ಸೋಮವಾರ, ಏಪ್ರಿಲ್ 28, 2025
HomehoroscopeHoroscope Today : ದಿನಭವಿಷ್ಯ : ವೃಶ್ಚಿಕ ರಾಶಿಯವರಿಗೆ ಸಂತೃಪ್ತಿ

Horoscope Today : ದಿನಭವಿಷ್ಯ : ವೃಶ್ಚಿಕ ರಾಶಿಯವರಿಗೆ ಸಂತೃಪ್ತಿ

- Advertisement -

ಮೇಷರಾಶಿ
ಉಳಿತಾಯದ ಕಡೆಗೆ ಗಮನ ಹರಿಸಿ, ಕಠಿಣ ಪರಿಶ್ರಮ ಫಲ ಕೊಡಲಿದೆ, ಮನೆಯಲ್ಲಿ ನೆಮ್ಮದಿಯ ವಾತಾವರಣ, ಅಧಿಕ ಖರ್ಚಿನಿಂದ ಕಿರಿಕಿರಿ, ವಿನಾಕಾರಣ ನಿಂದನೆ, ಕುಟುಂಬ ಸೌಖ್ಯ, ಸಾಲಭಾದೆ, ಉದ್ಯೋಗದಲ್ಲಿ ಹೆಚ್ಚಿನ ಕೆಲಸ, ಶುಭ ಸಮಯ, ವಾಣಿಜ್ಯರಂಗದವರಿಗೆ ಅಧಿಕ ಲಾಭ.

ವೃಷಭರಾಶಿ
ಕೆಲಸ ಕಾರ್ಯಗಳಲ್ಲಿ ಯಶಸ್ಸು, ಕೀರ್ತಿ ಲಾಭ, ದುಡುಕು ಸ್ವಭಾವ, ಆರ್ಥಿಕ ಸಂಕಷ್ಟ ದೂರವಾಗಲಿದೆ, ಫೈನಾನ್ಸ್‌ ವ್ಯವಹಾರದಲ್ಲಿ ಅನಿರೀಕ್ಷಿತ ಲಾಭ ಕಂಡು ಬರಲಿದೆ, ವಾಹನ ರಿಪೇರಿ, ವ್ಯರ್ಥ ಧನಹಾನಿ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ದೂರ ಪ್ರಯಾಣ, ಭೂಲಾಭ.

ಮಿಥುನರಾಶಿ
ಉದ್ಯೋಗ ಕ್ಷೇತ್ರದಲ್ಲಿ ಅಭಿವೃದ್ದಿ ಕಂಡು ಬರಲಿದೆ, ಸ್ನೇಹಿತರ ಜೊತೆಗಿನ ಮನಸ್ಥಾನ ದೂರವಾಗಲಿದೆ, ಮಹಿಳೆಯರಿಗೆ ಶುಭ, ಅಧಿಕಾರಿಗಳಿಂದ ಪ್ರಶಂಸೆ, ವಸ್ತ್ರ ಖರೀದಿ, ಸುಖ ಭೋಜನ, ಇತರರ ಮಾತಿನಿಂದ ಕಲಹ, ಪ್ರಭಾವಿ ವ್ಯಕ್ತಿಗಳ ಭೇಟಿ, ನೆಮ್ಮದಿ ಶಾಂತಿ, ಮಾನ ವಿಚಾರಗಳಲ್ಲಿ ಆಸಕ್ತಿ.

ಕರ್ಕಾಟಕರಾಶಿ
ನೌಕರರಿಗೆ ಉದ್ಯೋಗದಲ್ಲಿ ಕಿರಿಕಿರಿ, ಪಟ್ಟುಬಿಡದೆ ಕೆಲಸ ಮಾಡುವಿರಿ, ಕೃಷಿಕರಿಗೆ ಹೆಚ್ಚಿನ ಲಾಭ ದೊರೆಯಲಿದೆ, ಮಾತುಗಳಿಂದ ಸಂಬಂಧ ಸುಧಾರಿಸಲಿದೆ, ಆಲಸ್ಯ ಮನೋಭಾವ, ಸಂಬಂಧಿಗಳಿಂದ ದೂರವಿರಿ, ಆದಾಯಕ್ಕೆ ತಕ್ಕ ಖರ್ಚು, ಉದ್ಯೋಗದಲ್ಲಿ ಅಭಿವೃದ್ಧಿ.

