ಎಷ್ಟೇ ದುಡಿದರೂ ಪರ್ಸ್ ನಲ್ಲಿ ಹಣ ಉಳಿತಿಲ್ವಾ ? ಇಲ್ಲಿದೆ ಹಣ ಉಳಿಸುವ ಸರಳ ಟಿಪ್ಸ್

Money Tips : ಎಷ್ಟೇ ದುಡಿದರೂ ಪರ್ಸ್ ನಲ್ಲಿ ಒಂದು ರೂಪಾಯಿ ಉಳಿಯೋದಿಲ್ಲ ಅನ್ನೋದು ನಮ್ಮಲ್ಲಿ ತುಂಬಾ ಜನರ ನೋವು. ಆದರೆ ಇದಕ್ಕೆ ಕಾರಣ ಏನು ಅನ್ನೋದನ್ನು ನಾವ್ಯಾರೂ ಯೋಚಿಸೋದೆ ಇಲ್ಲ. ಒಮ್ಮೊಮ್ಮೆ ಇದಕ್ಕೆ ನಮ್ಮ ಪರ್ಸ್ ನಲ್ಲಿರೋ ವಸ್ತುಗಳು ಅಥವಾ ನಮ್ಮ ಅಭ್ಯಾಸವೇ ಕಾರಣವಾಗಿರಬಹುದು.

Money Tips : ಎಷ್ಟೇ ದುಡಿದರೂ ಪರ್ಸ್ ನಲ್ಲಿ ಒಂದು ರೂಪಾಯಿ ಉಳಿಯೋದಿಲ್ಲ ಅನ್ನೋದು ನಮ್ಮಲ್ಲಿ ತುಂಬಾ ಜನರ ನೋವು. ಆದರೆ ಇದಕ್ಕೆ ಕಾರಣ ಏನು ಅನ್ನೋದನ್ನು ನಾವ್ಯಾರೂ ಯೋಚಿಸೋದೆ ಇಲ್ಲ. ಒಮ್ಮೊಮ್ಮೆ ಇದಕ್ಕೆ ನಮ್ಮ ಪರ್ಸ್ ನಲ್ಲಿರೋ ವಸ್ತುಗಳು ಅಥವಾ ನಮ್ಮ ಅಭ್ಯಾಸವೇ ಕಾರಣವಾಗಿರಬಹುದು. ಹಾಗಿದ್ದರೇ ಪರ್ಸ್ ನಲ್ಲಿ ಧನಾಕರ್ಷಣೆ ಮಾಡೋದಿಕ್ಕೇ ಏನು ಮಾಡಬೇಕು? ಮಾಡಬಾರದು ? ಇಲ್ಲಿದೆ ಹಣ ಉಳಿಸುವ ಟಿಪ್ಸ್ (Money Tips).

ನಿಮ್ಮ ವಾಲೆಟ್ ನಲ್ಲಿ ನೀವು ದೇವರ ಪೋಟೋಗಳನ್ನು ಇಡಬೇಕು.‌ಅದರಲ್ಲೂ ಲಕ್ಷ್ಮೀ ಹಾಗೂ ಆಂಜನೇಯನ ಪೋಟೋಗಳನ್ನು ಇಡಬೇಕು. ಲಕ್ಷ್ಮೀ ಪೋಟೋವನ್ನು ಇಡೋದರಿಂದ ಧನಾಕರ್ಷಿಸಲು ಸಾಧ್ಯ. ಇನ್ನು ಆಂಜನೇಯ ಸ್ವಾಮಿಯ ಪೋಟೋ ಅದರಲ್ಲೂ ಹನುಮಾನ್ ಚಾಲೀಸ್ ಪುಸ್ತಕ ಇಡೋದರಿಂದ ನೀವು ಊಹಿಸದ ಪ್ರಮಾಣದಲ್ಲಿ ಹಣ ನಿಮ್ಮನ್ನು ಅರಸಿಕೊಂಡು ಬರುತ್ತದೆ.

Money Tips No matter how hard you work there is no money left in your wallet Here are some simple money saving tips
Image Credit to Original Source

ಅಲ್ಲದೇ ಆಂಜನೇಯನ ಹನುಮಾನ್ ಚಾಲೀಸ್ ಬುಕ್ ನಿಮ್ಮ ಪರ್ಸ್ ನಲ್ಲಿ ಇಡೋದರಿಂದ ಇದು ನಿಮ್ಮ ಮೇಲೆ ಕೆಟ್ಟ ದೃಷ್ಟಿ ಬೀಳದಂತೆ ಹಾಗೂ ಜನರ ಮಾಟ ಮಂತ್ರ ದಂತಹ ಪ್ರಯೋಗಗಳು ತಾಕದಂತೆ ಮಾಡುತ್ತದೆ. ಇನ್ನು ಶ್ರೀಚಕ್ರವನ್ನು ನಿಮ್ಮ ಪರ್ಸ್ ನಲ್ಲಿ ಇಡೋದರಿಂದ ನಿಮ್ಮ ಆರ್ಥಿಕಬಾಧೆ ಕಡಿಮೆಯಾಗುತ್ತದೆ. ಮಾತ್ರವಲ್ಲ ನೀವು ಎಂದಿಗೂ ಆರ್ಥಿಕ‌ ಮುಗ್ಗಟ್ಟು ಎದುರಿಸದಂತೆ ಇದು ಕಾಯುತ್ತದೆ.

