ವಿಶ್ವಕಪ್‌ನಲ್ಲಿ ಇತಿಹಾಸ ಸೃಷ್ಟಿಸಿದ ರಚಿನ್‌ ರವೀಂದ್ರ : ಸಚಿನ್‌ ದಾಖಲೆ ಸರಿಗಟ್ಟಿದ ಬೆಂಗಳೂರಿನ ಹುಡುಗ

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (Sachin Tendulkar) ತಮ್ಮ 23ನೇ ವಯಸ್ಸಿನಲ್ಲಿ 2 ವಿಶ್ವಕಪ್ ಶತಕ ಸಿಡಿಸಿದ್ದರು. ಇದೀಗ ರಚಿನ್ ರವೀಂದ್ರ (Rachin Ravindra) ಕೂಡ 23ನೇ ವಯಸ್ಸಿನಲ್ಲಿಯೇ ಈ ಸಾಧನೆಯನ್ನು ಮಾಡಿರುವುದು ವಿಶೇಷ.

ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್‌ ತಂಡದ ಆಟಗಾರ ಬೆಂಗಳೂರು ಮೂಲಕ ರಚಿನ್‌ ರವೀಂದ್ರ (Rachin Ravindra)  ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ. ಧರ್ಮಶಾಲಾದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ದ ಪಂದ್ಯದಲ್ಲಿ ರಚಿನ್‌ ರವೀಂದ್ರ ಸ್ಪೋಟಕ ಶತಕ ಸಿಡಿಸಿದ್ದಾರೆ. ಈ ಮೂಲಕ ಸಚಿನ್‌ ತೆಂಡೂಲ್ಕರ್  (sachin tendulkar)  ಹೆಸರಿನಲ್ಲಿದ್ದ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ.

ಧರ್ಮಶಾಲಾ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್‌ ವಿರುದ್ದ ಪಂದ್ಯ ನಡೆದಿದೆ. ಏಕದಿನ ವಿಶ್ವಕಪ್‌ನ 27ನೇ ಪಂದ್ಯದಲ್ಲಿ ನ್ಯೂಜಿಲೆಂಡ್‌ ತಂಡದ ಆಟಗಾರ ರಚಿನ್‌ ರವೀಂದ್ರ ಅಮೋಘ ಶತಕ ಸಿಡಿಸಿದ್ದಾರೆ. ಒಂದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ 89 ಎಸೆತಗಳನ್ನು ಎದುರಿಸಿದ ರಚಿನ್‌ ರವೀಂದ್ರ 5 ಸಿಕ್ಸರ್ ಮತ್ತು 9 ಬೌಂಡರಿಗಳ ನೆರವಿನೊಂದಿಗೆ 116 ರನ್ ಬಾರಿಸಿದ್ದಾರೆ.

Rachin Ravindra Create History Break sachin tendulkar Record In World Cup 2023 Aus Vs NZ Match
Image Credit to Original Source

2023 ರ ODI ವಿಶ್ವಕಪ್‌ನಲ್ಲಿ 2 ಶತಕಗಳನ್ನು ಗಳಿಸುವ ಮೂಲಕ ರಚಿನ್‌ ರವೀಂದ್ರ ವಿಶ್ವದಾಖಲೆಯನ್ನು ಬರೆದಿದ್ದಾರೆ. ವಿಶ್ವಕಪ್‌ನಲ್ಲಿ 2 ಶತಕ ಬಾರಿಸಿದ 2 ನೇ ಕಿರಿಯ ಬ್ಯಾಟ್ಸ್‌ಮನ್‌ ಅನ್ನೋ ಖ್ಯಾತಿಗೆ ರಚಿನ್‌ ರವೀಂದ್ರ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು ಮಾಸ್ಟರ್‌ ಬ್ಲಾಸ್ಟರ್‌ ಸಚಿನ್ ತೆಂಡೂಲ್ಕರ್ ಇಂತಹ ವಿಶೇಷ ದಾಖಲೆ ನಿರ್ಮಿಸಿದ್ದರು.

ಇದನ್ನೂ ಓದಿ : 2 ಎಸೆತ 21 ರನ್‌ ! ವಿಶ್ವಕಪ್‌ನಲ್ಲಿ ವಿಶ್ವದಾಖಲೆ ಬರೆದ ಟ್ರಾವೆಸ್‌ ಹೆಡ್‌

ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಸ್ಪೋಟಕ ಶತಕ ಬಾರಿಸಿ ವಿಶ್ವದಾಖಲೆ ನಿರ್ಮಿಸಿದ ಕನ್ನಡಿಗ ರಚಿನ್ ರವೀಂದ್ರ. ಈ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಬಂದ ರಚಿನ್ ರವೀಂದ್ರಅಂತಿಮವಾಗಿ ಪ್ಯಾಟ್ ಕಮ್ಮಿನ್ಸ್ ಮಾರ್ನಸ್ ಲಾಬುಚಾನೆಗೆ ಕ್ಯಾಚ್ ನೀಡಿ ನಿರ್ಗಮಿಸಿದರು.

