IPL 2023 CSK vs GT : ಇಂದಿನಿಂದ ಐಪಿಎಲ್‌ ಕಿಕ್ : ಮೋದಿ ನಾಡಿನಲ್ಲಿ ಕ್ರಿಕೆಟ್‌ ಹಂಗಾಮ

ಅಹಮದಾಬಾದ್‌ : IPL 2023 CSK vs GT :ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023 ಇಂದಿನಿಂದ ಆರಂಭಗೊಳ್ಳಲಿದೆ. ಉದ್ಘಾಟನಾ ಪಂದ್ಯದಲ್ಲಿ ಕಳೆದ ಋತುವಿನ ಐಪಿಎಲ್‌ ವಿಜೇತ ತಂಡವನ್ನು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಎದುರಿಸಲಿದೆ. ಗುಜರಾತ್‌ನ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಐಪಿಎಲ್‌ಗೆ ಚಾಲನೆ ದೊರೆಯಲಿದೆ. ಉದ್ಘಾಟನಾ ಸಮಾರಂಭದ ನಂತರದಲ್ಲಿ ಮಹೇಂದ್ರ ಸಿಂಗ್‌ ಧೋನಿ ನೇತೃತ್ವದ ಸಿಎಸ್‌ಕೆ ಹಾಗೂ ಹಾರ್ದಿಕ್‌ ಪಾಂಡ್ಯ ನಾಯಕತ್ವದ ಗುಜರಾತ್‌ ಟೈಟಾನ್ಸ್‌ ತಂಡ ಸೆಣೆಸಾಟವನ್ನು ನಡೆಸಲಿವೆ.

ಚೆನ್ನೈ ಸೂಪರ್ ಕಿಂಗ್ಸ್ ಈ ಹಿಂದೆ ನಾಲ್ಕು ಬಾರಿ ಗೆದ್ದಿದ್ದರೂ, ಕೂಡ ಐಪಿಎಲ್ 2022ರ ಋತು ಚೆನ್ನೈ ತಂಡ ಹಿನಾಯ ಪ್ರದರ್ಶನವನ್ನು ನೀಡಿತ್ತು. ಐಪಿಎಲ್‌ 2022ರ ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನಗಳಿಸಿತ್ತು. ಆದರೆ ಈ ಬಾರಿ ಹೊಸ ತಂಡದೊಂದಿಗೆ ಚೆನ್ನೈ ಕಣಕ್ಕೆ ಇಳಿದಿದೆ. ರವೀಂದ್ರ ಜಡೇಜಾ ತಂಡಕ್ಕೆ ವಾಪಾಸಾಗಿದ್ದು, ಬೆನ್ ಸ್ಟೋಕ್ಸ್, ಮೊಯಿನ್ ಅಲಿ ಸೇರಿದಂತೆ ಖ್ಯಾತ ಆಲ್‌ರೌಂಡರ್‌ಗಳು ಚೆನ್ನೈ ತಂಡದಲ್ಲಿದ್ದಾರೆ. ಇಂದು ಸಂಜೆ 6 ಗಂಟೆಗೆ ಆರಂಭವಾಗುವ ಪಂದ್ಯಕ್ಕೂ ಮುನ್ನ ಅದ್ಧೂರಿ ಉದ್ಘಾಟನಾ ಸಮಾರಂಭ ನಡೆಯಲಿದೆ.

CSK vs GT 1 ನೇ ಪಂದ್ಯ IPL 2023 ಯಾವಾಗ ?

ಶುಕ್ರವಾರ, 31 ಮಾರ್ಚ್

IPL 2023 ರ ಮೊದಲ ಪಂದ್ಯ ಯಾವ ಸಮಯದಲ್ಲಿ ಪ್ರಾರಂಭವಾಗುತ್ತದೆ?

7:30 PM IST. 7 PM IST ಕ್ಕೆ ಟಾಸ್.

IPL 2023 ರ CSK vs GT 1 ನೇ ಪಂದ್ಯವನ್ನು ಎಲ್ಲಿ ಆಡಲಾಗುತ್ತಿದೆ ?

ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್.

