BITCOIN CASE : ಬಿಟ್‌ ಕಾಯಿನ್‌ ಹಗರಣ : ಬೆಂಗಳೂರು ಪೊಲೀಸ್‌ ಆಯುಕ್ತರ ಸ್ಪಷ್ಟನೆ : ಅಷ್ಟಕ್ಕೂ ಯಾರು ಈ ಶ್ರೀಕಿ

ಬೆಂಗಳೂರು : ರಾಜ್ಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿರುವ ಬಿಟ್‌ ಕಾಯಿನ್‌ ಪ್ರಕರಣದ (BITCOIN CASE) ಕುರಿತು ಕಾಂಗ್ರೆಸ್‌ ಗಂಭೀರ ಆರೋಪಗಳನ್ನು ಮಾಡಿದೆ. ಇನ್ನೊಂದಡೆಯಲ್ಲಿ ರಾಜ್ಯ ಸರಕಾರವನ್ನೂ ಇಕ್ಕಟ್ಟಿಗೆ ಸಿಲುಕಿಸುವ ಯತ್ನ ನಡೆಯುತ್ತಿದೆ. ಈ ನಡುವಲ್ಲೇ ಬಿಟ್‌ ಕಾಯಿನ್‌ ಹಗರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಪೊಲೀಸ್‌ ಆಯುಕ್ತರ ಕಚೇರಿಯಿಂದ ಪತ್ರಿಕಾ ಪ್ರಕಟಣೆಯ ಮೂಲಕ ಮಾಹಿತಿಯನ್ನು ನೀಡಲಾಗಿದೆ. ಶ್ರೀಕಿ ವಿರುದ್ದ ದಾಖಲಾಗಿರುವ ಪ್ರಕರಣಗಳ ಕುರಿತು ಸಂಪೂರ್ಣ ಮಾಹಿತಿಯನ್ನು ಬಿಚ್ಚಿಟ್ಟಿಡಲಾಗಿದೆ. ಅಲ್ಲದೇ ಯಾವುದೇ ಒತ್ತಡಕ್ಕೆ ಒಳಗಾಗಿ ತನಿಖೆಯ ನಡೆಸಿಲ್ಲ ಎಂದು ಸ್ಪಷ್ಟನೆಯನ್ನು ನೀಡಲಾಗಿದೆ.

ಬಿಟ್‌ ಕಾಯಿನ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಂತ ಪಾರದರ್ಶಕವಾಗಿ ತನಿಖೆಯನ್ನು ನಡೆಸಲಾಗಿದೆ. ಹಗರಣಕ್ಕೆ ಸಂಬಂಧಿಸಿದಂತೆ ಸೈಬರ್‌ ಕ್ರೈಂ, ಅಶೋಕನಗರ ಹಾಗೂ ಕೆ.ಜಿ.ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣವನ್ನು ದಾಖಲು ಮಾಡಲಾಗಿದೆ. ಅದ್ರಲ್ಲೂ ಕೆ.ಜಿ.ನಗರ ಪೊಲೀಸ್‌ ಠಾಣೆಯಲ್ಲಿ ಕಳೆದ ವರ್ಷ ನವೆಂಬರ್‌ ೪ರಂದು ಪ್ರಕರಣವೊಂದು ದಾಖಲಾಗಿತ್ತು. ಓರ್ವ ಆರೋಪಿಯಿಂದ ಸುಮಾರು 500 ಗ್ರಾಂ ಹೈಡ್ರೋ ಗಾಂಜಾವನ್ನು ವಶಕ್ಕೆ ಪಡೆಯಲಾಗಿದ್ದು, ಬಳಿಕ ಬಂಧನಕ್ಕೆ ಒಳಗಾಗಿದ್ದ ಹತ್ತು ಜನರ ಪೈಕಿ ಶ್ರೀಕೃಷ್ಣ (ಶ್ರೀಕಿ) ಕೂಡ ಒಬ್ಬನಾಗಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ದೂರಿಗೆ ಸಂಬಂಧಿಸಿದಂತೆ ಈಗಾಗಲೇ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಲಾಗಿದೆ.