ಇದನ್ನೂ ಓದಿ : 5 ಪಂದ್ಯದಲ್ಲಿ‌ ಸತತ ಗೆಲುವು, ಅಂಕಪಟ್ಟಿಯಲ್ಲಿ ಅಗ್ರಸ್ಥಾನ : ಭಾರತಕ್ಕೆ ಸುಲಭವಲ್ಲ ವಿಶ್ವಕಪ್‌ ಸೆಮಿಫೈನಲ್‌ ಹಾದಿ

೩ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ರಚಿನ್‌ ರವೀಂದ್ರ ಅರ್ಧಶತಕ ಸಿಡಿಸುವ ವರೆಗೂ ಎಚ್ಚರಿಕೆಯ ಬ್ಯಾಟಿಂಗ್‌ ನಡೆಸಿದ್ದಾರೆ. ನಂತರ ಬಿರುಸಿನ ಆಟಕ್ಕೆ ಮನ ಮಾಡಿದ ರಚಿನ್‌ ಕೇವಲ 77 ಎಸೆತಗಳಲ್ಲಿ ಅಮೋಘ ಶತಕ ಸಿಡಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ತಮ್ಮ 23ನೇ ವಯಸ್ಸಿನಲ್ಲಿ 2 ವಿಶ್ವಕಪ್ ಶತಕ ಸಿಡಿಸಿದ್ದರು.

Rachin Ravindra Create History Break sachin tendulkar Record In World Cup 2023 Aus Vs NZ Match
Image Credit to Originl Source

ಇದೀಗ ರಚಿನ್ ರವೀಂದ್ರ ಕೂಡ 23ನೇ ವಯಸ್ಸಿನಲ್ಲಿಯೇ ಈ ಸಾಧನೆಯನ್ನು ಮಾಡಿರುವುದು ವಿಶೇಷ. ಏಕದಿನ ವಿಶ್ವಕಪ್ 2023 ಆವೃತ್ತಿಯಲ್ಲಿ ರಚಿನ್‌ ರವೀಂದ್ರ 2 ಶತಕ ಬಾರಿಸುವ ಮೂಲಕ ದಾಖಲೆ ಬರೆದಿದ್ದರೆ, ನ್ಯೂಜಿಲೆಂಡ್‌ ಪರ ಮೊದಲು ಗ್ಲೆನ್ ಟರ್ನರ್, ಮಾರ್ಟಿನ್ ಗಪ್ಟಿಲ್ ಮತ್ತು ಕೇನ್ ವಿಲಿಯಮ್ಸನ್ ಮಾತ್ರ ಈ ಸಾಧನೆ ಮಾಡಿದ್ದರು.

ಇದನ್ನೂ ಓದಿ : ಭಾರತ ಕ್ರಿಕೆಟ್‌ ತಂಡಕ್ಕೆ ಹೊಸ ಕೋಚ್‌ ? ವಿಶ್ವಕಪ್‌ ಫಲಿತಾಂಶದ ಮೇಲೆ ಬಿಸಿಸಿಐ ನಿರ್ಧರಿಸುತ್ತೆ ರಾಹುಲ್‌ ದ್ರಾವಿಡ್‌ ಭವಿಷ್ಯ

ಬೆಂಗಳೂರು ಮೂಲದ ರಚಿನ್ ರವೀಂದ್ರ ಅವರು ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ 2023 ರ ವಿಶ್ವಕಪ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ಎಡಗೈ ಬ್ಯಾಟ್ಸ್‌ಮನ್ ಮತ್ತು ನ್ಯೂಜಿಲೆಂಡ್‌ನ 4 ನೇ ಬ್ಯಾಟ್ಸ್‌ಮನ್ ಆಗಿದ್ದಾರೆ. 89 ಎಸೆತಗಳನ್ನು ಎದುರಿಸಿದ ರಚಿನ್ ರವೀಂದ್ರ 5 ಬೃಹತ್ ಸಿಕ್ಸರ್ ಹಾಗೂ 9 ಬೌಂಡರಿಗಳ ಸಹಿತ 116 ರನ್ ಗಳಿಸಿದ್ದಾರೆ.

Rachin Ravindra Create History Break sachin tendulkar Record In World Cup 2023 Aus Vs NZ Match 

Comments are closed.