ದಿನಭವಿಷ್ಯ ಅಕ್ಟೋಬರ್‌ 2 2023 : ಈ ರಾಶಿಯವರಿಗೆ ಹಣದ ಹೊಳೆ ಹರಿಯಲಿದೆ

ಚಂದ್ರ ಇಂದು ಮೇಷರಾಶಿಗೆ ಸಾಗುತ್ತಾನೆ. ಜೊತೆಗೆ ಹರ್ಷನು ಯೋಗ ಹಾಗೂ ಭರಣಿ ನಕ್ಷತ್ರದ ಸಂಯೋಗ ನಡೆಯಲಿದೆ. ಮೇಷ ರಾಶಿಯಿಂದ ಮೀನ ರಾಶಿಯ ವರೆಗೆ ಹೇಗಿದೆ ಇಂದು ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ (Horoscope Today) ಹೇಗಿದೆ.

ಇಂದು ಅಕ್ಟೋಬರ್‌ 2 2023 ಸೋಮವಾರ. ಚಂದ್ರ ಇಂದು ಮೇಷರಾಶಿಗೆ ಸಾಗುತ್ತಾನೆ. ಜೊತೆಗೆ ಹರ್ಷನು ಯೋಗ ಹಾಗೂ ಭರಣಿ ನಕ್ಷತ್ರದ ಸಂಯೋಗ ನಡೆಯಲಿದೆ. ಮೇಷ ರಾಶಿಯಿಂದ ಮೀನ ರಾಶಿಯ ವರೆಗೆ ಹೇಗಿದೆ ಇಂದು ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ (Horoscope Today) ಹೇಗಿದೆ.

ಮೇಷ ರಾಶಿ
ಸಂಗಾತಿಯ ಆರೋಗ್ಯ ನಿಮ್ಮನ್ನು ಚಿಂತೆಗೀಡು ಮಾಡಲಿದೆ. ಆರ್ಥಿಕ ಸ್ಥಿತಿ ಇಂದು ಬಲಗೊಳ್ಳಲಿದೆ. ತಂದೆಯ ಜೊತೆಗೆ ವಿಶೇಷ ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದೀರಿ. ದೂರ ಪ್ರಯಾಣ ನಿಮಗೆ ಲಾಭವನ್ನು ತರಲಿದೆ. ಬುದ್ದಿವಂತಿಕೆಯಿಂದ ಕೈಗೊಂಡ ನಿರ್ಧಾರಗಳು ನಿಮ್ಮನ್ನು ಯಶಸ್ವಿಯಾಗಿಸುತ್ತದೆ.

ವೃಷಭ ರಾಶಿ
ಕೆಲಸ ಮಾಡುವ ಜನರ ಜೊತೆಗೆ ಇಂದು ತಾಳ್ಮೆಯಿಂದ ಇರಿ. ಯಾವುದೇ ಕೆಲಸವನ್ನು ಇಂದು ತರಾತುರಿಯಲ್ಲಿ ಮಾಡಬೇಡಿ. ಮೇಲಾಧಿಕಾರಿಗಳ ಕೋಪವನ್ನು ಇಂದು ನೀವು ಎದುರಿಸಬೇಕಾಗುತ್ತದೆ. ಕುಟುಂಬ ಸದಸ್ಯರಿಗಾಗಿ ನೀವು ಸಮಯವನ್ನು ಬಿಡುವು ಮಾಡಿಕೊಳ್ಳಿ. ಸೋಮಾರಿತನವನ್ನು ದೂರ ಮಾಡಿ.

ಮಿಥುನ ರಾಶಿ
ಸಂಜೆಯ ವೇಳೆ ಇಂದು ನಿಮ್ಮ ಹೆಚ್ಚು ಮಂಗಳಕರ. ಧಾರ್ಮಿಕ ಕಾರ್ಯಕ್ರಮದಲ್ಲಿ ನೀವು ಪಾಲ್ಗೊಳ್ಳುವಿರಿ. ಮಕ್ಕಳ ವಿಚಾರದಲ್ಲಿ ಇಂದು ಭಿನ್ನಾಭಿಪ್ರಾಯ ತೋರಿಬರಲಿದೆ. ಅತಿಥಿಗಳ ಆಗಮನದಿಂದ ಮನಸಿಗೆ ನೆಮ್ಮದಿ ದೊರೆಯಲಿದೆ. ಆರೋಗ್ಯದ ಬಗ್ಗೆ ಎಚ್ಚರಿಕೆಯನ್ನು ವಹಿಸಿ.

