Horoscope Today : ದಿನಭವಿಷ್ಯ 30 ಅಕ್ಟೋಬರ್ 2023 : ಶಿವನ ಕೃಪೆಯಿಂದ ಮೇಷ, ತುಲಾ ಸೇರಿ ಈ ರಾಶಿಯವರಿಗೆ ಅನಿರೀಕ್ಷಿತ ಲಾಭ

Horoscope Today : ದಿನಭವಿಷ್ಯ 30 ಅಕ್ಟೋಬರ್ 2023 ಇಂದು ದ್ವಾದಶ ರಾಶಿಗಳ ಮೇಲೆ ಕೃತ್ತಿಕಾ ನಕ್ಷತ್ರದ ಪ್ರಭಾವ ಇರುತ್ತದೆ. ಚಂದ್ರನು ವೃಷಭ ರಾಶಿಯಲ್ಲಿ ಸಾಗುತ್ತಾನೆ.

Horoscope Today : ದಿನಭವಿಷ್ಯ 30 ಅಕ್ಟೋಬರ್ 2023 ಇಂದು ದ್ವಾದಶ ರಾಶಿಗಳ ಮೇಲೆ ಕೃತ್ತಿಕಾ ನಕ್ಷತ್ರದ ಪ್ರಭಾವ ಇರುತ್ತದೆ. ಚಂದ್ರನು ವೃಷಭ ರಾಶಿಯಲ್ಲಿ ಸಾಗುತ್ತಾನೆ. ಮೇಷ ರಾಶಿಯಿಂದ ಹಿಡಿದು ಮೀನ ರಾಶಿಯವರಿಗೆ ಒಟ್ಟು 12 ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ ಹೇಗಿದೆ.

ಮೇಷ ರಾಶಿ ದಿನಭವಿಷ್ಯ
ಇಂದು ಅನಿರೀಕ್ಷಿತ ಆರ್ಥಿಕ ಲಾಭ ಪಡೆಯುವಿರಿ. ಅನೇಕ ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ. ಸಾಮಾಜಿಕ ಕ್ಷೇತ್ರದಲ್ಲಿ ಪ್ರಶಂಸೆ ದೊರೆಯಲಿದೆ. ಹಿರಿಯ ಸಲಹೆ ನಿಮಗೆ ಲಾಭವನ್ನು ತರಲಿದೆ. ಪತ್ನಿ, ಮಕ್ಕಳ ಕಡೆಯಿಂದ ಶುಭ ಸುದ್ದಿಯನ್ನು ಕೇಳುವಿರಿ.

ವೃಷಭ ರಾಶಿ ದಿನಭವಿಷ್ಯ
ಎಲ್ಲವನ್ನೂ ಚಿಂತನಶೀಲವಾಗಿ ಮಾಡಬೇಕು. ಯಾವುದೇ ಹೊಸ ವಿಷಯಗಳನ್ನು ಆರಂಭಿಸಬೇಡಿ. ಮಾಡಿದ ಕೆಲಸ ಕಾರ್ಯಗಳು ಅರ್ಥಪೂರ್ಣವಾಗಿ ಉಳಿಯುತ್ತದೆ. ಕುಟುಂಬದ ಹಿರಿಯದ ಜೊತೆಗೆ ಹಾಗೂ ಅಧಿಕಾರಿಗಳ ಜೊತೆಗೆ ಭಿನ್ನಾಭಿಪ್ರಾಯ ಉಂಟಾಗಲಿದೆ. ಕೋಪ ಹಾಗೂ ಮಾತುಗಳ ಮೇಲೆ ಹಿಡಿತ ಇರಲಿ. ಆರೋಗ್ಯವು ಸ್ಥಿರವಾಗಿ ಇರಲಿದೆ.