ಶ್ರೀಕಿ ವಿಚಾರಣೆಯ ಸಂದರ್ಭದಲ್ಲಿ ತಾನು ಅನೇಕ ಕ್ರಿಪ್ಟೋ ಕರೆನ್ಸಿ ವೆಬ್‌ಸೈಟ್‌ಗಳ ಹ್ಯಾಕಿಂಗ್‌ ಬಗ್ಗೆ ಬಾಯಿಬಿಟ್ಟಿದ್ದ. ಈ ಹಿನ್ನೆಲೆಯಲ್ಲಿ ಪ್ರಕರಣ ತನಿಖೆಯನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿತ್ತು. ಅಲ್ಲದೇ ಕ್ರಿಫ್ಟೋ ಕರೆನ್ಸಿಯ ಹ್ಯಾಕಿಂಗ್‌ ಕುರಿತು ತನಿಖೆ ಹಾಗೂ ಬಿಟ್‌ಕಾಯಿನ್‌ ಪಡೆದುಕೊಳ್ಳುವ ಸಲುವಾಗಿ ನ್ಯಾಯಾಲಯದ ಅನುಮತಿಯನ್ನು ಪಡೆದು ಬಿಟ್‌ ಕಾಯಿನ್‌ ವ್ಯಾಲೆಟ್‌ ತೆರೆಯಲಾಗಿತ್ತು. ನಂತರ ತನಿಖೆಯ ವೇಳೆಯಲ್ಲಿ ಸುಮಾರು 186.811 ಬಿಟ್‌ ಕಾಯಿನ್‌ಗಳನ್ನು ವಶಕ್ಕೆ ಪಡೆಯಲಾಗಿತ್ತು. ಆದ್ರೆ ಆರೋಪಿಯ ಖಾತೆಯಲ್ಲಿ ಯಾವುದೇ ಬಿಟ್‌ ಖಾಯಿನ್‌ ಪತ್ತೆಯಾಗಿರಲಿಲ್ಲ. ಆದರೆ ಪೊಲೀಸ್‌ ಖಾತೆಗೆ ಯಾವುದೇ ಬಿಟ್‌ ಕಾಯಿನ್‌ ವರ್ಗಾವಣೆಯನ್ನು ಮಾಡಿಸಿಕೊಂಡಿಲ್ಲ. ಬಿಟ್‌ ಕಾಯಿನ್‌ ವರ್ಗಾವಣೆಯ ಸಂದರ್ಭದಲ್ಲಿ ವಿಡಿಯೋ ರೆಕಾರ್ಡ್‌ ಮಾಡಲಾಗಿದೆ. ಅಲ್ಲದೇ ಈ ಕುರಿತು ಎಲ್ಲಾ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲಾಗಿದೆ ಎಂದು ಹೇಳಲಾಗಿದೆ.

ಬಿಟ್‌ ಕಾಯಿನ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ತನಿಖೆಯನ್ನು ವೃತ್ತಿಪರ ತಂಡವೇ ತನಿಖೆಯನ್ನು ನಡೆಸಿದೆ. ಖ್ಯಾತ ಮತ್ತು ಬಾಹ್ಯ ತಜ್ಞರು ನಿರಂತರ ಸಮಾಲೋಚನೆ ಹಾಗೂ ಉಪಸ್ಥಿತಿಯಲ್ಲಿಯೇ ನಡೆಸಲಾಗಿದೆ. ಆದರೆ 14,682 ಕದ್ದ ಬಿಟ್‌ಫೈನೆಕ್ಸ್ ಬಿಟ್‌ಕಾಯಿನ್‌ಗಳು ವರ್ಗಾವಣೆ ಮಾಡಿರುವುದು ಸಂಪೂರ್ಣವಾಗಿ ಆಧಾರರಹಿತವಾಗಿದೆ ಎಂದು ಸ್ಪಷ್ಟನೆಯನ್ನು ನೀಡಲಾಗಿದೆ. ಶ್ರೀಕೃಷ್ಣನ ಬಂಧನದ ಕುರಿತು ಮಾಧ್ಯಮಗಳಲ್ಲಿ ವ್ಯಾಪಕ ಪ್ರಚಾರ ಪಡೆದಿದ್ದರೂ ಕೂಡ ಸಹ ಯಾವುದೇ ವಿದೇಶಿ ಕಂಪೆನಿಗಳು ಕೂಡ ಹ್ಯಾಕಿಂಗ್‌ ಬಗ್ಗೆ ಬೆಂಗಳೂರು ಪೊಲೀಸರನ್ನು ಇದುವರೆಗೆ ಸಂಪರ್ಕಿಸಿಲ್ಲ ಎಂದು ಹೇಳಲಾಗಿದೆ.

