ಈದ್ ಮೆರವಣಿಗೆ ವೇಳೆ ಶಿವಮೊಗ್ಗ ಉದ್ವಿಘ್ನ: ಕಲ್ಲುತೂರಾಟ, ಲಾಠಿಚಾರ್ಜ್

ಈದ್‌ ಮಿಲಾದ್‌ ಮೆರವಣಿಗೆಯ (Eid Milad ) ಏಳೆಯಲ್ಲಿ ಕಲ್ಲು ತೂರಾಟ ನಡೆದಿದ್ದು, ಘಟನೆಯಿಂದ ಶಿವಮೊಗ್ಗ ನಗರದ ರಾಗಿಗುಡ್ಡ  ಉದ್ವಿಗ್ನವಾಗಿದೆ. ಸದ್ಯ ಪೊಲೀಸರು ಶಿವಮೊಗ್ಗ ನಗರದಲ್ಲಿ ನಿಷೇಧಾಜ್ಞೆಯನ್ನು (Shivamogga Section 144) ಜಾರಿಗೊಳಿಸಿಲಾಗಿದೆ.

ಶಿವಮೊಗ್ಗ (Shivamogga Live) : ಈದ್‌ ಮಿಲಾದ್‌ ಮೆರವಣಿಗೆಯ (Eid Milad ) ಏಳೆಯಲ್ಲಿ ಕಲ್ಲು ತೂರಾಟ ನಡೆದಿದ್ದು, ಘಟನೆಯಿಂದ ಶಿವಮೊಗ್ಗ ನಗರದ ರಾಗಿಗುಡ್ಡ  ಉದ್ವಿಗ್ನವಾಗಿದೆ. ಸದ್ಯ ಪೊಲೀಸರು ಶಿವಮೊಗ್ಗ ನಗರದಲ್ಲಿ ನಿಷೇಧಾಜ್ಞೆಯನ್ನು (Shivamogga Section 144) ಜಾರಿಗೊಳಿಸಿದ್ದರೆ. ಹಲವು ಸಮಯಗಳಿಂದಲೂ ಶಾಂತವಾಗಿದ್ದ ಶಿವಮೊಗ್ಗ ಮತ್ತೆ ಉದ್ವಿಗ್ನವಾಗಿದೆ.

ಶಿವಮೊಗ್ಗ ನಗರದ ರಾಗಿಗುಡ್ಡ(Ragi Gudda)ಬಳಿ ರವಿವಾರ ಬೆಳಗ್ಗೆ ಈದ್‌ ಮಿಲಾದ್‌ ಮೆರವಣಿಗೆಯ ವೇಳೆಯಲ್ಲಿ ಟಿಪ್ಪು ಕಟೌಟ್‌ (Tippu Sultha ) ವಿಚಾರಕ್ಕೆ ಗೊಂದಲದ ಸ್ಥಿತಿ ನಿರ್ಮಾಣವಾಗಿತ್ತು. ನಂತರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಿಥುನ್‌ ಕುಮಾರ್‌ (Shivamogga SP Mithun Kumar)  ಅವರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದರು.

ಇದನ್ನೂ ಓದಿ : ಭೂಗಳ್ಳರಿಗೆ ಬ್ರೇಕ್ ಹಾಕೋಕೆ ಸಜ್ಜಾದ ಸಿದ್ದರಾಮಯ್ಯ ಸರ್ಕಾರ : ಒತ್ತುವರಿ ಮಾಹಿತಿಗೆ ಸಂಗ್ರಹಕ್ಕೆ ಹೊಸ ಆ್ಯಪ್

ಆದರೆ ಮೆರವಣಿಗೆಯ ವೇಳೆಯಲ್ಲಿ ಕಿಡಿಗೇಡಿಗಳು ಪೊಲೀಸರು, ಮಾಧ್ಯಮದವರ ಮೇಲೆ ಹಲ್ಲು ತೂರಾಟ ನಡೆಸಿದ್ದಾರೆ. ಕಲ್ಲು ತೂರಾಟದಿಂದಾಗಿ ಮನೆಗಳು ಹಾಗೂ ವಾಹನಗಳ ಗಾಜುಗಳು ಜಖಂಗೊಂಡಿದ್ದು, ಇಬ್ಬರು ಪೊಲೀಸ್‌ ಸಿಬ್ಬಂದಿಗಳಿಗೆ ಗಂಭೀರವಾದ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.Shivamogga Live Updates Eid Milad Procession Contraversy 144 sectiion in Ragi Gudda

ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಸ್ವತಃ ಫೀಲ್ಡಿಗೆ ಇಳಿದಿದ್ದ ಎಸ್‌ಪಿ ಮಿಥುನ್‌ ಕುಮಾರ್‌ ಅವರ ಮೇಲೆಯೂ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಈ ದೃಶ್ಯ ಸದ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ. ಸ್ಥಳದಲ್ಲಿ ರಾಪಿಡ್‌ ಆಕ್ಷನ್‌ ಪೋರ್ಸ್‌ ಸ್ಥಳದಕ್ಕೆ ಮೊಕ್ಕಾಂ ಹೂಡಿದೆ.