ಮಿಥುನ ರಾಶಿ ದಿನಭವಿಷ್ಯ
ಹವಾಮಾನ ಬದಲಾವಣೆಯ ಬಗ್ಗೆ ಜಾಗರೂಕರಾಗಿ ಇರಬೇಕು. ಆರೋಗ್ಯವು ದುರ್ಬಲವಾಗುತ್ತದೆ. ನಿಮ್ಮ ಮಾತು ಹಾಗೂ ನಡವಳಿಕೆ ಮೃದುವಾಗಿರಬೇಕು. ಉದ್ಯೋಗಿಗಳು ಕೆಲಸದ ಸ್ಥಳದಲ್ಲಿ ಬದಲಾವಣೆಗೆ ಒಳಗಾಗಲಿದ್ದಾರೆ. ಹೊಂದಾಣಿಕೆಯಿಂದ ಕಾರ್ಯಾನುಕೂಲ.

ಇದನ್ನೂ ಓದಿ : ವಿಶ್ವಕಪ್‌ನಲ್ಲಿ ಇತಿಹಾಸ ಸೃಷ್ಟಿಸಿದ ರಚಿನ್‌ ರವೀಂದ್ರ : ಸಚಿನ್‌ ದಾಖಲೆ ಸರಿಗಟ್ಟಿದ ಬೆಂಗಳೂರಿನ ಹುಡುಗ

ಕರ್ಕಾಟಕ ರಾಶಿ ದಿನಭವಿಷ್ಯ
ನಕಾರಾತ್ಮಕ ಪರಿಸ್ಥಿತಿಗಳಿಂದ ಪರಿಹಾರವನ್ನು ಪಡೆಯುತ್ತಾರೆ. ಆರ್ಥಿಕ ಸಮಸ್ಯೆಯಿಂದ ಮಾನಸಿಕ ಆತಂಕ ಹೆಚ್ಚಲಿದೆ. ಆರೋಗ್ಯವು ಹಠಾತ್‌ ಕ್ಷೀಣಿಸಲಿದೆ. ಉದ್ಯೋಗ ಸ್ಥಳದಲ್ಲಿ ಸ್ಪರ್ಧೆಯಿಂದ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ. ವ್ಯಾಪಾರಿಗಳು ಪರಿಸ್ಥಿತಿಯ ಲಾಭವನ್ನು ಪಡೆದುಕೊಳ್ಳುತ್ತಾರೆ.

ಸಿಂಹ ರಾಶಿ ದಿನಭವಿಷ್ಯ
ಕೆಲವು ಸಮಸ್ಯೆಗಳಿಂದ ಪರಿಹಾರ ಕಂಡುಕೊಳ್ಳುತ್ತಾರೆ. ಕೆಲವು ದಿನಗಳಿಂದ ಕಾಡುತ್ತಿದ್ದ ಶಾರೀರಿಕ ಹಾಗೂ ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಇದರಿಂದ ಮಾನಸಿಕ ನೆಮ್ಮದಿ ದೊರೆಯಲಿದೆ. ಸಸಾಮಜಿಕ ಚಟುವಟಿಕೆಗಳಲ್ಲಿ ಹೆಚ್ಚಿನ ಆಸಕ್ರಿ. ಸಾಲದ ವಿಚಾರದಲ್ಲಿ ಹೆಚ್ಚು ಜಾಗರೂಕರಾಗಿ ಇರಿ.

Kannada  horoscope today 30 october 2023 lord shiva special blessings on these zodiac signs 
Image Credit to Original Source

ಕನ್ಯಾ ರಾಶಿ ದಿನಭವಿಷ್ಯ
ಪ್ರಮುಖ ಕೆಲಸ ಕಾರ್ಯಗಳ ಬಗ್ಗೆ ಎಚ್ಚರವಾಗಿರಿ. ಸಣ್ಣಪುಟ್ಟ ಕಾರಣಗಳಿಂದಾಗಿ ಕುಟುಂಬ ಸದಸ್ಯರ ಜೊತೆಗೆ ಭಿನ್ನಾಭಿಪ್ರಾಯ ಉಂಟಾಗಲಿದೆ. ಮನಸಿನಲ್ಲಿ ನಕಾರಾತ್ಮಕ ಅಂಶಗಳು ಕಂಡುಬರಲಿದೆ. ಮಗುವಿನ ಭವಿಷ್ಯದ ಬಗ್ಗೆಯೂ ಆತಂಕವಿದೆ. ಮಧ್ಯಾಹ್ನದ ನಂತರ ಆರ್ಥಿಕ ಲಾಭ ಸಿಗುವ ಸಾಧ್ಯತೆಯಿದೆ.

