ಹಾರ್ದಿಕ್‌ ಪಾಂಡ್ಯ ಬೆನ್ನಲ್ಲೇ ರೋಹಿತ್‌ ಶರ್ಮಾ- ವಿರಾಟ್‌ ಕೊಹ್ಲಿ ಔಟ್‌ !

World Cup 2023 - Virat Kohli and Rohit Sharma Out : ವಿಶ್ವಕಪ್‌ನಲ್ಲಿ ಭಾರತ ತಂಡ ಸೆಮಿಫೈನಲ್‌ಗೆ ಎಂಟ್ರಿ ಪಡೆಯೋದು ಬಹುತೇಕ ಖಚಿತ. ಆಡಿದ ಐದೂ ಪಂದ್ಯಗಳನ್ನು ಗೆದ್ದಿರುವ ಭಾರತ ವಿಶ್ವಕಪ್‌ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ

World Cup 2023 – Virat Kohli and Rohit Sharma Out : ವಿಶ್ವಕಪ್‌ನಲ್ಲಿ ಭಾರತ ತಂಡ ಸೆಮಿಫೈನಲ್‌ಗೆ ಎಂಟ್ರಿ ಪಡೆಯೋದು ಬಹುತೇಕ ಖಚಿತ. ಆಡಿದ ಐದೂ ಪಂದ್ಯಗಳನ್ನು ಗೆದ್ದಿರುವ ಭಾರತ ವಿಶ್ವಕಪ್‌ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಆದರೆ ಖ್ಯಾತ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ (Hardik Pandya)  ಗಾಯ ಗೊಂಡಿದ್ದಾರೆ. ಇದರ ಬೆನ್ನಲ್ಲೇ ವಿರಾಟ್‌ ಕೊಹ್ಲಿ(Virat Kohli) ಹಾಗೂ ಟೀಂ ಇಂಡಿಯಾ ನಾಯಕ  ರೋಹಿತ್‌ ಶರ್ಮಾ (Rohit Sharma) ಇಂಗ್ಲೆಂಡ್‌ ವಿರುದ್ದ  (India Vs England) ಪಂದ್ಯಕ್ಕೆ ತಂಡದಿಂದ ಔಟ್‌ ಆಗಿದ್ದಾರೆ.

ಬಾಂಗ್ಲಾದೇಶದ ವಿರುದ್ದ ಪಂದ್ಯದ ವೇಳೆಯಲ್ಲಿ ಹಾರ್ದಿಕ್‌ ಪಾಂಡ್ಯ ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರು ಬೆಂಗಳೂರಿನ ನ್ಯಾಷನಲ್‌ ಕ್ರಿಕೆಟ್‌ ಅಕಾಡೆಮಿಯಲ್ಲಿ (NCA) ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ನ್ಯೂಜಿಲೆಂಡ್‌ ವಿರುದ್ದದ ಪಂದ್ಯವನ್ನು ತಪ್ಪಿಸಿಕೊಂಡಿದ್ದರು. ಅಲ್ಲದೇ ಇಂಗ್ಲೆಂಡ್‌ ವಿರುದ್ದದ ಪಂದ್ಯಕ್ಕೂ ಅನುಮಾನ ಎನ್ನಲಾಗುತ್ತಿದೆ.

virat kohli and Rohit Sharma Out for team india vs england Match after Hardik Pandya in world cup 2023
Image Credit to Original Source

ಈ ನಡುವಲ್ಲೇ ಭಾರತ ತಂಡ ಅಕ್ಟೋಬರ್‌ 29 ರಂದು ಇಂಗ್ಲೆಂಡ್‌ ತಂಡದ ವಿರುದ್ದ ಪಂದ್ಯವನ್ನು ಆಡಲಿದೆ. ಆದರೆ ಈ ಪಂದ್ಯಕ್ಕಾಗಿ ಭಾರತ ಕಠಿಣ ತರಬೇತಿಯಲ್ಲಿ ನಿರತವಾಗಿದೆ. ಆದರೆ ಭಾರತ – ಇಂಗ್ಲೆಂಡ್‌ ವಿರುದ್ದದ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಆಡುವುದು ಅನುಮಾನ ಎನ್ನಲಾಗುತ್ತಿದೆ.

ಹಾರ್ದಿಕ್‌ ಪಾಂಡ್ಯ ರೀತಿಯಲ್ಲಿ ಈ ಇಬ್ಬರು ಆಟಗಾರರು ಗಾಯಗೊಂಡಿಲ್ಲ. ಬದಲಾಗಿ ಇಬ್ಬರಿಗೂ ವಿಶ್ರಾಂತಿಯನ್ನು ನೀಡಲಾಗುತ್ತಿದೆ. ಭಾರತ ತಂಡ ಸೆಮಿಫೈನಲ್‌ ಹಾದಿಯನ್ನು ಈಗಾಗಲೇ ಸುಗಮಗೊಳಿಸಿದೆ. ಇನ್ನೊಂದೆಡೆಯಲ್ಲಿ ಇಂಗ್ಲೆಂಡ್‌ ತಂಡ ಈ ವಿಶ್ವಕಪ್‌ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡುತ್ತಿಲ್ಲ. ಇದೇ ಕಾರಣಕ್ಕೆ ಇಬ್ಬರೂ ಆಟಗಾರರಿಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ.