ಕರ್ಕಾಟಕ ರಾಶಿ
ಸಂಗಾತಿಯಿಂದ ಇಂದು ನಿಮಗೆ ಸಂಪೂರ್ಣ ಬೆಂಬಲ ದೊರೆಯಲಿದೆ. ಸಾಮಾಜಿಕ ಕಾರ್ಯಗಳಲ್ಲಿ ನೀವು ಹೆಚ್ಚಾಗಿ ಪಾಲ್ಗೊಳ್ಳುವಿರಿ. ಕುಟುಂಬ ಸದಸ್ಯರಿಂದ ನೀವು ಇಂದು ಶುಭ ಸುದ್ದಿಯನ್ನು ಕೇಳುವಿರಿ. ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಅದು ನಿಮಗೆ ಲಾಭವನ್ನು ತಂದುಕೊಡಲಿದೆ.‌

ಇದನ್ನೂ ಓದಿ : ಈದ್ ಮೆರವಣಿಗೆ ವೇಳೆ ಶಿವಮೊಗ್ಗ ಉದ್ವಿಘ್ನ: ಕಲ್ಲುತೂರಾಟ, ಲಾಠಿಚಾರ್ಜ್

ಸಿಂಹ ರಾಶಿ
ಯಾವುದೇ ಹೊಸ ಒಪ್ಪಂದಗಳಲ್ಲಿ ನೀವು ಆತುರ ಪಡಬೇಡಿ. ಭಾವನಾತ್ಮಕವಾಗಿ ತೆಗೆದುಕೊಂಡ ನಿರ್ಧಾರಗಳು ನಿಮಗೆ ಭವಿಷ್ಯದಲ್ಲಿ ನಿಮಗೆ ಸಮಸ್ಯೆಯನ್ನು ಉಂಟು ಮಾಡಬಹುದು. ಮನಸ್ಸಿನಲ್ಲಿ ಯಾವುದೇ ಗೊಂದಲಗಳನ್ನು ಇಟ್ಟುಕೊಳ್ಳಬೇಡಿ. ಹೊಂದಾಣಿಕೆಯಿಂದ ಕಾರ್ಯಾನೂಕುಲ.

ಕನ್ಯಾ ರಾಶಿ
ಕುಟುಂಬ ಸದಸ್ಯರ ಜೊತೆಗೆ ಸಂಜೆ ಮೋಜು ಮಾಡುವಿರಿ. ಮಗುವಿನ ಬಗ್ಗೆ ಇಂದು ಮಹತ್ವದ ನಿರ್ಧಾರವನ್ನು ಕೈಗೊಳ್ಳುವಿರಿ. ಹೊಟ್ಟೆಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆ ನಿಮ್ಮನ್ನು ಇಂದು ಕಾಡಲಿದೆ. ಆರ್ಥಿಕ ನಿರ್ಬಂಧಗಳನ್ನು ನೀವು ಇಂದು ಎದುರಿಸಬೇಕಾಗುತ್ತದೆ. ಕುಟುಂಬದ ಹಿರಿಯ ಸದಸ್ಯರ ಬೆಂಬಲ ದೊರೆಯಲಿದೆ.

ತುಲಾ ರಾಶಿ
ವ್ಯವಹಾರದಲ್ಲಿ ನೀವು ನಿರೀಕ್ಷೆ ಮಾಡದಷ್ಟು ಲಾಭವನ್ನು ಕಾಣುವಿರಿ. ಕುಟುಂಬ ಸದಸ್ಯರ ಜೊತೆಗೆ ಮನರಂಜನೆಯನ್ನು ಅನುಭವಿಸುವಿರಿ. ಬಾಕಿ ಉಳಿದ ಕೆಲಸ ಕಾರ್ಯಗಳು ಇಂದು ಪೂರ್ಣಗೊಳ್ಳಲಿದೆ. ಹಿರಿಯ ಸಲಹೆಯ ಮೇರೆಗೆ ಇಂದು ಮಹತ್ವದ ಕಾರ್ಯದಲ್ಲಿ ಯಶಸ್ವಿ ಆಗುತ್ತೀರಿ. ಹೊಂದಾಣಿಕೆಯಿಂದ ಸಂಗಾತಿಯೊಂದಿಗೆ ಸಂತಸದ ಕ್ಷಣವನ್ನು ಕಳೆಯುವಿರಿ.

ಇದನ್ನೂ ಓದಿ : ಟ್ಯೂಶನ್ ಮಾಫಿಯಾಗೆ ಬೀಳುತ್ತಾ ಕಡಿವಾಣ: ಸರ್ಕಾರದಿಂದ ಹೊರಬಿತ್ತು ಖಡಕ್ ಆದೇಶ

ಮಕ್ಕಳು ನಿಮ್ಮ ಮೇಲೆ ಕೋಪಗೊಳ್ಳುವ ಸಾಧ್ಯತೆಯಿದೆ. ಕೆಲಸದ ಒತ್ತಡ ನಿಮ್ಮನ್ನು ಆತಂಕಕ್ಕೆ ದೂಡಲಿದೆ. ಅಕ್ಕ ಪಕ್ಕದ ಮನೆಯವರ ಜೊತೆಗೆ ವಿವಾದ ಉಂಟಾಗಲಿದೆ. ಆದರೆ ಇದನ್ನು ತಪ್ಪಿಸಲು ಪ್ರಯತ್ನಿಸಿ. ಕೆಲಸ ಕಾರ್ಯಗಳಲ್ಲಿ ನಿಮ್ಮ ಖ್ಯಾತಿ ವೃದ್ದಿಸಲಿದೆ. ಸಾರ್ವಜನಿಕವಾಗಿ ನಿಮಗೆ ಬೆಂಬಲ ಹೆಚ್ಚಲಿದೆ.

