Horoscope Today : ಇಂದು 27 ಅಕ್ಟೋಬರ್ 2023 ಶುಕ್ರವಾರ. ದ್ವಾದಶ ರಾಶಿಗಳ ಮೇಲೆ ಇಂದು ಉತ್ತರಾಭಾದ್ರ ಪಾದ ನಕ್ಷತ್ರವು ಪ್ರಭಾವ ಬೀರುತ್ತದೆ. ಹರ್ಷ ಯೋಗ, ವಜ್ರ ಯೋಗದಿಂದ ಕನ್ಯಾ ಮತ್ತು ಧನಸ್ಸು ರಾಶಿಯವರು ಹಠಾತ್ ಆರ್ಥಿಕ ಲಾಭವನ್ನು ಪಡೆಯಲಿದ್ದಾರೆ. ಮೇಷರಾಶಿಯಿಂದ ಮೀನರಾಶಿಯ ವರೆಗೆ ಒಟ್ಟು ೧೨ ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ ಹೇಗಿದೆ.
ಮೇಷರಾಶಿ ದಿನಭವಿಷ್ಯ
ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಕೆಲಸ ಕಾರ್ಯಗಳು ತರಾತುರಿಯಲ್ಲಿ ಪೂರ್ಣಗೊಳ್ಳಲಿದೆ. ಸಾರ್ವಜನಿಕ ವಲಯದ ಕೆಲಸ ಕಾರ್ಯಗಳು ಸುಲಭವಾಗಿ ಮುಗಿಯಲಿದೆ. ವ್ಯಾಪಾರಿಗಳಿಗೆ ವ್ಯವಹಾರದಲ್ಲಿ ಕಡಿಮೆ ಲಾಭ ದೊರೆಯಲಿದೆ.
ವೃಷಭರಾಶಿ ದಿನಭವಿಷ್ಯ
ಇಂದು ಅತ್ಯಂತ ಲಾಭದಾಯಕವಾದ ದಿನ. ವ್ಯವಹಾರ ಕ್ಷೇತ್ರದಲ್ಲಿ ಸಕಾಲದಲ್ಲಿ ಆದಾಯ ಬರುತ್ತದೆ. ಆಹಾರ ಪದ್ದತಿಯಿಂದ ಆರೋಗ್ಯ ಕೈಕೊಡುವ ಸಾಧ್ಯತೆಯಿದೆ. ಸ್ನೇಹಿತರ ಕಡೆಯಿಂದ ನೀವು ಶುಭ ಸುದ್ದಿಯೊಂದನ್ನು ಕೇಳುವಿರಿ.
ಮಿಥುನರಾಶಿ ದಿನಭವಿಷ್ಯ
ವ್ಯವಹಾರ ಕ್ಷೇತ್ರದಲ್ಲಿ ನಿರೀಕ್ಷಿತ ಲಾಭ ಸಿಗದೇ ನಿರಾಸೆಯಾಗುತ್ತದೆ. ಭವಿಷ್ಯದಲ್ಲಿ ಉತ್ತಮ ಲಾಭವನ್ನು ಪಡೆಯಲಿದ್ದೀರಿ. ಉದ್ಯೋಗಿಗಳು ಮತ್ತು ವ್ಯಾಪಾರಿಗಳಿಗೆ ಗೊಂದಲದ ದಿನ. ಹೊಂದಾಣಿಕೆಯಿಂದ ಇಂದು ಕಾರ್ಯಾನುಕೂಲವಾಗಲಿದೆ.
ಕರ್ಕಾಟಕರಾಶಿ ದಿನಭವಿಷ್ಯ
ಬುದ್ದಿವಂತಿಕೆಯಿಂದ ಉತ್ತಮ ಲಾಭ. ಮಧ್ಯಾಹ್ನದ ವರೆಗೆ ಕೆಲಸ ಕಾರ್ಯದಲ್ಲಿ ಅಸಡ್ಡೆ ತೋರುತ್ತದೆ. ಹಿರಿಯ ಮಧ್ಯಸ್ಥಿಕೆಯಿಂದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ಆರ್ಥಿಕವಾಗಿ ಅಧಿಕ ಲಾಭದಿಂದ ಮನಸಿಗೆ ನೆಮ್ಮದಿ.
ಇದನ್ನೂ ಓದಿ : ಸರಕಾರದ ಹೊಸ ರೂಲ್ಸ್ : ನವೆಂಬರ್ 1 ರಿಂದ ಬದಲಾಗಲಿದೆ ಈ ನಾಲ್ಕು ನಿಯಮ
ಸಿಂಹರಾಶಿ ದಿನಭವಿಷ್ಯ
ಪ್ರತಿಕೂಲ ಪರಿಸ್ಥಿತಿಗಳು ಕಂಡು ಬರಲಿದೆ. ಹೆಚ್ಚು ಮಾತನಾಡುವುದಕ್ಕಿಂತ ಮೌನವಾಗಿ ಇರುವುದರಿಂದಲೇ ಅಧಿಕ ಲಾಭ. ಆರೋಗ್ಯದದ ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕು. ಉದ್ಯೋಗಿಗಳಿಗೆ ಆರ್ಥಿಕವಾಗಿ ಲಾಭದಾಯಕ

ಕನ್ಯಾರಾಶಿ ದಿನಭವಿಷ್ಯ
ಹಣಕಾಸಿನ ವಿಚಾರದಲ್ಲಿ ನೀವು ನಿರೀಕ್ಷಿಸಿದಷ್ಟು ಲಾಭ ದೊರೆಯುವುದಿಲ್ಲ. ಉದ್ಯೋಗಿಗಳು ಹಾಗೂ ಸಹೋದ್ಯೋಗಿಗಳು ಎಚ್ಚರವಾಗಿ ಇರಬೇಕು. ಕುಟುಂಬ ಸದಸ್ಯರ ವರ್ತನೆಯಿಂದ ಅಸಮಾಧಾನಗೊಳ್ಳುವಿರಿ.
