ಕರ್ನಾಟಕದಲ್ಲಿ ಮತ್ತೆ ಕೋವಿಡ್‌ ಆತಂಕ : 60 ವರ್ಷ ಮೇಲ್ಪಟ್ಟವರಿಗೆ ಮಾಸ್ಕ್ ಕಡ್ಡಾಯ

Covid-19  sub-variant JN.1 : ಆತಂಕ ಶುರುವಾಗಿದೆ. ಅದ್ರಲ್ಲೂ ನೆರೆಯ ಕೇರಳದಲ್ಲಿ ಕೋವಿಡ್‌ ವೈರಸ್‌ ಹೊಸ ತಳಿಯ ಸಂಖ್ಯೆ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಭಾರತ ಸರಕಾರ (India Government) ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದ್ದು, ಕರ್ನಾಟಕ ಸರಕಾರ 60 ವರ್ಷ ಮೇಲ್ಪಟ್ಟವರಿಗೆ ಮಾಸ್ಕ್‌ ಕಡ್ಡಾಯಗೊಳಿಸಲಾಗಿದೆ.

ಭಾರತದಲ್ಲಿ ಕೋವಿಡ್-19 ‌ಹೊಸತಳಿ ಜೆಎನ್‌ 1 (Covid-19  sub-variant JN.1 ) ಆತಂಕ ಶುರುವಾಗಿದೆ. ಅದ್ರಲ್ಲೂ ನೆರೆಯ ಕೇರಳದಲ್ಲಿ ಕೋವಿಡ್‌ ವೈರಸ್‌ ಹೊಸ ತಳಿಯ ಸಂಖ್ಯೆ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಭಾರತ ಸರಕಾರ (India Government) ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದ್ದು, ಕರ್ನಾಟಕ ಸರಕಾರ 60 ವರ್ಷ ಮೇಲ್ಪಟ್ಟವರಿಗೆ ಮಾಸ್ಕ್‌ ಕಡ್ಡಾಯಗೊಳಿಸಲಾಗಿದೆ.

ನೆರೆಯ ಕೇರಳದಲ್ಲಿ ಕೋವಿಡ್‌ ಹೊಸ ತಳಿಯ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ನೇತೃತ್ವದಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕಳೆದ ಕೆಲವು ತಿಂಗಳಿನಿಂದಲೂ ಕರ್ನಾಟಕದಲ್ಲಿ ಕೆಮ್ಮು ಮತ್ತು ಜ್ವರದಂತಹ ರೋಗ ಲಕ್ಷಣಗಳು ಕಂಡು ಬಂದರೆ ಅಂತವರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ.

Covid-19  sub-variant JN.1 Karnataka Government Issued new Guidelines wearing Face Masks Mandatory JN.1 scare in Kerala new
Image Credit to Original Source

ಸದ್ಯಕ್ಕೆ ಯಾರೂ ಕೂಡ ಭಯ ಪಡುವ ಅಗತ್ಯವಿಲ್ಲ. ಡಾ. ರವಿ ಅವರ ನೇತೃತ್ವದ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿಯು ಈಗಾಗಲೇ ಸಭೆ ನಡೆಸಿದ್ದು, ಅಧಿಕಾರಿಗಳು ಹಾಗೂ ತಜ್ಞರು ಕೈಗೊಳ್ಳಬಹುದಾದ ಅಗತ್ಯ ಕ್ರಮಗಳ ಬಗ್ಗೆಯೂ ಸೂಚನೆಯನ್ನು ನೀಡಿದ್ದಾರೆ. ಅಲ್ಲದೇ ಕೇರಳದಲ್ಲಿ ಕೋವಿಡ್‌ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಕೇರಳದಿಂದ ಕರ್ನಾಟಕಕ್ಕೆ ಬರುವ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ.