ಧನಸ್ಸು ರಾಶಿ
ಬಹಳ ಸಮಯದ ನಂತರ ನಿಮ್ಮ ಸ್ನೇಹಿತರನ್ನು ಭೇಟಿಯಾಗುವಿರಿ. ಕುಟುಂಬದ ಯಾವುದೇ ಸದಸ್ಯರ ಜೊತೆಗೆ ಭಿನ್ನಾಭಿಪ್ರಾಯ ಹೊಂದುವ ಸಾಧ್ಯತೆಯಿದೆ. ಮನೆಯ ಹಿರಿಯ ಸದಸ್ಯರ ಸಲಹೆಯನ್ನು ಪಾಲಿಸುವುದು ಒಳಿತು. ಹಳೆಯ ಸ್ನೇಹಿತರ ಭೇಟಿಯಿಂದ ಮನಸಿಗೆ ನೆಮ್ಮದಿ ದೊರೆಯಲಿದೆ.

ಮಕರ ರಾಶಿ
ಹೊಸ ಆದಾಯದ ಮೂಲಗಳು ನಿಮಗೆ ಇಂದು ಗೋಚರಕ್ಕೆ ಬರಲಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ವಿಶೇಷವಾದ ಸಾಧನೆಯನ್ನು ಮಾಡಲಿದ್ದೀರಿ. ಸೋಮಾರಿತನವನ್ನು ನೀವು ದೂರ ಮಾಡಿಕೊಳ್ಳಬೇಕು. ಇಲ್ಲವಾದ್ರೆ ಇಂದು ದೊಡ್ಡ ಸಮಸ್ಯೆಯಲ್ಲಿ ನೀವು ಸಿಲುಕುವ ಸಾಧ್ಯತೆಯಿದೆ. ಮಕ್ಕಳ ಮೇಲೆ ನೀವು ಕೋಪಗೊಳ್ಳಬಹುದು. ಸಾಧ್ಯವಾದಷ್ಟು ಸಮಯವನ್ನು ನೀಡಿ.

ಇದನ್ನೂ ಓದಿ : ಮತ್ತೆ ಮತ್ತೆ ಮೇಘನಾ ಮುಂದೇ ಎರಡನೇ ಮದುವೆ ಪ್ರಶ್ನೆ: ಮುಚ್ಚುಮರೆ ಇಲ್ಲದೇ ಕುಟ್ಟಿಮಾ ಕೊಟ್ರು ನೇರ ಉತ್ತರ

ಕುಂಭ ರಾಶಿ
ಪಾಲುದಾರಿಕೆಯ ವ್ಯವಹಾರವು ಇಂದು ಲಾಭವನ್ನು ತಂದುಕೊಡಲಿದೆ. ಪಾಲುದಾರರ ಸಲಹೆಯನ್ನು ಪಡೆದರೆ ನಿಮಗೆ ಹೆಚ್ಚು ಲಾಭವನ್ನು ತಂದುಕೊಡಲಿದೆ. ಅವಿವಾಹಿತರಿಗೆ ಉತ್ತಮ ಮದುವೆ ಪ್ರಸ್ತಾಪಗಳು ಕೂಡಿ ಬರಲಿದೆ. ಕೆಲಸದ ಸ್ಥಳದಲ್ಲಿ ಪರಿಸ್ಥಿತಿ ಮೊದಲಿಗಿಂದ ಉತ್ತಮವಾಗಿ ಇರಲಿದೆ.

ಮೀನ ರಾಶಿ
ತಂದೆ ತಾಯಿಯ ಸೇವೆಯಲ್ಲಿಯೇ ದಿನ ಕಳೆಯುವಿರಿ. ವಿದ್ಯಾರ್ಥಿಗಳಿಗೆ ಇಂದು ನಿರೀಕ್ಷಿತ ಫಲಿತಾಂಶ ದೊರೆತಲಿದೆ. ವ್ಯವಹಾರ ಕ್ಷೇತ್ರದಲ್ಲಿ ಹೆಚ್ಚು ಲಾಭವನ್ನು ಪಡೆಯುವಿರಿ. ವಿದೇಶ ವ್ಯವಹಾರ ನಿಮ್ಮ ಕೈ ಹಿಡಿಯಲಿದೆ. ಹೊಸ ಹೂಡಿಕೆ ಹೆಚ್ಚು ಲಾಭವನ್ನು ತಂದುಕೊಡಲಿದೆ. ಪಾಲುದಾರರ ಜೊತೆಗೆ ಹೊಂದಾಣಿಕೆ ಅತೀ ಮುಖ್ಯ.

Horoscope Today October 2 2023 Zordic Sign

Comments are closed.