ಇದನ್ನೂ ಓದಿ : Oppo A79 5G : 50MP ಕ್ಯಾಮೆರಾ, 5G ಮೊಬೈಲ್‌, ಅತ್ಯಂತ ಕಡಿಮೆ ಬೆಲೆಯಲ್ಲಿ ಸಿಗುತ್ತೆ ಒಪ್ಪೋ ಎ 79 5ಜಿ

ತುಲಾ ರಾಶಿ ದಿನಭವಿಷ್ಯ
ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿರಿ. ನಿಮ್ಮ ಪ್ರಮುಖ ನಿರ್ಧಾರಗಳು ಇಂದು ಸರಿಯಾದ ಮಾರ್ಗದಲ್ಲಿ ಮುನ್ನೆಡೆಸುತ್ತವೆ. ವೈವಾಹಿಕ ಜೀವನವು ಸುಖಮಯವಾಗಿ ಇರುತ್ತದೆ. ಆರ್ಥಿಕವಾಗಿ ಶುಭ ಸುದ್ದಿ ದೊರೆಯಲಿದೆ. ಆರೋಗ್ಯದ ವಿಚಾರದಲ್ಲಿ ನೆಮ್ಮದಿ. ಉಳಿತಾಯದ ಕಡೆಗೆ ಹೆಚ್ಚಿನ ಗಮನ ಹರಿಸುವುದು ಒಳಿತು.

ವೃಶ್ಚಿಕ ರಾಶಿ ದಿನಭವಿಷ್ಯ
ನಕಾರಾತ್ಮಕ ಫಲಿತಾಂಶವನ್ನು ಪಡೆಯುತ್ತಾರೆ. ಇಡೀ ದಿನ ಜಾಗೃತರಾಗಿ ಇರಬೇಖು. ಆರೋಗ್ಯ ಕೈಗೊಡುವ ಸಾಧ್ಯತೆಯಿದೆ. ಹಣಕಾಸಿನ ವಿಷಯದಲ್ಲಿ ಆತಂಕ ಮತ್ತು ಗೊಂದಲ ಕಂಡು ಬರಲಿದೆ. ಸಹೋದ್ಯೋಗಿಗಳು ಏಕಪಕ್ಷೀಯವಾಗಿ ಕೆಲಸಗಳನ್ನು ಮಾಡುತ್ತಾರೆ. ಹಠಾತ್‌ ಘಟನೆಗಳು ನಿಮಗೆ ಬೇಸರವನ್ನು ಮೂಡಿಸಲಿದೆ.

ಧನಸ್ಸುರಾಶಿ ದಿನಭವಿಷ್ಯ
ಸಂತೋಷ, ನೆಮ್ಮದಿಯಿಂದ ಜೀವನ ಸಾಗಿಸುವಿರಿ. ಬಾಕಿ ಉಳಿದ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ಕಷ್ಟಪಟ್ಟು ಮಾಡುವ ಕೆಲಸ ಇಂದು ನಿಮಗೆ ಹೆಚ್ಚಿನ ಲಾಭವನ್ನು ತಂದುಕೊಡಲಿದೆ. ಸೋಮಾರಿತನ ಮತ್ತು ಜಾಗರೂಕತಯೆಇಂದ ಪ್ರಮುಖ ಒಪ್ಪಂದ ಕಳೆದುಕೊಳ್ಳುವ ಸಾಧ್ಯತೆಯಿದೆ.