ಇದನ್ನೂ ಓದಿ : ಮಹಿಳೆಯರಿಗೆ ಉಚಿತವಾಗಿ ಸಿಗಲಿದೆ 30,000 ರೂ. : ಗೃಹಲಕ್ಷ್ಮೀ ಬೆನ್ನಲ್ಲೇ ಧನಶ್ರೀ…

ಅಯ್ಯಪ್ಪ ಮಾಲಾಧಾರಿಗಳಿಗೆ ರಿಲ್ಯಾಕ್ಸ್‌ :

ಸದ್ಯಕ್ಕೆ ಪರಿಸ್ಥಿತಿಯನ್ನು ಮೇಲ್ಪಿಚಾರಣೆ ಮಾಡಲಾಗುತ್ತದೆ. ಎಲ್ಲರ ಚಲನವಲನದ ಮೇಲೆ ನಿಗಾ ಇರಿಸಲಾಗುತ್ತಿದೆ. 60 ವರ್ಷ ಮೇಲ್ಪಟ್ಟವರು ಹಾಗೂ ಹೃದಯ ಹಾಗೂ ಜ್ವರ ಇರುವವರು ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ಕೇರಳ ಗಡಿಯನ್ನು ಹೊಂದಿರುವ ದಕ್ಷಿಣ ಕನ್ನಡ, ಕೊಡಗು, ಚಾಮರಾಜನಗರ ಜಿಲ್ಲೆಗಳ ಮೇಲೆ ಹೆಚ್ಚಿನ ನಿಗಾ ಇರಿಸಲಾಗಿದೆ. ಆದರೆ ಕೇರಳದಿಂದ ಆಗಮಿಸುವ ಅಯ್ಯಪ್ಪ ಯಾತ್ರಾರ್ಥಿಗಳ ಮೇಲೆ ಯಾವುದೇ ನಿರ್ಬಂಧವನ್ನು ಹೇರಿಲ್ಲ ಎಂದು ಗುಂಡೂರಾವ್‌ ತಿಳಿಸಿದ್ದಾರೆ.

ಕೋವಿಡ್-19 ಹೊಸ ತಳಿ JN.1: ರೋಗಲಕ್ಷಣಗಳು

ವಿಶ್ವವನ್ನೇ ಕಳೆದ ಎರಡು ವರ್ಷಗಳಿಂದ ಆತಂಕಕ್ಕೆ ನೂಕಿದ್ದ ಕೋವಿಡ್-19 ಮಹಾಮಾರಿ ಇದೀಗ ಮತ್ತೆ ಆರ್ಭಟಿಸಲು ಆರಂಭಿಸಿದೆ. ಚೀನಾದಲ್ಲಿ ಪತ್ತೆಯಾಗಿದ್ದ ಕೋವಿಡ್‌ 19 ರ JN.1 ರೂಪಾಂತರ ತಳಿ Omicron ಸಬ್‌ವೇರಿಯಂಟ್ BA.2.86 ಅಥವಾ Pirola ಪತ್ತೆಯಾಗಿದೆ. ಹೊಸ ತಳಿಯ ರೂಪಾಂತರವು ಪ್ರಮುಖವಾಗಿ ಜ್ವರ, ಸ್ರವಿಸುವ ಮೂಗು, ಗಂಟಲು ಕೆರೆತ, ಜೀರ್ಣಾಂಗವ್ಯೂಹದ ಸಮಸ್ಯೆಗಳು ಕಾಡುತ್ತದೆ.

ಇದನ್ನೂ ಓದಿ : ಅಯ್ಯಪ್ಪ ಭಕ್ತರಿಗೆ ಗುಡ್‌ನ್ಯೂಸ್‌ : ಶಬರಿಮಲೆಯಲ್ಲಿ ದೇವರ ದರ್ಶನ ಅವಧಿ 1 ಗಂಟೆ ಹೆಚ್ಚಳ, ನೂಕುನುಗ್ಗಲು ನಿಯಂತ್ರಣ

ಹೊಸ ರೂಪಾಂತರ ತಳಿಯು ಪ್ರಮುಖವಾಗಿ ಸೌಮ್ಯ ರೋಗ ಲಕ್ಷಣಗಳಿಗಿಂತ ಹೆಚ್ಚು ಭಿನ್ನವಾಗಿಲ್ಲ. ಒಮಿಕ್ರಾಮ್‌ ತಳಿಯಲ್ಲಿ ಕಂಡು ಬಂದಿರುವ ರೋಗ ಲಕ್ಷಣಗಳೇ ಇದೀಗ ಕಂಡುಬರುತ್ತಿದೆ. ಆದರೆ ಹೊಸ ತಳಿಯನ್ನು ಅಪಾಯಕಾರಿ ಎಂದು ನಂಬಲಾಗುತ್ತಿದೆ. ಈ ವರ್ಷದ ಸೆಪ್ಟೆಂಬರ್‌ ತಿಂಗಳಿನಲ್ಲಿ ಅಮೇರಿಕಾದಲ್ಲಿ ಮೊದಲ ರೂಪಾಂತರ ತಳಿ ಪತ್ತೆಯಾಗಿತ್ತು.

