ಸರಕಾರದ ಹೊಸ ರೂಲ್ಸ್‌ : ನವೆಂಬರ್ 1 ರಿಂದ ಬದಲಾಗಲಿದೆ ಈ ನಾಲ್ಕು ನಿಯಮ

ಭಾರತ  ಸರಕಾರ ಹೊಸ ಹೊಸ ರೂಲ್ಸ್‌ ಗಳನ್ನು ಜಾರಿಗೆ ತರುತ್ತದೆ. ದೇಶದ ಆರ್ಥಿಕತೆಯ ವಿಚಾರದಲ್ಲಿ ಅತೀ ಮಹತ್ವವನ್ನು ವಹಿಸುತ್ತದೆ. ನವೆಂಬರ್‌ 1 ರಿಂದ ದೇಶದಲ್ಲಿ ಜಾರಿಯಲ್ಲಿರುವ ಈ ನಾಲ್ಕು ರೂಲ್ಸ್‌ಗಳು (indian New Rules) ಬದಲಾಗಲಿವೆ.

ನವದೆಹಲಿ : ದೇಶದಲ್ಲಿ ನಿಮಯಗಳನ್ನು ಬದಲಾಯಿಸುವುದು (Rules Change) ಸರ್ವೇ ಸಾಮಾನ್ಯ. ಕಾಲಕ್ಕೆ ತತ್ತಂತೆ ಭಾರತ  ಸರಕಾರ ಹೊಸ ಹೊಸ ರೂಲ್ಸ್‌ ಗಳನ್ನು ಜಾರಿಗೆ ತರುತ್ತದೆ. ದೇಶದ ಆರ್ಥಿಕತೆಯ ವಿಚಾರದಲ್ಲಿ ಅತೀ ಮಹತ್ವವನ್ನು ವಹಿಸುತ್ತದೆ. ನವೆಂಬರ್‌ 1 ರಿಂದ ದೇಶದಲ್ಲಿ ಜಾರಿಯಲ್ಲಿರುವ ಈ ನಾಲ್ಕು ರೂಲ್ಸ್‌ಗಳು (indian New Rules) ಬದಲಾಗಲಿವೆ.

ದೇಶದ ಆರ್ಥಿಕತೆಗೆ ಸಂಬಂಧಿಸಿದಂತೆ ಕೇಂದ್ರ ಸರಕಾರ ನಾಲ್ಕು ನಿಯಮಗಳನ್ನು ಬದಲಾಯಿಸುತ್ತಿದೆ. ಈ ರೂಲ್ಸ್‌ ದೇಶದ ಪ್ರಜೆಗಳ ಮೇಲೆ ಪರಿಣಾಮ ವನ್ನು ಬೀರಲಿದೆ. ಹಾಗಾದ್ರೆ ನವೆಂಬರ್‌ 1 ರಿಂದ ಬದಲಾಗಲಿರುವ ಈ ನಾಲ್ಕು ನಿಯಮಗಳು ಯಾವುವು ಅಂತಾ ತಿಳಿದುಕೊಳ್ಳೋಣಾ.

Rules Change These 4 Important Rules Change From November 1
Image Credit to Original Source

 

ಸರಕು ಮತ್ತು ಸೇವಾ ತೆರಿಗೆಯಲ್ಲಿ ಬದಲಾವಣೆ (GST) :

100 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ವಹಿವಾಟು ಹೊಂದಿರುವವರು, ನವೆಂಬರ್ 1 ರ ನಂತರ 30 ದಿನಗಳಲ್ಲಿ ಇ-ಇನ್‌ವಾಯ್ಸ್ ಪೋರ್ಟಲ್‌ನಲ್ಲಿ ಜಿಎಸ್‌ಟಿ ಇನ್‌ವಾಯ್ಸ್‌ಗಳನ್ನು ಅಪ್‌ಲೋಡ್ ಮಾಡುವುದು ಕಡ್ಡಾಯವಾಗಲಿದೆ. ಕಳೆದ ಸೆಪ್ಟೆಂಬರ್‌ ತಿಂಗಳಿನಲ್ಲಿಯೇ ಜಿಎಸ್‌ಟಿ ಪ್ರಾಧಿಕಾರವು ಈ ಬಗ್ಗೆ ಮಾಹಿತಿಯನ್ನು ನೀಡಿತ್ತು. ಶೀಘ್ರದಲ್ಲೇ ಇನ್ವಾಯ್ಸ್ ಅನ್ನು ಅಪ್ಲೋಡ್ ಮಾಡಬೇಕು. ಇಲ್ಲವಾದ್ರೆ ದಂಡ ವಿಧಿಸುವುದಾಗಿ ಸೂಚನೆಯನ್ನು ನೀಡಿದೆ.