ಬಿಟ್‌ಫೈನೆಕ್ಸ್ ಕಂಪನಿಯ ಪ್ರತಿನಿಧಿಗಳು ಸಹ ಪ್ರಕರಣಕ್ಕೆ ಸಂಬಂಧಿಸಿದಂತೆ ಹ್ಯಾಕ್‌ ಮಾಡಿರುವ ಕುರಿತಾಗಿ ಯಾವುದೇ ಮಾಹಿತಿಯನ್ನು ಕೇಳಿಲ್ಲ. ಆದರೆ ಆರೋಪಿ ತಾನೇ ಹ್ಯಾಕ್‌ ಮಾಡಿರುವ ಕುರಿತು ಮಾಹಿತಿಯನ್ನು ನೀಡಿದ್ದಾನೆ. ಇನ್ನು ಪ್ರಕರಣದ ಕುರಿತು ಹೆಚ್ಚಿನ ತನಿಖೆಗಾಗಿ ಇಂಟರ್‌ ಪೋಲ್‌ಗೆ ಮನವಿಯನ್ನು ಮಾಡಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ಮಾದಕ ವಸ್ತು ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್‌ ಕಸ್ಟಡಿಗೆ ಕೇಳಲಾಗಿತ್ತು. ಅಲ್ಲದೇ ಆರೋಪಿಯನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ಅಲ್ಲದೇ ವೈದ್ಯಕೀಯ ತಪಾಸಣಾ ವರದಿಯು ನೆಗೆಟಿವ್‌ ಎಂದು ಬಂದಿದೆ. ಇನ್ನೊಂದೆಡೆಯಲ್ಲಿ ಆರೋಪಿಯ ಬಂಧನದ ಕುರಿತು ರಿಟ್‌ ಅರ್ಜಿ ಹಾಕಲಾಗಿದ್ದು, ಅರ್ಜಿ ಸಲ್ಲಿಸಿದವರೆ ದಂಡ ವಿಧಿಸಿ ಶ್ರೀಕೃಷ್ಣನನ್ನು ಬಿಡುಗಡೆ ಮಾಡಲಾಗಿದೆ. ಇದೀಗ ಇಂಟರ್‌ ಪೊಲ್‌ ವರದಿ ಬಂದ ನಂತರದಲ್ಲಿ ಪ್ರಕರಣವು ಅಂತ್ಯ ಕಾಣಲಿದೆ ಎಂದು ತಿಳಿಸಲಾಗಿದೆ.

ಇದನ್ನೂ ಓದಿ : Bitcoin : ಬಿಟ್‌ಕಾಯಿನ್‌ ಹೇಗಿರುತ್ತೆ? ಚಲಾವಣೆ – ವ್ಯವಹಾರ ಹೇಗೆ ಮಾಡುತ್ತಾರೆ ? ಈಗೇಕೆ ಹೆಚ್ಚು ಚರ್ಚೆಯಾಗುತ್ತಿದೆ ಈ ಕ್ರಿಪ್ಟೋಕರೆನ್ಸಿ

ಇದನ್ನೂ ಓದಿ : Crypto Currencies : ಕ್ರಿಪ್ಟೋಕರೆನ್ಸಿಗಳ ಬಗ್ಗೆ ಎಚ್ಚರಿಕೆ ನೀಡಿದ RBI ಗವರ್ನರ್ ಶಕ್ತಿಕಾಂತ ದಾಸ್

( Bitcoin Case Clarification Bangalore Police Commissioner Office )

Comments are closed.