ಭಾನುವಾರ, ಏಪ್ರಿಲ್ 27, 2025
HomehoroscopeHoroscope Today : ಯಾವ ರಾಶಿಗೆ ಶುಭ, ಯಾರಿಗೆ ಅಶುಭ ; ಹೇಗಿದೆ ಇಂದಿನ ಜಾತಕಫಲ

Horoscope Today : ಯಾವ ರಾಶಿಗೆ ಶುಭ, ಯಾರಿಗೆ ಅಶುಭ ; ಹೇಗಿದೆ ಇಂದಿನ ಜಾತಕಫಲ

- Advertisement -

ಮೇಷರಾಶಿ
(Horoscope Today) ಆರ್ಥಿಕ ಸುಧಾರಣೆಗೆ ಯೋಜನೆ ರೂಪಿಸುವಿರಿ, ಸಹೋದ್ಯೋಗಿಗಳ ಸಹಕಾರ ದೊರೆಯಲಿದೆ. ವಿರೋಧಿಗಳ ಬಗ್ಗೆ ಎಚ್ಚರಿಕೆ ಅಗತ್ಯ, ಕೋರ್ಟ್ ಕಚೇರಿ ವ್ಯವಹಾರದಲ್ಲಿ ತೊಂದರೆ, ಉದ್ಯೋಗ ಬದಲಾಯಿಸುವ ಸಾಧ್ಯತೆ.

ವೃಷಭರಾಶಿ
ಭವಿಷ್ಯಕ್ಕಾಗಿ ಹಣಹೂಡಿಕೆಗೆ ಯೋಜನೆ ರೂಪಿಸುವಿರಿ, ದೂರದ ಊರಿಗೆ ಪ್ರಯಾಣ ಸಾಧ್ಯತೆ, ಹಿರಿಯರ ಮಾರ್ಗದರ್ಶನದಿಂದ ಅನುಕೂಲ, ವಿವಾಹದ ಅಪೇಕ್ಷೆಗಳಿಗೆ ಶುಭ, ಮಕ್ಕಳಿಗೆ ಸಮಸ್ಯೆ, ವಾಹನ ಲಾಭ.

ಮಿಥುನರಾಶಿ
(Horoscope Today) ಜೀವನ ಮಹತ್ವದ ತಿರುವು ಪಡೆದುಕೊಳ್ಳಲಿದೆ, ಗೆಳೆತನವು ಖುಷಿಯನ್ನು ಕೊಡಲಿದೆ, ಅತಿಯಾದ ಯೀಚನೆಯಿಂದ ಮಾನಸಿಕ ನೆಮ್ಮದಿಗೆ ಭಂಗ, ಆರ್ಥಿಕವಾಗಿ ಚೇತರಿಕೆ ಕಾಣುವಿರಿ, ತೀರ್ಥಯಾತ್ರೆಯ ಯೋಗ, ಶತ್ರುಗಳನ್ನು ನಿಗ್ರಹಿಸುವ ಶಕ್ತಿ, ಸಹೋದರರಿಂದ ಸಹಕಾರ.

ಕರ್ಕಾಟಕರಾಶಿ
ಎಚ್ಚರಿಕೆಯಿಂದ ಕೆಲಸ ಕಾರ್ಯಗಳನ್ನು ನಿರ್ವಹಿಸುವಿರಿ, ಸಂಬಂಧಗಳು ಗಟ್ಟಿಯಾಗಲಿದೆ, ಇಷ್ಟುಪಟ್ಟು ಮಾಡುವ ಕೆಲಸ ಕಾರ್ಯಗಳು ಸಂತೋಷವನ್ನು ತರಲಿದೆ, ನ್ಯಾಯಾಲಯದ ವ್ಯಾಜ್ಯಗಳಲ್ಲಿ ಗೆಲುವು ದೊರೆಯಲಿದೆ, ಅಮೂಲ್ಯವಾದ ವಸ್ತುಗಳ ಕಳವು, ಅನಾರೋಗ್ಯ, ಮಾನಹಾನಿ ವೃಥಾ ತಿರುಗಾಟ.