ತುಲಾರಾಶಿ ದಿನಭವಿಷ್ಯ
ಕಠಿಣ ಪರಿಶ್ರಮದಿಂದ ಉತ್ತಮ ಫಲಿತಾಂಶ ಪಡೆಯುವಿರಿ. ಹಣಕಾಸಿನ ವಿಚಾರದಲ್ಲಿ ಇಂದು ಲಾಭದಾಯಕವಾಗಿ ಇರುತ್ತದೆ. ವಿರಹ ವೇದನೆಯಿಂದ ಮನಸಿಗೆ ಬೇಸರ ಮೂಡಲಿದೆ. ಉದ್ಯೋಗ ಕ್ಷೇತ್ರದಲ್ಲಿ ಮೇಲಾಧಿಕಾರಿಗಲಿಂದ ಪ್ರಶಂಸೆ ದೊರೆಯಲಿದೆ.
ಇದನ್ನೂ ಓದಿ :ಹಾರ್ದಿಕ್ ಪಾಂಡ್ಯ ಬೆನ್ನಲ್ಲೇ ರೋಹಿತ್ ಶರ್ಮಾ- ವಿರಾಟ್ ಕೊಹ್ಲಿ ಔಟ್ !
ವೃಶ್ಚಿಕರಾಶಿ ದಿನಭವಿಷ್ಯ
ಕೆಲಸ ಕಾರ್ಯಗಳು ಸುಗಮವಾಗಿ ನಡೆಯುವುದರಿಂದ ಮನಸಿಗೆ ನೆಮ್ಮದಿ. ಆರೋಗ್ಯದ ವಿಚಾರದಲ್ಲಿ ಸುಧಾರಣೆಯನ್ನು ಕಾಣಲಿದೆ. ಯಾವುದೇ ಕಾರಣಕ್ಕೂ ವ್ಯಾಪಾರದ ಕ್ಷೇತ್ರದಲ್ಲಿ ಗೊಂದಲದ ನಿರ್ಧಾರವನ್ನು ಕೈಗೊಳ್ಳಬೇಡಿ.
ಧನಸ್ಸುರಾಶಿ ದಿನಭವಿಷ್ಯ
ಹಳೆಯ ನಿರ್ಧಾರ ಹಾಗೂ ಹೊಸ ಒಪ್ಪಂದಗಳಲ್ಲಿ ನೀವಿಂದು ಯಶಸ್ವಿ ಆಗುತ್ತೀರಿ. ಉದ್ಯೋಗಿಗಳಿಗೆ ಮೇಲಾಧಿಕಾರಿಗಳಿಂದ ಪ್ರಶಂಸೆ ದೊರೆಯಲಿದೆ. ಧಾರ್ಮಿಕ ಕ್ಷೇತ್ರಗಳ ಸಂದರ್ಶನದಿಂದ ಮನಸಿಗೆ ನೆಮ್ಮದಿ ದೊರೆಯಲಿದೆ.
ಮಕರರಾಶಿ ದಿನಭವಿಷ್ಯ
ಕುಟುಂಬ ಸದಸ್ಯರ ಬೆಂಬಲವನ್ನು ನೀವಿಂದು ಪಡೆಯುತ್ತೀರಿ. ಸಾಮಾಜಿಕ ಕ್ಷೇತ್ರಗಳಲ್ಲಿ ನಿಮ್ಮ ಮೇಲಿರುವ ಗೌರವ ಹೆಚ್ಚಾಗಲಿದೆ. ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಲು ಕುಟುಂಬ ಸದಸ್ಯರ ಬೆಂಬಲವನ್ನು ಪಡೆಯುತ್ತೀರಿ.
ಇದನ್ನೂ ಓದಿ : 50000 ಕ್ಕಿಂತ ಅಧಿಕ ಹಣದ ವರ್ಗಾವಣೆಗೆ ಹೊಸ ರೂಲ್ಸ್ : ಆದೇಶ ಹೊರಡಿಸಿದ RBI
ಕುಂಭರಾಶಿ ದಿನಭವಿಷ್ಯ
ಸಹೋದ್ಯೋಗಿಗಳ ಸಹಕಾರದಿಂದ ಉದ್ಯೋಗದಲ್ಲಿನ ಸಮಸ್ಯೆಯನ್ನು ಪರಿಹಾರ ಮಾಡುವಲ್ಲಿ ಯಶಸ್ವಿ ಆಗುತ್ತೀರಿ. ಹಣಕಾಸಿನ ಕ್ಷೇತ್ರದಲ್ಲಿ ಯಾವುದೇ ನಿರ್ಧಾರವನ್ನು ನೀವು ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕು.
ಮೀನರಾಶಿ ದಿನಭವಿಷ್ಯ
ದೂರದ ಬಂಧುಗಳ ಆಗಮನ ಮನಸಿಗೆ ಸಂತಸವನ್ನು ತರಲಿದೆ. ಸ್ನೇಹಿತರ ಜೊತೆಗೂಡಿ ಇಂದು ಹೊಸ ವ್ಯವಹಾರದ ಕುರಿತು ಚರ್ಚೆಯನ್ನು ನಡೆಸುವ ಸಾಧ್ಯತೆಯಿದೆ. ಸಂಗಾತಿಯ ಸಹಕಾರದಿಂದ ನಿಮ್ಮ ಆರ್ಥಿಕ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವಿರಿ.
Horoscope Today 27 October 2023 Zordic Sign