ಸಿಂಹರಾಶಿ
ವ್ಯವಹಾರದಲ್ಲಿ ಅಭಿವೃದ್ದಿ ಕಂಡು ಬರಲಿದೆ, ಸಾಮಾಜಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ, ನಗದು ವ್ಯವಹಾರಗಳಲ್ಲಿ ಎಚ್ಚರ, ಹಿತಶತ್ರುಗಳಿಂದ ತೊಂದರೆ, ವಿವಿಧ ಮೂಲಗಳಿಂದ ಧನಾಗಮನ, ಶರೀರದಲ್ಲಿ ತಳಮಳ, ಕೆಲಸದಲ್ಲಿ ಹಿಂಜರಿಯುವಿಕೆ, ದೇವತಾ ಕಾರ್ಯಗಳಲ್ಲಿ ಭಾಗಿ.

ಇದನ್ನೂ ಓದಿ : Ek Love Ya : ಅಗಲಿದ 12 ದಿನಕ್ಕೆ ಅಪ್ಪುಗೆ ಅವಮಾನ ! ಪವರ್ ಸ್ಟಾರ್ ಪೋಟೋ ಎದುರು ಶಾಂಪೇನ್ ಸಿಡಿಸಿದ ಸಿನಿಮಾಸ್ಟಾರ್ಸ್

ಕನ್ಯಾರಾಶಿ
ನಿಧಾನಗತಿಯ ಕೆಲಸದಿಂದ ಮನಸಿಗೆ ಬೇಸರ, ಸಾಲರರು ತೊಂದರೆ ನೀಡುವ ಸಾಧ್ಯತೆಯಿದೆ, ಎಲ್ಲರ ಮನಸನ್ನ ಗೆಲ್ಲುವಿರಿ, ಮಾತಿನ ಚಕಮಕಿ, ವ್ಯವಹಾರದಲ್ಲಿ ಹಾನಿ ಉಂಟಾಗುವ ಸಾಧ್ಯತೆಯಿದೆ, ವಿಪರೀತ ಹಣವ್ಯಯ, ನೆಮ್ಮದಿ ಇಲ್ಲದ ಜೀವನ, ಮಿತ್ರರ ಭೇಟಿ, ಕೃಷಿಕರಿಗೆ ಉತ್ತಮ ಲಾಭ, ಆಕಸ್ಮಿಕ ಧನಲಾಭ.

ತುಲಾರಾಶಿ
ನೆಮ್ಮದಿಯ ವಾತಾವರಣ, ನೆರೆ ಹೊರೆಯವಯೊಂದಿಗೆ ಉತ್ತಮ ಬಾಂಧವ್ಯ, ಆರ್ಥಿಕ ಅಭಿವೃದ್ಧಿ,ಚಂಚಲ ಮನಸ್ಸು, ಧನ ಮೂಲಗಳು ಹೆಚ್ಚಾಗಲಿದೆ, ಅಧಿಕ ತಿರುಗಾಟ, ಹೇಳಲಾಗದಂತಹ ಸಂಕಟ, ವಿದ್ಯಾರ್ಥಿಗಳು ಓದಿನ ಕಡೆ ಗಮನ ಹರಿಸಿ, ಶತ್ರು ಭಾದೆ.

ವೃಶ್ಚಿಕರಾಶಿ
ಉದ್ಯೋಗದ ಬಗ್ಗೆ ಸಂತೃಪ್ತಿ ಇರುವುದು, ಸ್ವಪ್ರಯತ್ನದಿಂದಲೇ ಕೆಲಸ ಕಾರ್ಯಗಳು ನೆರವೇರಲಿದೆ, ಉಪಕರಣಗಳ ಖರೀದಿ, ಹಳೆಯ ಬಾಕಿ ವಸೂಲಿಯಿಂದ ನೆಮ್ಮದಿ ಕಂಡು ಬರಲಿದೆ, ಪ್ರವಾಸದ ಸಾಧ್ಯತೆ, ಸ್ಥಿರಾಸ್ತಿ ಸಂಪಾದನೆ, ಮಿತ್ರರಿಂದ ವಂಚನೆ, ಕೈಹಾಕಿದ ಕೆಲಸ ಕಾರ್ಯಗಳಲ್ಲಿ ಅಡಚಣೆ, ಪುಣ್ಯಕ್ಷೇತ್ರ ದರ್ಶನ.