ಇದನ್ನೂ ಓದಿ : 16 ದಿನಕ್ಕೆ 1700 ಡೆಂಗ್ಯೂ ಪ್ರಕರಣ : ಬೆಂಗಳೂರಿನಲ್ಲಿ ಡೆಂಗ್ಯೂ ಜ್ವರದ ಆರ್ಭಟ

ಭದ್ರತೆಗಾಗಿ ಎರಡು ಆರ್‌ಎಎಫ್‌ ತುಕಡಿ, 12 ಡಿಎಆರ್‌, 2 ಕೆಎಸ್‌ಆರ್‌ಪಿ ತುಕಡಿ ಹಾಗೂ 2,500 ಕ್ಕೂ ಅಧಿಕ ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಸದ್ಯ ಘಟನೆಗೆ ಸಂಬಂಧಿಸಿದಂತೆ ಶಿವಮೊಗ್ಗ ಪೊಲೀಸರು ಒಟ್ಟು 30  ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಇನ್ನಷ್ಟು ಮಂದಿಯನ್ನು ಪೊಲೀಸರು ಬಂಧಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ರಾಗಿಗುಡ್ಡದಲ್ಲಿ ನಿಷೇಧಾಜ್ಞೆ ಜಾರಿ
ಈದ್‌ ಮೆರವಣಿಗೆಯ ವೇಳೆಯಲ್ಲಿ ಗಲಭೆ ನಡೆದಿರುವ ರಾಗಿಗುಡ್ಡದಲ್ಲಿ ಸದ್ಯ ಸೆಕ್ಷನ್‌ 144  ಜಾರಿಗೊಳಿಸಿದ್ದಾರೆ. ಕಲ್ಲು ತೂರಾಟ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಈಗಾಗಲೇ ಹಲವರನ್ನು ಬಂಧಿಸಿದ್ದಾರೆ. ಮನೆಗಳು, ಪೊಲೀಸರ ವಾಹನಗಳ ಮೇಲೆಯೂ ಕಲ್ಲುತೂರಾಟ ನಡೆದಿದ್ದು, ಪರಿಸ್ಥಿತಿ ನಿಯಂತ್ರಣಕ್ಕಾಗಿ ಪೊಲೀಸರು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದಾರೆ.Shivamogga Live Updates Eid Milad Procession Contraversy 144 sectiion in Ragi Gudda

ಇದನ್ನೂ ಓದಿ : ಈ ಮಹಿಳೆಯರಿಗೆ ಸಿಗೋದಿಲ್ಲ ಗೃಹಲಕ್ಷ್ಮೀ ಯೋಜನೆಯ 2ನೇ ಕಂತಿನ 2000 ರೂ.

ಶಿವಮೊಗ್ಗದಲ್ಲಿ ಪೊಲೀಸರ ಸರ್ಪಗಾವಲು
ರಾಗಿಗುಡ್ಡದಲ್ಲಿ ನಡೆದಿರುವ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಶಿವಮೊಗ್ಗ ನಗರದಲ್ಲಿ ಬಿಗಿ ಪೊಲೀಸ್‌ ಭದ್ರತೆಯನ್ನು ಕೈಗೊಂಡಿದ್ದಾರೆ. ಈಗಾಗಲೇ ಪೊಲೀಸರು ಘಟನೆ ನಡೆದಿರುವ ರಾಗಿಗುಡ್ಡ ಬಡಾವಣೆಯಲ್ಲಿ ಪೊಲೀಸರು ಪಥಸಂಚನ ನಡೆಸಿದ್ದಾರೆ. ಸಾರ್ವಜನಿಕರು ಯಾವುದೇ ಕಾರಣಕ್ಕೂ ಗುಂಪು ಸೇರದಂತೆ ಪೊಲೀಸರು ಎಚ್ಚರಿಕೆಯನ್ನು ನೀಡುತ್ತಿದ್ದಾರೆ.

ಮನೆಯಲ್ಲಿ ಅವಿತು ಕುಳಿತು ಕಲ್ಲು ತೂರುತ್ತಿದ್ದವರು ಅರೆಸ್ಟ್‌
ರಾಗಿಗುಡ್ಡದಲ್ಲಿ ಅವಿತು ಕುಳಿತು ಪೊಲೀಸರು ಸೇರಿದಂತೆ ಹಲವರ ಮೇಲೆ ಕಲ್ಲು ತೂರಾಟ ನಡೆಸುತ್ತಿದ್ದ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಿಡಿಗೇಡಿಗಳು ಮನೆಯೊಳಗೆ ಅವಿತು ಕುಳಿತು ಈ ಕೃತ್ಯವನ್ನು ಎಸಗಿದ್ದಾರೆ ಎಂದು ತಿಳಿದು ಬಂದಿದೆ.

Shivamogga Live Updates Eid Milad Procession Contraversy 144 sectiion in Ragi Gudda

Comments are closed.