ಸಿಂಹರಾಶಿ
(Horoscope Today) ನಿಮ್ಮ ಸೇವೆಯ ಬಗ್ಗೆ ಇತರರು ಮೆಚ್ಚುಗೆ ವ್ಯಕ್ತಪಡಿಸಲಿದ್ದಾರೆ. ಸಂಬಂಧಗಳ ಬೆಲೆಯು ಅರ್ಥವಾಗಲಿದೆ, ಅಪರಿಚಿತರ ಕರೆಗಳಿಗೆ ಬೆಲೆ ಕೊಡಬೇಡಿ, ಹಣಕಾಸಿನಲ್ಲಿ ಮುಗ್ಗಟ್ಟು, ಕುಟುಂಬದಲ್ಲಿ ಅಹಿತಕರ ಘಟನೆ, ದೂರದ ಸಂಬಂಧಿಗಳಿಂದ ಸಹಾಯ.

ಕನ್ಯಾರಾಶಿ
ಆಹಾರ ಸೇವನೆಯ ವಿಚಾರದಲ್ಲಿ ಎಚ್ಚರಿಕೆ ಅಗತ್ಯ, ಅಲ್ಪ ಭೋಜನ ತೃಪ್ತಿಯನ್ನು ನೀಡಲಿದೆ, ಮನೆಯ ನಿರ್ಮಾಣದ ವಿಚಾರದಲ್ಲಿ ಪತ್ನಿಯ ಸಹಕಾರ ದೊರೆಯಲಿದೆ. ಪತ್ನಿಗೆ ಉದ್ಯೋಗ ಲಭ್ಯ, ಪ್ರಯಾಣದಿಂದ ಆರೋಗ್ಯಕ್ಕೆ ತೊಂದರೆ, ಸಣ್ಣಪುಟ್ಟ ಶಾರೀರಿಕ ಗಾಯ.

ತುಲಾರಾಶಿ
ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಉದ್ಯಮಿಗಳು ಎಚ್ಚರಿಕೆಯ ಹೆಜ್ಜೆಯನ್ನಿಡುವುದು ಅತೀ ಮುಖ್ಯ, ಮರ್ಯಾದೆಗೆ ಹೆದರಿ ಕೆಲಸ ಮಾಡಬೇಕಾದ ಪರಸ್ಥಿತಿ ಎದುರಾಗಲಿದೆ, ಪತ್ನಿ ಆರೋಗ್ಯದಲ್ಲಿ ಚೇತರಿಕೆ, ಎಲ್ಲಾ ಕೆಲಸಕ್ಕೂ ಪ್ರಯತ್ನ ಅಗತ್ಯ, ಯುವಕರಿಗೆ ಸಾಹಸ ಕಾರ್ಯದತ್ತ ಆಸಕ್ತಿ.

ವೃಶ್ಚಿಕರಾಶಿ
(Horoscope Today) ಅಪವಾಧದ ಮಾತುಗಳು ಕೇಳಬೇಕಾಗುತ್ತದೆ, ಕೆಲಸ ಕಾರ್ಯಗಳಿಗೆ ಉತ್ತಮ ಪ್ರತಿಫಲ ದೊರೆಯಲಿದೆ, ತೀರ್ಥ ಕ್ಷೇತ್ರಗಳಿಗೆ ಭೇಟಿ ನೀಡುವಿರಿ, ವಂಚನೆ, ಅಪವಾಧದ ಭೀತಿ ನಿಮ್ಮನ್ನು ಕಾಡಲಿದೆ, ಅಗಾಧ ತಲೆ ನೋವಿನಿಂದ ಕಿರಿಕಿರಿ, ಪ್ರಯಾಣದಿಂದ ಆಯಾಸ, ಮಕ್ಕಳಿಗೆ ಜ್ವರದಿಂದ ತೊಂದರೆ.

