B.S Yediyurappa : ಸಿದ್ದರಾಮಯ್ಯ ವಿರುದ್ದ ವಿಜಯೇಂದ್ರ : ಹರಕೆ ಕುರಿ ಪ್ಲ್ಯಾನ್ ನಿಂದ ಮಗನನ್ನು ಬಚಾವ್ ಮಾಡಿದ ಬಿ.ಎಸ್.ಯಡಿಯೂರಪ್ಪ

ಬೆಂಗಳೂರು : (B.S Yediyurappa) ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ವರುಣಾ ಕ್ಷೇತ್ರ ಸಾಕಷ್ಟು ಚರ್ಚೆಗೊಳಗಾಗುತ್ತಿದೆ. ಮಾಜಿ ಸಿಎಂ ಸಿದ್ಧರಾಮಯ್ಯ ಅವರ ಸ್ಪರ್ಧೆಯಿಂದ ಹಾಟ್ ಸ್ಪಾಟ್ ಎನ್ನಿಸಿರೋ ಈ ಕ್ಷೇತ್ರದಲ್ಲಿ ಮಾಜಿ ಸಿಎಂಗೆ ಮಾಜಿ ಸಿಎಂ ಪುತ್ರ ಎದುರಾಳಿ ಎನ್ನಲಾಗ್ತಿತ್ತು. ಆದರೆ ಶುಕ್ರವಾರ ಬೆಳಗ್ಗೆ ಆರಂಭವಾದ ಚರ್ಚೆಗೆ ಸಂಜೆಯ ಹೊತ್ತಿಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅಂತ್ಯ ಹಾಡಿದ್ದು, ಮಗ ಒಂದೇ ಕ್ಷೇತ್ರದಲ್ಲೇ ನಿಲ್ಲೋದು ಅದು ಶಿಕಾರಿಪುರದಲ್ಲಿ ಮಾತ್ರ ಎನ್ನುವ ಮೂಲಕ ಮಗನನ್ನು ಹರಕೆ ಕುರಿಯಾಗೋದರಿಂದ ಉಳಿಸಿ ಕೊಂಡಿದ್ದಾರೆ ಎನ್ನಲಾಗ್ತಿದೆ.

ಹೌದು ರಾಜ್ಯ ರಾಜಕೀಯದಲ್ಲಿ ಮಾಜಿ ಸಿಎಂ ಬಿಎಸ್ವೈ ಅನುಭವಕ್ಕೆ ವಿಶಿಷ್ಟವಾದ ಸ್ಥಾನವಿದೆ. ಇಂಥ ರಾಜಕಾರಣಿಯನ್ನು ಬಿಜೆಪಿ ಸಂಪೂರ್ಣವಾಗಿ ಸದ್ಭಳಕೆ ಮಾಡಿಕೊಂಡಿರೋದು ನಿಜ. ಆದರೆ ಈಗ ಬಿಎಸ್ವೈ ಪುತ್ರ ಬಿ.ವೈ.ವಿಜಯೇಂದ್ರ ಗೆ ಬಿಜೆಪಿಯಲ್ಲಿ ಒಳ್ಳೆಯ ಸ್ಥಾನ ಮಾನ ಸಿಕ್ಕಿದ್ದರೂ ಬಿಜೆಪಿಯಲ್ಲೇ ಬಿ.ವೈ.ವಿಜಯೇಂದ್ರ ಗೆ ವಿರೋಧಿ ಪಾಳಯವೊಂದು ಆಕ್ಟಿವ್ ಆಗಿರೋದು ಕೂಡ ಸುಳ್ಳಲ್ಲ.