ಇದನ್ನೂ ಓದಿ : ಐಪಿಎಲ್‌ 2024 ರಲ್ಲಿ ಆರ್‌ಸಿಬಿ ಪರ ಆಡಲ್ವಂತೆ ವಿರಾಟ್‌ ಕೊಹ್ಲಿ !

ಒಂದೊಮ್ಮೆ ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಅವರಿಗೆ ವಿಶ್ರಾಂತಿಯನ್ನು ನೀಡಿದ್ರೆ ಇಶಾನ್‌ ಕಿಶನ್‌ ಕಣಕ್ಕೆ ಇಳಿಯುವುದು ಖಚಿತ. ಸೂರ್ಯ ಕುಮಾರ್‌ ಯಾದವ್‌ಗೆ ಅವಕಾಶ ನೀಡಿದ್ದರೂ ಕೂಡ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡಿಲ್ಲ. ಇನ್ನೊಂದೆಡೆಯಲ್ಲಿ ಕೆಎಲ್‌ ರಾಹುಲ್‌, ಶುಭಮನ್‌ ಗಿಲ್‌ ಭರ್ಜರಿ ಫಾರ್ಮ್‌ನಲ್ಲಿದ್ದಾರೆ.

virat kohli and Rohit Sharma Out for team india vs england Match after Hardik Pandya in world cup 2023
Image Credit to Original Source

ಬೌಲಿಂಗ್‌ನಲ್ಲಿಯೂ ಮೊಹಮ್ಮದ್‌ ಸೆಮಿ, ಸಿರಾಜ್‌, ಬೂಮ್ರಾ ಎದುರಾಳಿಯನ್ನು ಕಟ್ಟಿಹಾಕುತ್ತಿದ್ದಾರೆ. ಅಲ್ಲದೇ ರವೀಂದ್ರ ಜಡೇಜಾ ಹಾಗೂ ಕುಲದೀಪ್‌ ಯಾದವ್‌ ಸ್ಪಿನ್‌ ಮೋಡಿ ಮಾಡುತ್ತಿದೆ. ಭಾರತ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಇರುವ ಕಾರಣಕ್ಕೆ ಮುಂದಿನ ಒಂದು ಅಥವಾ ಎರಡು ಪಂದ್ಯಗಳಿಗೆ ಈ ಇಬ್ಬರು ಆಟಗಾರರು ವಿಶ್ರಾಂತಿಯನ್ನು ಪಡೆಯುವುದು ಖಚಿತ ಎನ್ನಲಾಗುತ್ತಿದೆ.

ಇದನ್ನೂ ಓದಿ : ಭಾರತ ತಂಡಕ್ಕೆ ಕನ್ನಡಿಗ ಕೆಎಲ್‌ ರಾಹುಲ್‌ ಉಪನಾಯಕ : ವಿಶ್ವಕಪ್‌ನಿಂದಲೇ ಔಟ್‌ ಆಗ್ತಾರಾ ಪಾಂಡ್ಯ

2023 ನೇ ಸಾಲಿನ ವಿಶ್ವಕಪ್‌ನಲ್ಲಿ ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ತಲಾ 5 ಪಂದ್ಯಗಳನ್ನು ಆಡಿದ್ದಾರೆ. ಈ ಪೈಕಿ ವಿರಾಟ್‌ ಕೊಹ್ಲಿ 354 ರನ್‌ ಬಾರಿಸಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ ಮೂರು ಅರ್ಧ ಶತಕ ಒಳಗೊಂಡಿದೆ. ಇನ್ನು ರೋಹಿತ್‌ ಶರ್ಮಾ ಐದು ಪಂದ್ಯಗಳ ಪೈಕಿ 311 ರನ್‌ ಬಾರಿಸಿದ್ದು, 1 ಶತಕ ಹಾಗೂ 1 ಅರ್ಧಶತಕ ಒಳಗೊಂಡಿದೆ.

ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾದ ಕ್ವಿಂಟಾನ್‌ ಡಿಕಾಕ್‌ ಐದು ಪಂದ್ಯಗಳಲ್ಲಿ 3 ಶತಕ ಬಾರಿಸುವ ಮೂಲಕ ಒಟ್ಟು 407 ರನ್‌ ಸಿಡಿಸಿದ್ದಾರೆ. ಈ ಮೂಲಕ ಅತೀ ಹೆಚ್ಚು ರನ್‌ ಬಾರಿಸಿದ ಆಟಗಾರರ ಪೈಕಿ ಮೊದಲ ಸ್ಥಾನದಲ್ಲಿದ್ರೆ, ವಿರಾಟ್‌ ಕೊಹ್ಲಿ 2ನೇ ಹಾಗೂ ರೋಹಿತ ಶರ್ಮಾ 3 ನೇ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನ ಮೊಹಮ್ಮದ್‌ ರಿಜ್ವಾನ್‌ 4 ಹಾಗೂ ಆಸ್ಟ್ರೇಲಿಯಾದ ಡೇವಿಡ್‌ ವಾರ್ನರ್‌ 5ನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: ‌ಶತಕದಲ್ಲೇ ವಿಶ್ವದಾಖಲೆ ಬರೆದ ವಿರಾಟ್‌ ಕೊಹ್ಲಿ : ಸಚಿನ್‌ ದಾಖಲೆ ಸರಿಗಟ್ಟುತ್ತಾರಾ ಕಿಂಗ್‌ ಕೊಹ್ಲಿ

Virat kohli and Rohit Sharma Out for team india vs england Match after Hardik Pandya in world cup 2023

Comments are closed.