ನಿಮ್ಮ ಪರ್ಸ್ ನಲ್ಲಿ ಕಮಲದ ಹೂವಿನ ಬೀಜಗಳನ್ನು ಇಟ್ಟುಕೊಳ್ಳಿ. ಇದು ನಿಮಗೆ ಅದೃಷ್ಟವನ್ನು ತರುತ್ತದೆ. ತಾಯಿ ಲಕ್ಷ್ಮಿದೇವಿಗೂ ಇದು ತುಂಬಾ ಪ್ರಿಯವಾಗಿದೆ. ಹೀಗಾಗಿ ಇದನ್ನು ಇಟ್ಟುಕೊಂಡರೆ ಆರ್ಥಿಕ ಸಮೃದ್ಧಿಯಾಗುತ್ತದೆ. ಯಾವಾಗಲೂ ನೆಮ್ಮದಿಯ ಜೀವನ ಬೇಕೆಂದರೆ ಮೊದಲು ಪರ್ಸ್ ನಲ್ಲಿ ಕಮಲದ ಹೂವಿನ ಬೀಜಗಳನ್ನು ಇಟ್ಟುಕೊಳ್ಳುವುದುನ್ನು ಮರೆಯಬೇಡಿ.

ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆಯ 8 ನೇ ಕಂತಿನ ಹಣ ಪಡೆಯಲು ಸರಕಾರದಿಂದ ಹೊಸ ರೂಲ್ಸ್‌

ನೀವು ಮಾನಸಿಕ ಮತ್ತು ಆರ್ಥಿಕವಾಗಿ ವೃದ್ಧಿಯಾಗಲು 7 ಗೋಮತಿ ಚಕ್ರವನ್ನು ನಿಮ್ಮ ಪರ್ಸ್ ನಲ್ಲಿ ಇಟ್ಟುಕೊಳ್ಳಬೇಕು. ಇದು ಆರ್ಥಿಕ ಸಮೃದ್ಧಿಯನ್ನು ತರುತ್ತದೆ. ಇದರಿಂದ ನಿಮಗೆ ಜೀವನದಲ್ಲಿ ಎಂದಿಗೂ ಆರ್ಥಿಕ ಸಮಸ್ಯೆ ಕಾಡುವುದಿಲ್ಲ. ಗೋಮತಿ ಚಕ್ರವು ನಿಮ್ಮ ಅದೃಷ್ಟವನ್ನೇ ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದೆ.

ನಿಮ್ಮ ಪರ್ಸ್ ನಲ್ಲಿ ಅರಳೀಮರದ ಎಲೆಗಳನ್ನು ಇಟ್ಟುಕೊಳ್ಳ ಬಹುದು. ಅರಳೀಮರದಲ್ಲಿ ವಿಷ್ಣು ನೆಲೆಸಿರುತ್ತಾನೆ ಎಂಬ ನಂಬಿಕೆಯಿದೆ. ಹೀಗಾಗಿ ಅರಳೀಮರದ ಎಲೆಗಳನ್ನು ಗಂಗಾಜಲದಲ್ಲಿ ತೊಳೆದು ಅದಕ್ಕೆ ಅರಶಿನ, ಕುಂಕುಮ ಹಚ್ಚಿ ಪೂಜೆ ಮಾಡಿ ಪರ್ಸ್ ನಲ್ಲಿಟ್ಟುಕೊಳ್ಳಿ. ಇದರಿಂದ ನಿಮಗೆ ಜನ್ಮದಲ್ಲಿ ಆರ್ಥಿಕ ಸಮಸ್ಯೆಗಳು ಎದುರಾಗುವುದಿಲ್ಲ.