Covid-19  sub-variant JN.1 Karnataka Government Issued new Guidelines wearing Face Masks Mandatory JN.1 scare in Kerala
Image Credit to Original Source

ಕೋವಿಡ್-19 ಸಬ್‌ವೇರಿಯಂಟ್ JN.1 ಹೆಚ್ಚಿನ ಟ್ರಾನ್ಸ್‌ಮಿಸಿಬಿಲಿಟಿ ಮತ್ತು ಸೌಮ್ಯ ರೋಗಲಕ್ಷಣಗಳೊಂದಿಗೆ ಹಿಂದಿನ ಒಮಿಕ್ರಾನ್ ತಳಿಗಳಿಗಿಂತ ಹೆಚ್ಚು ಭಿನ್ನವಾಗಿಲ್ಲ, ಆದರೂ ದುರ್ಬಲ ಜನಸಂಖ್ಯೆಯು ಯಾವಾಗಲೂ ಅಪಾಯದಲ್ಲಿರಬಹುದು ಎಂದು ತಡೆಗಟ್ಟುವ ಕ್ರಮಗಳು ಮುಖ್ಯವಾಗಿದೆ. ಚೀನಾದಲ್ಲಿ, ಡಿಸೆಂಬರ್ 15 ರಂದು ಏಳು ಪ್ರಕರಣಗಳು ವರದಿಯಾಗಿದೆ.

ಇದನ್ನೂ ಓದಿ : ಮಂಡಾಡಿ ಹೋರ್ವರ ಮನೆ ಸಾಂಪ್ರದಾಯಿಕ ಕಂಬಳ ಮಹೋತ್ಸವಕ್ಕೆ ಅದ್ದೂರಿ ತೆರೆ

ಭಾರತದಲ್ಲಿ 1,828 ಸಕ್ರೀಯ ಕೋವಿಡ್‌ ಪ್ರಕರಣ

ಭಾರತದಲ್ಲಿ ಕೋವಿಡ್‌ ವೈರಸ್‌ ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಕೇಂದ್ರ ಆರೋಗ್ಯ ಸಚಿವಾಲಯ ನೀಡಿರುವ ವರದಿಯ ಪ್ರಕಾರ, ಭಾರತದಲ್ಲಿ ಹೊಸದಾಗಿ 260 ಕೋವಿಡ್‌ ಪ್ರಕರಣಗಳು ಪತ್ತೆಯಾಗಿದೆ. ಅದ್ರಲ್ಲೂ ಸಕ್ರಿಯ ಪ್ರಕರಣಗಳ ಸಂಖ್ಯೆ 1,828 ಕ್ಕೆ ಏರಿಕೆ ಕಂಡಿದೆ.

ಭಾರತ ದೇಶದಲ್ಲಿ ಒಟ್ಟು ಇದುವರೆಗೆ 5,33,317 ಮಂದಿ ಕೋವಿಡ್‌ ವೈರಸ್‌ ಸೋಂಕಿನಿಂದ ಮೃತಪಟ್ಟಿದ್ದು, ಭಾರತದಲ್ಲಿ ಒಟ್ಟು ಕೋವಿಡ್‌ ಪ್ರಕರಣಗಳ ಸಂಖ್ಯೆ 4.50 ಕೋಟಿಗೆ (4,50,05,076) ಏರಿಕೆ ಕಂಡಿದೆ. ಇದೀಗ ಮತ್ತೆ ಕೋವಿಡ್‌ ಪ್ರಕರಣ ಏರಿಕೆ ಆಗುತ್ತಿರುವುದು ಸಹಜವಾಗಿ ಆತಂಕಕ್ಕೆ ಕಾರಣವಾಗಿದೆ.

Covid-19  sub-variant JN.1 Karnataka Government Issued new Guidelines wearing Face Masks Mandatory JN.1 scare in Kerala

Comments are closed.