ವಿಜಯೇಂದ್ರ ಚುನಾವಣೆಗೆ ನಿಲ್ಲುತ್ತಾರೆ ಎಂಬ ವಿಚಾರ ಪ್ರಸ್ತಾವನೆಯಲ್ಲಿತ್ತು. ಶಿಕಾರಿಪುರದಲ್ಲೇ ಸ್ಪರ್ಧಿಸುತ್ತಾರೆ ಎಂಬ ಮಾತು ಕೇಳಿಬಂದಿತ್ತು. ಆದರೆ ಯಾವಾಗ ಮಾಜಿ ಸಿಎಂ ಸಿದ್ಧರಾಮಯ್ಯನವರು ಕೋಲಾರದಿಂದ ವರುಣಾಕ್ಕೆ ತಮ್ಮ ಕ್ಷೇತ್ರವನ್ನು ಬದಲಾಯಿಸಿಕೊಂಡರೋ ಆಗಲೇ ಸಿದ್ಧರಾಮಯ್ಯನವರ ಎದುರು ಸಮರ್ಥ ಎದುರಾಳಿ ಕಣಕ್ಕಿಳಿಸುತ್ತೇವೆ ಎಂದ ಬಿಜೆಪಿ ಬಿ.ವೈ.ವಿಜಯೇಂದ್ರ ಹೆಸರನ್ನು ತೇಲಿ ಬಿಟ್ಟಿತ್ತು. ಆದರೆ ಪ್ರಸ್ತಾಪಕ್ಕೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಬಿ.ವೈ.ವಿಜಯೇಂದ್ರಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಹೈಕಮಾಂಡ್ ಅವಕಾಶ ನೀಡಿದರೇ ಅವರು ಶಿಕಾರಿಪುರದಲ್ಲಿ ಮಾತ್ರ ಸ್ಪರ್ಧಿಸುತ್ತಾರೆ. ಯಾವುದೇ ಕಾರಣಕ್ಕೂ ವರುಣಾದಲ್ಲಿ ಸ್ಪರ್ಧಿಸೋದಿಲ್ಲ. ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಮೂಲಗಳ ಮಾಹಿತಿ ಪ್ರಕಾರ ಬಿ.ವೈ.ವಿಜಯೇಂದ್ರ ಅವರನ್ನು ಸಿದ್ಧರಾಮಯ್ಯನವರ ಎದುರು ಕಣಕ್ಕಿಳಿಸೋದರಲ್ಲಿ ರಾಜಕೀಯ ಹುನ್ನಾರವಿದೆ ಎನ್ನಲಾಗ್ತಿದೆ. ಸಿದ್ದರಾಮಯ್ಯ ಕೊನೆ ಎಲೆಕ್ಷನ್ ನನ್ನ ಹುಟ್ಟೂರಿನಲ್ಲಿ ಅನ್ನೋ ಎಮೋಶನಲ್ ಅಂಶದ ಜೊತೆ ಕಣಕ್ಕಿಳಿದಿದ್ದಾರೆ. ಹೀಗಿರುವಾಗ ಸಿದ್ಧರಾಮಯ್ಯನವರ ಎದುರು ಬಿ.ವೈ.ವಿಜಯೇಂದ್ರ ಗೆಲುವು ಸುಲಭವಲ್ಲ. ಒಂದೊಮ್ಮೆ ಸೋತರೇ ಅದು ಸ್ವತಃ ವಿಜಯೇಂದ್ರ ಮಾತ್ರವಲ್ಲ ಬಿಎಸ್ವೈ ಗೂ ತೀವ್ರ ಮುಜುಗರ ತರಲಿದೆ. ಇದೇ ಕಾರಣಕ್ಕೆ ವಿಜಯೇಂದ್ರ ನನ್ನು ನಿಲ್ಲಿಸಿ ಗೆದ್ದರೇ ಸೀಟ್ ಹೋದರೇ ವಿಜಯೇಂದ್ರ , ಯಡಿಯೂರಪ್ಪರಿಗೆ ಗೌರವ ಎಂಬ ಪ್ಲ್ಯಾನ್ ಮಾಡಲಾಗಿತ್ತು ಎನ್ನಲಾಗಿದೆ.

ಇದನ್ನೂ ಓದಿ : ವರುಣಾ ಕ್ಷೇತ್ರದಿಂದ ವಿಜಯೇಂದ್ರ ಸ್ಪರ್ಧೆ ಇಲ್ಲ : ಬಿ.ಎಸ್.ಯಡಿಯೂರಪ್ಪ

ಇದನ್ನು ಸೂಕ್ಷ್ಮವಾಗಿ ಗ್ರಹಿಸಿದ ಬಿಎಸ್ವೈ ನೇರಾನೇರ ಕಣಕ್ಕಿಳಿದಿದ್ದು, ಪುತ್ರ ರಾಜಕೀಯದ ಹೆಸರಿನಲ್ಲಿ ಮೊದಲ ಚುನಾವಣೆಯಲ್ಲೇ ಸೋತು ಸುಣ್ಣವಾಗೋದನ್ನು ತಪ್ಪಿಸಲು ಪಣತೊಟ್ಟಿದ್ದಾರೆ. ಈ ಬಗ್ಗೆ ನೇರವಾಗಿ ಮಾತನಾಡಿದ ಬಿಎಸ್ವೈ ಈ ವಿಚಾರದಲ್ಲಿ ಯಾರನ್ನೂ ಬೇಕಾದರೂ ನಾನು ಮಾತನಾಡಿ ಮನವೊಲಿಸುತ್ತೇನೆ‌. ಆದರೆ ವಿಜಯೇಂದ್ರ ಸ್ಪರ್ಧಿಸೋದು ಶಿಕಾರಿಪುರದಿಂದಲೇ ಎಂದು ಕಡ್ಡಿ ತುಂಡು ಮಾಡಿದಂತೆ ಮಾತನಾಡಿದ್ದಾರೆ.

B.S Yediyurappa : Siddaramaiah Vs Vijayendra : B.S Yediyurappa saved his son from Harake Kuri Plan

Comments are closed.