ಇದನ್ನೂ ಓದಿ : ಸರಕಾರಿ ಉದ್ಯೋಗಿಗಳ ವಿವಾಹಕ್ಕೆ ಸರಕಾರ ಅನುಮತಿ ಕಡ್ಡಾಯ : ವಿಚ್ಚೇಧನ ನೀಡಿದ್ರೂ ಇಲ್ಲ 2ನೇ ಮದುವೆ ಅವಕಾಶ

ಮಕರ ರಾಶಿ ದಿನಭವಿಷ್ಯ
ಇಂದು ಮಿಶ್ರಫಲಿತಾಂಶವನ್ನು ಪಡೆಯಲಿದ್ದಾರೆ. ಆರೋಗ್ಯದ ಹದಗೆಡುವ ಸಾಧ್ಯತೆಯಿದೆ. ಅನಾರೋಗ್ಯವು ಅನಿರೀಕ್ಷಿತ ವೆಚ್ಚಗಳನ್ನು ತರಲಿದೆ ಸಹೋದರ, ಸಹೋದರಿಯ ನಡುವೆ ಘರ್ಷಣೆ ಸಣ್ಣಪುಟ್ಟ ವಿಚಾರಗಳೇ ಕಾರಣವಾಗಲಿದೆ. ಮಾತಿನಲ್ಲಿ ಜಾಗರೂಕರಾಗಿ ಇರಿ. ಆಸ್ತಿಗೆ ಸಂಬಂಧಿಸಿದ ಕೆಲಸವನ್ನು ಮುಂದೂಡುವುದು ಉತ್ತಮ.

ಕುಂಭ ರಾಶಿ ದಿನಭವಿಷ್ಯ
ಅತ್ಯಂತ ಅನುಕೂಲಕರವಾದ ದಿನ. ಆರೊಗ್ಯದ ವಿಚಾರದಲ್ಲಿಯೂ ಉತ್ತಮ. ನೀವು ಕೆಲಸದಲ್ಲಿ ತುಂಬಾ ಪ್ರಾಮಾಣಿಕರಾಗಿರುತ್ತೀರಿ. ವ್ಯವಹಾರ, ಉದ್ಯೋಗದ ನಿಮಿತ್ತ ದೂರಪ್ರಯಾಣ. ವಿದೇಶಿ ಪ್ರಯಾಣದ ಅವಕಾಶವೂ ಇದೆ. ಮಧ್ಯಾಹ್ನದ ನಂತರ ಶುಭವಾರ್ತೆ ಕೇಳುವಿರಿ. ಕೆಲವರಿಗೆ ಆರ್ಥಿಕ ಲಾಭವಾಗಲಿದೆ.

ಮೀನ ರಾಶಿ ದಿನಭವಿಷ್ಯ
ನೀವಿಂದು ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಸಣ್ಣಪುಟ್ಟ ವಿಚಾರಗಳಿಗೆ ವಿವಾದಗಳು ಉದ್ಬವಿಸುವ ಸಾಧ್ಯತೆಯಿದೆ. ಸಂಗಾತಿಯ ಆರೋಗ್ಯವು ಹದಗೆಡುವ ಸಾಧ್ಯತೆಯಿದೆ. ನಿಮ್ಮ ಮಾತು ಮತ್ತು ನಡವಳಿಕೆಯನ್ನು ನಿಯಂತ್ರಣದಲ್ಲಿ ಇಡಿ. ಸರಕಾರಿ ಕೆಲಸ ಕಾರ್ಯಗಳನ್ನು ಮುಂದೂಡಿಕೆ ಮಾಡಿದ.ೆ ಆರ್ಥಿಕ ಲಾಭಕ್ಕಿಂತ ಅಧಿಕ ಖರ್ಚುಗಳು ಕಂಡುಬರಲಿದೆ.

Kannada  horoscope today 30 october 2023 lord shiva special blessings on these zodiac signs 

Comments are closed.