IPL 2023 ರ CSK vs GT 1 ನೇ ಪಂದ್ಯವನ್ನು ನೀವು ಟಿವಿಯಲ್ಲಿ ಎಲ್ಲಿ ವೀಕ್ಷಿಸಬಹುದು ?

ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್

IPL 2023 ರ ಮೊದಲ ಪಂದ್ಯವನ್ನು ನೀವು ಆನ್‌ಲೈನ್‌ನಲ್ಲಿ ಎಲ್ಲಿ ವೀಕ್ಷಿಸಬಹುದು ?

ಜಿಯೋ ಸಿನಿಮಾ

CSK vs GT ಪೂರ್ಣ ತಂಡಗಳು –

ಚೆನ್ನೈ ಸೂಪರ್ ಕಿಂಗ್ಸ್ ತಂಡ:
ಬೆನ್ ಸ್ಟೋಕ್ಸ್, ದೀಪಕ್ ಚಾಹರ್, ಎಂಎಸ್ ಧೋನಿ, ಮೊಯಿನ್ ಅಲಿ, ಅಂಬಟಿ ರಾಯುಡು, ರುತುರಾಜ್ ಗಾಯಕ್ವಾಡ್, ಶಿವಂ ದುಬೆ, ಮಿಚೆಲ್ ಸ್ಯಾಂಟ್ನರ್, ರಾಜವರ್ಧನ್ ಹಂಗರ್ಗೇಕರ್, ಪ್ರಶಾಂತ್ ಸೋಲಂಕಿ, ಡೆವೊನ್ ಕಾನ್ವೇ, ಕೈಲ್ ಜೇಮಿಸನ್, ಮಹೇಶ್ ತೀಕ್ಷಣ, ನಿಶಾಂತ್ ಸಿಂಧನ, ನಿಶಾಂತ್ ಸಿಂಧನ್ ಡ್ವೈನ್ ಪ್ರಿಟೋರಿಯಸ್, ಅಜಯ್ ಮಂಡಲ್, ಸುಭ್ರಾಂಶು ಸೇನಾಪತಿ, ಆಕಾಶ್ ಸಿಂಗ್, ಸಿಮರ್ಜೀತ್ ಸಿಂಗ್, ಮಥೀಶ ಪತಿರಾನ, ಭಗತ್ ವರ್ಮಾ, ಶೇಕ್ ರಶೀದ್, ತುಷಾರ್ ದೇಶಪಾಂಡೆ.

ಗುಜರಾತ್ ಟೈಟಾನ್ಸ್ ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ಶುಭಮನ್ ಗಿಲ್, ಡೇವಿಡ್ ಮಿಲ್ಲರ್, ಅಭಿನವ್ ಮನೋಹರ್, ಸಾಯಿ ಸುದರ್ಶನ್, ವೃದ್ಧಿಮಾನ್ ಸಹಾ, ಮ್ಯಾಥ್ಯೂ ವೇಡ್, ರಶೀದ್ ಖಾನ್, ರಾಹುಲ್ ತೆವಾಟಿಯಾ, ವಿಜಯ್ ಶಂಕರ್, ಮೊಹಮ್ಮದ್ ಶಮಿ, ಅಲ್ಜಾರಿ ಜೋಸೆಫ್, ಯಶ್ ದಯಾಳ್, ದರ್ಶನ್ ಸಂಗ್ವಾನ್, ದರ್ಶನ್ ಸಂಗ್ವಾನ್ ನಲ್ಕಂಡೆ, ಜಯಂತ್ ಯಾದವ್, ಆರ್ ಸಾಯಿ ಕಿಶೋರ್, ನೂರ್ ಅಹ್ಮದ್, ಕೇನ್ ವಿಲಿಯಮ್ಸನ್, ಒಡಿಯನ್ ಸ್ಮಿತ್, ಕೆಎಸ್ ಭರತ್, ಶಿವಂ ಮಾವಿ, ಉರ್ವಿಲ್ ಪಟೇಲ್, ಜೋಶುವಾ ಲಿಟಲ್, ಮೋಹಿತ್ ಶರ್ಮಾ.

Comments are closed.