ಧನಸ್ಸುರಾಶಿ
ಕೆಲಸ ಕಾರ್ಯಗಳಲ್ಲಿ ಆತ್ಮಸ್ಥೈರ್ಯವನ್ನು ನೀಡಲಿದೆ, ಉದ್ಯಮಿಗಳಿಗೆ ಇಂದು ಲಾಭದಾಯಕ, ವೈವಾಹಿಕ ಜೀವನವು ಖುಷಿಯನ್ನು ನೀಡಲಿದೆ, ಸ್ನೇಹಿತರ ಆಗಮನದಿಂದ ಸಂತಸ. ಕೋರ್ಟ್ ಕಚೇರಿಗಳಲ್ಲಿ ಅಪ ಯಶಸ್ಸು, ಚಂಚಲ ಮನಸ್ಸು, ದುಡುಕಿನ ನಿರ್ಧಾರದಿಂದ ತೊಂದರೆ.

ಮಕರರಾಶಿ
ಅಪರಿಚಿತ ವ್ಯಕ್ತಿಗಳಿಂದ ಎಚ್ಚರಿಕೆಯಿಂದ ಇರಿ, ನಿಮ್ಮನ್ನು ದಾರಿತಪ್ಪಿಸುವ ಅಥವಾ ಅವಮಾನ ಮಾಡುವ ವ್ಯಕ್ತಿಗಳಿಂದ ದೂರವಿರಿ, ಸಹೋದರ ರಿಂದ ಸಂಪತ್ತಿನ ಸಹಕಾರ ದೊರೆಯಲಿದೆ, ಹೊಸ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯಲಿದೆ, ಪಿತ್ರಾರ್ಜಿತ ಆಸ್ತಿ ಲಭ್ಯ, ಭೂ ವ್ಯವಹಾರದಲ್ಲಿ ಲಾಭ, ಪ್ರೇಮಿಗಳಲ್ಲಿ ಸಂತೋಷ. ಇದನ್ನೂ ಓದಿ : Glowing Skin: ಬೇಸಿಗೆಯಲ್ಲಿ ಗ್ಲೋಯಿಂಗ್‌ ಸ್ಕಿನ್‌ಗಾಗಿ ಹೀಗಿರಿಲಿ ನಿಮ್ಮ ಜೀವನಶೈಲಿ

ಕುಂಭರಾಶಿ
(Horoscope Today) ಆತ್ಮ ಗೌರವಕ್ಕೆ ಧಕ್ಕೆ ಬರುವ ಸಾಧ್ಯತೆಯಿದೆ, ಸ್ನೇಹಿತರ ಸಹವಾಸದಿಂದ ದುಶ್ಚಟಕ್ಕೆ ಬೀಳುವ ಸಾಧ್ಯತೆಯಿದೆ, ಅನಿರೀಕ್ಷಿತ ಹಣ ದೊರೆಯಲಿದೆ, ಮಾನಸಿಕ ಭಯ, ವಿವಾಹ ಕಾರ್ಯಗಳಲ್ಲಿ ಯಶಸ್ಸು, ನಿಂತ ಕಾರ್ಯಗಳು ಮುಂದುವರಿಯುವುದು. ಇದನ್ನೂ ಓದಿ : ತೂಕ ನಷ್ಟದಿಂದ ಕೂದಲು ಉದುರುತ್ತಿದೆಯೇ ? ಈ ಅಹಾರ ಪದ್ದತಿ ಅನುಸರಿಸಿ

ಮೀನರಾಶಿ
ಹಿರಿಯರ ಸಹಕಾರದಿಂದ ಕಾರ್ಯಾನುಕೂಲ, ಹೊಂದಾಣಿಕೆಯಿಂದ ಸಹೋದ್ಯೋಗಿಗಳ ಸಹಕಾರ, ಸ್ನೇಹಿತರೊಂದಿಗೆ ಸಾಮರಸ್ಯ, ಬಂಧುಗಳ ಆಗಮನದಿಂದ ಸಂತಸ, ಮಕ್ಕಳೊಂದಿಗೆ ಹೆಚ್ಚಿನ ಸಮಯ ಕಳೆಯುವಿರ, ಧಾರ್ಮಿಕ ಕ್ಷೇತ್ರಗಳ ಭೇಟಿಯಿಂದ ನೆಮ್ಮದಿ ದೊರೆಯಲಿದೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular