್ಧುಗೇ ಕಷ್ಟಕರವೇ. ಹಾಗಂತ ಜಾತಿಗಣತಿ ವರದಿ ಸ್ವೀಕರಿಸದೇ ಇದ್ದಲ್ಲಿ ಅಹಿಂದ ವರ್ಗಗಳು ಸಿದ್ದರಾಮಯ್ಯ ಅವರ ವಿರುದ್ಧವೇ ತಿರುಗಿ ಬೀಳೋ ಸಾಧ್ಯತೆ ಇದೆ.‌ಇದು ಲೋಕಸಭೆ ಚುನಾವಣೆಯ ದೃಷ್ಟಿಯಿಂದ ಕಾಂಗ್ರೆಸ್ ಗೆ ನಷ್ಟವುಂಟುಮಾಡೋದಂತೂ ಸತ್ಯ.

ಇದನ್ನೂ ಓದಿ : ಸುನಿಲ್‌ ಕುಮಾರ್‌ ಆರ್ಭಟಕ್ಕೆ ನಲುಗಿದ ಸರಕಾರ : ವಿಪಕ್ಷ ನಾಯಕನಾಗಿ ಎಡವಿದ್ರಾ ಆರ್‌.ಅಶೋಕ್‌ ?

ಹೀಗಾಗಿ ಸದ್ಯ ಸಿದ್ಧರಾಮಯ್ಯನವರಿಗೆ‌ಜಾತಿಗಣತಿ ವರದಿಯೇ ದೊಡ್ಡ ಸವಾಲಾಗಿದೆ. ಈಗಾಗಲೇ ಹಲವು ಭಾರಿ ಸಿಎಂ ಸಿದ್ಧರಾಮಯ್ಯ ಜಾತಿಗಣತಿ ವರದಿ ಸ್ವೀಕರಿಸೋದ್ರಲ್ಲಿ ಅನುಮಾನವೇ ಇಲ್ಲ ಎಂದಿದ್ದಾರೆ. ಆದರೆ ಸಿದ್ಧ ರಾಮಯ್ಯ ಹೇಳಿದಂತೆ ನಡೆದುಕೊಳ್ತಾರಾ ಅನ್ನೋದರ ಬಗ್ಗೆ ಅನುಮಾನವಿದೆ.

ಇನ್ನೊಂದು ಮೂಲಗಳ ಮಾಹಿತಿ ಪ್ರಕಾರ ಸಿಎಂ ಸಿದ್ಧ ರಾಮಯ್ಯ ಲಿಂಗಾಯತ್ ವೀರಶೈವ ಮತ್ತು ಒಕ್ಕಲಿಗ ಸಮುದಾಯದ ವಿರೋಧಕ್ಕಿಂತ ಅಹಿಂದ ವರ್ಗಗಳ ಒಲೈಕೆಗೆ ಹೆಚ್ಚಿನ ಮಹತ್ವ ನೀಡೋದರಿಂದ‌ ಮತ್ತು ಪಕ್ಷಕ್ಕಿಂತ ತಮ್ಮ ವೈಯಕ್ತಿಕ ವರ್ಚಸ್ಸು ಮುಖ್ಯವಾಗೋದರಿಂದ ಜಾತಿಗಣತಿ ವರದಿ ಸ್ವೀಕರಿಸೋದಂತು ಪಕ್ಕಾ ಎನ್ನಲಾಗ್ತಿದೆ.

ಇದನ್ನೂ ಓದಿ : ಕರ್ನಾಟಕ ರಾಜ್ಯ ಬಿಜೆಪಿ ಘಟಕಕ್ಕೆ ನೂತನ ಪದಾಧಿಕಾರಿಗಳ ನೇಮಕ

ಆದರೆ ಲೋಕಸಭಾ ಚುನಾವಣೆಯ ಎದುರಿಗೆ ಜಾತಿಗಣತಿ ಎಂಬ ಜೇನುಗೂಡಿಗೆ ಕೈ ಹಾಕೋದರಿಂದ ನಷ್ಟವೇ ಜಾಸ್ತಿ. ಹೀಗಾಗಿ ಆಪ್ತರ ಸಲಹೆಯಂತೆ ಸಿದ್ಧರಾಮಯ್ಯ ಲೋಕಸಭಾ ಚುನಾವಣೆಯ ಬಳಿಕ ಜಾತಿಗಣತಿ ವರದಿ ಸ್ವೀಕರಿಸುವ ಸೇಫ್ ಗೇಮ್ ಗೆ ಸಿದ್ಧವಾಗಿದ್ದು ಅಲ್ಲಿಯವರೆಗೂ ಕಾಲಹರಣ ಮಾಡೋ ಲೆಕ್ಕಾಚಾರದಲ್ಲಿದ್ದಾರಂತೆ. ಒಟ್ಟಿನಲ್ಲಿ ವೀರಶೈವ ಲಿಂಗಾಯತ್ ಧರ್ಮವಿಭಜನೆಯ ಏಟುತಿಂದ ಕಾಂಗ್ರೆಸ್ ಈ ಭಾರಿ ಜಾತಿಗಣತಿಯ ಮೂಲಕ‌ ಮತ್ತೊಂದು ಪಾಠ ಕಲಿಯುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.

Caste Census Future of Congress depends on Karnataka CM Siddaramaiah decision

Comments are closed.