ಇದನ್ನೂ ಓದಿ : 3.26 ಲಕ್ಷ ರೇಷನ್‌ ಕಾರ್ಡ್‌ ರದ್ದು ! ರಾತ್ರೋ ರಾತ್ರಿ ಜಾರಿಯಾಯ್ತು ಹೊಸ ರೂಲ್ಸ್‌

ಲ್ಯಾಪ್‌ಟಾಪ್‌ ಆಮದು ನಿಯಮ ಬದಲಾವಣೆ :
ದೇಶದಲ್ಲಿ ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌, ಕಂಪ್ಯೂಟರ್‌ಗಳನ್ನು ಆಮದು ಮಾಡಿಕೊಳ್ಳುವ ನಿಯಮದಲ್ಲಿ ಬದಲಾವಣೆ ಆಗಲಿದೆ. ಹೊಸ ರೂಲ್ಸ್‌ ನವೆಂಬರ್‌ 1 ರಿಂದ ಜಾರಿಗೆ ಬರಲಿದೆ. ಆದರೆ ಹೊಸ ಆಮದು ಕಾನೂನಿನಲ್ಲಿ ಯಾವೆಲ್ಲಾ ನಿಯಮ ಜಾರಿ ಆಗಲಿದೆ ಅನ್ನೋ ನಿರೀಕ್ಷೆಯಿದೆ.

ಇದನ್ನೂ ಓದಿ : 50000 ಕ್ಕಿಂತ ಅಧಿಕ ಹಣದ ವರ್ಗಾವಣೆಗೆ ಹೊಸ ರೂಲ್ಸ್‌ : ಆದೇಶ ಹೊರಡಿಸಿದ RBI

ಈಕ್ವಿಟಿ ಉತ್ಪನ್ನಗಳ ಮೇಲೆ ಶುಲ್ಕ :

ನವೆಂಬರ್ 1 ರಿಂದ ಈಕ್ವಿಟಿ ಉತ್ಪನ್ನಗಳ ವಿಭಾಗದಲ್ಲಿ ಶುಲ್ಕವನ್ನು ವಿಧಿಸಲಾಗುವುದು ಎಂದು ಕೇಂದ್ರ ಸರಕಾರ ಘೋಷಣೆ ಮಾಡಿದೆ.  ಈಕ್ವಿಟಿ ಉತ್ಪನ್ನಗಳ ಮೇಲೆ ಶುಲ್ಕ ವಿಧಿಸುವ ಕೇಂದ್ರ ಸರಕಾರದ ಕ್ರಮ ಚಿಲ್ಲರೆ ಹೂಡಿಕೆದಾರರು ಮತ್ತು ಸಣ್ಣ ವ್ಯಾಪಾರಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಆದ್ರೆ ಇದೀಗ ಸರಕಾರ ಈ ನಿಯಮವನ್ನು ಜಾರಿಗೆ ತರುತ್ತಿದೆ.

Rules Change These 4 Important Rules Change From November 1
Image Credit to Original Source

ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆಯ 2ನೇ ಕಂತಿನ ಹಣ ಖಾತೆಗೆ ಜಮೆ ಆಗಿಲ್ವಾ ? ಚಿಂತ ಬಿಡಿ, ಸರಕಾರದಿಂದಲೇ ಸಿಕ್ಕಿದೆ ಗುಡ್‌ನ್ಯೂಸ್‌

ಅಮೆಜಾನ್ ಕಿಂಡರ್ :
ನವೆಂಬರ್ 1 ರಿಂದ, Amazon ತನ್ನ Kindle ನಲ್ಲಿ Mobi (mobi, azw, prc) ಸೇರಿದಂತೆ ಕೆಲವು ಬೆಂಬಲಿತ ಫೈಲ್‌ಗಳನ್ನು ತೆಗೆದುಹಾಕುವುದಾಗಿ ಹೇಳಿದೆ, ಆದ್ದರಿಂದ Mobi (mobi, azw, prc) ಫೈಲ್‌ಗಳನ್ನು ಕಳುಹಿಸುವ ಕಿಂಡಲ್ ಬಳಕೆದಾರರು ತೊಂದರೆ ಎದುರಿಸಬಹುದು.  ಸರಕಾರ ಆಗಾಗ ಹೊಸ ರೂಲ್ಸ್‌ ಜಾರಿಗೆ ತರುತ್ತಿರುವುದು ಕೆಲವೊಮ್ಮೆ ಪ್ಲಸ್‌ ಹಾಗೂ ಇನ್ನೂ ಕೆಲವೊಮ್ಮೆ ಮೈನಸ್‌ ಆಗುವುದು ಸಾಮಾನ್ಯ.

Rules Change These 4 Important Rules Change From November 1

Comments are closed.