ಧನಸ್ಸುರಾಶಿ
ಮನೆಯ ಜವಾಬ್ದಾರಿ ಹೆಚ್ಚಲಿದೆ, ವ್ಯವಹಾರ ಕ್ಷೇತ್ರದಲ್ಲಿ ಅಡಚಣೆ ಕಂಡುಬರಲಿದೆ, ಭಾಗ್ಯ ವೃದ್ದಿಯಾಗುವ ಯೋಗವಿದೆ, ಉದ್ಯೋಗದಲ್ಲಿ ಪ್ರಗತಿ, ಆಪ್ತರಿಂದ ಸಹಾಯ, ಮಾನಸಿಕ ನೆಮ್ಮದಿ, ಸ್ತ್ರೀ ಲಾಭ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಅಮೂಲ್ಯ ವಸ್ತುಗಳ ಖರೀದಿ, ಬಾಕಿ ಹಣ ವಸೂಲಿ.

ಮಕರರಾಶಿ
ಹಿರಿಯರ ಸಲಹೆಯನ್ನು ಆಲಿಸಿ, ಮನೆಯಲ್ಲಿ ವಿವಾಹ ಸಂಬಂಧಿತ ಮಾತುಕತೆ ನಡೆಯಲಿದೆ, ಆತ್ಮವಿಶ್ವಾಸ ವೃದ್ದಿಸಲಿದೆ, ಸಣ್ಣಪುಟ್ಟ ವಿಷಯಗಳಿಂದ ಕಲಹ, ನೂತನ ಕೆಲಸಕಾರ್ಯಗಳಲ್ಲಿ ಭಾಗಿ, ಧನಲಾಭ, ಮಾನಸಿಕ ನೆಮ್ಮದಿ, ಸಲ್ಲದ ಅಪವಾದ ಎಚ್ಚರ, ಋಣಭಾದೆ, ವಾಹನ ಯೋಗ.

ಕುಂಭರಾಶಿ
ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ಫಲಿತಾಂಶ ದೊರೆಯಲಿದೆ, ಸಾಮಾಜಿಕವಾಗಿ ಕೀರ್ತಿ ಸಂಪಾದನೆ ಮಾಡುವಿರಿ, ಅಪೇಕ್ಷಿಸಿದ ಕಾರ್ಯಗಳು ನಿರ್ವಿಘ್ನವಾಗಿ ಪೂರ್ಣಗೊಳ್ಳಲಿದೆ, ಸಮಾಧಾನದಿಂದ ವರ್ತಿಸಿ, ಪರರಿಂದ ತೊಂದರೆ, ಅನಾರೋಗ್ಯ, ಅಪರಿಚಿತರ ವಿಷಯದಲ್ಲಿ ಎಚ್ಚರ, ಅಪವಾದದಿಂದ ಮುಕ್ತರಾಗುವಿರಿ.

ಮೀನರಾಶಿ
ಅವಿವಾಹಿತರಿಗೆ ವಿವಾಹ ಯೋಗ, ಹೊಸ ವ್ಯವಹಾರಕ್ಕಾಗಿ ಹೂಡಿಕೆ ಮಾಡುವಿರಿ, ನಿಮ್ಮ ನಿರ್ಧಾರಗಳು ಪರಿವರ್ತನೆಗೆ ಕಾರಣವಾಗಲಿದೆ, ಹೊಂದಾಣಿಕೆಯಿಂದ ಅನುಕೂಲ, ಕೆಲಸ ಕಾರ್ಯಗಳಲ್ಲಿ ಜಯ, ಶ್ರಮಕ್ಕೆ ತಕ್ಕ ಫಲ, ವಿವೇಚನೆ ಕಳೆದುಕೊಳ್ಳಬೇಡಿ, ವ್ಯಾಪಾರದಲ್ಲಿ ಲಾಭ, ಸ್ನೇಹಿತರಿಗೆ ಸಹಾಯ, ವೈರಿಗಳಿಂದ ದೂರವಿರಿ.

ಇದನ್ನೂ ಓದಿ : Pollution Lockdown: ದೆಹಲಿಯಲ್ಲಿ ಲಾಕ್‌ಡೌನ್‌ : ಆನ್‌ಲೈನ್‌ ಕ್ಲಾಸ್‌, ವರ್ಕ್‌ಫ್ರಂ ಹೋಮ್‌

ಇದನ್ನೂ ಓದಿ : BITCOIN CASE : ಬಿಟ್‌ ಕಾಯಿನ್‌ ಹಗರಣ : ಬೆಂಗಳೂರು ಪೊಲೀಸ್‌ ಆಯುಕ್ತರ ಸ್ಪಷ್ಟನೆ : ಅಷ್ಟಕ್ಕೂ ಯಾರು ಈ ಶ್ರೀಕಿ

(Horoscope today astrological prediction for November 14)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular