ದಿನಭವಿಷ್ಯ 20 ಡಿಸೆಂಬರ್‌ 2023: ಉತ್ತರಾಭಾದ್ರ ನಕ್ಷತ್ರ ಪ್ರಭಾವ ಈ 2 ರಾಶಿಯವರಿಗೆ ಅದೃಷ್ಟ

Horoscope today : ದಿನಭವಿಷ್ಯ 20 ಡಿಸೆಂಬರ್‌ 2023 ಬುಧವಾರ. ಇಂದು ದ್ವಾದಶ ರಾಶಿಗಳ ಮೇಲೆ ಉತ್ತರಾಭಾದ್ರ ನಕ್ಷತ್ರದ ಪ್ರಭಾವ ಇರುತ್ತದೆ. ಕರ್ಕಾಟಕ ಹಾಗೂ ಮಿಥುನರಾಶಿಗಳಿಗೆ ಆರ್ಥಿಕವಾಗಿ ಅನುಕೂಲ ದೊರೆಯಲಿದೆ.

Horoscope today : ದಿನಭವಿಷ್ಯ 20 ಡಿಸೆಂಬರ್‌ 2023 ಬುಧವಾರ. ಇಂದು ದ್ವಾದಶ ರಾಶಿಗಳ ಮೇಲೆ ಉತ್ತರಾಭಾದ್ರ ನಕ್ಷತ್ರದ ಪ್ರಭಾವ ಇರುತ್ತದೆ. ಕರ್ಕಾಟಕ ಹಾಗೂ ಮಿಥುನರಾಶಿಗಳಿಗೆ ಆರ್ಥಿಕವಾಗಿ ಅನುಕೂಲ ದೊರೆಯಲಿದೆ. ಕೆಲವು ರಾಶಿಗಳು ಆರ್ಥಿಕವಾಗಿ ನಷ್ಟವನ್ನು ಅನುಭವಿಸುವ ಸಾಧ್ಯತೆಯಿದೆ. ಮೇಷರಾಶಿಯಿಂದ ಮೀನರಾಶಿಯ ವರೆಗೆ ಒಟ್ಟು 12 ದ್ವಾದಶರಾಶಿಗಳ ಇಂದಿನ ದಿನಭವಿಷ್ಯ ಹೇಗಿದೆ.

ಮೇಷರಾಶಿ ದಿನಭವಿಷ್ಯ
ವ್ಯವಹಾರ ಕ್ಷೇತ್ರದಲ್ಲಿ ಇಂದು ಅಧಿಕ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ಸಂಗಾತಿ ಇಂದು ಸಂತೋಷವಾಗಿ ಇರುತ್ತಾರೆ. ಕೆಲಸದ ಸ್ಥಳವನ್ನು ಬದಲಾವಣೆ ಮಾಡಲು ಇದು ಸಕಾಲ. ಮಕ್ಕಳ ಜೊತೆಗೆ ಪ್ರಯಾಣದ ವೇಳೆಯಲ್ಲಿ ಎಚ್ಚರಿಕೆಯಿಂದ ಇರಿ.

ವೃಷಭರಾಶಿ ದಿನಭವಿಷ್ಯ
ಯಾರಿಂದಲೂ ನೀವು ಸಾಲವನ್ನು ಪಡೆಯ ಬೇಡಿ. ಅವಿವಾಹಿತರಿಗೆ ಯೋಗ್ಯ ಸಂಬಂಧಗಳು ಕೂಡಿಬರಲಿದೆ. ಯಾವುದೇ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಬಯಸಿದರೆ ಇಂದೇ ಕೆಲಸವನ್ನು ಪೂರ್ಣಗೊಳಿಸಿ. ಖರ್ಚುಗಳ ಮೇಲೆ ಹಿಡಿತ ಇರಲಿ.

ಮಿಥುನರಾಶಿ ದಿನಭವಿಷ್ಯ
ಸಹೋದರರಿಂದ ಸಹಾಯ ದೊರೆಯಲಿದೆ. ಯಾವುದೇ ಹೂಡಿಕೆಯಿಂದಲೂ ನಿಮಗೆ ಅಧಿಕ ಲಾಭ ದೊರೆಯಲಿದೆ. ವ್ಯವಹಾರ ಕ್ಷೇತ್ರದಲ್ಲಿ ತೊಡಗಿಸಿ

ಕೊಂಡವರು ಇಂದು ಅಧಿಕ ಲಾಭವನ್ನು ಪಡೆಯುತ್ತಾರೆ. ಹೊಂದಾಣಿಕೆಯಿಂದ ಕಾರ್ಯಾನಕೂಲ.

ಕರ್ಕಾಟಕರಾಶಿ ದಿನಭವಿಷ್ಯ
ಸಾಮಾಜಿಕ ಕಾರ್ಯಗಳಲ್ಲಿ ವಿಶೇಷ ಯಶಸ್ಸು ದೊರೆಯಲಿದೆ. ಕೆಲವೊಂದು ಚಿಂತೆಯಿಂದ ನೀವು ದೂರವಾಗುವಿರಿ. ವೃತ್ತಿ ಜೀವನದಲ್ಲಿ ಇಂದು ನಿರೀಕ್ಷಿತ ಯಶಸ್ಸು ಕಾಣುವಿರಿ. ಆರ್ಥಿಕ ಸ್ಥಿತಿಯು ಉತ್ತಮವಾಗಲಿದೆ.

ಸಿಂಹರಾಶಿ ದಿನಭವಿಷ್ಯ
ಉದ್ಯೋಗದ ಸ್ಥಳದಲ್ಲಿ ಕೆಲವೊಂದು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಪಾಲುದಾರರ ಸಹಕಾರದಿಂದ ಸಮಸ್ಯೆಗಳು ಪರಿಹಾರವಾಗಲಿದೆ. ಸಂಗಾತಿಯಿಂದ ಸಂಪೂರ್ಣ ಬೆಂಬಲ ದೊರೆಯಲಿದೆ. ಶುಭ ಕಾರ್ಯಗಳು ನಡೆಯುವ ಸಾಧ್ಯತೆಯಿದೆ.

ಇದನ್ನೂ ಓದಿ : ಭಾರತದಲ್ಲಿ ಕೊರೊನಾ ಭೀತಿ, ಜಾರಿಯಾಗುತ್ತಾ ಲಾಕ್‌ಡೌನ್‌ ? ಸರಕಾರ ಮಾರ್ಗಸೂಚಿಯಲ್ಲೇನಿದೆ ?

ಕನ್ಯಾರಾಶಿ ದಿನಭವಿಷ್ಯ
ಆರೋಗ್ಯದ ವಿಚಾರದಲ್ಲಿ ಯಾವುದೇ ಕಾರಣಕ್ಕೂ ನೀವು ನಿರ್ಲಕ್ಷ್ಯವನ್ನು ಮಾಡಬೇಡಿ. ಆಹಾರ ಸೇವನೆಯ ವೇಳೆಯಲ್ಲಿ ನೀವು ಎಚ್ಚರವಾಗಿ ಇರುವುದು ಒಳಿತು. ಉದ್ಯೋಗಳಿಗೆ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ.

Horoscope today zodiac Sign Kannada Astrology 
Image Credit to Original Source

ತುಲಾರಾಶಿ ದಿನಭವಿಷ್ಯ
ನಿಗದಿತ ಸಮಯದಲ್ಲಿಯೇ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ಸಂಬಂಧಿಕರಿಂದ ಸಾಲ ಮಾಡುವುದರಿಂದ ನೀವು ಸಮಸ್ಯೆಗೆ ಸಿಲುಕುವ ಸಾಧ್ಯತೆಯಿದೆ. ಧಾರ್ಮಿಕ ಕ್ಷೇತ್ರಗಳಿಗೆ ನೀವು ಪ್ರವಾಸಕ್ಕೆ ತೆರಳುವ ಸಾಧ್ಯತೆಯಿದೆ. ಸಹೋದ್ಯೋಗಿಗಳಿಂದ ನಿಮಗೆ ಇಂದು ಬೆಂಬಲ ದೊರೆಯಲಿದೆ.

ವೃಶ್ಚಿಕರಾಶಿ ದಿನಭವಿಷ್ಯ
ಕೆಲಸ ಕಾರ್ಯಗಳಲ್ಲಿ ಸ್ವಲ್ಪ ಮಟ್ಟಿನ ಸಮಸ್ಯೆ ಎದುರಾಗಲಿದೆ. ವ್ಯಾಪಾರಿಗಳು ಇಂದು ಸಕಾರಾತ್ಮಕ ಫಲಿತಾಂಶವನ್ನು ಪಡೆಯಲಿದ್ದಾರೆ. ವಿದ್ಯಾರ್ಥಿಗಳಿಗೆ ಉತ್ತಮ ಬೆಂಬಲ ದೊರೆಯಲಿದೆ. ಹೊಂದಾಣಿಕೆಯಿಂದ ಕಾರ್ಯಾನುಕೂಲ. ದೂರದ ಬಂಧುಗಳ ಆಗಮನ.

ಇದನ್ನೂ ಓದಿ : ಚಿಕ್ಕಮಗಳೂರಿನ ಬಾಬಾಬುಡ್‌ ಗಿರಿಯಲ್ಲಿ ದತ್ತ ಜಯಂತಿ : ಅರ್ಚರಿಗೆ ಅಂಗರಕ್ಷಕರ ನೇಮಕ

ಧನಸ್ಸುರಾಶಿ ದಿನಭವಿಷ್ಯ
ಪಡೆದ ಸಾಲವನ್ನು ಇಂದು ಮರುಪಾವತಿ ಮಾಡುವಲ್ಲಿ ಯಶಸ್ಸಿ ಆಗುತ್ತೀರಿ. ಸಾಮಾಜಿಕ ಕಾರ್ಯಗಳಲ್ಲಿ ಯಶಸ್ಸು ದೊರೆಯಲಿದೆ. ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವುದರಿಂದ ಮನಸ್ಸಿಗೆ ನೆಮ್ಮದಿ ದೊರೆಯಲಿದೆ. ಸಂಗಾತಿಯೊಂದಿಗೆ ದೂರ ಪ್ರಯಾಣ ಸಾಧ್ಯತೆಯಿದೆ.

ಮಕರರಾಶಿ ದಿನಭವಿಷ್ಯ
ವ್ಯಾಪಾರಿಗಳಿಗೆ ಇಂದು ಲಾಭದಾಯಕವಾದ ದಿನ. ಆರ್ಥಿಕ ಪರಿಸ್ಥಿತಿಯನ್ನು ಬಲಗೊಳಿಸಲು ಮಾಡುವ ಪ್ರಯತ್ನದಲ್ಲಿ ಯಶಸ್ವಿ ಆಗುತ್ತೀರಿ. ನಿಮ್ಮ ಸುತ್ತಮುತ್ತಲಿನ ವಾತಾವರಣವು ನಿಮಗೆ ಸಂತೋಷವನ್ನು ತಂದು ಕೊಡಲಿದೆ. ಸಂಬಂಧಿಕರ ಭೇಟಿಯಿಂದ ಲಾಭ.

ಇದನ್ನೂ ಓದಿ : ಕರ್ನಾಟಕದಲ್ಲಿ ಮತ್ತೆ ಕೋವಿಡ್‌ ಆತಂಕ : 60 ವರ್ಷ ಮೇಲ್ಪಟ್ಟವರಿಗೆ ಮಾಸ್ಕ್ ಕಡ್ಡಾಯ

ಕುಂಭರಾಶಿ ದಿನಭವಿಷ್ಯ
ಯಾವುದೇ ಕೆಲಸ ಕಾರ್ಯಗಳನ್ನು ಮಾಡುವಲ್ಲಿ ಆತುರ ಪಡಬೇಡಿ. ವಿವಾದಗಳನ್ನು ಮಾತುಕತೆಯ ಮೂಲಕ ಪರಿಹರಿಸಿ. ಸಂಗಾತಿಯೊಂದಿಗೆ ಯಾವುದೇ ಕಾರಣಕ್ಕೆ ಜಗಳಕ್ಕೆ ಇಳಿಯಬೇಡಿ. ಮಕ್ಕಳನ್ನು ಸಂಜೆಯ ವೇಳೆ ಸುತ್ತಾಡಲು ಕರೆದುಕೊಂಡು ಹೋಗುವ ಸಾಧ್ಯತೆಯಿದೆ.

ಮೀನರಾಶಿ ದಿನಭವಿಷ್ಯ
ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಬಾಕಿ ಇರುವ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿದೆ. ಉದ್ಯೋಗಳಿಗೆ ಇಂದು ಮೇಲಾಧಿಕಾರಿಗಳ ಸಹಾಯ ದೊರೆಯಲಿದೆ. ಕುಟುಂಬ ಸದಸ್ಯರು ನಿಮಗೆ ಇಂದು ಸಹಾಯಕ್ಕೆ ನಿಲ್ಲಲಿದ್ದಾರೆ. ಧಾರ್ಮಿಕ ಕ್ಷೇತ್ರಗಳ ಭೇಟಿಯಿಂದ ಸಂತಸ.

Horoscope today zodiac Sign Kannada Astrology 

Comments are closed.