ಇದನ್ನೂ ಓದಿ : ಹೊಸ ರೂಲ್ಸ್‌ ! ಗೃಹಲಕ್ಷ್ಮೀ, ಅನ್ನಭಾಗ್ಯ ಯೋಜನೆಗೆ ಮಾರ್ಚ್‌ 25 ಡೆಡ್‌ಲೈನ್‌ : ತಪ್ಪದೇ ಈ ಕೆಲಸ ಮಾಡಿ ಮುಗಿಸಿ

ನಿಮ್ಮ ಪರ್ಸ್‌ನಲ್ಲಿ ಅಕ್ಕಿ ಕಾಳುಗಳನ್ನು ಇಟ್ಟುಕೊಂಡರೆ, ನೀವು ಅದರಿಂದ ವಿಶೇಷ ಪ್ರಯೋಜನಗಳನ್ನು ಪಡೆಯಬಹುದು. ಹೀಗೆ ಮಾಡುವುದರಿಂದ ಪರ್ಸ್ ತುಂಬ ಹಣ ಬರುತ್ತದೆ. ಇದರೊಂದಿಗೆ, ಒಬ್ಬ ವ್ಯಕ್ತಿಯು ತನ್ನ ಪರ್ಸ್‌ನಲ್ಲಿ ಹರಳೆಣ್ಣೆಯನ್ನು ಇಟ್ಟುಕೊಳ್ಳುವುದರಿಂದ ಆರ್ಥಿಕ ಪ್ರಯೋಜನಗಳನ್ನು ಸಹ ಪಡೆಯಬಹುದು.

Money Tips No matter how hard you work there is no money left in your wallet Here are some simple money saving tips
Image Credit to Original Source

ಏಕೆಂದರೆ ವಾಸ್ತು ಶಾಸ್ತ್ರದ ಪ್ರಕಾರ, ಹರಳೆಣ್ಣೆ ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ, ಇದರಿಂದಾಗಿ ನಿಮ್ಮ ಹಣವನ್ನು ಅನುಪಯುಕ್ತ ವಸ್ತುಗಳಿಗೆ ಖರ್ಚು ಮಾಡುವುದಿಲ್ಲ. ದೀಪಾವಳಿ ಸಂದರ್ಭದಲ್ಲಿ ಲಕ್ಷ್ಮೀ ಪೂಜೆ ಮಾಡುವಾಗ ಲಕ್ಷ್ಮಿ ಮತ್ತು ಗಣೇಶನ ಮುಂದೆ ಬೆಳ್ಳಿ ನಾಣ್ಯ ಇಡುವ ಪದ್ಧತಿ ಇದೆ. ಆ ನಾಣ್ಯವನ್ನು ನಿಮ್ಮ ಪರ್ಸಿನಲ್ಲಿ ಇಟ್ಟುಕೊಳ್ಳಿ. ಬೆಳ್ಳಿ ನಾಣ್ಯವು ಧನಾತ್ಮಕ ಬದಲಾವಣೆಯನ್ನು ಉಂಟು ಮಾಡುತ್ತದೆ. ನಿಮ್ಮ ಪರ್ಸು ತುಂಬಿಕೊಂಡಿರುತ್ತದೆ.

ಇದನ್ನೂ ಓದಿ : ಗಂಡ, ಹೆಂಡತಿ ಇಬ್ಬರಿಗೂ ಪ್ರತೀ ತಿಂಗಳು ಸಿಗಲಿದೆ 10 ಸಾವಿರ ರೂ. : ಕೇಂದ್ರ ಸರಕಾರದಿಂದ ಹೊಸ ಯೋಜನೆ

ಇದಲ್ಲದೇ ನಿಮ್ಮ ಪರ್ಸ್ ನಲ್ಲಿ ಸದಾ ಕಾಲ ಏಳು ಲವಂಗವನ್ನು ಇಟ್ಟುಕೊಳ್ಳಬೇಕು. ಇದು ಕೆಟ್ಟ ಶಕ್ತಿಗಳ ಪರಿಣಾಮದಿಂದ ನಿಮ್ಮನ್ನು ರಕ್ಷಿಸುತ್ತದೆ. ಅಲ್ಲದೇ ನಿಮ್ಮ ಪರ್ಸ್ ನಲ್ಲಿ ದುಡ್ಡು ತುಂಬಿಕೊಂಡಿರುವಂತೆ ಮಾಡುತ್ತದೆ. ಕೇವಲ ಲವಂಗ ಮಾತ್ರವಲ್ಲದೇ ಬೇಲೀಫ್, ಏಲಕ್ಕಿಯನ್ನು ಒಂದು ಕವರ್ ನಲ್ಲಿ ಹಾಕಿ ಪರ್ಸ್ ನಲ್ಲಿ ಇಟ್ಟು ಕೊಳ್ಳಬೇಕು. ಇದು ಧನಾಕರ್ಷಣೆಯ ಅತಿ ಸರಳವಾದ ದಾರಿಯಾಗಿದೆ.

Money Tips : No matter how hard you work, there is no money left in your wallet ? Here are some simple money saving tips

Comments are closed.